ನೂತನ ವಾದಗಳಿಂದ ಪರಂಪರಾಗತವಾಗಿ ಅನುಸರಿಸಿಕೊಂಡು ಬಂದಿರುವ ಧಾರ್ಮಿಕ ನಂಬಿಕೆಗಳಿಗೆ ತೊಡಕಾಗು ತ್ತಿದ್ದು, ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮತ್ತು ವೈಷಮ್ಯ ಸೃಷ್ಟಿಯಾಗುತ್ತಿದೆ. ಇದನ್ನು ತಡೆಯಲು ಸಂಘಟಿತ ಹೋರಾಟ ನಡೆಸಬೇಕು ಎಂದು ಸಮಸ್ತದ ಕೇಂದ್ರ ಸಮಿತಿಯ ಕಾರ್ಯದರ್ಶಿ ಕೋಟುಮಲ ಬಾಪು ಮುಸ್ಲಿಯಾರ್ ಹೇಳಿದ್ದಾರೆ. ಉಪ್ಪಿನಂಗಡಿಯ ಶಂಸುಲ್ ಉಲಮಾ ನಗರದ ಶಹೀದ್ ಸಿ.ಎಂ. ಉಸ್ತಾದ್ ವೇದಿಕೆಯಲ್ಲಿ ರವಿವಾರ ನಡೆದ ಸುನ್ನಿ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೂತನವಾದದ ಮೂಲಕ ಅಹ್ಲ್ ಸುನ್ನತ್ ವಲ್ ಜಮಾಅತ್‌ನ ಆಚಾರ ವಿಚಾರಗಳಿಗೆ ತೊಡಕು ಉಂಟು ಮಾಡುವ ಷಡ್ಯಂತ್ರ ನಡೆಯುತ್ತಿದೆ. ಈ ಮೂಲಕ ಸಮಸ್ತ ಸಂಘಟನೆಯಲ್ಲಿರುವ ಸತ್ಯ ವಿಶ್ವಾಸಿಗಳ ಚಿಂತನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಪ್ರವಾದಿ ಕಾಲದಲ್ಲಿ ಇಸ್ಲಾಮ್ ಪರಿಪೂರ್ಣಗೊಂಡು ಅವತೀರ್ಣವಾ ಗಿದೆ ಎಂದ ಅವರು, ಬಳಿಕ ಅದಕ್ಕೆ ತಿದ್ದುಪಡಿ ತರುವ ಅಥವಾ ಬದಲಾವಣೆ ಗೊಳಿಸುವ ಅವಕಾಶವಿಲ್ಲ. ಪ್ರವಾದಿ ಯವರ ಮೂಲಕ ಅವತೀರ್ಣಗೊಂಡಿ ರುವ ಕುರ್‌ಆನ್ ಮತ್ತು ಪ್ರವಾದಿ ವಚನಗಳೊಂದಿಗೆ, ಪ್ರವಾದಿಗಳ ಚರ್ಯೆಯನ್ನು ಗಟ್ಟಿಗೊಳಿಸುವ ಮೂಲಕ ಪಾರತ್ರಿಕ ಶಾಂತಿ ಕಾಣಲು ಸಾಧ್ಯ ಎಂದು ಅವರು ಹೇಳಿದರು. ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಸಮಸ್ತ ಜಿಲ್ಲಾ ಮುಶಾವರದ ಅಧ್ಯಕ್ಷ ಎನ್‌ಪಿಎಂ ಝೈನುಲ್ ಆಬಿದೀನ್ ತಂಙಳ್ ದಿಕ್ಸೂಚಿ ಭಾಷಣ ಮಾಡಿದರು. ಕುಂಬೋಲ್ ಅಲಿ ತಂಙಳ್ ದುವಾ ಮಾಡಿದರು. ಎಸ್.ಬಿ.ಮುಹಮ್ಮದ್ ದಾರಿಮಿ ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಕುರ್‌ಆನ್ ವಿದ್ವಾಂಸ ರಹ್ಮತುಲ್ಲಾಹ್ ಖಾಸಿಮಿ ಮುತ್ತೇಡಂ ಸಮಾರೋಪ ಭಾಷಣ ಮಾಡಿದರು.
ವೇದಿಕೆಯಲ್ಲಿ ಆತೂರು ಮುದರ್ರಿಸ್ ಇಬ್ರಾಹೀಂ ಅಲ್‌ಹಾದಿ ತಂಙಳ್, ಸಮಸ್ತ ಮುಶಾವರದ ಕೇಂದ್ರ ಸಮಿತಿಯ ಸದಸ್ಯ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಅಬ್ದುಲ್ ಖಾದರ್ ಮುಸ್ಲಿಯಾರ್ ಪಯ್ಯಕ್ಕಿ ಉಸ್ತಾದ್, ಅರಂತೋಡು ಮುದರ್ರಿಸ್ ಡಾ.ಕೆ.ಎಂ.ಶಾಹ್ ಮುಸ್ಲಿಯಾರ್, ಜಿಲ್ಲಾ ಸಮಸ್ತ ಕಾರ್ಯದರ್ಶಿ ಬಿ.ಕೆ. ಅಬ್ದುಲ್ ಖಾದರ್ ಅಲ್‌ಖಾಸಿಮಿ, ಅನಸ್ ಮುತ್ತುಕೋಯ ತಂಙಳ್ ಕಾಯರ್‌ತೋಟ, ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಹಾಜಿ ಹುಸೈನ್ ಕೊಡಾಜೆ, ಜಿಲ್ಲಾ ಎಸ್ಕೆಎಸ್ಸೆಸೆಫ್ ಅಧ್ಯಕ್ಷ ಅಬ್ಬಾಸ್ ದಾರಿಮಿ, ಎ.ಕೆ.ಅಬ್ದುಲ್ ದಾರಿಮಿ ಕುಕ್ಕಿಲ, ಉಮರ್ ದಾರಿಮಿ ಸಾಲ್ಮರ, ಸಿರಾಜುದ್ದೀನ್ ಪೈಝಿ ಬಪ್ಪಳಿಗೆ, ಇಸ್ಮಾಯೀಲ್ ದಾರಿಮಿ ಗಂಡಿಬಾಗಿಲು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಮತ್ತು ಕೆಎಂಎ ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು. ಕೂಟೇಲು ದರ್ಗಾದ ಬಳಿಯಿಂದ ಶಂಸುಲ್ ಉಲಮಾ ನಗರದ ತನಕ ರ್ಯಾಲಿ ನಡೆಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ