ಮೆಲ್ಬೋರ್ನ್, ಡಿ.23: ಭಯೋತ್ಪಾದಕ ದಾಳಿಯ ಆರೋಪ ಹೊರಿಸಿ ಭಾರತೀಯ ಮೂಲದ ವೈದ್ಯ ಡಾ. ಹನೀಫ್‌ರನ್ನು ಬಂಧಿಸಿ ಸೆರೆಮನೆಗೆ ತಳ್ಳುವ ಮೂಲಕ ತಾವು ತಪ್ಪೆಸಗಿರುವುದಾಗಿ ಒಪ್ಪಿಕೊಂಡಿರುವ ಆಸ್ಟ್ರೇಲಿಯ, ಇದೀಗ ಔಪಚಾರಿಕವಾಗಿ ಹನೀಫ್‌ರ ಕ್ಷಮೆ ಕೋರಿದೆ. ‘‘ಎಎಫ್‌ಪಿ (ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್)ತಪ್ಪಾಗಿ ಗ್ರಹಿಸಿರುವ ಬಗ್ಗೆ ವಿಷಾದ ವ್ಯಕ್ತಪಡಿಸುತ್ತದೆ ಹಾಗೂ ನಮ್ಮ ಶಂಕೆಗೊಳಗಾಗಿದ್ದ ಡಾ.ಹನೀಫ್ ಓರ್ವ ಅಮಾಯಕನೆಂಬುದನ್ನು ನಾವು ಖಚಿತಪಡಿಸುತ್ತೇವೆ’’ ಎಂದು ಕ್ಷಮಾಪಣಾ ಪತ್ರದಲ್ಲಿ ವಿವರಿಸಲಾಗಿದೆ. ಆಸ್ಟ್ರೇಲಿಯ ಸರಕಾರದ ಕ್ಷಮಾಪಣಾ ಪತ್ರವು ತಮ್ಮ ಕಕ್ಷಿದಾರ ನಿರಪರಾಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ’’ ಎಂದು ಡಾ.ಹನೀಫ್ ಪರ ವಕೀಲ ರಾಡ್ ಹಾಡ್ಗ್‌ಸನ್ ತಿಳಿಸಿದ್ದಾರೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ