ಗುರುವಾರ, ಮಾರ್ಚ್ 17, 2011

ಸಂಸದರ ಖರೀದಿ!: ಯುಪಿಎ ಸರಕಾರದ ಮೇಲೆ ವಿಕಿಲೀಕ್ಸ್ ಬಾಂಬ್ -ಸಂಸತ್‌ನಲ್ಲಿ ಕೋಲಾಹಲ

ಹೊಸದಿಲ್ಲಿ, ಮಾ.17: ಅಮೆರಿಕ ದೊಂದಿಗಿನ ಪರಮಾಣು ಒಪ್ಪಂದ ವಿವಾದದಲ್ಲಿ ಕೇಂದ್ರದ ಯುಪಿಎ ಸರಕಾರ 2008ರಲ್ಲಿ ವಿಶ್ವಾಸ ಮತವನ್ನು ಎದುರಿಸಬೇಕಾದ ಅನಿವಾರ್ಯ ಉಂಟಾಗಿದ್ದ ವೇಳೆ, ಕಾಂಗ್ರೆಸ್ ನಾಯಕ ಸತೀಶ್ ಶರ್ಮಾರ ಸಹಾಯಕನೊಬ್ಬ ಅಮೆರಿಕ ದೂತಾವಾಸದ ಉದ್ಯೋಗಿಯೊಬ್ಬನಿಗೆ ‘ಹಣದಿಂದ ತುಂಬಿದ್ದ ಎರಡು ಪೆಟ್ಟಿಗೆಗಳನ್ನು’ ತೋರಿಸಿ,
ಎನ್‌ಡಿಎ ನಾಯಕರಾದ ಎಲ್.ಕೆ. ಅಡ್ವಾಣಿ, ಸುಶ್ಮಾ ಸ್ವರಾಜ್, ಶರದ್ ಯಾದವ್ ಹಾಗೂ ಅರುಣ್ ಜೇಟ್ಲಿ ಗುರುವಾರ ಸಂಸದ್ಭವನದಲ್ಲಿ ಪತ್ರಿಕಾಗೋಷ್ಠಿಯೊಂದನ್ನುದ್ದೇಶಿಸಿ ಮಾತನಾಡುತ್ತಿರುವುದು.
ೆಲವು ಸಂಸದರ ಬೆಂಬಲ ‘ಖರೀದಿಸಲು’ ರೂ.50-60 ಕೋಟಿ ಸಿದ್ಧವಾಗಿದೆಯೆಂದು ತಿಳಿಸಿದ್ದನೆಂದು ವಿಕಿಲೀಕ್ಸ್ ಬಹಿರಂಗಪಡಿಸಿದೆ. 2008ರ ಜು.22ರ ವಿಶ್ವಾಸಮತ ಯಾಚನೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಯಂತ್ರಾಂಗ ತೆರೆಯ ಮರೆಯಲ್ಲಿ ಅವಧಿ ಮೀರಿ ಕೆಲಸ ಮಾಡುತ್ತಿತ್ತು ಎಂದಿರುವ ವಿಕಿಲೀಕ್ಸ್ ಕೇಬಲ್, ಕಾಂಗ್ರೆಸ್ ನಾಲ್ವರು ಆರ್‌ಎಲ್‌ಡಿ ಸಂಸದರಿಗೆ ತಲಾ ರೂ. 10 ಕೋಟಿ ಪಾವತಿಸಿತ್ತೆಂದು ಆರೋಪಿಸಿದೆ.
ಈ ವಿಷಯವನ್ನು ಶರ್ಮಾರ ಸಹಾಯಕ ನಚಿಕೇತ ಕಪೂರ್ ಎಂಬಾತ 2008ರ ಜು.16ರಂದು ಅಮೆರಿಕನ್ ದೂತಾವಾಸದ ಉದ್ಯೋಗಿ ಯೊಬ್ಬನಿಗೆ ತಿಳಿಸಿದ್ದನೆಂದು ಅದು ಹೇಳಿದೆ. ಹಣದ ವಿಷಯ ದೊಡ್ಡ ಸಮಸ್ಯೆಯೇ ಅಲ್ಲ. ಆದರೆ, ಹಣ ಪಡೆದ ಸಂಸದರು ಸರಕಾರದ ಪರವಾಗಿ ಮತದಾನ ಮಾಡುವುದನ್ನು ಖಚಿತಪಡಿಸುವುದು ಮುಖ್ಯ ವಿಷಯವಾಗಿದೆ ಎಂದು ಕಪೂರ್ ಆತನಲ್ಲಿ ಹೇಳಿದ್ದನೆಂದು 2008ರ ಜು.17ರಂದು ಅಮೆರಿಕದ ರಾಜ್ಯಾಂಗ ಇಲಾಖೆಗೆ ಇಲ್ಲಿನ ಅಮೆರಿಕನ್ ದೂತಾವಾಸದಿಂದ ಕಳುಹಿಸಲಾಗಿದ್ದ ಕೇಬಲ್‌ನಲ್ಲಿ ತಿಳಿಸಲಾಗಿತ್ತೆನ್ನಲಾಗಿದೆ. ವಿಶ್ವಾಸ ಮತದಲ್ಲಿ ಯುಪಿಎ ಸರಕಾರದ ವಿಜಯಕ್ಕಾಗಿ ತಾನು ಹಾಗೂ ಇತರರು ಕಠಿಣವಾಗಿ ಕೆಲಸ ಮಾಡು ತ್ತಿದ್ದೇವೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿಕಟ ಮಿತ್ರನೆನ್ನಲಾಗಿರುವ ಶರ್ಮಾ, ಅಮೆರಿಕದ ರಾಜಕೀಯ ಸಲಹೆಗಾರ ರೊಬ್ಬರಿಗೆ ತಿಳಿಸಿದ್ದರೆಂದು ಕೇಬಲ್ ಆರೋಪಿಸಿದೆ.
ವಾಣಿಜ್ಯ ಹಾಗೂ ಉದ್ಯಮ ಸಚಿವ ಕಮಲನಾಥ ಕೂಡ ‘ದಾನ’ ನೀಡುವು ದರಲ್ಲಿ ಬಹಳ ಕೆಲಸ ಮಾಡಿದ್ದಾರೆಂದು ಕಾಂಗ್ರೆಸ್‌ನ ಇನ್ನೊಬ್ಬ ನಾಯಕ ಅಮೆರಿಕನ್ ರಾಜತಂತ್ರಜ್ಞ ನೊಡನೆ ಹೇಳಿದ್ದರೆಂದೂ ಅದು ಉಲ್ಲೇಖಿಸಿದೆ. ಮೊದಲು ಅವರು ಸಣ್ಣ ವಿಮಾನಗಳನ್ನಷ್ಟೇ ಕೊಡಬಲ್ಲವರಾಗಿ ದ್ದರು. ಈಗ ಅವರು ಮತದಾರರಿಗೆ ಜೆಟ್ ವಿಮಾನಗಳನ್ನು ಕೊಡಲು ಶಕ್ತರೆಂದು ಆ ನಾಯಕ ಹೇಳಿ ದ್ದರೆನ್ನಲಾಗಿದೆ. ಪ್ರಧಾನಿ ಮನಮೋಹನ ಸಿಂಗ್ ಮತ್ತಿತರರು ಅನಿವಾಸಿ ಭಾರತೀಯ ಉದ್ಯಮಿ ಸಂತ ಚತ್ವಾಲ್ ಮೂಲಕ ಅಕಾಲಿ ದಳದ 8 ಸಂಸದರ ಮತ ಖರೀದಿಸಲು ಪ್ರಯತ್ನ ನಡೆಸಿದ್ದರು. ಆದರೆ ದುರದೃಷ್ಟವಶಾತ್ ಅದು ಸಫಲವಾಗಲಿಲ್ಲವೆಂದು ಶರ್ಮಾ ಅಮೆರಿಕದ ರಾಜಕೀಯ ಸಲಹೆಗಾರನಿಗೆ ತಿಳಿಸಿದ್ದರೆಂದು ಹೇಳಲಾಗಿದೆ.
ಶಿವಸೇನೆಯ 12 ಸಂಸದರು ಮತದಾನಕ್ಕೆ ಗೈರು ಹಾಜರಾಗುವಂತೆ ಪ್ರಚೋದಿಸುವ ಪ್ರಯತ್ನ ನಡೆಯುತ್ತಿದೆ. ವಿವಿಧ ಕಾಂಗ್ರೆಸ್ ನಾಯಕರು ವಿವಿಧ ಗುಂಪುಗಳಲ್ಲಿ ಕೆಲಸ ಮಾಡುತ್ತಿದ್ದು, ರಾಹುಲ್ ಗಾಂಧಿ ವೈಯಕ್ತಿಕವಾಗಿ ಉಮರ್ ಅಬ್ದುಲ್ಲಾರ ಬೆಂಬಲ ಪಡೆಯಲು ಪ್ರಯತ್ನಿಸುತ್ತಿ ದ್ದಾರೆಂದು ಶರ್ಮಾ ಹೇಳಿದ್ದರೆಂದು ವಿಕಿಲೀಕ್ಸ್ ತಿಳಿಸಿದೆ. ಬಿಜೆಪಿ ಸಂಸದರನ್ನು ವಿಭಜಿಸಲು ಪ್ರಯತ್ನಿಸುವಂತೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಅಳಿಯ ರಂಜನ್ ಭಟ್ಟಾಚಾರ್ಯರ ಮನವೊಲಿಸುವ ಸಾಧ್ಯತೆಯ ಕುರಿತಾಗಿಯೂ ತಾನು ಪ್ರಯತ್ನ ನಡೆಸುತ್ತಿರುವೆನೆಂದು ಶರ್ಮಾ ತಿಳಿಸಿದ್ದರೆನ್ನಲಾಗಿದೆ. ತಮ್ಮ ಅಂದಾಜಿನಂತೆ ಸರಕಾರದ ಪರ 273, ವಿರುದ್ಧ 251 ಮತಗಳು ಬೀಳಬಹುದು ಹಾಗೂ 19 ಮಂದಿ ಗೈರು ಹಾಜರಾಗಬಹುದು. ಯುಪಿಎ ಸರಕಾರ ಅಲ್ಪ ಬಹುಮತದಿಂದ ಬಚಾವಾಗಬಹುದೆಂದು ರಾಜತಾಂತ್ರಿಕ ಕೇಬಲ್ ಅಮೆರಿಕ ಸರಕಾರಕ್ಕೆ ತಿಳಿಸಿತ್ತೆಂದು ಹೇಳಲಾಗಿದೆ.
ವಿಶ್ವಾಸ ಮತದಲ್ಲಿ ಸರಕಾರದ ಪರ 275, ವಿರುದ್ಧವಾಗಿ 256 ಮತಗಳು ಬಿದ್ದಿದ್ದವು ಹಾಗೂ 10 ಸದಸ್ಯರು ಗೈರು ಹಾಜರಾಗಿದ್ದರು. ವಿಶ್ವಾಸ ಮತ ಯಾಚನೆಗೆ ಸ್ವಲ್ಪ ಮೊದಲು ಬಿಜೆಪಿಯ ಕೆಲ ಸಂಸದರು, ಮತಗಳ ಖರೀದಿಗೆ ಸರಕಾರ ಬಳಸಿತ್ತೆನ್ನಲಾದ ಅಪಾರ ಮೊತ್ತದ ಹಣವನ್ನು ಸದನದಲ್ಲಿ ಪ್ರದರ್ಶಿಸಿದ್ದರು. ಈ ಬಗ್ಗೆ ಸಂಸದೀಯ ಸಮಿತಿಯಿಂದ ತನಿಖೆ ನಡೆಸಲಾಯಿತಾದರೂ ಪ್ರಮುಖ ಆರೋಪಿಗಳಾಗಿದ್ದ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಹಾಗೂ ಸೋನಿಯಾರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲರ ವಿರುದ್ಧ ಯಾವುದೇ ಪ್ರಬಲ ಸಾಕ್ಷ ದೊರೆತಿರಲಿಲ್ಲ. ಈ ಬಗ್ಗೆ ಸಿಬಿಐ ತನಿಖೆಗೆ ಸಮಿತಿಯ ಮುಖ್ಯಸ್ಥ ಕಿಶೋರ್ ಚಂದ್ರದೇವ್ ಶಿಫಾರಸು ಮಾಡಿದ್ದರು.
ಅಡ್ಡಗೋಡೆಯ ಮೇಲೆ ದೀಪವಿಟ್ಟ ಸರಕಾರ
ಹೊಸದಿಲ್ಲಿ, ಮಾ.17: ವಿಶ್ವಾಸ ಮತ ಯಾಚನೆಯ ವೇಳೆ ಸಂಸದರಿಗೆ ಲಂಚ ನೀಡಿರುವ ಕುರಿತಾದ ವಿಕಿಲೀಕ್ಸ್ ವರದಿಯನ್ನು ದೃಢಪಡಿಸಲಾರೆ ಅಥವಾ ತಳ್ಳಿ ಹಾಕಲಾರೆನೆಂದು ಕೇಂದ್ರದ ಯುಪಿಎ ಸರಕಾರ ಇಂದು ಹೇಳಿದೆ.
ರಾಜ್ಯಸಭೆಯಲ್ಲಿಂದು ಈ ವಿಚಾರದಲ್ಲಿ ಗದ್ದಲ ನಡೆದಾಗ, ಈ ಕೇಬಲ್‌ಗಳು ಒಂದು ಸಾರ್ವಭೌಮ ಸರಕಾರ ಹಾಗೂ ಅದರ ವಿದೇಶಿ ದೂತಾವಾಸಗಳ ನಡುವಿನ ಪತ್ರ ವ್ಯವಹಾರವಾಗಿದೆ. ಅವರಿಗೆ ರಾಜತಾಂತ್ರಿಕ ಭದ್ರತೆಯಿದೆ. ವರದಿಯನ್ನು ದೃಢಪಡಿಸುವುದಾಗಲಿ, ನಿರಾಕರಿಸುವುದಾಗಲಿ ಸರಕಾರದಿಂದ ಸಾಧ್ಯವಿಲ್ಲವೆಂದು ಕೇಂದ್ರ ವಿತ್ತ ಸಚಿವ ಪ್ರಣವ್ ಮುಖರ್ಜಿ ತಿಳಿಸಿದರು. ಈ ಆರೋಪಗಳು 14ನೆ ಲೋಕಸಭೆಗೆ ಸಂಬಂಧಿಸಿದವು ಗಳಾಗಿವೆ. ಆದರೆ ಈಗಿನ ಸರಕಾರ 15ನೆ ಲೋಕಸಭೆಗಷ್ಟೇ ಹೊಣೆಯಾಗಿದೆಯೆಂದು ಅವರು ಹೇಳಿದರು.ವರ್ತಮಾನ ಪತ್ರಿಕೆಯ ಆರೋಪವನ್ನು ಯಾವುದೇ ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಸಾಧ್ಯವೇ? ಎಂದು ಮುಖರ್ಜಿ ವಿಪಕ್ಷ ನಾಯಕ ಅರುಣ್ ಜೇಟ್ಲಿಯವರನ್ನು ಪ್ರಶ್ನಿಸಿದರು.
ಶರ್ಮಾ ನಿರಾಕರಣೆ
ಹೊಸದಿಲ್ಲಿ, ಮಾ.16: ಕಳೆದ 2008ರ ವಿಶ್ವಾಸಮತ ಯಾಚನೆಯ ವೇಳೆ ತನ್ನ ಪರ ಬೆಂಬಲ ಗಳಿಸಲು ಯುಪಿಎ ಸರಕಾರ ಸಂಸದರಿಗೆ ಕೋಟ್ಯಂತರ ರೂ. ಲಂಚ ನೀಡಿತ್ತೆಂದು ವಿಕಿಲೀಕ್ಸ್ ಬಹಿರಂಗ ಪಡಿಸಿದ ಕೇಬಲ್‌ಗಳಲ್ಲಿ ಹೆಸರು ಕಾಣಿಸಿಕೊಂಡಿರುವ ಕಾಂಗ್ರೆಸ್ ನಾಯಕ ಸತೀಶ್ ಶರ್ಮಾ ಸಹಿತ ಇಬ್ಬರು ಪ್ರಮುಖ ಪಾತ್ರಧಾರಿಗಳು, ಇದರಲ್ಲಿ ತಮ್ಮ ಪಾತ್ರವಿರುವುದನ್ನು ಗುರುವಾರ ನಿರಾಕರಿಸಿದ್ದಾರೆ.
ಆರೋಪಕ್ಕೆ ಪ್ರತಿಕ್ರಿಯಿಸಿದ ಶರ್ಮಾ, ತನಗೆ ನಚಿಕೇತ ಕಪೂರ್ ಹೆಸರಿನ ಯಾವನೇ ಸಹಾಯಕನಿಲ್ಲ. ಈ ಆರೋಪ ನಿರಾಧಾರ ಎಂದಿದ್ದಾರೆ.ತಾನು ಈ ಕುರಿತು ‘ಹಿಂದೂ’ ದಿನಪತ್ರಿಕೆಯಲ್ಲಿ ಓದಿದೆ. ಆದರೆ, ಅದರಲ್ಲಿ ತಿಳಿಸಿರುವಂತೆ ನಚಿಕೇತ ಕಪೂರ್ ಹೆಸರಿನ ಸಹಾಯಕ ತನಗಿಲ್ಲವೆಂದು ಅವರು ಹೇಳಿದ್ದಾರೆ. ಕಪೂರ್ ಸಹ ಈ ಆರೋಪ ನಿರಾಕರಿಸಿದ್ದು, ಇಂತಹ ಮಾನಹಾನಿಕರ ಆಪಾದನೆಗಳನ್ನು ಬಲವಾಗಿ ಖಂಡಿಸುವೆನೆಂದು ತಿಳಿಸಿದ್ದಾರೆ. ತಾನು ಅಮೆರಿಕನ್ ರಾಜತಾಂತ್ರಿಕನನ್ನು ಭೇಟಿಯಾದುದು ಹಾಗೂ ಹಣದ ಪೆಟ್ಟಿಗೆಗಳನ್ನು ತೋರಿಸಿದುದು ಸುಳ್ಳೆಂದು ಅವರು ಹೇಳಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ