ಬೆಂಗಳೂರು, ಜ. 29: ರಾಜ್ಯದಲ್ಲಿ ನಡೆದ ಚರ್ಚ್‌ಗಳ ಮೇಲಿನ ದಾಳಿ ಸಂಬಂಧ ನ್ಯಾ.ಸೋಮಶೇಖರ್ ಅವರ ಆಯೋಗ ನೀಡಿರುವ ವರದಿಯು ಸ್ವತಂತ್ರ ವಿಚಾರಣೆ ವರದಿ ಎಂದು ಭಾವಿಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ, ಅದನ್ನು ತೀವ್ರವಾಗಿ ಖಂಡಿಸುವುದಾಗಿ ಕರ್ನಾಟಕ ಕ್ರೈಸ್ತರಂಗ ತಿಳಿಸಿದೆ. ಶನಿವಾರ ನಗರದಲ್ಲಿ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಬೆನಡಿಕ್ಟ್ ಬಾಲು, ವರದಿ ಸ್ವತಂತ್ರ ವಿಚಾರಣೆಯ ರೀತಿಯಲ್ಲಿದೆ, ಯಾರೊ ಕೂತು ಬರೆದಂತಿದೆ. ವರದಿ ಸಂಪೂರ್ಣವಾಗಿ ಅಂತೆ-ಕಂತೆಗಳ ಸುಳ್ಳಿನ ಸರಮಾಲೆಯಾಗಿದೆ. ಚರ್ಚ್‌ಗಳ ಮೇಲಿನ ದಾಳಿಗೆ ಪರೋಕ್ಷವಾಗಿ ಬೆಂಬಲ ನೀಡಿದ ಬಿಜೆಪಿ ಸರಕಾರ ಮತ್ತು ದಾಳಿ ನಡೆಸಿದ ಬಜರಂಗ ದಳಕ್ಕೆ ಕ್ಷೀನ್ ಚಿಟ್ ನೀಡಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರೆ ಮಹಿಳೆಯರು ಮತ್ತು ಮಕ್ಕಳನ್ನು ಕ್ರೈಸ್ತ ದೇವಾಲಯದೊಳಗೆ ಓಡಿಸಿಕೊಂಡು ಹೋಗಿ ಹೊಡೆದದ್ದು ಹಚ್ಚ ಹಸಿರುವಾಗಲೆ, ದಾಳಿಯ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಮತ್ತು ಸರಕಾರ ನಿರ್ವಹಿಸಿದ ಪಾತ್ರಕ್ಕೆ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಕೈಸ್ತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸದರು.
ಮಧ್ಯಂತರ ವರದಿಯಲ್ಲಿ ದಾಳಿ ನಡೆಸಿದ್ದು ಬಜರಂಗ ದಳವೆಂದು ತಿಳಿಸಿದ್ದ ನ್ಯಾಯಮೂರ್ತಿಗಳು, ಅಂತಿಮ ವಾಗಿ ದಾಳಿಯಲ್ಲಿ ಬಜರಂಗ ದಳದ ಕೈವಾಡವಿಲ್ಲ ಎಂದು ಹೇಳಿದೆ. ಆದ್ದರಿಂದ ಆಯೋಗ ನೀಡಿದ ಮಧ್ಯಂತರ ಮತ್ತು ಅಂತಿಮ ವರದಿಗೆ ಬಹಳ ವ್ಯತ್ಯಾಸ ವಿದೆ. ದಾಳಿ ನಡೆಸಿದ್ದಾಗಿ ಮಹೇಂದ್ರ ಕುಮಾರ್ ಅವರೆ ಖುದ್ದಾಗಿ ಹೇಳಿಕೊಂಡಿದ್ದರೂ, ಉದ್ದೇಶ ಪೂರ್ವ ಕವಾಗಿ ಯಾರಿಂದಲೂ ತಪ್ಪಾಗಿಲ್ಲ ಎಂದು ಆಯೋಗ ಎಲ್ಲರ ಬಾಯಿ ಮುಚ್ಚಿಸಲು ಪ್ರಯತ್ನಿಸಿದೆ ಎಂದರು.
ಶೇ.1.8ರಷ್ಟಿರುವ ಕ್ರೈಸ್ತ ಸಮುದಾಯವು ರಾಜ್ಯಕ್ಕೆ ನೀಡಿದ ಸೇವೆ ಅಪಾರ, ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿರುವ ಕ್ರೈಸ್ತ ಜನರು, ಇಂದು ಅನಾಥ ಪ್ರಜ್ಞೆಯಿಂದ ಬಳಲುತ್ತಿದ್ದಾರೆ. ನ್ಯಾಯಮೂರ್ತಿಗಳು ವರದಿಯನ್ನು ಸತ್ಯದಿಂದ ದೂರ ವಿಟ್ಟು ಕೈಸ್ತರ ಹೃದಯಕ್ಕೆ ನೋವು ತಂದಿದ್ದಾರೆ. ಆಯೋ ಗದ ವರದಿಯಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿದ್ದ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿದೆ ಎಂದರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ