ಭಾನುವಾರ, ಜನವರಿ 30, 2011

ಮುಂಬೈ: ಮಾಲೆಗಾಂವ್ ಸ್ಫೋಟ ಪ್ರಕರಣ: ಆರೋಪಿಗಳಿಗೆ ಜಾಮೀನು ನೀಡದಂತೆ ಸಿಬಿಐ ಮನವಿ


ಮುಂಬೈ, ಜ.28: ಕಳೆದ 2006ರ ಮಾಲೆಗಾಂವ್ ಸ್ಫೋಟ ಪ್ರಕರಣದ 9 ಆರೋಪಿಗಳು ಎಂಸಿಒಸಿಎ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಿಬಿಐ ಇಂದು ವಿರೋಧಿಸಿದೆ. ನ್ಯಾಯಾಲಯಕ್ಕೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದ ಸಿಬಿಐ, ಮಾಲೆಗಾಂವ್ ಸ್ಫೋಟ ಆರೋಪಿಗಳ ಜಾಮೀನಿಗೆ ವಿರೋಧ ವ್ಯಕ್ತಪಡಿಸಿತು.
imageವಿಶೇಷ ನ್ಯಾಯಾಧೀಶ ವೈ.ಡಿ.ಶಿಂಧೆಗೆ ಸಲ್ಲಿಸಲಾಗಿರುವ ಪ್ರತಿಕ್ರಿಯೆಯಲ್ಲಿ, ‘‘ಸ್ವಾಮಿ ಅಸೀಮಾನಂದನ ತಪ್ಪೊಪ್ಪಿಗೆ ಹೇಳಿಕೆಯ ಆಧಾರದಲ್ಲಿ ಈ ನ್ಯಾಯಾಲಯದ ಸಾಂಪ್ರದಾಯಿಕ ಅನುಮತಿ ದೊರಕಿದ ಬಳಿಕ ಸಿಬಿಐ ಮುಂದಿನ ತನಿಖೆ ಆರಂಭಿಸಲಿದೆ. ಆರೋಪಿಗಳು ತಮ್ಮ ಜಾಮೀನು ಅರ್ಜಿಗೆ ಯಾವುದೇ ಸೂಕ್ತ ಆಧಾರವನ್ನು ನೀಡಿಲ್ಲ, ಹೀಗಾಗಿ ಅವರ ಅರ್ಜಿಯನ್ನು ತಿರಸ್ಕರಿಸಬಹುದಾಗಿದೆ’’ ಎಂದು ಸಿಬಿಐ ಹೇಳಿದೆ.
ಮಾಲೆಗಾಂವ್ ಸ್ಫೋಟದಲ್ಲಿ ಕೇಸರಿ ಭಯೋತ್ಪಾದಕರು ಭಾಗಿಯಾಗಿರುವುದಾಗಿ ಸ್ವಾಮಿ ಅಸೀಮಾನಂದ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಬಳಿಕ, ಪ್ರಕರಣಕ್ಕೆ ಸಂಬಂಧಿಸಿ ತಪ್ಪಾಗಿ ಗುರುತಿಸಲ್ಪಟ್ಟಿರುವ 9 ಅಮಾಯಕ ಯುವಕರ ಬಿಡುಗಡೆಗೆ ಒತ್ತಡ ಬರುತ್ತಿದೆ. ಎಡ ಪಕ್ಷಗಳು ಈಗಾಗಲೇ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಅಮಾಯಕ ಯುವಕರ ಬಿಡುಗಡೆಗೆ ಆಗ್ರಹಿಸಿದೆ. ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಯುವಕರು ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ