ಗುರುವಾರ, ಡಿಸೆಂಬರ್ 23, 2010

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್

ಉಡುಪಿ, ಡಿ.23: ಉಡುಪಿ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಒಟ್ಟು 312 ಮಂದಿ ಅಂತಿಮ ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದಾರೆ. ಇವರಲ್ಲಿ 74 ಮಂದಿ ಜಿ.ಪಂ.ನ 25 ಸ್ಥಾನಗಳಿಗೂ ಉಳಿದ 238 ಮಂದಿ ಒಟ್ಟು 95 ತಾ.ಪಂ.ನ ಸ್ಥಾನಗಳಿಗೂ ಸ್ಪರ್ಧಿಸುತ್ತಿದ್ದಾರೆ.
ನಾಮಪತ್ರಗಳನ್ನು ಹಿಂಪಡೆಯುವ ಅವಧಿ ಮುಗಿದ ಬಳಿಕ ಜಿಲ್ಲೆಯಲ್ಲಿ ಚುನಾವಣಾ ಸ್ಪರ್ಧಾ ಕಣದ ಸ್ಪಷ್ಟ ಚಿತ್ರಣ ಹೊರಬಿದ್ದಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜಿ.ಪಂ. ಮತ್ತು ತಾ.ಪಂ.ನ ಎಲ್ಲಾ ಸ್ಥಾನಗಳಿಗೂ ಸ್ಪರ್ಧಿ ಸುತ್ತಿವೆ. ಜಾತ್ಯತೀತ ಜನತಾ ದಳ ಜಿ.ಪಂ.ನಲ್ಲಿ 12 ಹಾಗೂ ತಾ.ಪಂ.ನಲ್ಲಿ 26 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಪಕ್ಷೇತರರು ಜಿ.ಪಂ. ನಲ್ಲಿ 10 ಹಾಗೂ ತಾ.ಪಂ.ನಲ್ಲಿ 14 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿದ್ದಾರೆ.
ಜಿ.ಪಂ.ನ ಒಟ್ಟು 25 ಸ್ಥಾನಗಳಿಗೆ 108 ಮಂದಿ ನಾಮಪತ್ರ ಸಲ್ಲಿಸಿದ್ದು, ಇವರಲ್ಲಿ 34 ಮಂದಿ ತಮ್ಮ ನಾಮಪತ್ರಗಳನ್ನು ಹಿಂಪಡೆದ ಬಳಿಕ 74 ಮಂದಿ ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದಾರೆ. ಅದೇ ರೀತಿ ಜಿಲ್ಲೆಯ ಮೂರು ತಾ.ಪಂ.ಗಳ 95 ಸ್ಥಾನಗಳಿಗೆ 332 ಮಂದಿ ನಾಮಪತ್ರ ಸಲ್ಲಿಸಿದ್ದರೆ, ಇವರಲ್ಲಿ 94 ಮಂದಿ ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು 238 ಮಂದಿ ಮಾತ್ರ ಉಳಿದುಕೊಂಡಿದ್ದಾರೆ.
ಜಿ.ಪಂ.ಕ್ಷೇತ್ರದ ವಿವರ
ಉಡುಪಿ:     ಒಟ್ಟು ಸ್ಥಾನ 11, ಸಲ್ಲಿಕೆಯಾದ ನಾಮಪತ್ರ 40, ನಾಮಪತ್ರ ಹಿಂದೆ ಪಡೆದವರು 7 ಮಂದಿ, ಸ್ಪರ್ಧಾಕಣದಲ್ಲಿ ಉಳಿದವರು 33 ಮಂದಿ. (ಅಂತಿಮವಾಗಿ ಕಾಂಗ್ರೆಸ್‌ನ 11, ಬಿಜೆಪಿಯ 11, ಜೆಡಿಎಸ್‌ನ 5 ಹಾಗೂ ಪಕ್ಷೇತರ 6 ಮಂದಿ ಸ್ಪರ್ಧೆಯಲ್ಲಿದ್ದಾರೆ.)
  ಕುಂದಾಪುರ: ಒಟ್ಟು ಸ್ಥಾನ 9, ಸಲ್ಲಿಕೆಯಾದ ನಾಮಪತ್ರ 44, ನಾಮಪತ್ರ ಹಿಂದೆ ಪಡೆದವರು 16 ಮಂದಿ, ಸ್ಪರ್ಧಾಕಣದಲ್ಲಿ ಉಳಿದವರು 28 ಮಂದಿ. (ಅಂತಿಮವಾಗಿ ಕಾಂಗ್ರೆಸ್‌ನ 9, ಬಿಜೆಪಿಯ 9, ಜೆಡಿಎಸ್‌ನ 6, ಸಿಪಿಐ(ಎಂ)ನ 1 , ಬಿಎಸ್‌ಪಿಯ 1 ಹಾಗೂ ಪಕ್ಷೇತರ 2 ಸ್ಪರ್ಧೆಯಲ್ಲಿದ್ದಾರೆ).
 ಕಾರ್ಕಳ: ಒಟ್ಟು ಸ್ಥಾನ 5, ಸಲ್ಲಿಕೆಯಾದ ನಾಮಪತ್ರ 24, ನಾಮಪತ್ರ ಹಿಂದೆ ಪಡೆದವರು 11 ಮಂದಿ, ಸ್ಪರ್ಧಾಕಣದಲ್ಲಿ ಉಳಿದವರು 13 ಮಂದಿ. (ಅಂತಿಮವಾಗಿ ಕಾಂಗ್ರೆಸ್‌ನ 5, ಬಿಜೆಪಿಯ 5, ಜೆಡಿಎಸ್‌ನ 1 ಹಾಗೂ ಪಕ್ಷೇತರ 2 ಸ್ಪರ್ಧೆಯಲ್ಲಿ ಉಳಿದಿದ್ದಾರೆ.).

ತಾ.ಪಂ. ಕ್ಷೇತ್ರದ ವಿವರ
ಉಡುಪಿ:     ಒಟ್ಟು ಸ್ಥಾನ 41, ಸಲ್ಲಿಕೆಯಾದ ನಾಮಪತ್ರ 127, ನಾಮಪತ್ರ ಹಿಂದಕ್ಕೆ ಪಡೆದ ವರು 21 ಮಂದಿ, ಸ್ಪರ್ಧಾಕಣದಲ್ಲಿ ಉಳಿದವರು 106 ಮಂದಿ. (ಅಂತಿಮವಾಗಿ ಕಾಂಗ್ರೆಸ್‌ನ 41, ಬಿಜೆಪಿಯ 41, ಜೆಡಿಎಸ್‌ನ 13, ಸಿಪಿಐ (ಎಂ)ನ 1 ಹಾಗೂ ಪಕ್ಷೇತರ 10 ಮಂದಿ ಸ್ಪರ್ಧೆ ಯಲ್ಲಿದ್ದಾರೆ.).
ಕುಂದಾಪುರ: 
   ಒಟ್ಟು ಸ್ಥಾನ 35, ಸಲ್ಲಿಕೆಯಾದ ನಾಮಪತ್ರ 147, ನಾಮಪತ್ರ ಹಿಂದೆ ಪಡೆದವರು 55 ಮಂದಿ, ಸ್ಪರ್ಧಾಕಣದಲ್ಲಿ ಉಳಿದ ಅಭ್ಯರ್ಥಿ ಗಳು 92 ಮಂದಿ. (ಅಂತಿಮವಾಗಿ ಕಾಂಗ್ರೆಸ್‌ನ 35, ಬಿಜೆಪಿಯ 35, ಜೆಡಿಎಸ್‌ನ 13, ಸಿಪಿಐ(ಎಂ)ನ 6, ಪಕ್ಷೇತರ 2 ಹಾಗೂ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ 1 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.) ಕಾರ್ಕಳ: ಒಟ್ಟು ಸ್ಥಾನ 19, ಸಲ್ಲಿಕೆಯಾದ ನಾಮಪತ್ರ 58, ನಾಮಪತ್ರ ವಾಪಸು ಪಡೆದವರು 18 ಮಂದಿ, ಸ್ಪರ್ಧಾಕಣದಲ್ಲಿ ಉಳಿದವರು 40 ಮಂದಿ.(ಅಂತಿಮವಾಗಿ ಕಾಂಗ್ರೆಸ್‌ನ 19, ಬಿಜೆಪಿಯ 19 ಹಾಗೂ ಪಕ್ಷೇತರ 2 ಅಭ್ಯರ್ಥಿ ಗಳು ಸ್ಪರ್ಧಿಸುತ್ತಿದ್ದಾರೆ.)

ಬೆಳ್ತಂಗಡಿ: ತಾ.ಪಂ.ಗೆ 17, ಜಿ.ಪಂ.ಗೆ 73 ಮಂದಿ ಸ್ಪರ್ಧೆ
ಬೆಳ್ತಂಗಡಿ, ಡಿ.23: ತಾಲೂಕಿನ ಆರು ಜಿ.ಪಂ. ಕ್ಷೇತ್ರಗಳಿಗೆ 17 ಮಂದಿ ಹಾಗೂ 24 ತಾ.ಪಂ. ಕ್ಷೇತ್ರಗಳಿಗೆ 73 ಮಂದಿ ಅಂತಿಮ ಕಣದಲ್ಲಿದ್ದಾರೆ. ನಾರಾವಿ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಬಿಜೆಪಿಯಿಂದ ಚಂದ್ರಕಲಾ ಮತ್ತು ಕಾಂಗ್ರೆಸ್‌ನಿಂದ ಯಮುನಾ ಕಣದಲ್ಲಿದ್ದಾರೆ. ಅಳದಂಗಡಿ ಕ್ಷೇತ್ರದಿಂದ ಬಿಜೆಪಿಯಿಂದ ತುಳಸಿ ಪೂಜಾರಿ, ಕಾಂಗ್ರೆಸ್‌ನಿಂದ ಧನಲಕ್ಷ್ಮಿ, ಜೆಡಿಎಸ್‌ನಿಂದ ಸಿಂಧೂದೇವಿ ಕಣದಲ್ಲಿದ್ದಾರೆ. ಲಾಯಿಲಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಶೈಲೇಶ್‌ಕುಮಾರ್, ಬಿಜೆಪಿಯಿಂದ ಹರೀಶ್ ಸಾಲ್ಯಾನ್, ಜೆಡಿಎಸ್‌ನಿಂದ ರಾಮಾಚಾರಿ ಕಣದಲ್ಲಿದ್ದಾರೆ. ಕಣಿಯೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ರಾಜಶ್ರೀ ಹೆಗ್ಡೆ, ಬಿಜೆಪಿಯಿಂದ ದೇವಕಿ ಗೌಡ, ಕಾಂಗ್ರೆಸ್‌ನಿಂದ ಉಮಾವತಿ ಕಣದಲ್ಲಿದ್ದಾರೆ. ಧರ್ಮಸ್ಥಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಧನಲಕ್ಷ್ಮೀ, ಕಾಂಗ್ರೆಸ್‌ನಿಂದ ತನುಜಾ ಶೇಖರ್, ಸಿಪಿಎಂನಿಂದ ರಂಜನಿ ಕಣದಲ್ಲಿದ್ದಾರೆ. ಉಜಿರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೊರಗಪ್ಪ ನಾಯ್ಕ, ಜೆಡಿಎಸ್‌ನಿಂದ ಗಿರಿಯಪ್ಪ ನಾಯ್ಕ, ಕಾಂಗ್ರೆಸ್‌ನಿಂದ ಮುಂಡಪ್ಪ ಕಣದಲ್ಲಿದ್ದಾರೆ.

ಬಂಟ್ವಾಳ: 112 ಮಂದಿ ಕಣದಲ್ಲಿ
ಬಂಟ್ವಾಳ, ಡಿ.23: ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 112 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಜಿ.ಪಂ.ನ 9 ಕ್ಷೇತ್ರಗಳಿಗೆ 28 ಮಂದಿ ಹಾಗೂ ತಾ.ಪಂ.ನ 33 ಸ್ಥಾನಗಳಿಗೆ 84 ಮಂದಿ ಸ್ಪರ್ಧಿಸಿದ್ದಾರೆ.
ಜಿ.ಪಂ.ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ತಲಾ 9 ಮಂದಿ, ಜೆಡಿಎಸ್‌ನಿಂದ 3, ಎಸ್‌ಡಿಪಿಐನಿಂದ 3 ಮಂದಿ ಹಾಗೂ 4 ಮಂದಿ ಪಕ್ಷೇತರರರು ಸ್ಪರ್ಧಿಸಿದ್ದಾರೆ.
ತಾ.ಪಂ.ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ತಲಾ 33, ಜೆಡಿಎಸ್‌ನ 5 ಮಂದಿ ಎಸ್‌ಡಿಪಿಐಯ 7, ಸಿಪಿಐನ ಒಬ್ಬರು ಹಾಗೂ ಐದು ಮಂದಿ ಪಕ್ಷೇತರರು ಕಣದಲ್ಲಿದ್ದಾರೆ.

ಸುಳ್ಯ: 45 ಮಂದಿ ಅಭ್ಯರ್ಥಿಗಳು ಅಂತಿಮ
ಕಣದಲ್ಲಿ
ಸುಳ್ಯ, ಡಿ.23: ತಾ.ಪಂ. ಮತ್ತು ಜಿ.ಪಂ. ಚುನಾವಣೆಗೆ ಸುಳ್ಯ ತಾಲೂಕಿನಲ್ಲಿ ಅಂತಿಮವಾಗಿ 45 ಮಂದಿ ಕಣದಲ್ಲಿ ಉಳಿದಿದ್ದಾರೆ.
  4 ಜಿ.ಪಂ. ಕ್ಷೇತ್ರಗಳಲ್ಲಿ ಒಟ್ಟು 26 ಮಂದಿ ನಾಮಪತ್ರ ಸಲ್ಲಿಸಿದ್ದು, 14 ಮಂದಿ ವಾಪಸ್ ಪಡೆದು 12 ಮಂದಿ ಅಂತಿಮ ಕಣದಲ್ಲಿದ್ದಾರೆ. 13 ತಾ.ಪಂ. ಕ್ಷೇತ್ರಕ್ಕೆ 56 ಮಂದಿ ನಾಮಪತ್ರ ಸಲ್ಲಿಸಿದ್ದು, ಈ ಪೈಕಿ 23 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, 33 ಮಂದಿ ಕಣದಲ್ಲಿದ್ದಾರೆ.
ಜಿ.ಪಂ. ಕ್ಷೇತ್ರಗಳ ವಿವರ: ಬೆಳ್ಳಾರೆ (ಸಾಮಾನ್ಯ ಮಹಿಳೆ): ರಾಜೀವಿ ಆರ್.ರೈ (ಕಾಂಗ್ರೆಸ್), ಆಶಾ ತಿಮ್ಮಪ್ಪ (ಬಿಜೆಪಿ) ರುಕಿಯಾ(ಎಸ್‌ಡಿಪಿಐ).
 ಗುತ್ತಿಗಾರು(ಸಾಮಾನ್ಯ): ಕೆ.ಎಸ್. ದೇವರಾಜ್ (ಕಾಂಗ್ರೆಸ್), ವೆಂಕಟ್ ದಂಬೆಕೋಡಿ (ಬಿಜೆಪಿ), ಜಾಲ್ಸೂರು(ಸಾಮಾನ್ಯ): ರಾಧಾಕೃಷ್ಣ ಬೊಳ್ಳೂರು (ಕಾಂಗ್ರೆಸ್), ನವೀನ್‌ಕುಮಾರ್ ರೈ ಮೇನಾಲ (ಬಿಜೆಪಿ), ಸುಕುಮಾರ ಕೋಡ್ತುಗುಳಿ(ಜೆಡಿಎಸ್), ಹಮೀದ್ ಅಡ್ಕಾರ್(ಎಸ್‌ಡಿಪಿಐ).
ಅರಂತೋಡು ( ಹಿಂದುಳಿದ ವರ್ಗ ಮಹಿಳೆ): ಸರಸ್ವತಿ ಕಾಮತ್ (ಕಾಂಗ್ರೆಸ್), ಸ್ಮಿತಾ ಬೊಳ್ಳಾಜೆ( ಬಿಜೆಪಿ), ಆಯಿಶಾ ಮುಸ್ತಫಾ(ಎಸ್‌ಡಿಪಿಐ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ