ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ೩೭ ಧ್ವನಿ ಸುರುಳಿಗಳು ಲಭಿಸಿದ್ದು, ಅವು ಸೇನಾ ಗೂಢಚಾರರು ಹಾಗೂ ಕೇಸರಿ ಭಯೋತ್ಪಾದಕ ಸಂಘಟನೆಗಳ ನಡುವಿನ ಆಘಾತಕಾರಿ ಅಪವಿತ್ರ ಮೈತ್ರಿಯನ್ನು ಬಹಿರಂಗ ಪಡಿಸಿವೆಯೆಂದು ‘ತೆಹಲ್ಕಾ’ ವರದಿ ಮಾಡಿದೆ. ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ನಿವೃತ್ತ ಮೇಜರ್ ರಮೇಶ ಉಪಾಧ್ಯಾಯ (೬೪) ಹಾಗೂ ಸೇವೆಯಲ್ಲಿದ್ದ ಸೇನಾಧಿಕಾರಿ ಲೆ|ಕ|ಪುರೋಹಿತ್ ಎಂಬವರ ಬಂಧನವಾಗಿದ್ದರೂ, ಇನ್ನೂ
ಸೇವೆಯಲ್ಲಿರುವ ಹಾಗೂ ನಿವೃತ್ತರಾಗಿರುವ ಸುಮಾರು ೮ ಮಂದಿ ಸೇನಾಧಿಕಾರಿಗಳು ಸ್ಫೋಟ ಪ್ರಕರಣಗಳಲ್ಲಿ ಒಳಗೊಂಡಿರುವುದು ಧ್ವನಿ ಸುರುಳಿಗಳಿಂದ ತಿಳಿದು ಬಂದಿದೆ. ಅವರಲ್ಲಿ ಕನಿಷ್ಠ ೪ ಮಂದಿ ಸೇನಾ ಗೂಢ ಚರ್ಯೆಯ ಹಿನ್ನೆಲೆ ಹೊಂದಿದವರೆಂದು ಪತ್ರಿಕೆ ಆರೋಪಿಸಿದೆ.
೧) ಪ್ರಕೃತ ಬಂಧನದಲ್ಲಿರುವ ಲೆ|ಕ| ಪುರೋಹಿತ್ ಹಾಗೂ ವೆ| ಉಪಾಧ್ಯಾಯ ಹೊರತಾಗಿ, ನಿವೃತ್ತ ಕರ್ನಲ್ ಹಸ್ಮುಖ್ ಪಟೇಲ್ ಎಂಬವರು ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆನ್ನಲಾಗಿದೆ. ಜವಾಹರ್ ಲಾಲ್ ನೆಹರೂ ವಿವಿಯ ಪದಧರರಾಗಿರುವ ಪಟೇಲ್ ಜಾಟ್ ರೆಜಿಮೆಂಟ್‌ನ ಪದಾತಿ ದಳವನ್ನು ಸೇರಿದ ಬಳಿಕ ಸೇನಾ ಗುಪ್ತಚರ ಇಲಾಖೆಗೆ ಸೇರ್ಪಡೆಯಾಗಿದ್ದರು. ೨೫ ವರ್ಷಗಳ ಸೇವೆಯ ಬಳಿಕ ೨೦೦೭ರಲ್ಲಿ ನಿವೃತ್ತರಾದ ಪಟೇಲ್ ರಿಲಯನ್ಸ್ ಸಂಸ್ಥೆಯನ್ನು ಸೇರಿದ್ದರು. ಅವರು ಬೆದರಿಕೆ ವಿಶ್ಲೇಷಣೆ, ಹಿನ್ನೆಲೆ ತಪಾಸಣೆ, ದೈಹಿಕ - ವಿದ್ಯುನ್ಮಾನ - ವೈಮಾನಿಕ ಭದ್ರತೆ, ಕಣ್ಗಾವಲು, ತನಿಖೆ, ವಿಕೋಪ ಪ್ರಬಂಧನ, ಸಂಧಾನ ಹಾಗೂ ನಷ್ಟ ತಡೆ ಕ್ಷೇತ್ರಗಳಲ್ಲಿ ವಿಶೇಷ ಪರಿಣತರಾಗಿದ್ದರೆಂದು ಅವರ ಸ್ವವಿವರ ತಿಳಿಸುತ್ತಿದೆ.
ಎನ್‌ಐಎ ಇತ್ತೀಚೆಗೆ ಪಟೇಲರ ವಿಚಾರಣೆಯನ್ನು ಒಮ್ಮೆ ನಡೆಸಿದ್ದರೂ, ಬಳಿಕ ಕಣ್ಗಾವಲಿನಿಂದ ಹೊರಗಿರಿಸಿದೆ.
೨) ಕರ್ನಲ್ ಶೈಲೇಶ್ ರಾಯ್ಕರ ನಿವೃತ್ತ ಕಮಾಂಡೆಂಟ್ ಆಗಿದ್ದು, ಮರಾಠಾ ರೆಜಿಮೆಂಟಿಗೆ ಸೇರಿದ್ದ ಬುದ್ಧಿವಂತ ಅಧಿಕಾರಿಯಾಗಿದ್ದರೆನ್ನಲಾಗಿದೆ. ಧ್ವನಿ ಸುರುಳಿ ಹೇಳಿರುವಂತೆ ಅವರು ನಾಸಿಕದ ಭೋಸ್ಲೆ ಮಿಲಿಟರಿ ಅಕಾಡಮಿಯ
ಕಮಾಂಡರ್ ಆಗಿದ್ದರು. ಅವರು ಪುರೋಹಿತ್ ಹಾಗೂ ಅಭಿನವ ಭಾರತ್‌ನ ಇತರ ಸದಸ್ಯರಿಗೆ ಅಕಾಡಮಿಯ ಸೌಲಭ್ಯವನ್ನು ಶಸ್ತ್ರಾಸ್ತ್ರ ತರಬೇತಿಗಾಗಿ ಒದಗಿಸಿದ್ದರೆನ್ನಲಾಗಿದ್ದು, ಎನ್‌ಐಎಯ ಕಣ್ಗಾವಲಲ್ಲಿದ್ದಾರೆನ್ನಲಾಗಿದೆ.
೨) ಕರ್ನಲ್ ಶೈಲೇಶ್ ರಾಯ್ಕರ ನಿವೃತ್ತ ಕಮಾಂಡೆಂಟ್ ಆಗಿದ್ದು, ಮರಾಠಾ ರೆಜಿಮೆಂಟಿಗೆ ಸೇರಿದ್ದ ಬುದ್ಧಿವಂತ ಅಧಿಕಾರಿಯಾಗಿದ್ದರೆನ್ನಲಾಗಿದೆ. ಧ್ವನಿ ಸುರುಳಿ ಹೇಳಿರುವಂತೆ ಅವರು ನಾಸಿಕದ ಭೋಸ್ಲೆ ಮಿಲಿಟರಿ ಅಕಾಡಮಿಯ
ನಿವೃತ್ತ ಕರ್ನಲ್ ಆದಿತ್ಯ ಒಪ್ಪಾದಿತ್ಯ ಧಾರ್ (ಪಾರಾಚೂಟ್ ರೆಜಿಮೆಂಟ್), ಬ್ರಿ| ಮಾಥುರ್ (ಅವರ ಪೂರ್ಣ ಹೆಸರು ತಿಳಿದಿಲ್ಲ. ಆದರೆ ಅವರು ನಾಸಿಕದ ಸಮೀಪ ದೇವಾಲಿ ಕಮಾಂಡೆಂಟ್‌ನಲ್ಲಿ ಸೇವೆಯಲ್ಲಿದ್ದರು). ಮೇ| ನಿತಿನ್ ಜೋಶಿ ಹಾಗೂ ಮೇ| ಪ್ರಯಾಗ್ ಮೋಡಕ್ (ಅವರಿಬ್ಬರ ರೆಜಿಮೆಂಟ್ ಯಾವುದೆಂದು ತಿಳಿದಿಲ್ಲ) ಧ್ವನಿ ಸುರುಳಿಯಲ್ಲಿ ಪ್ರಸ್ತಾಪಿತವಾಗಿರುವ ಇತರ ಹೆಸರುಗಳೆನ್ನಲಾಗಿದೆ. ಎನ್‌ಐಎಯು ಕ| ಧಾರ್‌ರೊಂದಿಗೆ ಸಂಪರ್ಕ ಸಾಧಿಸಿದೆ ಯಾದರೂ ಇತರರ ಬಗ್ಗೆ ಇನ್ನಷ್ಟೇ ತನಿಖೆ ನಡೆಸಬೇಕಿದೆ. ಇವರಲ್ಲದೆ ನೇಪಾಳ ಸೇನೆಯಲ್ಲಿರುವ ಬಿಗೇಡಿಯರ್ ಲಜಪತ್ ಪ್ರಜ್ವಲ್ ಎಂಬವರ ಹೆಸರೂ ಪ್ರಸ್ತಾಪವಾಗಿದೆ. ಪ್ರಜ್ವಲ್ ಹಾಗೂ ಪುರೋಹಿತ್ ಸೇನಾ ಗೂಢ ಚರ್ಯೆಯಲ್ಲಿ ಒಟ್ಟಿಗೆ ತರಬೇತಿ ಪಡೆದಿದ್ದು, ಸತತ ಸಂಪರ್ಕದಲ್ಲಿದ್ದರೆಂದು ಹೇಳಲಾಗಿದೆ.
ಕ| ಧಾರ್ ತಮ್ಮ ಕೇಸರಿ ಕಾರ್ಯ ಸೂಚಿಯ ಕುರಿತು ಸೇನಾ ಜವಾನರಿಗೆ ೩ ಲಕ್ಷ ಪತ್ರಗಳನ್ನು ಹಂಚಿದ್ದು, ಜ. ೨೬ರಂದು ‘ಅಖಂಡ ಭಾರತ’ದ ೨೦ ಸಾವಿರ ಭೂಪಟಗಳನ್ನು ಹಂಚಿದ್ದರೆಂಬುದು ಅವರು ಹಾಗೂ ಪುರೋಹಿತರ ನಡುವಣ
| 2007ರಲ್ಲಿ ಹೈದರಾಬಾದ್‌ನ ಮಕ್ಕಾ ಮಸೀದಿ ಬಳಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ 14 ಮಂದಿ ಬಲಿಯಾಗಿದ್ದರು. |
ಸಂಭಾಷಣೆಯ ಧ್ವನಿಸುರುಳಿಯಿಂದ ಖಚಿತವಾಗಿವೆಯೆನ್ನಲಾಗಿದೆ. ಆದಾಗ್ಯೂ, ತಾವು ಪುರಾವೆಗಳ ಆಧಾರದಲ್ಲಿ ತನಿಖೆ ನಡೆಸಿದ್ದು, ಸೇನಾಧಿಕಾರಿಗಳ ವಿರುದ್ಧ ಖಚಿತ ಸಾಕ್ಷವಿಲ್ಲ. ತಾವು ಧಾರ್ ಸಹಿತ ಕೆಲವರ ವಿಚಾರಣೆ ನಡೆಸಿದ್ದು, ಅವರನ್ನು ಬಂಧಿಸುವಂತಹ ಯಾವುದೇ ಪುರಾವೆ ದೊರೆತಿಲ್ಲವೆಂದು ಮಾಲೆಗಾಂವ್ ಸ್ಫೋಟದ ತನಿಖೆಯನ್ನು ನಿಧಾನ ಗೊಳಿಸುತ್ತಿದ್ದಾರೆಂದು ಆರೋಪ ಹೊತ್ತಿರುವ ಮಹಾರಾಷ್ಟ್ರ ಎಟಿಎಸ್ ವರಿಷ್ಠ ಕೆ.ಪಿ.ರಘುವಂಶಿ ಸ್ಪಷ್ಟ ಪಡಿಸಿದ್ದಾರೆಂದು ತಿಳಿದುಬಂದಿದೆ.
ಸೇನಾ ಗುಪ್ತಚರ ಅಧಿಕಾರಿಯೊಬ್ಬ ತಮ್ಮ ತನಿಖೆಯನ್ನು ಸದಾ ಪರಿಶೀಲಿಸುತ್ತಾನೆ. ಆರಂಭದಲ್ಲಿ ತಾವು ಪುರೋಹಿತ್ ವಿರುದ್ಧ ಪುರಾವೆ ನೀಡಿದರೂ, ಅದು ತನ್ನ ಆಂತರಿಕ ವಿಚಾರವೆಂದು ಸೇನೆ ಹೇಳಿದ ಕಾರಣ ಆತನ ಬಂಧನ ಕಷ್ಟವಾಯಿತ ಎಂದವರು ತಿಳಿಸಿದ್ದಾರೆ. ತರಬೇತಿಗಾಗಿ ಜನರನ್ನು ನೇಪಾಳ ಹಾಗೂ ಇಸ್ರೇಲ್‌ಗೆ ಕಳುಹಿಸುವ ಕೆಲಸ ಗಂಭೀರವಾಗಿ ನಡೆದಿಲ್ಲ ಎಂದು ಪುರೋಹಿತ್ ಧ್ವನಿ ಸುರುಳಿಯಲ್ಲಿ ಹೇಳಿದ್ದಾರೆ. ಅದು ಅತಿ ದೊಡ್ಡ ಪ್ರಮಾಣ.
ಮಾಹಿತಿದಾರರು ಹಾಗೂ ಗೂಢಚಾರದ ಜಾಲವನ್ನು ಹರಡಿ ಪ್ರಮುಖ ಮಾಹಿತಿ ಸಂಗ್ರಹಿಸುವುದು ಜಮ್ಮು-ಕಾಶ್ರೀರ ಗಡಿಯ ಗುಂಟ ನೇಮಕಗೊಂಡ ಸೇನಾ ಗುಪ್ತಚರ ಅಧಿಕಾರಿಯೊಬ್ಬನ ಕೆಲಸವಾಗಿರುತ್ತದೆ. ಪುರೋಹಿತ್ ಅಲ್ಲಿರುವಾಗ ಎಸಗಿದ ಹಾನಿಯನ್ನು ಊಹಿಸುವುದು ಕಷ್ಟ. ಆತನ ಸಂಪೂರ್ಣ ಸತ್ಯ ಹೊರ ಬಂದಿಲ್ಲ ಎಂದು ಇನ್ನೊಬ್ಬ ಎಟಿಎಸ್ ಅಧಿಕಾರಿ ಹೇಳಿದ್ದಾರೆನ್ನಲಾಗಿದೆ.
ಕೃಪೆ ತೆಹಲ್ಕಾ: ಧ್ವನಿ ಸುರುಳಿ ಸಂಭಾಷಣೆಯ ಆಯ್ದ ಭಾಗ...
ಕ| ಪುರೋಹಿತ್, ಮೇ| ಉಪಾಧ್ಯಾಯ, ಕ| ಧಾರ್, ದಯಾನಂದ ಪಾಂಡೆ, ಬಿ.ಎಲ್.ಶರ್ಮಾ ಪ್ರೇಮ್ (ಬಿಜೆಪಿ ಸಂಸದ) ಹಾಗೂ ಆರ್.ಪಿ.ಸಿಂಗ್ (ಅಪೊಲೊ ಆಸ್ಪತ್ರೆಯ ವೈದ್ಯ ಹಾಗೂ ವಿಶ್ವ ಹಿಂದೂ ಒಕ್ಕೂಟದ ಅಧ್ಯಕ್ಷ) ಇವರೊಳಗೆ ನಡೆದ ಸಂಭಾಷಣೆಯ ಧ್ವನಿ ಮುದ್ರಿಕೆಯ ಆಯ್ದ ಭಾಗವನ್ನು ಈ ಕೆಳಗೆ ಕೊಡಲಾಗಿದೆ.
ಪುರೋಹಿತ್: ನಾವು ಎರಡು ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ. ಹಾಗೂ ಅದಕ್ಕೆ ನನಗೆ ವಸ್ತು ರೂಪದ ಬೆಂಬಲ ದೊರೆತಿದೆ. ೨೦೦೭ರ ಜೂ.೨೪ರಂದು ಕ| ಲಜಪತ್ ಪ್ರಜ್ವಲ್ ನಮಗೆ ನೇಪಾಳದ ದೊರೆ ಜ್ಞಾನೇಂದ್ರ ರೊಂದಿಗೆ ಭೇಟಿ ಕಲ್ಪಿಸಿದರು. ಈ ಕೆಲಸ ಯಾರು ಮಾಡುತ್ತಿದ್ದಾರೆಂಬುದು ಈ ದೇಶದ ಯಾವನೂ ಕಲ್ಪಿಸಲು ಸಾಧ್ಯವಿಲ್ಲ. ಮೇಜರ್ ಸಾಹೇಬರಲ್ಲಿ (ಉಪಾಧ್ಯಾಯ) ೨೦ ಜನರಿದ್ದರೆ ನಾವವರಿಗೆ ತರಬೇತಿ ನೀಡುತ್ತೇವೆ.
ಆರ್.ಪಿ.ಸಿಂಗ್: ದೊರೆ ಜ್ಞಾನೇಂದ್ರರ ನಿಕಟ ಸಂಬಂಧಿಯೊಬ್ಬ ಗೋರಖಪುರ ದಲ್ಲಿ ನಮ್ಮ ಜತೆ ಕುಳಿತಿದ್ದನು. ನಾವು ಸತತವಾಗಿ ಅವರ ಸಂಪರ್ಕದಲ್ಲಿದ್ದೇವೆ. ಮೇ| ಪ್ರಯಾಗ್ ಮೋಡಕ್ ಸಹ ನವ್ಮೊಂದಿಗೆ ಸಭೆಯಲ್ಲಿರುವ ಒಬ್ಬರಾಗಿ ದ್ದಾರೆ. ನಮಗೆ ತರಬೇತಿಯಲ್ಲಿ ನೆರವು ನೀಡುತ್ತಿರುವ ಕ| ರಾಯ್ಕರ್ ಹಾಗೂ ಕ| ಹಸ್ಮುಖ್ ಪಟೇಲ್ ಇದ್ದಾರೆ. ಪ್ರಜ್ವಲ್ ರಾಣಿ ಐಶ್ವರ್ಯಾರ ಕಡೆಯಿಂದ ಬಂದಿದ್ದಾರೆ.
(ಕರ್ನಲ್ ಧಾರ್ ಕೊಠಡಿಯನ್ನು ಪ್ರವೇಶಿಸುತ್ತಾರೆ)
ಪುರೋಹಿತ್: ನಮಸ್ಕಾರ ಧಾರಜೀ (ಇತರರಿಗೆ) ಇವರು ೨೩ ವರ್ಷಗಳಿಂದ ಸೇನೆಯಲ್ಲಿದ್ದಾರೆ. ಹಾಗೂ ನನ್ನೊಂದಿಗಿ ದ್ದಾರೆ. ಅವರು ಪಾರಾ ಚೂಟ್ ರೆಜಿಮೆಂಟ್‌ನಲ್ಲಿದ್ದಾರೆ. ನಾನೂ ಅವರೊಂದಿಗೆ ನಿಯೋಜನೆಗೊಂಡಿದ್ದೆ. ಧಾರ್ ಸಾಹೇಬರೇ, ನಾನು ನಿಮ್ಮನ್ನು ಇಲ್ಲಿರುವವರಿಗೆ ಪರಿಚಯಿಸುತ್ತೇನೆ. ನಾವೆಲ್ಲ ಒಂದೇ ವಿಮಾನದಲ್ಲಿದೇವೆ. ಅದು. ಹಿಂದೂ ರಾಷ್ಟ್ರ.... ನವ್ಮೊಂದಿಗೆ ಜ| ಜೆ.ಜೆ. ಸಿಂಗ್ ಕೂಡ ಇದ್ದಾರೆ. ಅವರು ಮರಾಠಾ ರೆಜಿಮೆಂಟ್‌ನ ಭಾಗವಾಗಿದ್ದಾರೆ.
ಆರ್.ಪಿ.ಸಿಂಗ್: ದೊರೆ ಜ್ಞಾನೇಂದ್ರರ ನಿಕಟ ಸಂಬಂಧಿಯೊಬ್ಬ ಗೋರಖಪುರ ದಲ್ಲಿ ನಮ್ಮ ಜತೆ ಕುಳಿತಿದ್ದನು. ನಾವು ಸತತವಾಗಿ ಅವರ ಸಂಪರ್ಕದಲ್ಲಿದ್ದೇವೆ. ಮೇ| ಪ್ರಯಾಗ್ ಮೋಡಕ್ ಸಹ ನವ್ಮೊಂದಿಗೆ ಸಭೆಯಲ್ಲಿರುವ ಒಬ್ಬರಾಗಿ ದ್ದಾರೆ. ನಮಗೆ ತರಬೇತಿಯಲ್ಲಿ ನೆರವು ನೀಡುತ್ತಿರುವ ಕ| ರಾಯ್ಕರ್ ಹಾಗೂ ಕ| ಹಸ್ಮುಖ್ ಪಟೇಲ್ ಇದ್ದಾರೆ. ಪ್ರಜ್ವಲ್ ರಾಣಿ ಐಶ್ವರ್ಯಾರ ಕಡೆಯಿಂದ ಬಂದಿದ್ದಾರೆ.
(ಕರ್ನಲ್ ಧಾರ್ ಕೊಠಡಿಯನ್ನು ಪ್ರವೇಶಿಸುತ್ತಾರೆ)
ಪುರೋಹಿತ್: ನಮಸ್ಕಾರ ಧಾರಜೀ (ಇತರರಿಗೆ) ಇವರು ೨೩ ವರ್ಷಗಳಿಂದ ಸೇನೆಯಲ್ಲಿದ್ದಾರೆ. ಹಾಗೂ ನನ್ನೊಂದಿಗಿ ದ್ದಾರೆ. ಅವರು ಪಾರಾ ಚೂಟ್ ರೆಜಿಮೆಂಟ್‌ನಲ್ಲಿದ್ದಾರೆ. ನಾನೂ ಅವರೊಂದಿಗೆ ನಿಯೋಜನೆಗೊಂಡಿದ್ದೆ. ಧಾರ್ ಸಾಹೇಬರೇ, ನಾನು ನಿಮ್ಮನ್ನು ಇಲ್ಲಿರುವವರಿಗೆ ಪರಿಚಯಿಸುತ್ತೇನೆ. ನಾವೆಲ್ಲ ಒಂದೇ ವಿಮಾನದಲ್ಲಿದೇವೆ. ಅದು. ಹಿಂದೂ ರಾಷ್ಟ್ರ.... ನವ್ಮೊಂದಿಗೆ ಜ| ಜೆ.ಜೆ. ಸಿಂಗ್ ಕೂಡ ಇದ್ದಾರೆ. ಅವರು ಮರಾಠಾ ರೆಜಿಮೆಂಟ್‌ನ ಭಾಗವಾಗಿದ್ದಾರೆ.
ಪಾಂಡೆ: ಸರಿ...
ಪುರೋಹಿತ್: ಸ್ವಾಮೀಜಿ ನಾವು ಕೆಲವು ವಿಷಯಗಳ ಕುರಿತು ಮಾತನಾಡಿಯೇ ಇಲ್ಲ. ಆದರೆ, ನಮ್ಮಿಂದ ಎರಡು ಕಾರ್ಯಾಚರಣೆಗಳು ನಡೆದಿವೆ. ನಮ್ಮ ಕ್ಯಾಪ್ಟನ್‌ಗಳಲ್ಲೊಬ್ಬರು ತರಬೇತಿ ಹಾಗೂ ಸಭೆಗಾಗಿ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ಅತ್ಯಂತ ಧನಾತ್ಮಕ ಪ್ರತಿಕ್ರಿಯೆಯಿದೆ. ನಾವು ಇಸ್ರೇಲ್‌ನಿಂದ ನಾಲ್ಕು ವಿಷಯಗಳನ್ನು ಕೇಳಿದ್ದೇವೆ. ಶಸ್ತ್ರಾಸ್ತ್ರ ಹಾಗೂ ತರಬೇತಿಯ ಸತತ ಹಾಗೂ ತಡೆಯಿಲ್ಲದ ಪೂರೈಕೆ, ಟೆಲ್ ಅವ್‌ನಲ್ಲಿ ಕೇಸರಿ ಬಾವುಟದೊಂದಿಗೆ ನಮ್ಮ ಒಂದು ಕಚೇರಿ, ರಾಜಕೀಯ ಆಶ್ರಯ ಹಾಗೂ ವಿಶ್ವ ಸಂಸ್ಥೆಯಲ್ಲಿ ನಮ್ಮ ಹಿಂದೂ ರಾಷ್ಟ್ರ ಹೋರಾಟಕ್ಕೆ ಬೆಂಬಲ. ಇಸ್ರೇಲ್ ಕ್ಷೇತ್ರದಲ್ಲಿ ಯಾವುದಾದರೂ ಸಾಧನೆ ತೋರಿಸುವಂತೆ ನಮಗೆ ಸೂಚಿಸಿದೆ ಹಾಗೂ ಕನಿಷ್ಠ ಶಸ್ತ್ರಾಸ್ತ್ರ ಪೂರೈಕೆ ಹಾಗೂ ರಾಜಕೀಯ ಆಶ್ರಯದ ಭರವಸೆ ನೀಡಿದೆ. ನನ್ನಲ್ಲಿ ರಾಜ್ಯವಾರು ಮುಸ್ಲಿಂ ಜನಸಂಖ್ಯೆಯ ಪಟ್ಟಿಯಿದೆ. ಆದರೆ ಕೇವಲ ೩ ಎಕೆ-೪೭ ಗಳಿವೆ. ನಾವದನ್ನು ಬೇಗನೆ ಖರೀದಿಸಲಾರೆವು. ಏಕೆಂದರೆ ನಮ್ಮಲ್ಲಿ ಹಣವಿಲ್ಲ.
ಉಪಾಧ್ಯಾಯ: ಎಕೆ-೪೭ ಗೋರಖಪುರದ ಕೋಕ್ಸ್ ಬಜಾರ್‌ನಲ್ಲಿ ದೊರೆಯುತ್ತದೆ. ಆದರೆ, ಜಿಹಾದಿಗಳೇ ಹೆಚ್ಚಾಗಿ ಅವುಗಳನ್ನು ಮಾರುತ್ತಿದ್ದಾರೆ.
ಪುರೋಹಿತ್: ನೀವು ಬಹಳ ದುಬಾರಿ ಎ.ಕೆ.ಗಳನ್ನು ಪಡೆಯುವಿರಿ.
ಪಾಂಡೆ: ಅರೇ... ನಿಮಗೆ ಹಲವು ಎ.ಕೆ. ಬಂದೂಕುಗಳು ದೊರೆಯುತ್ತವೆ.
ಪುರೋಹಿತ್: ಇಸ್ರೇಲಿಗಳು ನಮ್ಮ ಭಾಗವಹಿಸುವಿಕೆಯ ಬಗ್ಗೆ ಪುರಾವೆ ನೀಡುವಂತೆ ಕೇಳುತ್ತಾರೆ. ಅವರಿಗೆ ಇನ್ನೂ ಹೆಚ್ಚಿನ ಪುರಾವೆ ಯಾವುದು ಬೇಕಾಗಿದೆ? ನಾವು ಎರಡು ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ.ಉಪಾಧ್ಯಾಯ: ಹೈದರಾಬಾದ್ ಸ್ಫೋಟ ನಮ್ಮ ವ್ಯಕ್ತಿಯಿಂದಲೇ ನಡೆದಿದೆ. ಕರ್ನಲ್ ನಿಮಗೆ ಆ ಬಗ್ಗೆ ಹೇಳುತ್ತಾರೆ.
ಪಾಂಡೆ: ಈ ಸಂಘಟನೆಯನ್ನು ನಿಷೇಧಿಸಿದರೆ ಏನು ಮಾಡುವುದು?
ಆಪ್ಟೆ: ನಾವದಕ್ಕೆ ಅಂತಾರಾಷ್ಟ್ರೀಯ ಆಯಾಮ ನೀಡುತ್ತೇವೆ. ಹಾಗೂ ಒಂದು ನಕಲಿ ಹೆಸರು. ನಾವು ಹೋರಾಡಲೇ ಬೇಕಾಗಿದೆ. ನೋಡಿ. ನೀವು ಹಿಂದೂ ಅಲ್ಲದಿದ್ದರೆ ನನ್ನ ಶತ್ರುವಾಗುತ್ತೀರಿ. ನೀವು ಜೀವಂತವಿದ್ದರೆ ನನಗೆ ರಕ್ಷಣೆಯಿಲ್ಲ.
ಈ ವೇಳೆ ನಾಗಾಲ್ಯಾಂಡ್‌ನ ನಿಷೇಧಿತ ನ್ಯಾಶನಲಿಸ್ಟ್ ಸೋಶಿಯಲಿಸ್ಟ್ ಕೌನ್ಸಿಲ್‌ನ ನಾಯಕ ಖೆಟೊಮಿ ಸೇಮಾ ಬಗ್ಗೆ ಉಲ್ಲೇಖಿಸಿದ ಪುರೋಹಿತ್, ಆತ ತನ್ನ ಪ್ರಾಣ ಉಳಿಸಿದ್ದಾನೆ. ಸೇಮಾ ತನ್ನ ಕೆಲಸಕ್ಕೆ ಬೆಂಬಲ ನೀಡುವಂತೆ ತನ್ನ ಎಲ್ಲ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾನೆ. ಏಳು ವರ್ಷಗಳ ಕಾಲ ಬೆಂಬಲ ನೀಡಲು ಆತ ಒಪ್ಪಿಕೊಂಡಿದ್ದಾನೆಂದು ಪಾಂಡೆಗೆ ಹೇಳುತ್ತಾನೆ.
ಈ ವೇಳೆ ನಾಗಾಲ್ಯಾಂಡ್‌ನ ನಿಷೇಧಿತ ನ್ಯಾಶನಲಿಸ್ಟ್ ಸೋಶಿಯಲಿಸ್ಟ್ ಕೌನ್ಸಿಲ್‌ನ ನಾಯಕ ಖೆಟೊಮಿ ಸೇಮಾ ಬಗ್ಗೆ ಉಲ್ಲೇಖಿಸಿದ ಪುರೋಹಿತ್, ಆತ ತನ್ನ ಪ್ರಾಣ ಉಳಿಸಿದ್ದಾನೆ. ಸೇಮಾ ತನ್ನ ಕೆಲಸಕ್ಕೆ ಬೆಂಬಲ ನೀಡುವಂತೆ ತನ್ನ ಎಲ್ಲ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾನೆ. ಏಳು ವರ್ಷಗಳ ಕಾಲ ಬೆಂಬಲ ನೀಡಲು ಆತ ಒಪ್ಪಿಕೊಂಡಿದ್ದಾನೆಂದು ಪಾಂಡೆಗೆ ಹೇಳುತ್ತಾನೆ.
ಅಭಿನವ ಭಾರತ್‌ಗಾಗಿ ಸೇನಾ ಯಂತ್ರಾಂಶವನ್ನು ಉಪಯೋಗಿ ಸುತ್ತಿರುವುದು ಪುರೋಹಿತ್‌ನ ಸಂಭಾಷಣೆ ಯಿಂದ ಹೊರ ಬಿದ್ದಿದೆ. ತಾನು ಅಭಿನವ ಭಾರತ್‌ನಲ್ಲಿ ಕೆಲಸ ಮಾಡ ಬಲ್ಲ ಸಮಾನ ಮನಸ್ಕ ಸೇನಾಧಿಕಾರಿಗಳನ್ನು ಒಟ್ಟು ಗೂಡಿಸುವ ಕೆಲಸದಲ್ಲಿರುವುದಾಗಿ ಆತ ಹೇಳುತ್ತಾನೆ. ದಿಲ್ಲಿಯಲ್ಲಿ ಒಬ್ಬರು ಮಾವೊವಾದಿಗಳನ್ನು ಹಿಡಿದು ಬರ್ಬರವಾಗಿ ಕೊಂದುದನ್ನು ಪುರೋಹಿತ್ ಒಪ್ಪಿಕೊಳ್ಳುತ್ತಾನೆ.
ಪುರೋಹಿತ್: ನಾನು ರೂ. ೪ ಲಕ್ಷ ಬೆಲೆಯ ಶಸ್ತ್ರಾಸ್ತ್ರಗಳನ್ನು ಅಸ್ಸಾಂನಲ್ಲಿ ಖರೀದಿಸಿದ್ದೇನೆ. ಒಬ್ಬ ಪೊಲೀಸ್ ಅಧಿಕಾರಿ ಅವುಗಳನ್ನು ನನಗೆ ನೀಡಿದ್ದಾನೆ. ಅದಕ್ಕೆ ಬಹಳ ಬೆಲೆಯಿದೆ. ನನ್ನಲ್ಲಿ ೩ ಲಕ್ಷ ವಿತ್ತು ಹಾಗೂ ಒಂದು ಲಕ್ಷ ಸಾಲ ಪಡೆದೆ. ನಾನು ನನ್ನೊಂದಿಗೆ ಪಿಸ್ತೂಲೊಂದನ್ನು ಇರಿಸಿಕೊಂಡಿದ್ದೇನೆ. ಕೆಲವು ಆಯುಧಗಳನ್ನು ನೇಪಾಳಕ್ಕೆ ಕಳುಹಿಸಿದ್ದೇನೆ. ನಮ್ಮ ಅಧ್ಯಯನ ಮುಂದುವರಿದಿದೆ. ನಾವು ಶೀಘ್ರವೇ ಕಾರ್ಯಾಚರಣೆ ಆರಂಭಿಸಲಿ ದ್ದೇವೆ. ನಮ್ಮಲ್ಲಿ ೫-೬ ಮಂದಿ ಅಗ್ರ ಮಾವೊವಾದಿ ಫೈನಾನ್ಸರ್‌ಗಳ ಪಟ್ಟಿಯಿದೆ.
ನಾವವರನ್ನು ವೊದಲು ಕೊಲ್ಲುತ್ತೇವೆ. ನನ್ನನ್ನು ಕೊಲ್ಲಲ್ಲು ದಿಲ್ಲಿಗೆ ಬಂದಿರುವ ಇಬ್ಬರು ವಾವೊವಾದಿಗಳ ಬಗ್ಗೆ ಅಸ್ಸಾಂನ ಡಿಐಜಿಯೊಬ್ಬ ನನಗೆ ಮಾಹಿತಿ ನೀಡಿರುವುದು ನಿಮಗೆ ಗೊತ್ತಿದೆ. ನಾವವ ರನ್ನು ವಸಂತ ಕುಂಜ ನಾಗರಿಕ ಕೇಂದ್ರದಲ್ಲಿ ಸೆರೆ ಹಿಡಿದು ರಾತ್ರಿಯಿಡೀ ಮುನಿಕ್ರಾದ ಒಂದು ಸ್ಥಳದಲ್ಲಿ ಇರಿಸಿದ್ದೆವು. ಮುನಿಕ್ರಾ ದಲ್ಲಿ ನಾವು ಅತಿಕ್ರಮಿಸಿರುವ ಸ್ಥಳದಲ್ಲಿ ಮನೆಯೊಳಗೆ ಚರಂಡಿಯ ಮುಚ್ಚಳ ವಿರುವುದು ನಿಮಗೆ ತಿಳಿದಿದೆ. ನಾವು ಅವರಿಂದ ಮಾಹಿತಿ ಸಂಗ್ರಹಿಸಿ, ಕೊಂದು ಚರಂಡಿಗೆಸೆದೆವು.
ದಿಲ್ಲಿಯಲ್ಲಿ ಒಬ್ಬ ಕ್ಯಾಪ್ಟನ್ ಹಾಗೂ ಒಬ್ಬ ಮೇಜರ್ ಇದ್ದಾರೆ. ನಾನು ಅವರೊಂದಿಗೆ ಫೋನಿನಲ್ಲಿ ನನ್ನ ಕೆಲಸ ಮಾಡಿಕೊಳ್ಳಲು ಸಫಲನಾಗಿದೆ. ಇಲ್ಲದಿದ್ದಲ್ಲಿ ಆ ಕೆಲಸಕ್ಕೆ ಮೂರು ತಿಂಗಳಿಗೂ ಹೆಚ್ಚು ಕಾಲ ತಗಲುತ್ತಿತ್ತು. ನಾನು ಸಂಘದಲ್ಲಿದ್ದುದರಿಂದ ಅದು ಸಾಧ್ಯ ವಾಯಿತು. ಅವರು ಕೂಡ ಸಂಘದವರೇ ಆಗಿದ್ದಾರೆ. ನನಗೆ ಆತನ ಪರಿಚಯವೂ ಇರಲಿಲ್ಲ. ಆತ ಉತ್ತರ ಪ್ರದೇಶದವನು. ಆತ ಒಂದೇ ದಿನದಲ್ಲಿ ಕೆಲಸ ಮಾಡಿ ಕೊಟ್ಟ. ಅಂತಹ ಜನರನ್ನು (ಸಂಘ ಹಿನ್ನೆಲೆಯ) ಹಿಡಿಯುವುದು ಬಹಳ ಮುಖ್ಯ.
ಇದು ಸೇನೆಯಲ್ಲಿರುವ ವರ್ಗವೊಂದರ ಕಳವಳಕಾರಿ ಮಾನಸಿಕೆಯನ್ನು ಸೂಚಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ