ಭಾನುವಾರ, ನವೆಂಬರ್ 28, 2010

ಮಕ್ಕಾ ಮಸೀದಿ ಸ್ಫೋಟ ಆರೋಪಿ ಸ್ವಾಮಿ ಅಸೀಮಾನಂದನ ಸಿಬಿಐ ವಿಚಾರಣೆ ಆರಂಭ

ಸೋಮವಾರ - ನವೆಂಬರ್ -29-2010

ಹೈದರಾಬಾದ್, ನ. 28: ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟದ ಆರೋಪಿ ಸ್ವಾಮಿ ಅಸೀಮಾನಂದನ ವಿಚಾರಣೆ ಯನ್ನ್ನು ಶನಿವಾರದಿಂದ ಸಿಬಿಐ ಆರಂಭಿಸಿದೆ. ಚಂಚಲಗುಡ ಕೇಂದ್ರ ಜೈಲಿನಿಂದ ಸ್ವಾಮಿ ಅಸೀಮಾನಂದನನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಸಿಬಿಐ ಆತನ ವಿಚಾರಣೆಯನ್ನು ಆರಂಭಿಸಿದೆ ಎಂದು ಮೂಲಗಳು ಹೇಳಿವೆ.
ಇಲ್ಲಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರು, ಸ್ವಾಮಿ ಅಸೀಮಾನಂದನನ್ನು 7 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು. ಪೊಲೀಸ್ ಕಸ್ಟಡಿಯ ತನಿಖೆ ಮುಗಿದಿರುವುದರಿಂದ ಸ್ವಾಮಿ ಅಸೀಮಾನಂದನನ್ನು ಇದೀಗ ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ.59ರ ಹರೆಯದ ಸ್ವಾಮಿ ಅಸೀಮಾನಂದನನ್ನು ನವೆಂಬರ್ 19ರಂದು ಹರಿದ್ವಾರದಲ್ಲಿ ಬಂಧಿಸಲಾಗಿದೆ.
ನಬ ಕುಮಾರ್ ಸರ್ಕಾರ್ ಅಲಿಯಾಸ್ ಸ್ವಾಮಿ ಅಸೀಮಾನಂದ 9 ಮಂದಿ ಸಾವಿಗೆ ಕಾರಣವಾದ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಸಿಬಿಐ ಶಂಕಿಸಿದೆ.ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದನ ಪಾತ್ರವಿರುವುದು ಇತ್ತೀಚೆಗಷ್ಟೇ ಸ್ಪಷ್ಟವಾಗಿದೆ ಎಂದು ಸಿಬಿಐ ಹೇಳಿದೆ. ಈ ಹಿನ್ನೆಲೆಯಲ್ಲಿ ಬಂಧಿತನ ಹೆಚ್ಚುವರಿತನಿಖೆಗಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ