ಶನಿವಾರ, ಮಾರ್ಚ್ 12, 2011

ಜಪಾನ್ ಸುನಾಮಿ ಸಾವು ಸಾವಿರ ಮೀರುವ ಸಾದ್ಯತೆ





ಕಿಯೊ, ಮಾ.11: ಈಶಾನ್ಯ ಜಪಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪವೊಂದರಿಂದ ಎದ್ದಿರುವ ಸುನಾಮಿ ಅಲೆಗಳು ದೇಶಕ್ಕೆ ಭಾರೀ ಹಾನಿಯನ್ನುಂಟು ಮಾಡಿದ್ದು, ಕನಿಷ್ಠ 300 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸಾವಿನ ಸಂಖ್ಯೆ ಸಾವಿರ ದಾಟುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸೆಂಡಾಯಿ ನಗರದಲ್ಲಿ 300ರಷ್ಟು ಮೃತ ದೇಹಗಳು ಪತ್ತೆಯಾಗಿವೆ. ಸುಮಾರು 500 ಮಂದಿ ಕಾಣೆಯಾಗಿದ್ದಾರೆ. ಜಪಾನ್ ಸಮುದ್ರದಲ್ಲಿ 100 ಜನರಿದ್ದ ಹಡಗೊಂದು ಕೊಚ್ಚಿ ಹೋಗಿದೆ. ರಿಕ್ಟರ್ ಮಾಪಕದಲ್ಲಿ 8.9 ತೀವ್ರತೆಯ ಭೂಕಂಪವೊಂದರ ಬಳಿಕ ಮೇಲೆದ್ದ ಸಾಗರದಲೆಗಳ ಬೃಹತ್ ಗೋಡೆಗಳು ಕಾರು, ಹಡಗು ಹಾಗೂ ಕಟ್ಟಡಗಳನ್ನು ಗುಡಿಸಿಕೊಂಡು ಹೋಗುತ್ತಿದ್ದುದನ್ನು ಜಪಾನ್ ಟಿವಿ ತೋರಿಸಿದೆ.
ಟೋಕಿಯೊದಿಂದ 250 ಮೈಲು ದೂರದ ಸಾಗರದಲ್ಲಿ 20 ಮೈಲು ನೆಲದಾಳದಲ್ಲಿ ಉಂಟಾದ ಪ್ರಬಲ ಕಂಪನದ ಪರಿಣಾಮ ಅನೇಕ ನಗರಗಳಲ್ಲಿ ಅನುಭವಕ್ಕೆ ಬಂದಿದ್ದು, ಪಶ್ಚಾತ್ ಕಂಪನಗಳೂ ಪ್ರಬಲವಾಗಿದ್ದವುಕಂಪನದ ತೀವ್ರತೆ 8.9 ಇತ್ತೆಂದು ಅಮೆರಿಕದ ಭೂಗರ್ಭ ಶಾಸ್ತ್ರ ಇಲಾಖೆ ಅಳೆದಿದ್ದು, ಸ್ಥಳೀಯ ಕಾಲಮಾನ ಅಪರಾಹ್ಣ 2:46ರ ವೇಳೆ ಜಪಾನನ್ನು ನಡುಗಿಸಿದ ಈ ಭೂಕಂಪ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತಿ ದೊಡ್ಡ ಭೂಕಂಪನಗಳಲ್ಲೊಂದಾಗಿ ದೆಯೆಂದು ಹವಾಮಾನ ಶಾಸ್ತ್ರಜ್ಞರು ತಿಳಿಸಿದ್ದಾರೆ.
ಭೂಕಂಪ ಸಂಭವಿಸಿದಾಗ ಕಟ್ಟಡಗಳು ಹೊಯ್ದಡತೊಡಗಿದವು. ರಸ್ತೆಗಳಲ್ಲಿ ನಡೆಯುತ್ತಿದ್ದ ಜನರು ಚಲಿಸುವ ಹಡಗಿನೊಳಗೆ ನಡೆಯುವವರಂತೆ ತೂರಾಡುತ್ತಿದ್ದರು. ಕಚೇರಿಗಳಿಂದ ಹೊರ ಧಾವಿಸಿದ ಜನರು ಮೇಲೆ ನೋಡುತ್ತ ನಿಂತರು. ತೈಲಾಗಾರಗಳು ಸೇರಿದಂತೆ ನಗರದ ಹಲವೆಡೆ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡವು. ಗಾಯಾಳುಗಳನ್ನು ಅಲ್ಲಿಂದ ಹೊರ ತರಲಾಗುತ್ತಿತ್ತು. ತಕ್ಷಣವೇ ಅಧಿಕಾರಿಗಳು ಸುನಾಮಿ ಮುನ್ನೆಚ್ಚರಿಕೆಯನ್ನು ಹೊರಡಿಸಿದರು.
ಟೋಕಿಯೊದಲ್ಲಿ ಸಾರ್ವಜನಿಕ ಸಾರಿಗೆಯನ್ನು ಅಮಾನತು ಗೊಳಿಸಲಾಯಿತು. ಅನೇಕ ಕಟ್ಟಡಗಳಲ್ಲಿ ಎಲಿವೇಟರ್ ಗಳನ್ನು ಸ್ತಬ್ಧಗೊಳಿಸಲಾಯಿತು. ಸಾವಿರಾರು ಮಂದಿ ಚೌಕಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಸೇರಿದ್ದರು.ಉತ್ತರ ಹಾಗೂ ದಕ್ಷಿಣಗಳಲ್ಲಿ ಪೆಸಿಫಿಕ್‌ನಿಂದ ನ್ಯೂಝಿ ಲೆಂಡ್‌ವರೆಗೆ ಹಾಗೂ ಪೂರ್ವದಲ್ಲಿ ದಕ್ಷಿಣ ಅಮೆರಿಕದವರೆಗೆ ಸುನಾಮಿ ಮುನ್ನೆಚ್ಚರಿಕೆಯನ್ನು ವಿಸ್ತರಿಸಲಾಗಿದೆ.ಸುನಾಮಿ ಅಲೆಗಳು ಕೆಲವು ಪೆಸಿಫಿಕ್ ದ್ವೀಪಗಳಿಗಿಂತಲೂ ಎತ್ತರಕ್ಕೇಳಬಹುದೆಂದು ಜಿನೆವಾದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಎಚ್ಚರಿಕೆ ನೀಡಿದೆಯೆಂದು ‘ರಾಯ್ಟರ್’ ವರದಿ ಮಾಡಿದೆ.
ಸುನಾಮಿಯ ಭೀತಿಯಿಂದ ಫಿಲಿಪ್ಪೀನ್ಸ್,ಹವಾಯಿ ಹಾಗೂ ಇತರ ಪೆಸಿಫಿಕ್ ದ್ವೀಪಗಳನ್ನು ತೆರವುಗೊಳಿಸಲಾಗಿದೆ.ಮಿಯಾಗಿ ಹಾಗೂ ಫುಕುಶಿಮಾಗಳಲ್ಲಿ ಪ್ರಬಲ ಅಲೆಗಳು ಅಪ್ಪಳಿಸಿ, ಕರಾವಳಿಯ ಅನೇಕ ಸಮುದಾಯಗಳಿಗೆ ತೀವ್ರ ನಷ್ಟವುಂಟು ಮಾಡಿವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಯಾಗಿಯ ಸೆಂಡಾಯಿ ಬಂದರಿಗೆ 10 ಮೀ. ಎತ್ತರದ ಅಲೆಗಳು ಅಪ್ಪಳಿಸಿದವೆಂದು ಕ್ಯೋಡೊ ವಾರ್ತಾ ಸಂಸ್ಥೆ ವರದಿ ಮಾಡಿದೆ. ನೀರಿನೊಂದಿಗೆ ಕಟ್ಟಡಗಳು, ಕಾರುಗಳು ಹಾಗೂ ಹಡಗುಗಳು ದೂರಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ಜಪಾನ್‌ನ ಎನ್‌ಎಚ್‌ಕೆ ಟಿವಿ ತೋರಿಸಿದೆ.
ವಾಹನ ಸವಾರರು ಅಲೆಗಳ ಹೊಡೆತದಿಂದ ಪಾರಾಗಲು ಯತ್ನಿಸುತ್ತಿದ್ದರು. ಸೆಡಾಯಿಯಲ್ಲಿ ಹೊಲ-ಗದ್ದೆಗಳು ಮುಳುಗಡೆಯಾಗಿದ್ದು, ವಾಹನಗಳು ನಗರದ ರಸ್ತೆಗಳಲ್ಲಿ ತೇಲುತ್ತಿದ್ದವು. ಮಿಯಾಗಿಯ ಒನಗಾವ ಪರಮಾಣು ಸ್ಥಾವರದ ಟರ್ಬೈನ್ ಕಟ್ಟಡ, ನಗರ ಕೇಂದ್ರಗಳಲ್ಲಿ ಭೂಕಂಪದಿಂದಾಗಿ ಅಗ್ನಿ ಅನಾಹುತಗಳು ಸಂಭವಿಸಿವೆ. ನಾಲ್ಕು ಪರಮಾಣು ಸ್ಥಾವರ ಗಳನ್ನು ಸುರಕ್ಷಿತವಾಗಿ ಮುಚ್ಚಲಾಗಿದೆಯೆಂದು ವಿಶ್ವಸಂಸ್ಥೆಯ ಪರಮಾಣು ಸಂಸ್ಥೆ ತಿಳಿಸಿದ್ದು, ಯಾವುದೇ ವಿಕಿರಣ ಸೋರಿಕೆಯಾಗುತ್ತಿಲ್ಲವೆಂದು ಪ್ರಧಾನಿ ನೆವೊಟೊ ಕಾನ್ ಹೇಳಿದ್ದಾರೆ.
ಭೂಕಂಪ ಹಾಗೂ ಸುನಾಮಿಗೆ ಕನಿಷ್ಠ 32 ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚುವ ಭೀತಿಯಿದೆಯೆಂದು ಪೊಲೀಸರು ಹಾಗೂ ಸ್ಥಳೀಯಾಧಿಕಾರಿ ಗಳು ತಿಳಿಸಿದ್ದಾರೆ. ಜನರು ಎತ್ತರದ ಕಟ್ಟಡಗಳ ಮೇಲೆ ನಿಂತು ಸಹಾಯಕ್ಕಾಗಿ ಮೊರೆಯಿಡುತ್ತಿದ್ದ ದೃಶ್ಯ ಕರುಳು ಮಿಡಿಯುವಂತಿತ್ತು. ತಾವು ಇದುವರೆಗೆ ಇಷ್ಟು ಪ್ರಬಲ ಭೂಕಂಪ ಅನುಭವಿಸಿಲ್ಲವೆಂದು ನಿವಾಸಿಗಳು ಹೇಳಿದ್ದಾರೆ.ಟೋಕಿಯೊದಲ್ಲಿ ಸಾರ್ವಜನಿಕ ಸಾರಿಗೆಯನ್ನು ಅಮಾನತು ಗೊಳಿಸಲಾಯಿತು. ಅನೇಕ ಕಟ್ಟಡಗಳಲ್ಲಿ ಎಲಿವೇಟರ್ ಗಳನ್ನು ಸ್ತಬ್ಧಗೊಳಿಸಲಾಯಿತು. ಸಾವಿರಾರು ಮಂದಿ ಚೌಕಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಸೇರಿದ್ದರು.
ಉತ್ತರ ಹಾಗೂ ದಕ್ಷಿಣಗಳಲ್ಲಿ ಪೆಸಿಫಿಕ್‌ನಿಂದ ನ್ಯೂಝಿಲೆಂಡ್‌ವರೆಗೆ ಹಾಗೂ ಪೂರ್ವದಲ್ಲಿ ದಕ್ಷಿಣ ಅಮೆರಿಕದವರೆಗೆ ಸುನಾಮಿ ಮುನ್ನೆಚ್ಚರಿಕೆಯನ್ನು ವಿಸ್ತರಿಸಲಾಗಿದೆ.ಸುನಾಮಿ ಅಲೆಗಳು ಕೆಲವು ಪೆಸಿಫಿಕ್ ದ್ವೀಪಗಳಿಗಿಂತಲೂ ಎತ್ತರಕ್ಕೇಳಬಹುದೆಂದು ಜಿನೆವಾದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಎಚ್ಚರಿಕೆ ನೀಡಿದೆಯೆಂದು ‘ರಾಯ್ಟರ್’ ವರದಿ ಮಾಡಿದೆ.ಸುನಾಮಿಯ ಭೀತಿಯಿಂದ ಫಿಲಿಪ್ಪೀನ್ಸ್, ಹವಾಯಿ ಹಾಗೂ ಇತರ ಪೆಸಿಫಿಕ್ ದ್ವೀಪಗಳನ್ನು ತೆರವುಗೊಳಿಸಲಾಗಿದೆ.ಮಿಯಾಗಿ ಹಾಗೂ ಫುಕುಶಿಮಾಗಳಲ್ಲಿ ಪ್ರಬಲ ಅಲೆಗಳು ಅಪ್ಪಳಿಸಿ, ಕರಾವಳಿಯ ಅನೇಕ ಸಮುದಾಯಗಳಿಗೆ ತೀವ್ರ ನಷ್ಟವುಂಟು ಮಾಡಿವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಯಾಗಿಯ ಸೆಂಡಾಯಿ ಬಂದರಿಗೆ 10 ಮೀ. ಎತ್ತರದ ಅಲೆಗಳು ಅಪ್ಪಳಿಸಿದವೆಂದು ಕ್ಯೋಡೊ ವಾರ್ತಾ ಸಂಸ್ಥೆ ವರದಿ ಮಾಡಿದೆ. ನೀರಿನೊಂದಿಗೆ ಕಟ್ಟಡಗಳು, ಕಾರುಗಳು ಹಾಗೂ ಹಡಗುಗಳು ದೂರಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ಜಪಾನ್‌ನ ಎನ್‌ಎಚ್‌ಕೆ ಟಿವಿ ತೋರಿಸಿದೆ.
ವಾಹನ ಸವಾರರು ಅಲೆಗಳ ಹೊಡೆತದಿಂದ ಪಾರಾಗಲು ಯತ್ನಿಸುತ್ತಿದ್ದರು. ಸೆಡಾಯಿಯಲ್ಲಿ ಹೊಲ-ಗದ್ದೆಗಳು ಮುಳುಗಡೆಯಾಗಿದ್ದು, ವಾಹನಗಳು ನಗರದ ರಸ್ತೆಗಳಲ್ಲಿ ತೇಲುತ್ತಿದ್ದವು. ಮಿಯಾಗಿಯ ಒನಗಾವ ಪರಮಾಣು ಸ್ಥಾವರದ ಟರ್ಬೈನ್ ಕಟ್ಟಡ, ನಗರ ಕೇಂದ್ರಗಳಲ್ಲಿ ಭೂಕಂಪದಿಂದಾಗಿ ಅಗ್ನಿ ಅನಾಹುತಗಳು ಸಂಭವಿಸಿವೆ. ನಾಲ್ಕು ಪರಮಾಣು ಸ್ಥಾವರ ಗಳನ್ನು ಸುರಕ್ಷಿತವಾಗಿ ಮುಚ್ಚಲಾಗಿದೆಯೆಂದು ವಿಶ್ವಸಂಸ್ಥೆಯ ಪರಮಾಣು ಸಂಸ್ಥೆ ತಿಳಿಸಿದ್ದು, ಯಾವುದೇ ವಿಕಿರಣ ಸೋರಿಕೆಯಾಗುತ್ತಿಲ್ಲವೆಂದು ಪ್ರಧಾನಿ ನೆವೊಟೊ ಕಾನ್ ಹೇಳಿದ್ದಾರೆ. ಭೂಕಂಪ ಹಾಗೂ ಸುನಾಮಿಗೆ ಕನಿಷ್ಠ 32 ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚುವ ಭೀತಿಯಿದೆಯೆಂದು ಪೊಲೀಸರು ಹಾಗೂ ಸ್ಥಳೀಯಾಧಿಕಾರಿ ಗಳು ತಿಳಿಸಿದ್ದಾರೆ. ಜನರು ಎತ್ತರದ ಕಟ್ಟಡಗಳ ಮೇಲೆ ನಿಂತು ಸಹಾಯಕ್ಕಾಗಿ ಮೊರೆಯಿಡುತ್ತಿದ್ದ ದೃಶ್ಯ ಕರುಳು ಮಿಡಿಯುವಂತಿತ್ತು. ತಾವು ಇದುವರೆಗೆ ಇಷ್ಟು ಪ್ರಬಲ ಭೂಕಂಪ ಅನುಭವಿಸಿಲ್ಲವೆಂದು ನಿವಾಸಿಗಳು ಹೇಳಿದ್ದಾರೆ.ಪರಮಾಣು ವಿಕಿರಣ ಸೋರಿಕೆಯಾಗಿಲ್ಲ: ಜಪಾನ್ ಪ್ರಧಾನಿಟೋಕಿಯೊ, ಮಾ.11: ಜಪಾನ್‌ನ ಈಶಾನ್ಯ ಪ್ರಾಂತ್ಯದಲ್ಲಿ ಶುಕ್ರವಾರ ಸಂಭವಿಸಿದ, ರಿಕ್ಟರ್ ಮಾಪಕದಲ್ಲಿ 8.9 ತೀವ್ರತೆಯ ಭೂಕಂಪದಿಂದ ಭಾರೀ ನಷ್ಟ ಸಂಭವಿಸಿದೆ. ಆದರೆ, ಪ್ರದೇಶದ ಪರಮಾಣು ವಿದ್ಯುತ್ ಸ್ಥಾವರಗಳು ಸುರಕ್ಷಿತವಾಗಿದ್ದು, ಯಾವುದೇ ವಿಕಿರಣ ಸೋರಿಕೆ ಸಂಭವಿಸಿಲ್ಲವೆಂದು ಪ್ರಧಾನಿ ನವೊಟೊ ಕಾನ್ ತಿಳಿಸಿದ್ದಾರೆ.ಶುಕ್ರವಾರ ಸಾಗರಾಂತರ ಕೇಂದ್ರಿತವಾದ ಪ್ರಬಲ ಭೂಕಂಪದಿಂದ ಉದ್ಭವಿಸಿದ ಸುನಾಮಿ ಅಲೆಗಳು ಪೂರ್ವ ತೀರದಲ್ಲಿ ಕಟ್ಟಡ, ಕಾರು, ಹಡಗು ಇತ್ಯಾದಿಗಳನ್ನು ಕೊಚ್ಚಿಕೊಂಡು ಹೋಗಿದ್ದು, ಉತ್ತರದ ಸೆಂಡಾಯಿ ನಗರದಲ್ಲಿ ಅನೇಕ ಅಗ್ನಿ ಅನಾಹುತಗಳ ಸಂಭವಿಸಿದೆ. ಆದರೆ, ನಷ್ಟದ ಪ್ರಮಾಣವನ್ನು ಅಂದಾಜಿಸಲು ಅಧಿಕಾರಿಗಳು ಈಗಲೂ ಪ್ರಯತ್ನ ಮುಂದುವರಿಸಿದ್ದಾರೆ.
ಭೂಕಂಪನವು ಉತ್ತರ ಜಪಾನ್‌ನ ವಿಸ್ತೃತ ಪ್ರದೇಶಗಳಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡಿದೆಯೆಂದು ಕಾನ್ ತುರ್ತು ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು. ಪ್ರದೇಶದ ಕೆಲವು ಪರಮಾಣು ಸ್ಥಾವರಗಳು ತಾವಾಗಿಯೇ ಸ್ತಂಭನಗೊಂಡಿವೆ. ಆದರೆ, ಅವುಗಳಿಂದ ವಾತಾವರಣಕ್ಕೆ ಯಾವುದೇ ವಿಕಿರಣ ಸೋರಿಕೆಯಾಗಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಲು ಸಂತ್ರಸ್ತ ಪ್ರದೇಶಗಳಿಗೆ ಸೇನೆಯನ್ನು ಕಳುಹಿಸಲಾಗುವುದೆಂದು ಹಿರಿಯ ಸರಕಾರಿ ವಕ್ತಾರ ಯುಕಿಯೊ ಎಡನೊ ತಿಳಿಸಿದರು. ಪರಿಹಾರ ಕಾರ್ಯದ ಮೇಲ್ವಿಚಾರಣೆಗೆ ತಾನು ತುರ್ತು ಕಾರ್ಯಪಡೆಯೊಂದನ್ನು ರಚಿಸಿದ್ದೇನೆಂದು ಕಾನ್ ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ