ಮಂಗಳವಾರ, ಮಾರ್ಚ್ 01, 2011

ಮಹದನಿ ಬಂಧನದ ಹಿಂದಿನ ನಿಗೂಢ ಸಂಚನ್ನು ಬಯಲಿ ಗೆಳೆಯಬೇಕು: ಪಿಡಿಪಿ

ಕಾಸರಗೋಡು: ತಮ್ಮ ವರಿಷ್ಠ ಮುಂದಾಳು, ನಿರಪರಾಧಿ ಮಹದನಿ  ಪ್ರಕರ ಣವನ್ನು ಕರ್ನಾಟಕದಿಂದ ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕೆಂದು ಹಾಗೂ ಅನ್ಯಾಯದ ಬಂಧನದ ಹಿಂದಿನ ನಿಗೂಢ ಸಂಚನ್ನು ಬಯಲಿ ಗೆಳೆಯಬೇಕು ಎಂದು ಪಿಡಿಪಿ ಕಾರ‍್ಯನಿರ್ವಹಣಾ ಸದಸ್ಯ ನಿಸಾರ್ ಮೊತ್ತರ್ ಒತ್ತಾಯಿಸಿದ್ದಾರೆ.
ಮಹದನಿ   ಬಂಧನ ವಿರುದ್ಧ ಪಕ್ಷ ರಾಜ್ಯಮಟ್ಟದಲ್ಲಿ ನಡೆಸುತ್ತಿರುವ ಆಂದೋಲನದ ಅಂಗವಾಗಿ ಜರಗಿದ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಮುತ್ತಿಗೆಂiiನ್ನು ಉದ್ಘಾಟಿಸಿ ನಿಸಾರ್ ಮೊತ್ತಾರ್ ಮಾತನಾಡಿದರು. ಮುಂದಿನ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಿಡಿಪಿ ನಿರ್ಣಾಯಕ ಶಕ್ತಿಯಾಗಿ ಮೂಡಿಬರಲಿದೆ. ಮದನಿ ವಿರುದ್ಧ ಅತ್ಯಂತ ಹೀನ ಕ್ರಮದ ವಿರುದ್ಧ ಕೇರಳದ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವರೆಂದು ಅವರು ಹೇಳಿದರು.
ಹಿರಿಯ ನಾಯಕ ಸಲೀಂ ತಡನ್ನ ಪ್ರತಿಜ್ಞೆ ಬೋಧಿಸಿದರು. ಎಸ್.ಎಂ.ಬಶೀರ್, ಅಂಬಲತ್ತರ ಕುಂಞಿಕೃಷ್ಣನ್ , ಮಹಮ್ಮದ್ ಪಾರೆಕಟ್ಟ ಮೊದಲಾದವರು ಇದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ