*ಮೊದಲ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್‌ಗೆ ಆಘಾತ *ಯುವರಾಜ್ ಆಲ್‌ರೌಂಡ್ ಪ್ರದರ್ಶನ *ಭಾರತಕ್ಕೆ 1-0 ಮುನ್ನಡೆ ಗುವಾಹಟಿ, ನ.28: ಟೆಸ್ಟ್‌ನಲ್ಲಿ ನಂ.1 ತಂಡವನ್ನು ಮಣಿಸಲು ಶತಾಯಗತಾಯ ಶ್ರಮಿಸಿ ಮೂರನೆ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಿ ಸರಣಿ ಕಳೆದುಕೊಂಡ ನ್ಯೂಝಿಲೆಂಡ್ ಏಕದಿನ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದೆ.
ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಇಂದು ನಡೆದ ಐದು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಆಕರ್ಷಕ ಶತಕ, ಯುವರಾಜ್ ಸಿಂಗ್‌ರ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಭಾರತ ನ್ಯೂಝಿಲೆಂಡ್‌ನ್ನು 40 ರನ್‌ಗಳಿಂದ ಬಗ್ಗು ಬಡಿದು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರನ್ನು ಒಳಗೊಂಡ ಗೌತಮ್ ಗಾಂಭೀರ್ ಪಡೆ ನೀಡಿದ 277 ರನ್‌ಗಳ ಸವಾಲನ್ನು ಬೆನ್ನಟ್ಟುವಲ್ಲಿ ಎಡವಿದ ನ್ಯೂಝಿಲೆಂಡ್ ತಂಡ 45.2 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 236 ರನ್ ಮಾಡಿ ಸೋಲೊಪ್ಪಿಕೊಂಡಿತು.ಭಾರತದ ವಿರುದ್ಧ ಜಯ ಗಳಿಸಲು ನ್ಯೂಝಿಲೆಂಡ್‌ಗೆ ಎಲ್ಲ ಅವಕಾಶವಿದ್ದರೂ ಮಧ್ಯ ಕ್ರಮಾಂಕದ ವಿಕೆಟ್‌ಗಳು ಬೇಗನೆ ಉರುಳಿದ ಕಾರಣದಿಂದಾಗಿ ಕಿವೀಸ್‌ನ ವಿಜಯದ ಕನಸು ನನಸಾಗಲಿಲ್ಲ.
ಹಂಗಾಮಿ ನಾಯಕ ರಾಸ್ ಟೇಲರ್ 69 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 3 ಸಿಕ್ಸರ್ ಇರುವ 66 ರನ್‌ಗಳನ್ನು ಸಿಡಿಸಿ ಆತಂಕವನ್ನುಂಟು ಮಾಡಿದ್ದರೂ ರವಿಚಂದ್ರನ್ ಅಶ್ವಿನ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿ ಭಾರತದ ವಿಜಯವನ್ನು ಸುಲಭವಾಗಿಸಿದರು.ಭಾರತದ ಸವಾಲಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಮಾರ್ಟಿನ್ ಗುಪ್ಟಿಲ್ ಮತ್ತು ಜೇಮಿ ಹೌ ಮೊದಲ ವಿಕೆಟ್‌ಗೆ 32 ರನ್ ಸೇರಿಸಿದ್ದಾಗ, ಹೌರನ್ನು ಔಟ್ ಮಾಡುವ ಮೂಲಕ ಆಶೀಶ್ ನೆಹ್ರಾ ಕಿವೀಸ್‌ಗೆ ಮೊದಲ ಆಘಾತ ನೀಡಿದರು. ಹೌ ಔಟಾಗುವ ಮುನ್ನ 15 ಎಸೆತಗಳನ್ನು ಎದುರಿಸಿ 1 ಬೌಂಡರಿ ಇರುವ 8 ರನ್ ಮಾಡಿದರು.
ತಂಡದ ಮೊತ್ತ 46 ತಲುಪಿತ್ತಿದ್ದಂತೆ ಗುಪ್ಟಿಲ್ (30) ಔಟ್. 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 46 ರನ್ ಮಾಡಿದ್ದ ನ್ಯೂಝಿಲೆಂಡ್ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡ ಹಂಗಾಮಿ ನಾಯಕ ರಾಸ್ ಟೇಲರ್ ಮತ್ತು ಕೇನ್ ವಿಲಿಯಮ್ಸನ್ 3ನೆ ವಿಕೆಟ್‌ಗೆ ಅಮೂಲ್ಯವಾದ 67 ರನ್‌ಗಳನ್ನು ತಂಡದ ಖಾತೆಗೆ ಸೇರಿಸಿದರು.
ತಂಡದ ಸ್ಕೋರ್‌ನ್ನು 100ರ ಗಡಿ ದಾಟಿಸಿದ ಈ ಜೋಡಿ ಬೇರ್ಪಡುತ್ತಿದ್ದಂತೆ ನ್ಯೂಝಿಲೆಂಡ್ ಬ್ಯಾಟಿಂಗ್ ಸೊರಗಿತು. ವಿಲಿಯಮ್ಸನ್ (25), ಸ್ಕಾಟ್ ಸ್ಟೈರಿಸ್(10), ಗ್ರಾಂಟ್ ಎಲಿಯಟ್ (5), ಡೆರೆಲ್ ಟಫಿ(4), ಗೆರತ್ ಹಾಪ್ಕಿನ್ಸ್ (16) ರನ್ ಮಾಡಿ ಪೆವಿಲಿಯನ್‌ಗೆ ಹಿಂದಿರುಗಿದರು.9ನೆ ವಿಕೆಟ್‌ಗೆ ನಥಾನ್ ಮೆಕಲಮ್ ಮತ್ತು ಕೈಲ್ ಮಿಲ್ಸ್ 67 ರನ್‌ಗಳನ್ನು ಸೇರಿಸಿ ಗಾಂಭೀರ್ ಪಡೆಗೆ ನಡುಕವನ್ನುಂಟು ಮಾಡಿದ್ದರೂ, ವೇಗಿ ಎಸ್.ಶ್ರೀಶಾಂತ್ ಈ ಜೋಡಿಯನ್ನು ಬೇರ್ಪಡಿಸಿದರು. ನಥಾನ್ ಮೆಕಲಮ್ 35(35 ಎಸೆತ, 4 ಬೌಂಡರಿ) , ಕೈಲ್ ಮಿಲ್ಸ್ 32(28 ಎಸೆತ, 2 ಬೌಂಡರಿ, 2 ಸಿಕ್ಸರ್) ರನ್ ಬಾರಿಸಿ ನ್ಯೂಝಿಲೆಂಡ್‌ಗೆ ಗೆಲುವಿನ ಆಸೆ ಹುಟ್ಟಿಸಿದ್ದರೂ, ಇವರಿಬ್ಬರ ನಿರ್ಗಮನದೊಂದಿಗೆ ಗೆಲುವಿನ ಆಸೆ ಮಣ್ಣುಗೂಡಿತು.
ಭಾರತದ ಪರ ವೇಗಿ ಶ್ರೀಶಾಂತ್ 30ಕ್ಕೆ 3, ಆರ್.ಅಶ್ವಿನ್ 50ಕ್ಕೆ 3, ಆಲ್‌ರೌಂಡರ್ ಯುವರಾಜ್ ಸಿಂಗ್ 43ಕ್ಕೆ 3 ಮತ್ತು ಆಶೀಶ್ ನೆಹ್ರಾ 44ಕ್ಕೆ 1 ವಿಕೆಟ್ ಪಡೆದು ಮಿಂಚಿದರು. ಆದರೆ ಮುನಾಫ್ ಪಟೇಲ್, ಯೂಸುಫ್ ಪಠಾಣ್ ಮತ್ತು ಸುರೇಶ್ ರೈನಾಗೆ ವಿಕೆಟ್ ದಕ್ಕಲಿಲ್ಲ.
ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 49 ಓವರ್‌ಗಳಲ್ಲಿ 276 ರನ್ ಸಂಪಾದಿಸುವ ಹೊತ್ತಿಗೆ ಸರ್ವಪತನ ಕಂಡಿತು.
ಟೀಮ್ ಇಂಡಿಯಾ ತಂಡಕ್ಕೆ ಎರಡು ಏಕದಿನ ಪಂದ್ಯಗಳಿಗೆ ತಂಡದ ನಾಯಕತ್ವ ವಹಿಸಿರುವ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಾಂಭೀರ್ ಮತ್ತು ಮುರಳಿ ವಿಜಯ್ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 44 ರನ್ ಮಾಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಗಂಭೀರವಾಗಿ ಬ್ಯಾಟ್ ಬೀಸಿದ ನಾಯಕ ಗಾಂಭೀರ್ 38 (38 ಎಸೆತ, 6 ಬೌಂಡರಿ )ರನ್ ಬಾರಿಸಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಆ್ಯಂಡಿ ಮೆಕೇ ಎಸೆತದಲ್ಲಿ ಹೌಗೆ ಕ್ಯಾಚಿತ್ತರು. ಮುರಳಿ ವಿಜಯ್ 29(32 ಎಸೆತ, 5 ಬೌಂಡರಿ)ರನ್ ಮಾಡಿದರು. ಅನಂತರ ಕ್ರೀಸ್‌ಗೆ ಆಗಮಿಸಿದ ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಆಸ್ಟ್ರೇಲಿಯ ವಿರುದ್ಧದ ಎರಡನೆ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ತಂಡ ಸರಣಿ ಗೆಲ್ಲಲು ಕಾರಣರಾದ ಕೊಹ್ಲಿ ಅವರು ಆಲ್‌ರೌಂಡರ್ ಯುವರಾಜ್ ಸಿಂಗ್ ಜೊತೆ ಸೇರಿ ಉತ್ತಮ ಪ್ರದರ್ಶನವಿತ್ತರು. 3ನೆ ವಿಕೆಟ್‌ಗೆ ಇವರ ಮೂಲಕ 88 ರನ್ ತಂಡದ ಖಾತೆಗೆ ಬಂತು. ಇದು ಭಾರತದ ಪರ ಇಂದು ದಾಖಲಾದ ಗರಿಷ್ಠ ಸ್ಕೋರ್.
ಆಯ್ಕೆ ಸಮಿತಿಯು ತನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಆಡಿದ ಯುವರಾಜ್ ಸಿಂಗ್ 42(64 ಎಸೆತ, 7 ಬೌಂಡರಿ) ರನ್‌ಗಳನ್ನು ಬಾರಿಸಿ ನಿರ್ಗಮಿಸಿದರು. ಯುವರಾಜ್ ಸಿಂಗ್ ಔಟಾದ ಬಳಿಕ ಆಗಮಿಸಿದ ರೈನಾ (13) ಮತ್ತೊಮ್ಮೆ ವಿಫಲರಾದರು. ಆದರೂ ನಾಲ್ಕನೆ ವಿಕೆಟ್‌ಗೆ ಇವರಿಬ್ಬರ ಮೂಲಕ 40 ರನ್ ಬಂತು.ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿಯ ರೇಸ್‌ನಲ್ಲಿರುವ ಯೂಸುಫ್ ಪಠಾಣ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು.43ನೆ ಓವರ್‌ನಲ್ಲಿ ಕೈಲ್ ಮಿಲ್ಸ್‌ರ ಕೊನೆಯ ಎಸೆತದಲ್ಲಿ ಚೆಂಡನ್ನು ಥರ್ಡ್‌ಮ್ಯಾನ್ ಮೂಲಕ ಬೌಂಡರಿಗೆ ಅಟ್ಟಿದ ಕೊಹ್ಲಿ ತನ್ನ 2ನೆ ಏಕದಿನ ಶತಕವನ್ನು ಪೂರ್ಣಗೊಳಿಸಿದರು. ಶತಕ ಬಾರಿಸಲು ಕೊಹ್ಲಿ 100 ಎಸೆತಗಳನ್ನು ಎದುರಿಸಿದರು. 9 ಬೌಂಡರಿ ಗಳ ನೆರವಿನಿಂದ ಶತಕ ಪೂರ್ಣಗೊಳಿಸಿದ ಕೊಹ್ಲಿ 44ನೆ ಓವರ್ ನಲ್ಲಿ ಆ್ಯಂಡಿ ಮೆಕೇಯ ಕೊನೆಯ ಎಸೆತವನ್ನು ಎದುರಿಸುವಲ್ಲಿ ಎಡವಿದ ಕೊಹ್ಲಿ ಹೌಗೆ ಕ್ಯಾಚಿತ್ತು ಪೆವಿಲಿಯನ್‌ಗೆ ವಾಪಾಸಾದರು. ಕೊಹ್ಲಿ ಔಟಾಗುವ ಮುನ್ನ 162 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಬ್ಯಾಟ್ ಬೀಸಿ 104 ಎಸೆತಗಳನ್ನು ಎದುರಿಸಿ 10 ಬೌಂಡರಿ ಇರುವ 105 ರನ್ ಸಂಪಾದಿಸಿದರು. ಈ ಕೊಡುಗೆಯ ಹಿನ್ನೆಲೆಯಲ್ಲಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.
ಯೂಸುಫ್ ಪಠಾಣ್ 29(19 ಎಸೆತ, 3 ಬೌಂಡರಿ, 1 ಸಿಕ್ಸರ್) ಬಾರಿಸಿದರು. ಮೊದಲ ಏಕದಿನ ಪಂದ್ಯವನ್ನಾಡುತ್ತಿರುವ ವೃದ್ದಿಮನ್ ಸಹಾ(4), ಬೌಲಿಂಗ್‌ನಲ್ಲಿ ಮಿಂಚಿದ್ದ ಆರ್ ಅಶ್ವಿನ್ (0), ಆಶೀಶ್ ನೆಹ್ರಾ (0), ಶ್ರೀಶಾಂತ್ (4) ವಿಫಲರಾದರು. 1 ರನ್ ಮಾಡಿದ್ದ ಮುನಾಫ್ ಪಟೇಲ್ ಅಜೇಯರಾಗಿ ಉಳಿದರು.
ನ್ಯೂಝಿಲೆಂಡ್ ಪರ ಆ್ಯಂಡಿ ಮೆಕೇ 62ಕ್ಕೆ 4 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿಕೊಂಡರು. ಕೈಲ್ ಮಿಲ್ಸ್ 42ಕ್ಕೆ 3, ಡೆರಿಲ್ ಟಫಿ 56ಕ್ಕೆ 2 ವಿಕೆಟ್ ಹಂಚಿಕೊಂಡರು.
ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಇಂದು ನಡೆದ ಐದು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಆಕರ್ಷಕ ಶತಕ, ಯುವರಾಜ್ ಸಿಂಗ್‌ರ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಭಾರತ ನ್ಯೂಝಿಲೆಂಡ್‌ನ್ನು 40 ರನ್‌ಗಳಿಂದ ಬಗ್ಗು ಬಡಿದು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಹಂಗಾಮಿ ನಾಯಕ ರಾಸ್ ಟೇಲರ್ 69 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 3 ಸಿಕ್ಸರ್ ಇರುವ 66 ರನ್‌ಗಳನ್ನು ಸಿಡಿಸಿ ಆತಂಕವನ್ನುಂಟು ಮಾಡಿದ್ದರೂ ರವಿಚಂದ್ರನ್ ಅಶ್ವಿನ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿ ಭಾರತದ ವಿಜಯವನ್ನು ಸುಲಭವಾಗಿಸಿದರು.
ತಂಡದ ಮೊತ್ತ 46 ತಲುಪಿತ್ತಿದ್ದಂತೆ ಗುಪ್ಟಿಲ್ (30) ಔಟ್. 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 46 ರನ್ ಮಾಡಿದ್ದ ನ್ಯೂಝಿಲೆಂಡ್ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡ ಹಂಗಾಮಿ ನಾಯಕ ರಾಸ್ ಟೇಲರ್ ಮತ್ತು ಕೇನ್ ವಿಲಿಯಮ್ಸನ್ 3ನೆ ವಿಕೆಟ್‌ಗೆ ಅಮೂಲ್ಯವಾದ 67 ರನ್‌ಗಳನ್ನು ತಂಡದ ಖಾತೆಗೆ ಸೇರಿಸಿದರು.
ತಂಡದ ಸ್ಕೋರ್‌ನ್ನು 100ರ ಗಡಿ ದಾಟಿಸಿದ ಈ ಜೋಡಿ ಬೇರ್ಪಡುತ್ತಿದ್ದಂತೆ ನ್ಯೂಝಿಲೆಂಡ್ ಬ್ಯಾಟಿಂಗ್ ಸೊರಗಿತು. ವಿಲಿಯಮ್ಸನ್ (25), ಸ್ಕಾಟ್ ಸ್ಟೈರಿಸ್(10), ಗ್ರಾಂಟ್ ಎಲಿಯಟ್ (5), ಡೆರೆಲ್ ಟಫಿ(4), ಗೆರತ್ ಹಾಪ್ಕಿನ್ಸ್ (16) ರನ್ ಮಾಡಿ ಪೆವಿಲಿಯನ್‌ಗೆ ಹಿಂದಿರುಗಿದರು.
ಭಾರತದ ಪರ ವೇಗಿ ಶ್ರೀಶಾಂತ್ 30ಕ್ಕೆ 3, ಆರ್.ಅಶ್ವಿನ್ 50ಕ್ಕೆ 3, ಆಲ್‌ರೌಂಡರ್ ಯುವರಾಜ್ ಸಿಂಗ್ 43ಕ್ಕೆ 3 ಮತ್ತು ಆಶೀಶ್ ನೆಹ್ರಾ 44ಕ್ಕೆ 1 ವಿಕೆಟ್ ಪಡೆದು ಮಿಂಚಿದರು. ಆದರೆ ಮುನಾಫ್ ಪಟೇಲ್, ಯೂಸುಫ್ ಪಠಾಣ್ ಮತ್ತು ಸುರೇಶ್ ರೈನಾಗೆ ವಿಕೆಟ್ ದಕ್ಕಲಿಲ್ಲ.
ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 49 ಓವರ್‌ಗಳಲ್ಲಿ 276 ರನ್ ಸಂಪಾದಿಸುವ ಹೊತ್ತಿಗೆ ಸರ್ವಪತನ ಕಂಡಿತು.
ಟೀಮ್ ಇಂಡಿಯಾ ತಂಡಕ್ಕೆ ಎರಡು ಏಕದಿನ ಪಂದ್ಯಗಳಿಗೆ ತಂಡದ ನಾಯಕತ್ವ ವಹಿಸಿರುವ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಾಂಭೀರ್ ಮತ್ತು ಮುರಳಿ ವಿಜಯ್ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 44 ರನ್ ಮಾಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಗಂಭೀರವಾಗಿ ಬ್ಯಾಟ್ ಬೀಸಿದ ನಾಯಕ ಗಾಂಭೀರ್ 38 (38 ಎಸೆತ, 6 ಬೌಂಡರಿ )ರನ್ ಬಾರಿಸಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಆ್ಯಂಡಿ ಮೆಕೇ ಎಸೆತದಲ್ಲಿ ಹೌಗೆ ಕ್ಯಾಚಿತ್ತರು. ಮುರಳಿ ವಿಜಯ್ 29(32 ಎಸೆತ, 5 ಬೌಂಡರಿ)ರನ್ ಮಾಡಿದರು. ಅನಂತರ ಕ್ರೀಸ್‌ಗೆ ಆಗಮಿಸಿದ ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಆಸ್ಟ್ರೇಲಿಯ ವಿರುದ್ಧದ ಎರಡನೆ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ತಂಡ ಸರಣಿ ಗೆಲ್ಲಲು ಕಾರಣರಾದ ಕೊಹ್ಲಿ ಅವರು ಆಲ್‌ರೌಂಡರ್ ಯುವರಾಜ್ ಸಿಂಗ್ ಜೊತೆ ಸೇರಿ ಉತ್ತಮ ಪ್ರದರ್ಶನವಿತ್ತರು. 3ನೆ ವಿಕೆಟ್‌ಗೆ ಇವರ ಮೂಲಕ 88 ರನ್ ತಂಡದ ಖಾತೆಗೆ ಬಂತು. ಇದು ಭಾರತದ ಪರ ಇಂದು ದಾಖಲಾದ ಗರಿಷ್ಠ ಸ್ಕೋರ್.
ಆಯ್ಕೆ ಸಮಿತಿಯು ತನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಆಡಿದ ಯುವರಾಜ್ ಸಿಂಗ್ 42(64 ಎಸೆತ, 7 ಬೌಂಡರಿ) ರನ್‌ಗಳನ್ನು ಬಾರಿಸಿ ನಿರ್ಗಮಿಸಿದರು. ಯುವರಾಜ್ ಸಿಂಗ್ ಔಟಾದ ಬಳಿಕ ಆಗಮಿಸಿದ ರೈನಾ (13) ಮತ್ತೊಮ್ಮೆ ವಿಫಲರಾದರು. ಆದರೂ ನಾಲ್ಕನೆ ವಿಕೆಟ್‌ಗೆ ಇವರಿಬ್ಬರ ಮೂಲಕ 40 ರನ್ ಬಂತು.
ಯೂಸುಫ್ ಪಠಾಣ್ 29(19 ಎಸೆತ, 3 ಬೌಂಡರಿ, 1 ಸಿಕ್ಸರ್) ಬಾರಿಸಿದರು. ಮೊದಲ ಏಕದಿನ ಪಂದ್ಯವನ್ನಾಡುತ್ತಿರುವ ವೃದ್ದಿಮನ್ ಸಹಾ(4), ಬೌಲಿಂಗ್‌ನಲ್ಲಿ ಮಿಂಚಿದ್ದ ಆರ್ ಅಶ್ವಿನ್ (0), ಆಶೀಶ್ ನೆಹ್ರಾ (0), ಶ್ರೀಶಾಂತ್ (4) ವಿಫಲರಾದರು. 1 ರನ್ ಮಾಡಿದ್ದ ಮುನಾಫ್ ಪಟೇಲ್ ಅಜೇಯರಾಗಿ ಉಳಿದರು.
ನ್ಯೂಝಿಲೆಂಡ್ ಪರ ಆ್ಯಂಡಿ ಮೆಕೇ 62ಕ್ಕೆ 4 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿಕೊಂಡರು. ಕೈಲ್ ಮಿಲ್ಸ್ 42ಕ್ಕೆ 3, ಡೆರಿಲ್ ಟಫಿ 56ಕ್ಕೆ 2 ವಿಕೆಟ್ ಹಂಚಿಕೊಂಡರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ