ಬುಧವಾರ, ಮಾರ್ಚ್ 23, 2011

ಐಪಿಎಸ್ ಅಧಿಕಾರಿ ಲಾಭೂರಾಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌ರಿಗೆ ವರ್ಗಾವಣೆಯಾಗಿದ್ದು, ತೆರವಾಗಿದ್ದ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಲಾಭೂರಾಂರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಿ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.

ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ರನ್ನು ಆಂತರಿಕ ಭದ್ರತಾ ವಿಭಾಗದ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ನೂತನ ಎಸ್ಪಿಯಾಗಿ ಚಿತ್ರದುರ್ಗ ಎಸ್ಪಿಯಾಗಿದ್ದ ಲಾಭೂರಾಂರನ್ನು ನೇಮಕ ಮಾಡಲಾಗಿದೆ. 2004ರ ಗುಂಪಿನ ಐಪಿಎಸ್ ಅಧಿಕಾರಿಯಾಗಿರುವ ಲಾಭೂರಾಂ ತಮ್ಮ ಕ್ಷೇತ್ರ ಮತ್ತು ಪ್ರಾಯೋಗಿಕ ತರಬೇತಿಗೆ 2006ರಲ್ಲಿ ದ.ಕ. ಜಿಲ್ಲೆ ಯಲ್ಲಿ ಸೇರ್ಪಡೆಗೊಂಡಿದ್ದರು. ಅಲ್ಲದೇ ಈ ಹಿಂದೆ ಉಡುಪಿ ಜಿಲ್ಲೆಯ ಪ್ರಭಾರಿ ಎಸ್ಪಿಯಾಗಿ ಮತ್ತು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಲ್ಲೂ ಅವರು ಸೇವೆ ಸಲ್ಲಿಸಿದ್ದಾರೆ.

 ಮೂಲತಃ ರಾಜಸ್ಥಾನದ ಬರ್ಮಾರ್ ಜಿಲ್ಲೆಯವರಾದ ಲಾಭೂರಾಂ, ಬಿಎಸ್ಸಿ ಪದವೀಧರರಾಗಿದ್ದು, ಪದವಿ ಶಿಕ್ಷಣದ ನಂತರ 2003ರಲ್ಲಿ ಮೊದಲ ಪ್ರಯತ್ನ ದಲ್ಲೇ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆ ಯಾಗಿದ್ದರು. 2004ರಲ್ಲಿ ಪೊಲೀಸ್ ಸೇವೆಗೆ ಸೇರಿಕೊಂಡರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ