ಸೋಮವಾರ, ಮಾರ್ಚ್ 14, 2011

ಕತಾರ್ ಫ್ರಿಟರ್ನಿಟಿ ಫಾರಂ ವತಿಯಿಂದ ಮಾಧ್ಯಮ ವಿಚಾರ ಸಂಕಿರಣ







ಭಾರತೀಯ ಸಮಾಜದಲ್ಲಿ ಮಾಧ್ಯಮದ ಪ್ರಾಮುಖ್ಯದ ಬಗ್ಗೆ ವಿಚಾರ ಸಂಕಿರಣವನ್ನು ಕತಾರ್ ಇಂಡಿಯನ್ ಫ್ರಿಟರ್ನಿಟಿ  ಫಾರಂ ಇತ್ತೇಚೆಗೆ ಅನಿವಾಸಿ ಭಾರತೀಯರಿಗಾಗಿ ಆಯೋಜಿಸಿತ್ತು. ಕರ್ನಾಟಕ ಅನಿವಾಸಿ ಭಾರತೀಯ ಸಮಾಜದ ಸದಸ್ಯ ಮಮ್ತಾಜ್ ಹುಸೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮ ರಂಗದಲ್ಲಿ ಮುಸ್ಲಿಂ ಪ್ರಾತಿನಿಧ್ಯ ಬಹಳ ಹಿಂದಿದ್ದು, ಮುಸ್ಲಿಂ ಯುವಕರು ಪತ್ರಿಕಾರಂಗದಲ್ಲಿ ಹೆಚ್ಹಿನ ಮುತುವರ್ಜಿ ವಹಿಸಬೇಕೆಂದು ಅವರು ಅಭಿಪ್ರಾಯಪಟ್ಟರು.



ಮುಖ್ಯ ಅತಿತಿಯಾಗಿದ್ದ ಖ್ಯಾತ ಸಮಾಜ ಸೇವಕ ಎಂ. ಇಕ್ಬಾಲ್ ಮಣ್ಣ ಮಾತನಾಡಿ ಮುಸ್ಲಿಂ ಸಮಾಜದಲ್ಲಿ ಮಾಧ್ಯಮದ ಭಾಗವಹಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಸ್ತುತ ಕಾರ್ಯಕ್ರಮವನ್ನು ಶ್ಲಾಗ್ಗ್ಹಿಸಿದರು.ಮುಖ್ಯ ಅತಿಥಿ ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಜ್ಹಾಕ್ ಕೆಮ್ಮಾರ ಮಾತನಾಡಿ ವಿಶ್ವ ದ ಅತ್ಯಂತ ಉತಮ ಮಾಧ್ಯಮ ಕುರಾನ್ ಆಗಿಧೆಯೆಂದು ಬನ್ನ್ಹಿಸಿದರು.ಪ್ರಸ್ತುತ ಪಾಕ್ಷಿಕದ ಸಂಪಾದಕ ಅಸ್ಲಂ ಹಸನ್, ಕತಾರ್ ಫ್ರಿತ್ತೆರ್ನಿಟಿ ಫಾರಂ ಅಧ್ಯಕ್ಷ ಜಫರ್ ಅಹ್ಮದ್ , ಫಾರಂ ನ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಅಜೇಜ್ ಸುಭಾನ್ ಶಿಮೊಗ ಮತ್ತು ಸುಲೈಮಾನ್ ಕೊಡ್ಲಿಪೇಟೆ ವೇದಿಕೆಯಲ್ಲಿ ಉಪಸ್ತಿತರಿದ್ದರು.



ನಜೀರ್ ಪಾಶ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಲತೀಫ್ ಮಡಿಕೇರಿ ಪ್ರಾರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ನಜೀರ್ ಹಳೆಯಂಗಡಿ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ