ಮಂಗಳವಾರ, ಮಾರ್ಚ್ 01, 2011

ರವಿ ಅಲಿಯಾಸ್ ಟಿಕ್ಕಿ ರವಿ ಅಲಿಯಾಸ್ ಅಣ್ಣಪ್ಪ ಸ್ವಾಮಿ, ನಾಗ ಅಲಿಯಾಸ್ ನಾಗರಾಜ ಪೂಜಾರಿ, ತಿಲಕ್‌ರಾಜ್ ಶೆಟ್ಟಿ, ಚೇತನ್ ಅಲಿ ಯಾಸ್ ಚೇತು, ಸಹನ್ ಅಲಿಯಾಸ್ ಶಾನ್, ಲೋಕೇಶ್ ಅಲಿಯಾಸ್ ಲೋಕು

ಗುರುಪುರದ ಕಬೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ನಿನ್ನೆ ಸಂಜೆ ದಸ್ತಗಿರಿ ಮಾಡಲಾಗಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿರುವ ಸ್ಕಾರ್ಪಿಯೊ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
 









ರವಿ ಅಲಿಯಾಸ್ ಟಿಕ್ಕಿ ರವಿ ಅಲಿಯಾಸ್ ಅಣ್ಣಪ್ಪ ಸ್ವಾಮಿ, ನಾಗ ಅಲಿಯಾಸ್ ನಾಗರಾಜ ಪೂಜಾರಿ, ತಿಲಕ್‌ರಾಜ್ ಶೆಟ್ಟಿ, ಚೇತನ್ ಅಲಿ ಯಾಸ್ ಚೇತು, ಸಹನ್ ಅಲಿಯಾಸ್ ಶಾನ್, ಲೋಕೇಶ್ ಅಲಿಯಾಸ್ ಲೋಕು ಬಂಧಿತ ಆರೋಪಿಗಳು.
ಮೂಲತಃ ಹಾವೇರಿಯವನಾಗಿರುವ ರವಿ, ಪ್ರಸ್ತುತ ಮಂಗಳೂರಿನಲ್ಲಿ ಲ್ಯಾಂಡ್ ಲಿಂಕ್ಸ್ ವ್ಯವಹಾರ ನಡೆಸುತ್ತಿದ್ದಾನೆ. ನಾಗ ಪೂಜಾರಿ ಮುಲ್ಕಿಯವನಾಗಿದ್ದು ತೊಕ್ಕೊಟ್ಟಿನಲ್ಲಿ ಹೂವಿನ ವ್ಯಾಪಾರಿ. ತೋಕೂರು ನಿವಾಸಿಗಳಾದ ತಿಲಕ್ ರಾಜ್ ಶೆಟ್ಟಿ ಮತ್ತು ಲೋಕೇಶ್ ಪೈಂಟರ್‌ಗಳಾಗಿದ್ದು, ಕೋಡಿಕೆೆ ನಿವಾಸಿ ಚೇತು ವೃತ್ತಿಯಲ್ಲಿ ಚಾಲಕನಾ
ಗಿದ್ದಾನೆ. ಇವರೆಲ್ಲರೂ 25ರಿಂದ 30 ವರ್ಷದೊಳಗಿನವರು. ಉಳ್ಳಾಲದ ನಿವಾಸಿ ಸಹನ್ ಯಾನೆ ಶಾನ್ 19 ವರ್ಷದವನಾಗಿದ್ದು, ವಿದ್ಯಾರ್ಥಿ ಎಂದು ತಿಳಿದು ಬಂದಿರುವುದಾಗಿ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಚೇತನ್ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಒಂದು, ಸುತ್ಕಲ್ ಠಾಣೆಯಲ್ಲಿ ಎರಡು ಪ್ರಕರಣ ಗಳು ದಾಖಲಾಗಿವೆ. ಅದೇ ರೀತಿ ತಿಲಕ್‌ರಾಜ್ ಶೆಟ್ಟಿ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಒಂದು, ಕಾವೂರು ಠಾಣೆಯಲ್ಲಿ ಒಂದು, ಟಿಕ್ಕಿ ರವಿ ಮೇಲೆ ಉರ್ವಾ ಠಾಣೆಯಲ್ಲಿ ಒಂದು, ಕಾವೂರು ಠಾಣೆಯಲ್ಲಿ 4, ಬರ್ಕೆ ಠಾಣೆಯಲ್ಲಿ 5, ಬಂದರು ಠಾಣೆಯಲ್ಲಿ 2 ಹಾಗೂ ಲೋಕೇಶ್ ಮೇಲೆ ಪಣಂಬೂರಿನಲ್ಲಿ 11, ಸುರತ್ಕಲ್ ಠಾಣೆಯಲ್ಲಿ 2, ನಾಗರಾಜನ ಮೇಲೆ ಉಪ್ಪಿನಂಗಡಿ ಹಾಗೂ ಪಣಂಬೂರಿನಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಈ ಎಲ್ಲಾ ಪ್ರಕರಣಗಳು ಕೊಲೆ, ಕೊಲೆ ಯತ್ನ, ಹಲ್ಲೆ ಮತ್ತು ದೊಂಬಿ ಪ್ರಕರಣಗಳಾಗಿರುತ್ತವೆ ಎಂದು ಅವರು ವಿವರಿಸಿದರು.
ಗುರುಪುರದ ಅಕ್ಬರ್ ಕಬೀರ್‌ನನ್ನು ಫೆ.25ರಂದು ಮಧ್ಯಾಹ್ನ 12:30ರ ಸುಮಾರಿಗೆ ಮಾರಕಾಯುಧಗಳಿಂದ ಕೊಲೆಗೈಯಲಾಗಿತ್ತು. ಕಬೀರ್ ತನ್ನ ಸೇಹಿತರಾದ ನಝೀರ್ ಹುಸೈನ್ ಮತ್ತು ಸರ್ಫರಾಝ್ ಎಂಬವರ ಜೊತೆ ೋಟಾರ್ ಸೈಕಲ್‌ನಲ್ಲಿ ಗುರುಪುರ
ದಿಂದ ಬಂಡಸಾಲೆ ಕಡೆಗೆ ಬರುತ್ತಿದ್ದಾಗ ಬೆಜ್ಜೆಬೆಟ್ಟು ಎಂಬಲ್ಲಿ ವಾಮಂಜೂರು ಕಡೆಯಿಂದ ಬಂದ ಆರೋಪಿಗಳು ಸ್ಕಾರ್ಪಿಯೋವನ್ನು ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆಸಿ, ಕಬೀರ್ ಮೇಲೆ ತಲವಾರಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಖಚಿತ ಮಾಹಿತಿಯ ಮೇರೆಗೆ ನಿನ್ನೆ ಸಂಜೆ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆಗೆ ಸಂಬಂಧಿಸಿ ಆರೋಪಿಗಳಿಗೆ ಆರ್ಥಿಕ ನೆರವು, ವಾಹನ ಒದಗಿಸಿರುವವರು ಹಾಗೂ ಹತ್ಯೆ ಸಂಚು ರೂಪಿಸಿರುವ ಕುರಿತಂತೆ ಸಮಗ್ರ ತನಿಖೆ ಪ್ರಗತಿಯಲ್ಲಿದೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ಆರೋಪಿಗಳನ್ನು ಶೀಘ್ರ ಬಂಧಿಸಿರುವ ಪಣಂಬೂರು ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಪುಟ್ಟ ಮಾದಯ್ಯ ನೇತೃತ್ವದ ತಂಡಕ್ಕೆ 10 ಸಾವಿರ ರೂ. ನಗದು ಬಹುಮಾನ ವನ್ನು ಸೀಮಂತ್‌ಕುಮಾರ್ ಸಿಂಗ್ ಈ ಸಂದರ್ಭ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಮುತ್ತೂರಾಯ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ