- ವಿದ್ಯಾರ್ಥಿ ಶಕ್ತಿ ರಾಷ್ಟ್ರವನ್ನು ನಿರ್ಮಾಣ ಮಾಡಬಲ್ಲ ಅದ್ಭುತ ಮೇಧಾವಿಗಳು, ಒಳಿತು ಕೆಡುಕುಗಳೆನ್ನುವುದು ನಮ್ಮ ದೃಷ್ಟಿಕೋನದಲ್ಲಿ ಮತ್ತು ನೋಡುವ ನೋಟದಲ್ಲಿರುವುದು. ಹೀಗಾಗಿ ಪ್ರತಿಯೊಂದರಲ್ಲೂ ಒಳ್ಳೆತನವನ್ನು ಗಮನಿಸಿ ಹಾಗಾದಾಗ ಮಾತ್ರ ನಾವು ನಮ್ಮ ಮನೆಯೂ, ನಮ್ಮ ಪರಿಸರವೂ ಒಳ್ಳೆಯ ದಿಂದಿರಲು ಸಾಧ್ಯ. ಕರ್ನಾಟಕ ಕೇಸರಿಕರಣದಂತೆ ಕಂಡರೆ ಅದಕ್ಕೆ ನಮ್ಮ ಕಣ್ಣೇ ಕಾರಣ ಕೇಸರಿಕರಣದ ಪೊರೆ ಕಳಚಿ ಬರಿಗಣ್ಣಿಂದ ನೋಡಿ ಆಗ ರಾಜ್ಯದಲ್ಲಿ ಬಹುಬಣ್ಣ ಮೇಳೈಸಿರುವುದು ಕಾಣುತ್ತದೆ...ಅಬ್ದುಲ್ ಸಲಾಂ ಪುತ್ತಿಗೆ.
ಮಂಗಳೂರು : ‘ಹಿಂದುತ್ವವಾದ ಎನ್ನುವುದು ದೇಶವನ್ನು ಕಾಡುತ್ತಿರುವ ಮಹಾಪಿಡುಗು. ಮಾತ್ರವಲ್ಲದೆ ಅದು ದೇಶದ ನಂ.೧ ವೈರಿ ಹೀಗೆಂದು ಗುಡು ಗಿದವರು ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ.
‘ಈವರೆಗೆ ಹಿಂದುತ್ವವಾದವನ್ನು ಕಾರಲು ಮಾತ್ರ ಅವಕಾಶವಿದ್ದ ಈ ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ವಿದ್ಯಾರ್ಥಿ ಶಕ್ತಿಯೊಂದು ಸಂಗಮ ಗೊಂಡಿದೆ. ತಾವು ವಿದ್ಯಾರ್ಥಿ ಭವಿಷ್ಯದ ರೂವಾರಿಗಳು ಎಂದು ಬೊಗಳೆ ಬಿಡುತ್ತಾ ವಿದ್ಯಾರ್ಥಿಗಳನ್ನು ಮುಂದಿಟ್ಟು ರಾಜಕೀಯ ಮಾಡುವ ದಗಲ್‌ಬಾಜಿ ಸಂಘಟನೆ ಎಬಿವಿಪಿಯ ಹೆಡೆಮುರಿ ಯಲು ವಿದ್ಯಾರ್ಥಿ ಶಕ್ತಿ ಒಂದಾಗ ಬೇಕು ಎಂದು ಸೋಮಯಾಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನಿನ್ನೆ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಮಾವೇಶದಲ್ಲಿ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ಎ. ಮೊಹಮ್ಮದ್ ಯೂಸುಫ್, ‘ಕರ್ನಾಟಕದ ಉದ್ದ ಗಲವನ್ನು ಗಮನಿಸಿದರೆ ಎಲ್ಲೆಲ್ಲೂ ಕೇಸರಿಯೇ ಕಾಣುತ್ತಿದೆ. ಇದಕ್ಕೆ ಇಲ್ಲಿನ ರಾಜಕೀಯ ವ್ಯವಸ್ಥೆಯೇ ಕಾರ ಣವಾಗಿದೆ. ವಿದ್ಯಾರ್ಥಿ ಸಮುದಾಯ ಇದಕ್ಕೆ ಉತ್ತರ ನೀಡದೆ ಹೋದರೆ ದೇಶದ ಅವನತಿ ಖಂಡಿತಾ ಎಂದರು.
ದೇಶದಲ್ಲಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ವಿವಿಧ ನಿಯೋಗ ಗಳು ಅಧ್ಯಯನ ನಡೆಸಿ ವರದಿ ನೀಡುತ್ತಿದೆ. ಇಂತಹ ಪ್ರತಿಯೊಂದು ವರದಿಯನ್ನು ಗಮನಿಸಿದರೂ ಅವುಗಳು ಹೇಳುತ್ತಿರುವುದು ಒಂದೇ ಮಾತು. ಅದೆಂದರೆ ಈ ದೇಶ ನಮ್ಮ ದಲ್ಲ. ಯಾಕೆಂದರೆ ಅವರ ವರದಿ ಯಲ್ಲಿ ದೇಶಕ್ಕೆ ಪೂರಕವಾಗುವ ಯಾವುದೇ ಮಾಹಿತಿಯೂ ಇರುವು ದಿಲ್ಲ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಉಳ್ಳವರ ಮನೆಯ ಜೀತದಾಳುವಾಗಿದೆ. ಯಾಕೆಂದರೆ ಈ ದೇಶದ ವ್ಯವಸ್ಥೆ ಹಾಗಿದೆ ಎಂದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ