ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಗುರುವಾರ, ಸೆಪ್ಟೆಂಬರ್ 08, 2011
ಗುರುವಾರ, ಆಗಸ್ಟ್ 25, 2011
ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯುವ ಸಮೂಹ ಜಾಗೃತರಾಗಿ !!!
ಶಫಿ, ಬಂಗಾಡಿ
ಲಾಡೆನ್‌ನ ಅಲ್‌ಖೈದಾ ಉಗ್ರರು ಭಯೋ ತ್ಪಾದನೆಯ ವಿರುದ್ಧ ಹೋರಾಡುತ್ತಿದ್ದಾರಂತೆ. ರೆಡ್ಡಿ ಬದ್ರರ‍್ಸ್ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರಂತೆ... ಇಂಥ ಸುದ್ದಿಗಳು ಪತ್ರಿಕೆಗ ಳಲ್ಲಿ ಬಂದರೆ ನೀವು ನಂಬಲೇಬೇಕು. ಯಾಕೆಂ ದರೆ ಮಾಜಿ ಸಿಎಂ ಯಡಿಯೂರಪ್ಪನವರು ಭ್ರಷ್ಟಾ ಚಾರ ವಿರೋಧಿ ಆಂದೋಲನದಲ್ಲಿ ಅದೂ ಕೂಡಾ ಗಾಂಧಿ ಪ್ರತಿಮೆಯ ಅಡಿಯಲ್ಲಿ ಧರಣಿ ಕುಳಿತು ಕೊಳ್ಳಲು ಹೊರಟರಂತೆ ಎಂಥ ವಿಪರ್ಯಾಸ ನೋಡಿ. ತಾನು ಬಿಡುಗಡೆಯಾದರೂ ಜೈಲಿನಿಂದ ಹೊರಹೋಗಲು ನಿರಾಕರಿಸಿರುವ ಅಣ್ಣಾ ಹಜಾರೆ ಎಲ್ಲಿ? ಬಂಧನದ ಭೀತಿಯಿಂದ ನ್ಯಾಯಾಲಯದಿಂದ ನಿರೀ ಕ್ಷಣಾ ಜಾಮೀನು ಪಡೆಯಲು ಹೊರಟಿರುವ ಯಡಿಯೂ ರಪ್ಪ ಎಲ್ಲಿ?
ಎಲ್ಲ ಆಂದೋಲನವೂ ಅರ್ಥ ಕಳೆದುಕೊಳ್ಳುತ್ತಿದೆ. ಯಾಕೆಂ ದರೆ ಇದು ಭ್ರಷ್ಟಾಚಾರ ವಿರೋಧಿ ಆಂದೋಲನವಾಗಿರದೆ ಕಾಂಗ್ರೆಸ್ ವಿರೋಧಿ ಆಂದೋಲನವಾಗಿರುತ್ತದೆ. ಬಿಜೆಪಿ ಪ್ರಾಯೋಜಿತ ಸಂಘ-ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು, ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಬಿಜೆಪಿ ಪರ ಕಾಂಗ್ರೆಸ್ ವಿರೋಧಿ ಘೋಷಣೆಗಳು ಕೂಗುತ್ತಿವೆ. ಇದು ಎಲ್ಲೋ ಒಂದು ಕಡೆ ರಾಜಕೀಯ ಪಕ್ಷಗಳ ಹೋರಾಟವೋ ಎಂದೆನಿಸುತ್ತಿದೆ. ಯಾಕೆಂದರೆ ಕರ್ನಾಟಕದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಾ ಗಲೂ ಚಕಾರವೆತ್ತದ ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳು ಈಗ ಭ್ರಷ್ಟಾಚಾರ ಹೋರಾಟಕ್ಕೆ ಇಳಿದಿರುವುದು ಹಾಸ್ಯಾಸ್ಪದ ವಾಗಿ ಕಾಣುತ್ತಿದೆ.
ಭ್ರಷ್ಟಾಚಾರದಲ್ಲಿ ಒಂದೇ ಬಗೆ. ಅದರಲ್ಲಿ ಕೇಂದ್ರ ಭ್ರಷ್ಟಾಚಾರ, ರಾಜ್ಯ ಭ್ರಷ್ಟಾಚಾರವೆಂಬುದಿಲ್ಲ. ದೀರ್ಘಕಾಲ ನಮ್ಮನ್ನಾಳಿದ ಕಾಂಗ್ರೆಸ್ಸಿಗರಿಗೆ ಮನಸ್ಸು ಮಾಡಿದರೆ ಇಷ್ಟೊತ್ತಿಗಾಗಲೇ ಭ್ರಷ್ಟಾ ಚಾರ ನಿರ್ಮೂಲನೆ ಮಾಡಬಹುದಿತ್ತು. ‘ಗರೀಬೀ ಹಠಾವೋ’ (ಬಡತನ ನಿರ್ಮೂಲನೆ) ಎಂಬ ಘೋಷಣೆ ಕೇವಲ ಘೋಷಣೆ ಯಾಗಿತ್ತೇ ಹೊರತು ಬಡತನ ನಿರ್ಮೂಲನೆಯಾಗಲಿಲ್ಲ. ಹಂತ ಹಂತವಾಗಿ ಬಡವರ (ರೈತರ ಆತ್ಮಹತ್ಯೆ, ವಿಷ ಮದ್ಯ, ಭೋಪಾಲ್ ದುರಂತ) ನಿರ್ಮೂಲನೆ ಮಾತ್ರ ಆಯಿತು.
ಬಡವರ ಉದ್ಧಾರದ ಯೋಜನೆಯಲ್ಲಿ ಬಂಡವಾಳಶಾಹಿ ಗಳು, ರಾಜಕೀಯ ಪುಡಾರಿಗಳು ಕೋಟಿ-ಕೋಟಿ ಹಣ ನುಂಗಿ ದರೇ ಹೊರತು ಬಡವರ ಉದ್ಧಾರವಾಗಲಿಲ್ಲ. ಇಷ್ಟರವರೆಗೆ ನಿದ್ರಿಸಿದ್ದ ಜನ ಈಗ ಎಚ್ಚೆತ್ತಿದ್ದಾರೆ. ಇದೀಗ ಸಮೂಹಸನ್ನಿಯಾ ಗದೆ ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾ ಡುವ ಯುವಸಮೂಹ ಜಾಗೃತರಾಗಿ ಕ್ರಿಯಾಶೀಲ ರಾಗಬೇಕು. ಇನ್ನು ಕೆಲವು ವಿದ್ಯಾರ್ಥಿಗಳು ಎಬಿ ವಿಪಿಯ ಹಿನ್ನೆಲೆ, ಪೂರ್ವಾ ಪರ ಉದ್ದೇಶ ತಿಳಿ ಯದೆ ಸಕ್ರಿಯರಾಗಿದ್ದಾರೆ. ಇನ್ನು ಮುಂದಾದರೂ ಸಂಘಟನೆಯ ಬಗ್ಗೆ ತಿಳಿಯುವಂತಾಗಬೇಕು.
ಪ್ರತೀ ಜಿಲ್ಲೆ, ತಾಲೂಕುಗಳಲ್ಲಿ ಭ್ರಷ್ಟಾಚಾರ ವಿರೋಧಿ ಸಮಿತಿ ರಚನೆಯಾಗಬೇಕು. ಆದರೆ ಪಕ್ಷಾತೀತವಾಗಿರಬೇಕು. ಇಲ್ಲಿ ಅಣ್ಣಾ ಹಜಾರೆಗೆ ಬೆಂಬಲವಾಗಿ ಮೆರವಣಿಗೆ ಸಾಗುತ್ತಿತ್ತು. ಅದರಲ್ಲೂ ಘೋಷಣೆ ಕೂಗಿಕೊಂಡು ಹೋಗುತ್ತಿರುವವರಲ್ಲಿ ಅತ್ಯಂತ ಭ್ರಷ್ಟ ಹಾಗೂ ಲಂಚಕೋರ ಸರಕಾರಿ ನೌಕರರು ಹಾಗೂ ಕುಟುಂಬ ಸಮೇತರಾಗಿ ಸಾಗುತ್ತಿದ್ದರು. ಇವರನ್ನೆಲ್ಲಾ ಕಂಡಾಗ ನಗುವುದೋ, ಅಳುವುದೋ ಎಂದು ತಿಳಿಯದಾಗಿ, ನಮ್ಮೆನ್ನೆಲ್ಲಾ ಕಾಡುವ ಕಟ್ಟ ಕಡೆಯ ಪ್ರಶ್ನೆ ಹೀಗೂ ಉಂಟೇ....? ಈ ಲೇಖನ ಪ್ರಕಟಗೊಳ್ಳುವಷ್ಟರಲ್ಲಿ ನಮ್ಮ ಮಾಜಿ ಸಿಎಂ ಯಡಿಯೂರಪ್ಪನ ವರ ಧರಣಿಗೆ ಪಕ್ಷದಲ್ಲೇ ವಿರೋಧ ಉಂಟಾದುದರಿಂದ ಯಡ್ಡಿ ಯವರು ಧರಣಿಯಲ್ಲಿ ಪಾಲ್ಗೊಳ್ಳುವುದಿಲ್ಲವಂತೆ! ಮಾಧ್ಯಮದ ವರು ಕಾರಣ ಕೇಳಿದರೆ ಯಡ್ಡಿಯವರ ಮಾನ(ಸಿಕ)ಸ ಪುತ್ರ ನಮ್ಮ ಎಣ್ಣೆ ಸಚಿವ ರೇಣುಕಾಚಾರ್ಯ ಹೇಳಿದ್ದೇನು ಗೊತ್ತಾ? ಯಡ್ಡಿಯ ವರು ಧರಣಿಗೆ ಕೂತರೆ ಭಾರೀ ಸಂಖ್ಯೆಯಲ್ಲಿ ಜನಸೇರಿ ಟ್ರಾಫಿಕ್ ಜಾಮ್ ಆಗ ಬಹುದಂತೆ. ೨೦೧೧ರ ಸೂಪರ್ ಜೋಕ್ ಅಲ್ಲವೇ? ಭ್ರಷ್ಟರ ವಿರುದ್ಧ ಭ್ರಷ್ಟರು ಇದನ್ನೆಲ್ಲಾ ನೋಡುವಾಗ ನಮಗೆ ಹೊಳೆ ಯುವ ಉತ್ತರ ಹೀಗೂ ಉಂಟು..!
ಶಫಿ, ಬಂಗಾಡಿ
ಶನಿವಾರ, ಜೂನ್ 18, 2011
ಸತ್ತದ್ದು ಬರೀ ಆರು ಮಂದಿ; ಯಾಕ್ಹೀಗಾಯ್ತು....? ಮಾಲೆಗಾಂವ್ ಸ್ಫೋಟದ ಬಳಿಕ ಮಾಸ್ಟರ್‌ಮೈಂಡ್ ಸಾಧ್ವಿ ಪ್ರಜ್ಞಾಸಿಂಗ್‌ಳ ಪ್ರಶ್ನೆ ಹೀಗಿತ್ತು..
.
ಗುರುವಾರ - ಜೂನ್ -16-20112006, ಸೆಪ್ಟೆಂಬರ್ 8, ಶುಕ್ರವಾರ, ಮಧ್ಯಾಹ್ನ 2.15 ಗಂಟೆ. ಮಾಲೆಗಾಂವ್ ಬಾಂಬ್ ಸ್ಫೋಟದ ರೂವಾರಿಗಳು ತಮ್ಮ ವಿಧ್ವಂಸಕ ಕೃತ್ಯಕ್ಕಾಗಿ ಒಂದು ಕರಾರುವಕ್ಕಾದ ದಿನವನ್ನೇ ಆಯ್ದುಕೊಂಡಿದ್ದರು. ಅಂದು ಶಬೆ ಬರಾತ್ ದಿನವಾಗಿತ್ತು. ಅಂದರೆ ವಿಮೋಚನೆಯ ಪವಿತ್ರ ರಾತ್ರಿ ಎಂದರ್ಥ. ಇಸ್ಲಾಮಿ ಕ್ಯಾಲೆಂಡರ್‌ನಲ್ಲಿ ಎಂಟನೆ ತಿಂಗಳ 15ನೆ ದಿನವಾಗಿತ್ತು ಅದು. ತಮ್ಮ ಪೂರ್ವಿಕರ ಸ್ಮರಿಸಿ, ಗೌರವಿಸಲು ಇದೊಂದು ಪವಿತ್ರವಾದ ದಿನವೆಂದು ಮುಸ್ಲಿಮರು ಭಾವಿಸುತ್ತಾರೆ. ಅದರೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪುಟ್ಟ ನಗರವಾದ ಮಾಲೆಗಾಂವ್‌ನಲ್ಲಿ ಅಂದು ನಡೆದದ್ದೇ ಬೇರೆ. ಮಧ್ಯಾಹ್ನ ಸುಮಾರು 2.15ರವೇಳೆಗೆ ನಗರದ ಮಸೀದಿ ಹಾಗೂ ಪಕ್ಕದ ದಫನಭೂಮಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳು ರಕ್ತದ ಹೊಳೆಯನ್ನು ಹರಿಸಿದವು. ಈ ಭೀಕರ ಸ್ಫೋಟದಲ್ಲಿ 37 ಮಂದಿ ಮೃತಪಟ್ಟು, ಸುಮಾರು 130 ಮಂದಿ ಗಾಯಗೊಂಡಿದ್ದರು.
2008, ಸೆಪ್ಟೆಂಬರ್ 29...
2008ರಲ್ಲಿ ಪಾತಕಿಗಳು ಎರಡನೆ ಬಾರಿಗೆ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಲು ಪವಿತ್ರ ರಂಝಾನ್ ತಿಂಗಳನ್ನೇ ಆಯ್ದುಕೊಂಡರು. ತಾವು ಪ್ರತಿಪಾದಿಸುವ ‘‘ಹಿಂದೂ ತೀವ್ರವಾದ’’ಕ್ಕೆ ಉತ್ತೇಜನ ನೀಡಲು ಈ ಸಲ ಅವರು ಉತ್ತರ ಭಾರತಾದ್ಯಂತ ಸರಣಿ ಸ್ಫೋಟಕ್ಕೆ ಸಂಚು ಹೂಡಿದರು. ಹರ್ಯಾಣದ ಫರೀದಾಬಾದ್ ಹಾಗೂ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಈ ದುಷ್ಕರ್ಮಿಗಳು ಇರಿಸಿದ ಬಾಂಬನ್ನು ಪೊಲೀಸರು ಸಕಾಲದಲ್ಲಿ ನಿಷ್ಕ್ರಿಯಗೊಳಿಸಿದರು. ಆದರೆ ಮಾಲೆಗಾಂವ್‌ನಲ್ಲಿ ಎರಡು ಬಾಂಬ್‌ಗಳು ಸ್ಫೋಟಿಸಿ ಆರು ಮಂದಿ ಮೃತಪಟ್ಟರು ಹಾಗೂ ಗುಜರಾತ್‌ನ ಮೊಡಸ್ಸಾದಲ್ಲಿ ನಡೆದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ.
2008ರ ಮಾಲೆಗಾಂವ್ ಸ್ಫೋಟದ ಹಿಂದೆ ‘ಅಭಿನವ್ ಭಾರತ್’ ಎಂಬ ಕೇಸರಿ ಉಗ್ರಗಾಮಿ ಸಂಘಟನೆಯ ಕೈವಾಡವಿರುವ ಬಗ್ಗೆ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹದಳದ (ಎಟಿಎಸ್)ಪೊಲೀಸರಿಗೆ ಬಲವಾದ ಸುಳಿವು ಸಿಕ್ಕಿತು. ಭಾರತೀಯ ಸೇನಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲೆ.ಕ.ಪ್ರಸಾದ್ ಶ್ರೀಕಾಂತ್ ಪುರೋಹಿತ್ ಎಂಬಾತನನ್ನು ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ ವಶಕ್ಕೆ ತೆಗೆದುಕೊಂಡರು. ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಅಭಿನವ್ ಭಾರತ್ ಜೊತೆ ತಮಗೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಬಿಜೆಪಿ, ವಿಶ್ವಹಿಂದೂ ಪರಿಷತ್ ಹಾಗೂ ಆರೆಸ್ಸೆಸ್‌ಗಳು ಪದೇ ಪದೇ ಸ್ಪಷ್ಟಪಡಿಸುತ್ತಲೇ ಇದ್ದವು. ಆದರೆ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಹಾಗೂ ನಿವೃತ್ತ ಸೇನಾಧಿಕಾರಿ ಯೊಬ್ಬರ ನಡುವೆ ಪುಣೆಯಲ್ಲಿ ನಡೆದ ಮಾತುಕತೆಗೆ ಸಾಕ್ಷಿಯಾಗಿದ್ದ ವ್ಯಕ್ತಿ ಯೊಬ್ಬರನ್ನು ಖ್ಯಾತ ಆಂಗ್ಲ ಸಾಪ್ತಾಹಿಕ ಪತ್ರಿಕೆ ‘ದಿ ವೀಕ್’ ಇತ್ತೀಚೆಗೆ ಸಂಪ ರ್ಕಿಸಿ, ಅವರಿಂದ ಮಹತ್ವದ ಮಾಹಿತಿಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
ಇಂದ್ರೇಶ್ ಕುಮಾರ್ ಹಾಗೂ ನಿವೃತ್ತ ಸೇನಾಧಿಕಾರಿ ನಡುವೆ ನಡೆದ ಮಾತುಕತೆಯ ಬಗ್ಗೆ ಈ ಪ್ರತ್ಯಕ್ಷದರ್ಶಿಯು ‘ದಿ ವೀಕ್’ಗೆ ನೀಡಿದ ವಿವರಗಳನ್ನು ಆತನ ಮಾತುಗಳಲ್ಲಿಯೇ ಓದಿ... ‘‘ ಈ ಸಭೆಯು 2002ರ ಜುಲೈಯಲ್ಲಿ ನಡೆದಿತ್ತು.ನಿವೃತ್ತ ಸೇನಾಧಿಕಾರಿ ಹಾಗೂ ಇಂದ್ರೇಶ್(ಕುಮಾರ್) ನಡುವೆ ನಡೆದ ಆ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಬಲ್ಲಂತಹ ವ್ಯಕ್ತಿಗಾಗಿ ಇಂದ್ರೇಶ್ ಹುಡುಕಾಡುತ್ತಿದ್ದ. ಆತ್ಮಹತ್ಯಾ ದಳಗಳನ್ನು ರಚಿಸುವ ಬಗ್ಗೆ (ನಿವೃತ್ತ) ಸೇನಾಧಿಕಾರಿ ಮಾತನಾಡುತ್ತಿದ್ದ. ಆತನ ಸಾಹಸಕ್ಕೆ ತನ್ನ ಬೆಂಬಲವಿರುವುದಾಗಿ ಇಂದ್ರೇಶ್ ಹೇಳಿದ. ನಾಸಿಕ್‌ನ ಭೋನ್ಸಾಲಾ ಮಿಲಿಟರಿ ಶಾಲೆಯಲ್ಲಿ ನುರಿತ ತಂಡಗಳಿಗೆ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳ ಬಳಕೆ ಬಗ್ಗೆ ತರಬೇತಿ ನೀಡುವ ಬಗ್ಗೆ ಅವರು ಚರ್ಚಿಸಿದರು. ನಾನು ಈಗಾಗಲೇ ಈ ಬಗ್ಗೆ ಸಿಬಿಐಗೆ ಹೇಳಿಕೆಯೊಂದನ್ನು ನೀಡಿರುವೆ’’.
ಇದೀಗ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಮಹತ್ತರವಾದ ಯಶಸ್ಸೊಂದನ್ನು ಸಾಧಿಸುವ ಸಮಯ ಸನ್ನಿಹಿತವಾಗಿದೆಯೆಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಈ ಪ್ರತ್ಯಕ್ಷದರ್ಶಿಯು ನೀಡಿದ ಮಾಹಿತಿಗಳು ಮಾಲೆಗಾಂವ್ ಪ್ರಕರಣದ ಕೆಲವು ನಿಗೂಢತೆಗಳನ್ನು ಭೇದಿಸುವಲ್ಲಿ ಎನ್‌ಐಎಗೆ ಬಹಳಷ್ಟು ನೆರವಾಗಿವೆ.
ತಮ್ಮ ಉದ್ದೇಶ ಸಾಧನೆಗೆ ಬೇಕಾದ ವ್ಯಕ್ತಿಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಸಂಘಟಿಸಲು ಇಂದ್ರೇಶ್ ಉತ್ಸುಕನಾಗಿದ್ದ. ಏನೇ ಆದರೂ ಈ ಎಲ್ಲ ಚಟುವಟಿಕೆಗಳ ಜೊತೆ ಆರೆಸ್ಸೆಸ್‌ನ ಹೆಸರನ್ನು ಎಳೆದು ತರಕೂಡದು ಎಂದು ಆತ ತಾಕೀತು ಮಾಡಿದ್ದ.
2008ರಲ್ಲಿ ಮಾಲೆಗಾಂವ್‌ನಲ್ಲಿ ಸರಣಿ ಸ್ಫೋಟ ನಡೆಸಲು ವಿಧ್ವಂಸಕರು ಹೆಣೆದ ಸಂಚಿನ ಕುರಿತಾದ ಸಂಕ್ಷಿಪ್ತ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ‘ದಿ ವೀಕ್’ ಪತ್ರಿಕೆಯ ತನಿಖಾ ತಂಡವು ಯಶಸ್ವಿಯಾಗಿದೆ. ಮಾಲೆಗಾಂವ್ ಸ್ಫೋಟ ಸಂಚು ರೂಪಿಸಿದವರು ನಡೆಸಿದ 400 ನಿಮಿಷಗಳ ಸಂಭಾಷಣೆಗಳ ಧ್ವನಿಸುರುಳಿಗಳು ಕೂಡಾ ಈ ತಂಡಕ್ಕೆ ಲಭ್ಯವಾಗಿದೆ.
ಸ್ವಾಮಿ ಅಸೀಮಾನಂದ ಹಾಗೂ 2008ರ ಮಾಲೆಗಾಂವ್ ಸ್ಫೋಟ
ಪ್ರಸ್ತುತ ಎನ್‌ಐಎನ ಕಸ್ಟಡಿಯಲ್ಲಿರುವ ನಭ ಕುಮಾರ್ ಯಾನೆ ಸ್ವಾಮಿ ಅಸೀಮಾನಂದ ಮೂಲತಃ ಆರೆಸ್ಸೆಸ್‌ನ ಸಹಸಂಸ್ಥೆ ವನವಾಸಿ ಕಲ್ಯಾಣ ಆಶ್ರಮದ ಮುಖ್ಯಸ್ಥನಾಗಿದ್ದ. ಈತ ಗುಜರಾತ್‌ನ ಡಾಂಗ್ ಜಿಲ್ಲೆಯಲ್ಲಿ ಶಬರಿ ಮಠವನ್ನು ಸ್ಥಾಪಿಸಿ, ಅಲ್ಲಿ ತನ್ನ ಕೋಮುವಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದ. 2007ರ ಸಂಜೋತಾ ರೈಲು ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ 59 ವರ್ಷ ವಯಸ್ಸಿನ ಅಸೀಮಾನಂದನನ್ನು 2010ರ ನವೆಂಬರ್ 19ರಂದು ಸಿಬಿಐ ಅಧಿಕಾರಿಗಳು ಹರಿದ್ವಾರದಲ್ಲಿ ಬಂಧಿಸಿದ್ದರು.
ಆದರೆ ಅಸೀಮಾನಂದ ನ್ಯಾಯಾಲಯಕ್ಕೆ ಸಲ್ಲಿಸಿದ ತಪ್ಪೊಪ್ಪಿಗೆಯ ಅಫಿದಾವಿತ್‌ನಲ್ಲಿ ಕೆಲವೊಂದು ಮಾಹಿತಿಗಳನ್ನು ಬಚ್ಚಿಟ್ಟಿರುವುದು ‘ದಿ ವೀಕ್’ಗೆ ದೊರೆತ ದಾಖಲೆ ಗಳಿಂದ ಸಾಬೀತಾಗಿದೆ. ಉದಾಹರಣೆಗೆ, 2006ರ ಮಾಲೆಗಾಂವ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ, ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಹಾಗೂ ಅಜ್ಮೀರ್ ಸ್ಫೋಟದ ಬಗ್ಗೆ ಅಸೀಮಾನಂದ ಸಲ್ಲಿಸಿದ ತಪ್ಪೊಪ್ಪಿಗೆಯ ಅಫಿದಾವಿತ್‌ನಲ್ಲಿ ತನಗೆ ‘ಅಭಿನವ್ ಭಾರತ್’ ಅಥವಾ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಜೊತೆ ನಂಟಿರುವ ಬಗ್ಗೆ ಆತ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ. ಆದರೆ ಸ್ವಾಮಿ ಅಸೀಮಾನಂದನಿಗೆ 2008ರ ಮಾಲೆಗಾಂವ್ ಸ್ಫೋಟ ಸಂಚಿನ ನೀಲನಕ್ಷೆಯೊಂದು ಸಿದ್ಧವಾಗಿರುವ ಬಗ್ಗೆ ಅರಿವಿತ್ತು.ಮಾತ್ರವಲ್ಲ ಆತನಿಗೆ ಆರೋಪಿಗಳ ಜೊತೆ ನಿಕಟ ಸಂಪರ್ಕ ಕೂಡಾ ಇದ್ದಿತ್ತು.
2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಸಾಕ್ಷಿಯೂ ಆಗಿರುವ ಹಿರಿಯ ಸೇನಾಧಿಕಾರಿಯೊಬ್ಬರು ನ್ಯಾಯಾಲಯದ ಮುಂದೆ ಹೀಗೆ ಹೇಳಿಕೆ ನೀಡಿದ್ದಾರೆ. ‘‘2008ರ ಫೆಬ್ರವರಿ 16ರಂದು ಕೋಲ್ಕತಾದಲ್ಲಿ ನಾನು ಮೊದಲ ಬಾರಿಗೆ ಸ್ವಾಮಿ ಅಸೀಮಾನಂದ ಅವರನ್ನು ಭೇಟಿಯಾದೆ. ಆತ ಪುರೋಹಿತ್‌ಗಾಗಿ ಕಾಯುತ್ತಿದ್ದ. ಒಂದು ತಾಸಿನ ಬಳಿಕ ಪುರೋಹಿತ್ ಆಗಮಿಸಿದವನೇ, ವಿಳಂಬಕ್ಕಾಗಿ ಕ್ಷಮೆಯಾಚಿಸಿದ. ಆತ ತನಗೆ ಹಿಮಾನಿ ಸರ್ಕಾರ್ ಎಂಬ ವೃದ್ಧ ಮಹಿಳೆಯೊಬ್ಬರನ್ನು ಪರಿಚಯಿಸಿದ. ವಿನಾಯಕ್ ವೀರ್ ಸಾವರ್ಕರ್ ಅವರ ಸೊಸೆಯಾದ ಈಕೆ ಗಾಂಧೀಜಿಯ ಹಂತಕ ನಾಥೂರಾಮ್ ಗೋಡ್ಸೆಯ ಸೋದರಸೊಸೆಯೂ ಹೌದು.
ಈ ಅಧಿಕಾರಿಯು 2008ರ ಎಪ್ರಿಲ್ 12ರಂದು ಮತ್ತೊಮ್ಮೆ ಪುರೋಹಿತ್‌ನನ್ನು ಭೋಪಾಲ್‌ನ ಶ್ರೀರಾಮ ದೇವಾಲಯದಲ್ಲಿ ಭೇಟಿಯಾದ. ಅಲ್ಲಿ ಉಪಸ್ಥಿತರಿದ್ದ ಇತರರೆಂದರೆ ಹಿಮಾನಿ,ಸಾಧ್ವಿ ಪೂರ್ಣಚೇತನಾನಂದ (ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್), ಸುಧಾಕರ್ ಉದಯಭಾನ್ ಧರ್ ದ್ವಿವೇದಿ ಯಾನೆ ಶಂಕರಾ ಚಾರ್ಯ, ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ (ಸುಧಾಕರ್), ಚತುರ್ವೇದಿ ಹಾಗೂ ಭರತ್‌ಭಾಯ್ (ಭರತ್ ರತೇಶ್ವರ್).
‘‘ ಇಲ್ಲಿ,ಅಭಿನವ್ ಭಾರತ್ ಸಂಘಟನೆಯನ್ನು ಬೆಳಕಿಗೆ ತರಲು ಮಾಡಬೇಕಾದ ಕೆಲವೊಂದು ಕಾರ್ಯಗಳ ಬಗ್ಗೆ ಪುರೋಹಿತ್ ಮಾತನಾಡಿದ. ಅಭಿನವ್ ಭಾರತ್‌ನ ಅಧ್ಯಕ್ಷತೆಗೆ ಅಸೀಮಾನಂದನ ಹೆಸರನ್ನು ಪ್ರಸ್ತಾಪಿಸಲಾಯಿತು. ತದನಂತರ ದೇಶಭ್ರಷ್ಟ ಸರಕಾರವೊಂದನ್ನು ರಚಿಸುವ ಬಗ್ಗೆ ಪುರೋಹಿತ್ ಮಾತನಾಡಿದ. (ಈ ದೇಶ ಭ್ರಷ್ಟ ಸರಕಾರಕ್ಕೆ ಮಾನ್ಯತೆ ದೊರೆಯಲು) ತಾನು ಇಸ್ರೇಲ್ ಹಾಗೂ ಥಾಲ್ಯಾಂಡ್ ಜೊತೆ ಸಂಪರ್ಕ ಸ್ಥಾಪಿಸಿರುವುದಾಗಿಯೂ ಆತ ಹೇಳಿದ’’ ಎಂದು ಈ ಅಧಿಕಾರಿಯು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸಭೆಯಲ್ಲಿ ಸಮೀರ್ ಕುಲಕರ್ಣಿಯ ಗುಣಗಾನ ಮಾಡಿದ ಪುರೋಹಿತ್ ಆತನನ್ನು ‘ಚಾಣಕ್ಯ’ ಎಂದು ಬಣ್ಣಿಸಿದ. ಅಸೀಮಾನಂದ ಹಾಗೂ ಹಿಮಾನಿಯನ್ನು ಹೊರತುಪಡಿಸಿದರೆ ಭೋಪಾಲ್ ಸಭೆಯಲ್ಲಿ ಪಾಲ್ಗೊಂಡಿ ದ್ದವರೆಲ್ಲರೂ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಾಗಿದ್ದಾರೆ.
ಬಾಂಬ್ ಸ್ಫೋಟಕ್ಕೆ ಬಳಕೆಯಾದದ್ದು ಸಾಧ್ವಿಯ ಮೋಟಾರ್‌ಬೈಕ್
2008ರ ಮಾಲೆಗಾಂವ್ ಸ್ಫೋಟಕ್ಕೆ ಬಾಂಬರ್ ವಾಹನವಾಗಿ ಪ್ರಜ್ಞಾ ಸಿಂಗ್‌ಳ ಮೋಟಾರ್‌ಬೈಕನ್ನು ಅಭಿನವ್ ಭಾರತ್ ಅಳುಕಿಲ್ಲದೆಯೇ ಉಪಯೋಗಿಸಿತು. ಆದರೆ ಸ್ಫೋಟದಲ್ಲಿ ಈ ಬೈಕ್ ಪೂರ್ಣವಾಗಿ ನಾಶಗೊಳ್ಳಲಿಲ್ಲ. ಇದರಿಂದಾಗಿ ಪೊಲೀಸರಿಗೆ ಸ್ಫೋಟದ ಸಂಚಿನ ಬಗ್ಗೆ ಸಾಕಷ್ಟು ಸುಳಿವುಗಳನ್ನು ಅದು ನೀಡಿದೆ. 2006ರ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯ ಅನುಭವವಿರುವ ಮಹಾರಾಷ್ಟ್ರ ಪೊಲೀಸರು ಹಾಗೂ ಭಯೋತ್ಪಾದನಾ ನಿಗ್ರಹದಳ (ಎಟಿಎಸ್), 2008ರಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದೇ ತಡ ತಕ್ಷಣವೇ ಚುರುಕಾದವು. ಮಾಲೆಗಾಂವ್‌ನ ಸುತ್ತಮುತ್ತ ಆ ಸಮಯದಲ್ಲಿ ಹರಿದಾಡಿದ ಸಾವಿರಾರು ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದ್ದ ಎಟಿಎಸ್‌ಗೆ ದೊರೆತ ಈ ಕುತೂಹಲಕಾರಿ ಸಂಭಾಷಣೆ ತನಿಖೆಯ ಗತಿಯನ್ನೇ ಬದಲಾಯಿಸಿತು.
ಸ್ತ್ರೀಧ್ವನಿ (ಪ್ರಜ್ಞಾ ಸಿಂಗ್): ‘‘ನನ್ನ ಮೋಟಾರ್‌ಸೈಕಲ್ ಉಪಯೋಗಿಸ ಬೇಡವೆಂದು ನಾನು ನಿನಗೆ ಹೇಳಿದ್ದೆ.ಯಾಕೆ ನೀನದನ್ನು ಬಳಸಿದೆ?’’.
ಗಂಡು ಧ್ವನಿ (ರಾಮಚಂದ್ರ ‘ರಾಮ್‌ಜೀ’ ಕಾಲಾಸಂಗ್ರಾ): ‘‘ನಾವದನ್ನು ಕೊನೆಗಳಿಗೆಯಲ್ಲಿ ನಿರ್ಧರಿಸಿದೆವು’’.
ಸ್ತ್ರೀ: ಆದರೆ.. ಸತ್ತದ್ದು ಕೇವಲ ಆರು ಮಂದಿ ಮಾತ್ರ... ಯಾಕೆ?
ಗಂಡು: ಜನರ ಗುಂಪು ಸ್ವಲ್ಪ ದೂರದಲ್ಲಿತ್ತು... ಅಲ್ಲೊಂದು ಪೊಲೀಸ್ ತಡೆಬೇಲಿ ಕೂಡಾ ಇತ್ತು.ಹಾಗಾಗಿ ನಾವು ಅಲ್ಲಿ ಬೈಕನ್ನು ಪಾರ್ಕ್ ಮಾಡಬೇಕಾಯಿತು’’.
ಪೊಲೀಸರು ಈ ದೂರವಾಣಿ ಸಂಖ್ಯೆಯ ಜಾಡು ಹಿಡಿದು, ಪ್ರಜ್ಞಾಸಿಂಗ್‌ಳನ್ನು ಸೂರತ್‌ನಲ್ಲಿ ಬಂಧಿಸಿದರು. ಬಾಂಬ್ ಸ್ಫೋಟಕ್ಕೆ ಬಳಕೆಯಾದ ಬೈಕ್ ಕೂಡಾ ಆಕೆಗೆ ಸೇರಿದ್ದಾಗಿತ್ತು. ಆದರೆ ತಾನದನ್ನು ಎರಡು ವರ್ಷಗಳ ಹಿಂದೆ ಮಧ್ಯಪ್ರದೇಶದ ದೇವಸ್‌ನ ಆರೆಸ್ಸೆಸ್ ಕಾರ್ಯಕರ್ತ ಸುನೀಲ್ ಜೋಶಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಳು. ಈ ಸುನೀಲ್ ಜೋಶಿ 2007ರಲ್ಲಿ ನಿಗೂಢವಾಗಿ ಕೊಲೆಯಾಗಿದ್ದ.
ತನಿಖಾ ಸಂಸ್ಥೆಗಳ ಮೂಲಗಳು ಹೇಳುವ ಪ್ರಕಾರ ಸುನೀಲ್ ಜೋಶಿಯು ಮಧ್ಯಪ್ರದೇಶದಲ್ಲಿ ಅಭಿನವ್ ಭಾರತ್‌ನ ಕಾರ್ಯಾಚರಣೆಗಳ ಸಮನ್ವಯತೆಯನ್ನು ನೋಡಿಕೊಳ್ಳುತ್ತಿದ್ದ. ಆತನಿಗೆ ಗುಜರಾತ್ ರಾಜ್ಯದಲ್ಲಿ ಸಂಸ್ಥೆಯ ಚಟುವಟಿಕೆಗಳ ಸಮನ್ವಯಕಾರನಾಗಿದ್ದ ಅಸೀಮಾನಂದನ ಜೊತೆ ಸಂಪರ್ಕವಿತ್ತು. ತನಗೆ ಜೋಶಿಯು ತಿಳಿದಿರುವುದಾಗಿ ಅಸೀಮಾ ನಂದ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದ.
ಮಕ್ಕಾ ಮಸೀದಿ ಸ್ಫೋಟದ ಬಳಿಕ ತಾನು ಸುನೀಲ್ ಜೋಶಿ ಜೊತೆ ನಡೆಸಿದ ಮಾತು ಕತೆಯ ವಿವರಗಳನ್ನು ನ್ಯಾಯಾ ಲಯದಲ್ಲಿ ಅಸೀಮಾನಂದ ಬಹಿರಂಗ ಪಡಿಸುತ್ತಾ ‘‘ಬಾಂಬ್ ಇರಿ ಸಲು ಇಬ್ಬರು ಮುಸ್ಲಿಂ ಯುವಕರನ್ನು ಇಂದ್ರೇಶ್ ಕುಮಾರ್ ಒದಗಿಸಿಕೊಟ್ಟಿ ರುವು ದಾಗಿ ಜೋಶಿ ತನಗೆ ತಿಳಿಸಿದ್ದ’’ ಎಂದು ಹೇಳಿದ್ದ. ಈ ಪ್ರಕರಣದಲ್ಲಿ ತುಂಬಾ ಜಾಗರೂಕನಾಗಿರು ವಂತೆ ನಾನು ಜೋಶಿಗೆ ಹೇಳಿದ್ದ. ಇಂದ್ರೇಶ್ ನಿಂದ ಆತ ಜೀವಕ್ಕೆ ಅಪಾಯ ಬಂದೀತು ಎಂಬುದಾಗಿ ನಾನ ವನಿಗೆ ಎಚ್ಚರಿಸಿದ್ದೆ’’ ಎಂದು ಅಸೀಮಾನಂದ ನ್ಯಾಯಾ ಲಯಕ್ಕೆ ನೀಡಿದ ಗೌಪ್ಯ ಹೇಳಿಕೆಯಲ್ಲಿ ತಿಳಿಸಿದ್ದ.
ಎರಡು ತಿಂಗಳ ಆನಂತರ ಜೋಶಿ ದೇವಸ್‌ನಲ್ಲಿ ಕೊಲೆ ಯಾದ ಹಾಗೂ ಆತನ ಕುಟುಂ ಬಿಕರು ಆರೆ ಸ್ಸೆಸ್ ಮೇಲೆ ಆರೋಪ ಹೊರಿಸಿ ದ್ದರು. ವಿಶೇಷವೆಂ ದರೆ ಜೋಶಿ ಕೊಲೆ ಪ್ರ ಕರಣದ ಆರೋಪಿಗಳೆ ಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆರೆಸ್ಸೆಸ್ ಜೊತೆ ಸಂಪರ್ಕ ಹೊ ಂದಿದವರಾಗಿದ್ದರು. ಬಹುಶಃ ಆರೆಸ್ಸೆಸ್ ಬಗ್ಗೆ ಸುನೀಲ್ ಜೋಶಿಗೆ ಜಾಸ್ತಿ ತಿಳಿದಿತ್ತೇನೋ...!
2008ರ ಮಾಲೆಗಾಂವ್ ಸ್ಫೋಟಕ್ಕೆ ಬಳಕೆಯಾದ ಬೈಕ್ ಸಾಧ್ವಿ ಪ್ರಜ್ಞಾಸಿಂಗ್‌ಗೆ ಸೇರಿದ್ದಾಗಿತ್ತು. ಆದರೆ ತಾನದನ್ನು ಎರಡು ವರ್ಷಗಳ ಹಿಂದೆಯೇ ಮಧ್ಯಪ್ರದೇಶದ ಆರೆಸ್ಸೆಸ್ ಕಾರ್ಯಕರ್ತ ಸುನೀಲ್ ಜೋಶಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ಆಕೆ ಪೊಲೀಸರ ಮುಂದೆ ಹೇಳಿ ಕೊಂಡಿದ್ದಳು.ಆದರೆ ಈ ಸುನೀಲ್ ಜೋಶಿ 2007ರಲ್ಲಿ ನಿಗೂಢವಾಗಿ ಕೊಲೆಯಾಗಿದ್ದ.
‘ನಿವೃತ್ತ ಸೇನಾಧಿಕಾರಿ ಹಾಗೂ ಇಂದ್ರೇಶ್ ಕುಮಾರ್ ನಡುವೆ ನಡೆದ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಬಲ್ಲಂತಹ ವ್ಯಕ್ತಿಗಾಗಿ ಇಂದ್ರೇಶ್ ಹುಡುಕಾಡುತ್ತಿದ್ದ. ಆತ್ಮಹತ್ಯಾ ದಳಗಳನ್ನು ರಚಿಸುವ ಬಗ್ಗೆ (ನಿವೃತ್ತ) ಸೇನಾಧಿಕಾರಿ ಮಾತನಾಡುತ್ತಿದ್ದ. ಆತನ ಸಾಹಸಕ್ಕೆ ತನ್ನ ಬೆಂಬಲವಿರುವುದಾಗಿ ಇಂದ್ರೇಶ್ ಹೇಳಿದ. ನಾಸಿಕ್‌ನ ಭೋನ್ಸಾಲಾ ಮಿಲಿಟರಿ ಶಾಲೆಯಲ್ಲಿ ನುರಿತ ತಂಡಗಳಿಗೆ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳ ಬಳಕೆ ಬಗ್ಗೆ ತರಬೇತಿ ನೀಡುವ ಬಗ್ಗೆ ಅವರಿಬ್ಬರೂ ಚರ್ಚಿಸಿದರು’.
ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಹಾಗೂ ನಿವೃತ್ತ ಸೇನಾಧಿಕಾರಿಯೊಬ್ಬರ ನಡುವೆ ಪುಣೆಯಲ್ಲಿ ನಡೆದ ರಹಸ್ಯ ಮಾತುಕತೆಗೆ ಸಾಕ್ಷಿಯಾಗಿದ್ದ ವ್ಯಕ್ತಿಯ ಹೇಳಿಕೆ
ಮಂಗಳವಾರ, ಜೂನ್ 14, 2011
ಪಾವೂರು ನೀರಿನ ಬೆಲೆ ಏರಿಕೆ ಪ್ರತಿಬಟನೆ
ಸೋಸಿಅಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಾವೂರು ಘಟಕದ ವತಿಯಿಂದ ೧೪/೬/೨೦೧೧ ರಂದು ಬೆಳಿಗ್ಗೆ ೧೦:೩೦ ಕ್ಕೆ ಸರಿಯಾಗಿ ಪಾವೂರ್ ಗ್ರಾಮ ಪಂಚಾಯತ್ ಮುಂಬಾಗದಲ್ಲಿ ಬ್ರಹತ್ ಪ್ರತಿಬಟನೆ ನಡೆಸಲಾಯಿತು.
ನೀರಿನ ಬೆಲೆ ಏರಿಕೆ ಮಾಡಿಧ ಗ್ರಾಮ ಪಂಚಾಯತ್ ನ ನೀತಿ ಸರಿಯಲ್ಲ ಅದು ಬಡವರ ಹೊಟ್ಟೆಗೆ ಬೆಂಕಿ ಇಟ್ಟ ಹಾಗೆ ಇದನ್ನು ರದ್ದು ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವೂದು ಎಂದು ಗ್ರಾಮ ಸಮೀತಿ ಸದಸ್ಯ ಹಾರಿಸ್ ಮಲಾರ್ ಮಾತನಾಡಿದರು.
ಬುಧವಾರ, ಜೂನ್ 08, 2011
ಪಿಎಫ್‌ಐನಿಂದ ಸಾರ್ವಜನಿಕ ಸಂದೇಶ
ಮಂಗಳೂರು, ಜೂ.8: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ವಲಯದ ವತಿಯಿಂದ ‘ಇಸ್ಲಾಮನ್ನು ಅರಿಯಿರಿ’ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ‘ಯಶಸ್ವಿ ಇಸ್ಲಾಮೀ ಜೀವನ’ ಎಂಬ ಸಾರ್ವಜನಿಕ ಸಂದೇಶ ಕಾರ್ಯ ಕ್ರಮವು ತೊಕ್ಕೊಟ್ಟು ಒಳ ಪೇಟೆಯ ಆಮಂತ್ರಣ ಹಾಲ್‌ನಲ್ಲಿ ನಡೆಯಿತು.ಹಾರಿಸ್ ಮುಸ್ಲಿಯಾರ್ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.‘‘ನೆರೆಹೊರೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ಮುಸ್ಲಿಮನಲ್ಲ’’ ಎಂಬ ಪ್ರವಾದಿ ವಚನದ ಬಗ್ಗೆ ಮಾತನಾಡುತ್ತಾ ಹಸಿವು ಎಂದರೆ ಕೇವಲ ಹೊಟ್ಟೆ ಹಸಿವು ಮಾತ್ರವಲ್ಲ. ಬದಲಾಗಿ ಅವರ ಎಲ್ಲಾ ಸಮಸ್ಯೆಗಳಿಗೆ ಜಾತಿ,ಮತ ಎಂಬ ಭೇದವನ್ನು ಮರೆತು ಭಾಗಿಯಾಗಬೇಕು ಎಂದು ದ.ಕ. ಜಿಲ್ಲಾ ಇಮಾಮ್ ಕೌನ್ಸಿಲ್‌ನ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಅಝ್‌ಹರಿ ಹೇಳಿದರು.ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ, ಉಳ್ಳಾಲ ವಲಯದ ಕಾರ್ಯದರ್ಶಿ ನಾಸಿರ್ ಮಲಾರ್ ಉಪಸ್ಥಿತರಿದ್ದರು
ಮಂಗಳವಾರ, ಜೂನ್ 07, 2011
ಮಲಾರಿನಲ್ಲಿ ಸ್ಕೂಲ್ ಚಲೋ ಕಾರ್ಯಕ್ರಮ
ವೇದಿಕೆಯಲ್ಲಿ ಅತಿಥಿಗಳು
ಪಾಪ್ಲರ್ ಫ್ರಂಟ್ ಆಫ್ ಇಂಡಿಯಾ ದ ಕ ಜಿಲ್ಲಾ ಸಮೀತಿ ಸದಸ್ಯ ಹೈದರ್ ನಿರ್ಶಲ್ ಕಾರ್ಯಕ್ರಮದ ಅದ್ಯಕ್ಷ ತೆಯನ್ನು ವಹಿಸಿದರು . ಮಲಾರ್ ಘಟಕದ ಪ್ರದಾನ ಕಾರ್ಯದರ್ಶಿ ಹಾರಿಸ್ ಮುಸ್ಲಿಯಾರ್ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. sdpi ದ ಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಅಲಿ ಮುಖ್ಯ ಬಾಷಣ ಮಾಡಿದರು ಹಾಗೂ pfi ಉಳ್ಳಾಲ ವಲಯದಕ್ಷ ಅಬ್ಬಾಸ್ ಕಿನ್ಯ ,ಕಾರ್ಯದರ್ಶಿ ನಾಸೀರ್ ಮಲಾರ್,sdpi ಮಂಗಳೂರು ವಿಧಾನ ಸಬ ಅದ್ಯಕ್ಷ ನವಾಜ್ ಉಳ್ಳಾಲ ಬೆಳ್ತಂಗಡಿ ವಿದಾನ ಸಬ ಅದ್ಯಕ್ಷ ಅಕ್ಬರ್, ಸಮಾಜ ಸೇವಕ ಶಂಕರಾನಂದ ,ಮಲಾರ್ ಶಾಲಾ ಅದ್ಯಾಪಕ ಮಜೀದ್ ಮಾಸ್ಟರ್ ತಾಲೂಕ್ ಪಂಚಾಯತ್ ಸದಸ್ಯ ಮುಸ್ತಫಾ ಪಾವೂರ್, ಗ್ರಾಮ ಪಂಚಾಯತ್ ಸದಸ್ಯ ಎಂ ಮಹಮ್ಮದ್ ಬದ್ರಿಯ ನಗರ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಎಂ ಇಸ್ಮಾಯೀಲ್ ವೇದಿಕೆಯಲ್ಲಿ ಅತಿಥಿಗಳಾಗಿದ್ದರು . ಉಬೈದ್ ಅಮ್ಮೆಂಬಳ ಸ್ವಾಗತಿಸಿ ರಹೀಂ ಮಲಾರ್ ವಂದಿಸಿದರು ಮತ್ತು ಜಾಹಿದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು. ಸೋಮವಾರ, ಮೇ 09, 2011
ಇದೊಂದು ವಿಚಿತ್ರ ತೀರ್ಪು: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ವ್ಯಂಗ್ಯ....... ಅಯೋಧ್ಯಾ ಮಾಲಕತ್ವ ವಿವಾದ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ
ಗುರುವಾರ, ಮೇ 05, 2011
ಅಮೆರಿಕ ಅತ್ಯುಗ್ರ ರಾಷ್ಟ್ರ: ಪಾಪ್ಯುಲರ್ ಫ್ರಂಟ್
ಮಂಗಳವಾರ, ಮೇ 03, 2011
ಮೈಸೂರಿನಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಮಂಗಳೂರು: ಎಸ್‌ಡಿಪಿಐ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಬೆಳ್ತಂಗಡಿ: ಎಸ್‌ಡಿಪಿಐ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಮಂಗಳೂರು: ಬೀದಿ ವ್ಯಾಪಾರಸ್ಥರ ಪ್ರತಿಭಟನೆಗೆ ಎಸ್‌ಡಿಪಿಐ ಬೆಂಬಲ
‘ಪ್ರಜಾಪ್ರಭುತ್ವದ ರಕ್ಷಣೆ ಎಸ್‌ಡಿಪಿಐ ಗುರಿ’
ಶುಕ್ರವಾರ, ಏಪ್ರಿಲ್ 15, 2011
ಜನತೆಯ ಪರವಾಗಿ ಧ್ವನಿ ಎತ್ತುವವರನ್ನು ಭಯೋತ್ಪಾದಕರೆ......?
ಎಸ್‌ಡಿಪಿಐ ಸದಸ್ಯತ್ವ ಅಭಿಯಾನ ಉದ್ಘಾಟನೆ
ರಾಜ್ಯ ಉಪಾಧ್ಯಕ್ಷ ಅಬ್ದುಲ್ ಲತೀಫ್ ಪುತ್ತೂರು ಉಪಸ್ಥಿತರಿದ್ದರು. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀರ್ ಹಂಝ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಕೀಂ ಉಚ್ಚಿಲ ಸ್ವಾಗತಿಸಿದರು. ಉಡುಪಿ ಕ್ಷೇತ್ರ ಅಧ್ಯಕ್ಷ ಫಝಿಲ್ ಆದಿ ಉಡುಪಿ ಕಾರ್ಯಕ್ರಮ ನಿರೂಪಿಸಿದರು.
ಮಾನವ ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ಗೆ ಸುಪ್ರೀಂ ಕೋರ್ಟ್
ವಿಶ್ವಾಸ ಮೂಡಿದೆ: ಅನಸೂಯಾ
ಛತ್ತೀಸ್‌ಗಡದ ಹೈಕೋರ್ಟ್ ತನ್ನ ಮಗನಿಗೆ ಜಾಮೀನು ನಿರಾಕರಿಸಿದಾಗ ತಾನು ನೈತಿಕ ಹಿನ್ನಡೆ ಕಂಡಿದ್ದೆ. ತನ್ನ ಮಗನನ್ನು ಕಾಣಲಾರೆನೆಂದು ಭಾವಿಸಿದ್ದೆ. ಆದರೆ, ಈಗ ತನಗೆ ನ್ಯಾಯಾಂಗದ ಮೇಲೆ ಮತ್ತೆ ವಿಶ್ವಾಸ ಮೂಡಿದೆಯೆಂದು ನಾಡಿಯಾ ಜಿಲ್ಲೆಯ ತನ್ನ ನಿವಾಸದಲ್ಲಿ ಬಿನಾಯಕ ಸೇನರ ತಾಯಿ ಅನಸೂಯಾ ಸೇನ್ ನುಡಿದರು.
ಇಂದು ಬಂಗಾಳಿ ಹೊಸ ವರ್ಷದ ಮೊದಲ ದಿನವೇ ಶುಭವಾರ್ತೆ ಬಂದುದಕ್ಕಾಗಿ ಅತೀವ ಸಂತೋಷ ವ್ಯಕ್ತಪಡಿಸಿದ ಅವರು ‘ಸತ್ಯಮೇವ ಜಯತೇ’ ಎಂದುದ್ಗರಿಸಿದರು.
ಖುರ್ಷಿದ್ ಸ್ವಾಗತದೇಶದ್ರೋಹದ ಆರೋಪದಲ್ಲಿ ಆಜೀವ ಶಿಕ್ಷೆಗೆ ಗುರಿಯಾಗಿರುವ ಮಾನವ ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದನ್ನು ಅಲ್ಪಸಂಖ್ಯಾತ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್
ಜಾಮೀನು ಮಂಜೂರಾದ ಪರಿಸ್ಥಿತಿಯನ್ನು ಸ್ವಾಗತಿಸಬೇಕೆನ್ನುವುದು ತನ್ನ ಅಭಿಪ್ರಾಯವಾಗಿದೆಯೆಂದು ಅವರು ಪತ್ರಕರ್ತರೊಡನಿಂದು ಹೇಳಿದರು.
ಸೇನರನ್ನು ನಡೆಸಿಕೊಂಡ ರೀತಿ ಸರಿಯಲ್ಲವೆಂಬ ಸಾಮಾನ್ಯ ಅಭಿಪ್ರಾಯವೀಗ ಬಲಗೊಂಡಿದೆಯೆಂದು ಖುರ್ಶಿದ್ ನುಡಿದರು.
ಮಾವೊವಾದಿಗಳ ಗಂಭೀರ ಪಿಡುಗಿಗೆ ಸಂಬಂಧಿಸಿದಂತೆ ದೇಶದ ಆಂತರಿಕ ಭದ್ರತೆಯ ವಿಚಾರದಲ್ಲಿ ರಾಜಿಯಾಗಬಾರದೆಂಬ ಇನ್ನೊಂದು ವ್ಯಾಪಕ ಅಭಿಪ್ರಾಯವಿದ್ದರೂ, ಸೇನ್‌ಗೆ ಜಾಮೀನು ನೀಡಿರುವುದನ್ನು ಸ್ವಾಗತಿಸಲೇ ಬೇಕಾಗಿದೆಯೆಂದು ಅವರು ಹೇಳಿದರು.
ಸೇನ್ ಜಾಮೀನಿನಲ್ಲಿ ಹೊರಬಂದ ಬಳಿಕ ಅವರು ಏನಾದರೂ ಹೇಳಲು ಇಚ್ಛಿಸಬಹುದು ಹಾಗೂ ಜನರಿಗೆ ಇನ್ನೊಂದು ವಿಚಾರವನ್ನು ಕೇಳುವ ಅವಕಾಶ ದೊರೆಯಬಹುದೆಂದು ಖುರ್ಶಿದ್ ಅಭಿಪ್ರಾಯಿಸಿದರು.
ಚಿದಂಬರಂಗೆ ಸಂತಸ ಮಾನವ ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದಕ್ಕೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಸಂತಸ ವ್ಯಕ್ತಪಡಿಸಿದ್ದಾರೆ.
ದೇಶದ್ರೋಹ ಹಾಗೂ ನಕ್ಸಲರಿಗೆ ನೆರವು ನೀಡಿದ ಆರೋಪದಲ್ಲಿ ಸೇನ್‌ಗೆ ಜೀವಾವಧಿ ಶಿಕ್ಷೆ ಘೋಷಣೆಯಾದೊಡನೆಯೇ, ಈ ತೀರ್ಪು ಅನೇಕರಿಗೆ ಅತೃಪ್ತಿ ಉಂಟು ಮಾಡಿರಬಹುದು. ಆದರೆ, ಮೇಲ್ಮನವಿ ಸಲ್ಲಿಸುವ ಮೂಲಕ ಅದನ್ನು ಸರಿಪಡಿಸುವ ಅವಕಾಶವಿದೆಯೆಂದು ಚಿದಂಬರಂ ಹೇಳಿದ್ದರು.
ಗುರುವಾರ, ಏಪ್ರಿಲ್ 14, 2011
‘‘ಬನ್ನಿ ಸಾರ್ ಬನ್ನಿ.. ಅಂಬೇಡ್ಕರ್‌ರ ಜೈ ಭೀಮ್ ವಂದನೆಗಳು.. ಬಿರಿಯಾನಿ ತಿನ್ನಿ.. ಸಂವಿಧಾನದ ಮೇಲೆ ನಂಬಿಕೆಯುಳ್ಳ ಜನರಿಗೆಲ್ಲ ಎಪ್ರಿಲ್ 14 ವಿಶೇಷವಾದ ದಿನ
ನೂರಾರು ಕಾರ್ಯಕತರು ಪುರಭವ ನದ ಮುಂಭಾಗದಲ್ಲಿ ಒಂದು ಸಾವಿರಕ್ಕೂ ಹೆಚ್ಚು ದನದ ಮಾಂಸದ ಬಿರಿಯಾನಿ ಪ್ಯಾಕೆಟ್‌ಗಳನ್ನು ಹಂಚಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ರಾಜ್ಯ ಬಿಜೆಪಿ ಸರಕಾರದ ಅಂಬೇಡ್ಕರ್ ತತ್ತ್ವಾದರ್ಶ ಹಾಗೂ ದಲಿತ ವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆ ಕೂಗಿದರು. ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ತರುವ ಮೂಲಕ ದಲಿತರು ತಿನ್ನುವ ಆಹಾರದ ಹಕ್ಕನ್ನು ಮನುವಾದಿ ಸರಕಾರ ಕಸಿದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ರಾಜ್ಯಾಧ್ಯಕ್ಷ ಎನ್.ಮೂರ್ತಿ, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳು ತಿನ್ನುವ ಮಾಂಸಾ ಹಾರವನ್ನೇ ನಿಷೇಧಿಸಿದ ಬಿಜೆಪಿ ಸರಕಾರಕ್ಕೆ ಅಂಬೇಡ್ಕರ್ ಜನ್ಮ ದಿನವನ್ನು ಆಚರಣೆ ಮಾಡುವ ನೈತಿಕತೆ ಇಲ್ಲ ಎಂದು ಆಕ್ರೋಶದಿಂದ ನುಡಿದರು.
ಬುಧವಾರ, ಏಪ್ರಿಲ್ 13, 2011
ಜೆಡಿಎಸ್ ಕಪಟ ಜಾತ್ಯತೀತ ಪಕ್ಷ: ಅಬ್ದುಲ್ ಮಜೀದ್ ಕೊಡ್ಲಿಪೇಟೆ
ಬೆಂಗಳೂರು: ಜೆಡಿಎಸ್ ಒಂದು ಕಪಟ ಜಾತ್ಯತೀತ ಪಕ್ಷವಾಗಿದೆ. ಇದನ್ನು ಜಾತ್ಯಾತೀತ ಪಕ್ಷವೆಂದು ಕರೆದುಕೊಳ್ಳುವ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಢೋಂಗಿ ಜಾತ್ಯತೀತವಾದಿಗಳು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಕಿಡಿಗಾರಿದರು. ಅವರು ಬೆಂಗಳೂರಿನ ಕ್ವೀನ್ಸ್ ರೋಡ್‌ನಲ್ಲಿರುವ ದಾರುಸ್ಸಲಾಮ್ ಹಾಲ್‌ನಲ್ಲಿ ಪಕ್ಷದ ರಾಜ್ಯ ಮಟ್ಟದ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು.
ಮಡಿಕೇರಿ: ಎಸ್‌ಡಿಪಿಐ ವತಿಯಿಂದ ಅಮಾಯಕರ ಬಂಧನದ ಬಗ್ಗೆ ಜಾಗೃತಿ ಸಭೆ
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಫಝಲುಲ್ಲಾ, ಪ್ರಧಾನ ಕಾರ್ಯದರ್ಶಿ ಅಮೀನ್ ಮುಹ್ಸಿನ್, ದಲಿತ ನಾಯಕ ನಿರ್ವಾಣಪ್ಪ, ಸಿದ್ದಾಪುರ ಗ್ರಾಮ ಪಂಚಾಯತ್ ಸದಸ್ಯ ಶೌಕತ್ ಅಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







