ಭಾನುವಾರ, ಫೆಬ್ರವರಿ 20, 2011

ನಮ್ಮ ಶಕ್ತಿ ಇರುವುದು ಜನಸಂಖ್ಯೆಯಲ್ಲಿ ಅಲ್ಲ’

ಮಂಗಳೂರು: ಹಿಂದೂಗಳ ಮತಾಂತರ ವಿರುದ್ಧ ಸಂಘಪರಿವಾರದ ಮೇಲಿನ ದಾಳಿಯಲ್ಲಿ ಹಿಂದೂ ಸಂಘ ಟನೆಗಳ ಪಾತ್ರ ಇಲ್ಲ ಎಂಬ ವರದಿ ನೀಡಿರುವ ನ್ಯಾಯಮೂರ್ತಿ ಸೋಮ ಶೇಖರ್ ನೀಡಿರುವ ಅಂತಿಮ ವರದಿ ಯನ್ನು ಸರಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸುವ ಸಲುವಾಗಿ ನಿನ್ನೆ ಮಂಗ ಳೂರಿನಲ್ಲಿ ನಡೆದ ಬೃಹತ್ ಪ್ರತಿ ಭಟನೆ ಯಲ್ಲಿ ಸಾವಿರಾರು ಕ್ರೈಸ್ತರು ಪಾಲ್ಗೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದರು.
ಬಡ ಹಿಂದೂಗಳಿಗೆ ಅಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾ ಗುತ್ತಿದೆ ಎಂಬ ಆರೋಪದ ಮೇಲೆ ೨೦೦೮, ಸೆಪ್ಟೆಂಬರ್ ೧೪ ರಂದು ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಚರ್ಚ್‌ಗಳ ಮೇಲೆ ಹಿಂದೂ ಸಂಘಟನೆಗಳ ಕಾರ್ಯ ಕರ್ತರು ದಾಳಿ ನಡೆಸಿ ಶಿಲುಬೆಗಳಿಗೆ ಹಾನಿ ಮಾಡಿದ್ದಲ್ಲದೆ, ಕ್ರೈಸ್ತ ಸನ್ಯಾಸಿನಿಯರ ಮೇಲೂ ಹಲ್ಲೆ ನಡೆಸಲಾಗಿದ್ದು. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ದಾಳಿಯ ಮರುದಿನ ನಡೆದ ಬಂದ್ ಸಂದರ್ಭದಲ್ಲೂ ವ್ಯಾಪಕ ಹಿಂಸಾ ಚಾರ ನಡೆದಿದ್ದು ಇದರಲ್ಲಿ ಪೊಲೀಸರೂ ನೇರ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದು ಮಾಧ್ಯಮಗಳ      ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ಧಿಯಾಗಿದ್ದು ಇದರಿಂದಾಗಿ ರಾಜ್ಯ ಸರಕಾರ ಇಕ್ಕಟ್ಟಿಗೆ ಸಿಲುಕಿತ್ತು. ದಾಳಿಯ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಒತ್ತಾಯ ಕೇಳಿಬಂದ ಸಂದರ್ಭದಲ್ಲಿ ಅದನ್ನು ನಿಭಾಯಿಸಲು ಮುಂದಾದ ಸರಕಾರ ನಿವೃತ್ತ ನ್ಯಾಯಮೂರ್ತಿ ಸೋಮಶೇಖರ್ ನೇತೃತ್ವದ ತನಿಖಾ ತಂಡವನ್ನು ರಚಿಸಿತ್ತು.
ತನಿಖೆ ನಡೆಸಿದ ಸೋಮ ಶೇಖರ್ ಮಧ್ಯಂತರ ವರದಿಯಲ್ಲಿ ದಾಳಿಯ ಹಿಂದೆ ಹಿಂದೂ ಸಂಘಟನೆ ಗಳ ಕೈವಾಡ ಇದೆಯೆಂದು ತಿಳಿಸಿದ್ದರೆ, ಅಂತಿಮ ವರದಿಯಲ್ಲಿ ಅದನ್ನು ಅಲ್ಲಗಳೆದು ಮತಾಂತರದಿಂದ ಬೇಸತ್ತ ಹಿಂದೂಗಳು ಅನಿರೀಕ್ಷಿತವಾಗಿ ದಾಳಿ ನಡೆಸಿದ್ದು ಈ ಸಂದರ್ಭ ಸರಕಾರ ಮತ್ತು ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ ಎಂದು ಸರ್ಟಿಫಿಕೇಟ್ ನೀಡಿತ್ತು.
ವರದಿಯನ್ನು ವಿರೋಧಿಸಿ ಈಗಾ ಗಲೇ ರಾಜ್ಯಾದ್ಯಂತ ಹಲವಾರು ಜಾತ್ಯತೀತ ಸಂಘ-ಸಂಸ್ಥೆಗಳು ಪ್ರತಿ ಭಟನೆ ನಡೆಸಿದ್ದು, ದ.ಕ.ದಲ್ಲೂ ಪ್ರತಿ ಭಟನೆ ನಡೆದಿತ್ತು. ನಿನ್ನೆ ದ.ಕ. ಮತ್ತು ಉಡುಪಿ ಜಿಲ್ಲೆಯ ಕ್ರೈಸ್ತರು ನೆಹರೂ ಮೈದಾನದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದರು. ಇದಕ್ಕೂ ಮೊದಲು ಜ್ಯೋತಿ ವೃತ್ತದಿಂದ ಮುಖಕ್ಕೆ ಕಪ್ಪು ಪಟ್ಟಿ ಧರಿಸಿ, ಕಪ್ಪು ಬಾವುಟ ಹಿಡಿದು ಮೌನ ಮೆರವಣಿಗೆ ನಡೆಸಿದರು.
ನಮ್ಮನ್ನು ಹೆದರಿಸುವ ಲೆಕ್ಕಾಚಾರ ಬಿಟ್ಟುಬಿಡಿ: ಬಿಷಪ್
ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ಪ್ರಾಂತ ಧರ್ಮಗುರು ರೆ.ಫಾ.ಅಲೋಶಿಯಸ್ ಪಾವುಲ್ ಡಿಸೋಜ ಭಾರತದಲ್ಲಿ ಕ್ರೈಸ್ತರು ಅಲ್ಪಸಂಖ್ಯಾತರಾಗಿದ್ದಾರೆ. ಇದೇ ಕಾರಣದಿಂದ ಚರ್ಚ್‌ಗಳ ಮೇಲೆ ಮತ್ತು ಸಮುದಾಯದ ಜನರ ಮೇಲೆ ದಾಳಿ ನಡೆಸಿ ಹೆದರಿಸಿ ಸದೆಬಡಿಯಬಹುದು, ದ್ವಂದ್ವ ವರದಿ ನೀಡುವ ಮೂಲಕ ನಮ್ಮನ್ನು ದಮ ನಿಸಬಹುದು ಎಂಬ ಉದ್ದೇಶವನ್ನು ಇಟ್ಟುಕೊಂಡಿರಬಹುದು. ಇಂತಹ ಉದ್ದೇಶವನ್ನು ಇಟ್ಟುಕೊಂಡವರು ತಮ್ಮ ಲೆಕ್ಕಾಚಾರವನ್ನು ಸರಿಪಡಿಸಿಕೊಳ್ಳಿ. ಏಕೆಂದರೆ ನಾವು ಸತ್ಯಮಾರ್ಗವನ್ನು ಭೋದಿಸಿದ, ದೀನ-ದಲಿತರ, ಶೋಷಿತರ ಸೇವೆಯನ್ನು ಮಾಡಿ ಅದಕ್ಕಾಗಿ ಜೀವ ತೆತ್ತ ಏಸುವನ್ನು ನಂಬುವವರು ಮತ್ತು ಅವರ ಅನುಯಾಯಿಗಳು.
ನಮ್ಮ ಶಕ್ತಿ ಇರುವುದು ಜನಸಂಖ್ಯೆಯಲ್ಲಿ ಅಲ್ಲ. ಬದಲಾಗಿ ನಾವು ನಂಬುತ್ತಿರುವ ಏಸುಸ್ವಾಮಿಯ ನಂಬಿಕೆಯಲ್ಲಿ. ನಮ್ಮನ್ನು ದಮನಿಸುವ ಉದ್ದೇಶದಿಂದ ಚರ್ಚ್‌ಗಳ ಮೇಲೆ ದಾಳಿ ನಡೆಸಿ ಶಿಲುಬೆ ಪುಡಿಮಾಡಿ ಪರಮ ಪ್ರಸಾದಕ್ಕೆ ಅವಮಾನ ಮಾಡಿರಬಹುದು. ಆದರೂ ನಮ್ಮ ವಿಶ್ವಾಸ ಕುಗ್ಗದು. ದಾಳಿಗೆ ಮೊದಲು ನಾವು ಯಾವ ರೀತಿಯಲ್ಲಿ ಏಸು ವಿನ ಅನುಯಾಯಿಗಳಾಗಿದ್ದೇವೆಯೋ ಹಾಗೆ ಈಗಲೂ ಆಗಿದ್ದೇವೆ. ಈಗ ಹಿಂದಿಗಿಂತಲೂ ಹೆಚ್ಚಿನ ಆತ್ಮವಿಶ್ವಾಸ ನಮ್ಮದಾಗಿದೆ ಎಂದು ಸ್ಪೂರ್ತಿಯುತ ಮಾತುಗಳ ಮೂಲಕ ನೆರೆದವರಲ್ಲಿ ಉತ್ಸಾಹ ತುಂಬಿದರು.
ಸತ್ಯದರ್ಶಿನಿ ಸಂಗ್ರಹಿಸಲು ೧೧ಕೋಟಿ ಸಾಲದಾಯಿತೇ: ಮಾಬೆನ್
ಚರ್ಚ್‌ಗಳ ಮೇಲೆ ದಾಳಿ ನಡೆಯಲು ತೆಲುಗು ಭಾಷೆಯಲ್ಲಿ ೩೦ವರ್ಷಗಳ ಹಿಂದೆ ಸೂರ್ಯನಾರಾಯಣ ಪರವಸ್ತು ಎಂಬಾತ ತಯಾರಿಸಿದ ಸತ್ಯದರ್ಶಿನಿ ಎಂಬ ಪುಸ್ತಕವೇ ಕಾರಣವೆಂದೂ ಇದನ್ನು ನ್ಯೂಲೈಫ್ ಸಭೆಯವರು ಜನರಿಗೆ ಹಂಚಿದ್ದಾ ರೆಂದೂ ಸಂಘಪರಿವಾರ ಮತ್ತು ಸರಕಾರದ ಪ್ರಮುಖರು ಸುಳ್ಳು ಮಾಹಿತಿ ನೀಡುತ್ತಾ ಬಂದಿದ್ದಾರೆ. ಆದರೆ ತಾನು ಅಯೋಗದ ಮುಂದೆ ತನಿಖೆಯ ವೇಳೆ ಹಾಜರಾದಾಗ ಸತ್ಯದರ್ಶಿನಿ ಎಂಬ ಪುಸ್ತಕದ ಒಂದು ಪ್ರತಿಯನ್ನು ನೀಡು ವಂತೆ ವಿನಂತಿಸಿದ್ದೆ. ಎರಡು ವರ್ಷ ಗಳವರೆಗೆ ಒಂದೇ ಒಂದು ಅಸಲಿ ಪುಸ್ತಕವನ್ನು ಸಂಗ್ರಹಿಸಲು ವಿಫಲವಾದ ಅಯೋಗ ಕೊನೆಗೆ ಜೆರಾಕ್ಸ್ ಪ್ರತಿ ಯನ್ನು ಸಂಗ್ರಹಿಸಿತ್ತು. ಈ ಎರಡೂ ವರ್ಷಗಳಲ್ಲಿ ಹಿಂದೂಗಳ ಭಾವನೆಗೆ ನೋವುಂಟು ಮಾಡಿದೆ ಎನ್ನಲಾದ ಪುಸ್ತಕದ ಅನೇಕ ಪ್ರತಿಗಳನ್ನು ಸಂಗ್ರಹಿ ಸಲು ಸರಕಾರ ನೀಡಿದ ೧೧ ಕೋಟಿ ಸಾಕಾಗಲಿಲ್ಲವೇ ಎಂದು ಲೇವಡಿಭರಿತ ಪ್ರಶ್ನೆ ಹಾಕಿದ ಕರ್ನಾಟಕ ಮಿಷನ್ ನೆಟ್‌ವರ್ಕ್‌ನ ಅಧ್ಯಕ್ಷರಾದ ವಾಲ್ಟರ್ ಮಾಬೆನ್ ಸರಕಾರ ಮಾಡಿದ ಪ್ರಮಾದ ಕ್ಕಾಗಿ ನ್ಯೂಲೈಫ್ ಸಂಘಟನೆ ಯೊಂದಿಗೆ ಕ್ಷಮೆ ಯಾಚಿಸುವುದೇ ಎಂದು ಮರುಪ್ರಶ್ನೆ ಹಾಕಿದರು.
ಮುಂದುವರಿಯಲಿದೆ ಸೇವೆಯ ಮತಾಂತರ: ಮರಿಯಮ್ಮ
ಕ್ರೈಸ್ತರು ಹಿಂದೂಗಳ ಮತಾಂ ತರ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆಯಿತು. ಆದರೆ ಇನ್ನು ಮುಂದಕ್ಕೂ ಮತಾಂತರ ಮುಂದು ವರಿಸಲಾಗುವುದು. ಆದರೆ ಸೋಮ ಶೇಖರ್ ವರದಿ ಮಾದರಿಯಲ್ಲಲ್ಲ. ಅವಿದ್ಯಾವಂತರನ್ನು ವಿದ್ಯಾವಂತರನ್ನಾ ಗಿಸುವ ಮೂಲಕ, ರೋಗಿಗಳನ್ನು ಆರೋಗ್ಯವಂತರನ್ನಾಗಿಸುವ ಮೂಲಕ, ಬಡವರನ್ನು ಶ್ರೀಮಂತರ ನ್ನಾಗಿಸುವ ಮೂಲಕ, ದುಃಖದ ಲ್ಲಿರುವವರನ್ನು ಸಂತಸಪಡಿಸುವ ಮೂಲಕ ಮತಾಂತರ ಮಾಡುತ್ತೇವೆ. ಇದು ಏಸುವಿನ ಮಾದರಿಯಾಗಿ ರುತ್ತದೆ ಎಂದು ನಗರ ಪಾಲಿಕೆ ಸದಸ್ಯೆ ಮರಿಯಮ್ಮ ಥಾಮಸ್ ಘೋಷಿ ಸಿದರು.
ಪ್ರತಿಭಟನಾ ಸಭೆಯ ವಿಶೇಷತೆಗಳು
ನಿನ್ನೆಯ ಪ್ರತಿಭಟನಾ ಸಭೆಯು ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಯಿ ತಲ್ಲದೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ನೆಪದಲ್ಲಿ ಸಮಯ ವ್ಯರ್ಥ ಮಾಡುವವರಿಗೆ ಪಾಠವಾಯಿತು. ಮೂರು ಗಂಟೆಗೆ ಸರಿ ಯಾಗಿ ಆರಂಭಗೊಂಡ ಮೆರವಣಿಗೆ ಮೂರು ವರೆಗೆ ನೆಹರೂ ಮೈದಾನ ತಲುಪಿದರೂ ಎಲ್ಲಾ ಜನರು ತಲುಪುವಾಗ ನಾಲ್ಕು ಕಾಲು ಗಂಟೆಯಾಗಿತ್ತು. ಬಳಿಕವೇ ಸಭೆಯನ್ನು ಆರಂಭಿಸಲಾಯಿತು. ಬೃಹತ್ ಪ್ರತಿಭಟನೆಯಾಗಿದ್ದರೂ ವೇದಿಕೆಯಲ್ಲಿ ಮೂವರಿಗೆ ಕೇವಲ ತಲಾ೧೫ ನಿಮಿಷದಂತೆ ಮಾತನಾಡಲು ಅವಕಾಶ ನೀಡಿ ೪೫ ನಿಮಿಷಗಳಲ್ಲಿ ಸಭೆಯನ್ನು ಮುಕ್ತಾಯಗೊಳಿಸಲಾಗಿತ್ತು. ಕೇಂದ್ರ ಮಂತ್ರಿ ಆಸ್ಕರ್ ಫೆರ್ನಾಂಡಿಸ್ ಅವರು ಪ್ರತಿಭಟನೆ ಯಲ್ಲಿ ಭಾಗವ ಹಿಸಿದರೂ ಅವರಿಗೂ ಭಾಷಣಕ್ಕೆ ಅವಕಾಶ ನೀಡಿರಲಿಲ್ಲ. ಪ್ರತಿಭಟನಾ ಕಾರರು ಉಪಯೋಗಿಸಿದ್ದ ಕಪ್ಪು ಪಟ್ಟಿ ಮತ್ತು ಬಾವುಟವನ್ನು ಸ್ವಯಂಸೇವಕರು ಸಂಗ್ರಹಿಸಿದ್ದು ಅದನ್ನು ಮುಖ್ಯಮಂತ್ರಿಗೆ ಕಳುಹಿಸಿ ಕೊಡಲಾಗುತ್ತಿದೆ. ಶುಚಿತ್ವಕ್ಕೂ ಮಹತ್ವ ನೀಡಿದ್ದಲ್ಲದೆ ವೇದಿಕೆಯಲ್ಲಿ ಕುರ್ಚಿಗಳ ವ್ಯವಸ್ಥೆಯೂ ಇರದಿರುವುದು ವಿಶೇಷವಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ