
ಮಂಗಳೂರು, ಮಾ.27: ಸಮಸ್ತ ಕೇರಳ ಜಂಇಯ್ಯುತ್ತುಲ್ ಉಲಮಾ ವತಿಯಿಂದ ‘ವರಕ್ಕಲ್ ಮುಲ್ಲಕೋಯ ತಂಙಳ್ ಹಾದಿಯಲ್ಲಿ ಪಾರಂಪರ್ಯದ ಉಳಿವು ಸಮಸ್ತದ ನಿಲುವು’ ಎಂಬ ಘೋಷಣೆಯೊಂದಿಗೆ ಸಮಸ್ತ ಸುನ್ನಿ ಮಹಾ ಸಮ್ಮೇಳನ, ರವಿವಾರ ನೆಹರೂ ಮೈದಾನದಲ್ಲಿ ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಭಾಷಣ ಮಾಡಿದ ಪ್ರೊ.ಅಬ್ದುಸ್ಸಮದ್ ಪೂಕೋಟೂರ್, ಪರಂಪರಾಗತ ಅಹ್ಲು ಸುನ್ನತ್ ವಲ್ ಜಮಾಅತ್‌ನ ತತ್ವಾದೇಶದಲ್ಲಿ ಜನರನ್ನು ಧರ್ಮದಲ್ಲಿ ಭದ್ರವಾಗಿ ನೆಲೆ ನಿಲ್ಲಿಸಿದ ಕೀರ್ತಿ ಸಮಸ್ತಕ್ಕೆ ಸಲ್ಲುತ್ತದೆ. ಧರ್ಮದಲ್ಲಿ ನೂತನವಾದ ಮಂಡಿಸುವವರು ಯಾವ ರೂಪದಲ್ಲಿ ಬಂದರೂ ಅವರ ಮೋಡಿ ಮಾತಿಗೆ ಬಲಿಯಾಗಬೇಡಿ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಮಸ್ತ ಕೇಂದ್ರ ಮುಶಾವರದ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಚೆರುಶ್ಶೇರಿ ಝೈನುದ್ದೀನ್ ಮುಸ್ಲಿಯಾರ್ ಮಾತನಾಡಿ, ಮಾನವ ಧರ್ಮ ಮರೆತು ಪೈಶಾಚಿಕವಾಗಿ ವರ್ತಿಸಿದಾಗ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ ಎಂದು ಪ್ರವಾದಿಯವರು ಹೇಳಿದ್ದಾರೆ. ಆದುದರಿಂದ ಮನುಷ್ಯ ಅನಾಚಾರ, ಅನೈತಿಕತೆ, ಹಿಂಸೆಗಳನ್ನು ತ್ಯಜಿಸಿ ಶಾಂತಿಯ ಹಾದಿಯಲ್ಲಿ ಬದುಕು ಕಟ್ಟಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಸಮಸ್ತ ಕೇಂದ್ರ ಮುಶಾವರದ ಸದಸ್ಯ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಸಮಸ್ತ ಕೇಂದ್ರ ಮುಶಾವರದ ಕಾರ್ಯದರ್ಶಿ ಕೋಟುಮಲೆ ಬಾಪು ಮುಸ್ಲಿಯಾರ್, ಸಮಸ್ತ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ.ಅಬೂಬಕರ್ ಮುಸ್ಲಿಯಾರ್, ಸಮಸ್ತ ಫತ್ವಾ ಕಮಿಟಿಯ ಸದಸ್ಯ ಎಂ.ಟಿ.ಅಬ್ದುಲ್ಲ್ಲಾ ಮುಸ್ಲಿಯಾರ್, ಪ್ರೊ.ಅಲಿಕುಟ್ಟಿ ಮುಸ್ಲಿಯಾರ್, ಕಾಞಂಗಾಡ್ ಸಂಯುಕ್ತ ಜಮಾಅತ್ ಖಾಝಿ ಸೆಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್, ಸೆಯ್ಯದ್ ಅಹ್ಮದ್ ಪೋಕೋಯ ತಂಙಳ್, ಸೆಯ್ಯದ್ ಅಲಿ ತಂಙಳ್ ಕುಂಬೋಳ್, ಜಿಫ್ರಿ ತಂಙಳ್ ಕೊಡಗು, ಸಮಸ್ತ ದ.ಕ ಜಿಲ್ಲಾ ಮುಶಾವರದ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ದ.ಕ. ಜಿಲ್ಲಾ ಸಮಸ್ತ ಮುಶಾವರದ ಉಪಾಧ್ಯಕ್ಷ ಕೆ.ಎಂ.ಉಸ್ಮಾನ್ ಫೈಝಿ ತೋಡಾರು, ಅಬ್ದುಲ್ ಅಝೀಝ್ ದಾರಿಮಿ ಕಲ್ಲೇಗ, ಕೆ.ವಿ.ಅಬ್ದುಲ್ ವಾಹಿದ್ ಫೈಝಿ ಮಂಗಳೂರು, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಎಸ್.ಬಿ.ಮುಹಮ್ಮದ್ ದಾರಿಮಿ, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಶಾಸಕ ಯು.ಟಿ.ಖಾದರ್, ಮದ್ರಸ ಮ್ಯಾನೇಜ್‌ಮೆಂಟ್ ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷ ಮೊದಿನಬ್ಬ ಹಾಜಿ ಮಂಗಳೂರು, ಮದ್ರಸ ಮ್ಯಾನೇಜ್‌ಮೆಂಟ್ ದ.ಕ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಕಡಬ, ಕೋಶಾಧಿಕಾರಿ ಶಾಹುಲ್ ಹಮೀದ್ ಹಾಜಿ, ಕೇರಳ ಮುಸ್ಲಿಮ್ ಜಮಾಅತ್ ಮಂಗಳೂರು ಘಟಕದ ಅಧ್ಯಕ್ಷ ಸೋನಾ ಮುಮ್ಮಂಞಿ ಹಾಜಿ, ಮಂಗಳೂರು ಝೀನತ್ ಬಕ್ಷ್ ಮಸೀದಿಯ ಟ್ರಸ್ಟಿ ಬಾಷಾ ತಂಙಳ್, ಮಾಜಿ ಮೇಯರ್ ಕೆ.ಅಶ್ರಫ್, ಕೋಡಿಜಾಲ್ ಇಬ್ರಾಹೀಂ ಹಾಜಿ, ಜಿ.ಪಂ. ಸದಸ್ಯ ಎಂ.ಎಸ್.ಮುಹಮ್ಮದ್, ಎಸ್ಕೆಐಎಂವಿಬಿ ಸದಸ್ಯ ಅಬ್ಬಾಸ್ ಹಾಜಿ ಚಕಮಕಿ, ಯುನಿಟಿ ಪಿ.ಬಿ.ಹಸನ್ ಹಾಜಿ ಪುತ್ತೂರು, ಕೆ.ಪಿ.ಅಹ್ಮದ್ ಹಾಜಿ ಆಕರ್ಷಣ್ ಪುತ್ತೂರು, ಟಿ.ಎಂ.ಶಹೀದ್ ಅರಂತೋಡು ಸುಳ್ಯ, ಸಿ.ಕೆ.ಇಬ್ರಾಹೀಂ ಮೂಡಿಗೆರೆ, ಇಸ್ಮಾಯೀಲ್ ಹಾಜಿ ನಾರ್ವೆ ಕೊಪ್ಪ, ಎಂ.ಪಿ.ಮೊಯ್ದಿನಬ್ಬ ಪಲಿಮಾರ್ ಉಡುಪಿ ಮತ್ತಿತರರು ಉಪಸ್ಥಿತರಿದ್ದರು.




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ