ಭಾನುವಾರ, ಫೆಬ್ರವರಿ 20, 2011

ಹಿಂದುತ್ವವಾದಿಗಳ ಹೀರೋ ಆಗಿದ್ದ ಬಜ ರಂಗದಳದ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ಸಿಂಗ್

ಬೆಂಗಳೂರು: ಒಂದು ಕಾಲಕ್ಕೆ ಕಟ್ಟರ್ ಹಿಂದುತ್ವವಾದಿಗಳ ಹೀರೋ ಆಗಿದ್ದ ಬಜ ರಂಗದಳದ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ಸಿಂಗ್ ಕೇಸರಿ ಶಲ್ಯ ತೊರೆದು ತೆನೆಹೊತ್ತ ಮಾತೆಯ ಬೆನ್ನು ಬಿದ್ದಿದ್ದಾರೆ. ಅರ್ಥಾತ್ ಜೆಡಿಎಸ್‌ಗೆ ವಿದ್ಯುಕ್ತವಾಗಿ ನಿನ್ನೆ ಸೇರ್ಪಡೆ ಗೊಂಡಿದ್ದಾರೆ. ಇನ್ನೇನಿದ್ದರೂ ನನ್ನದು ಕೋಮುವಾದದ ವಿರುದ್ಧ ಹೋರಾಟ ಎಂದು ಮಹೇಂದ್ರ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ವೈ.ಎಸ್. ವಿ ದತ್ತಾ ನೇತೃತ್ವದಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡ ಮಹೇಂದ್ರ ಕುಮಾರ್ ಹಿಂದುತ್ವದ ಹಳೆ ಬೇರುಗಳನ್ನು ಕೊಡವಿ ಜಾತ್ಯತೀತಯನ್ನು ಆವರಿಸಿಕೊಂ ಡಂತೆ ಕಂಡುಬಂತು. ಹಿಂದೂಗಳ ಮತಾಂ ತರ ವಿರೋಧಿಸಿ ಕ್ರೈಸ್ತ ಆರಾಧನಾಲಯಗಳ ಮೇಲೆ ದಾಳಿ ಮಾಡಿದ್ದ ಹೊಣೆ ಹೊತ್ತಿದ್ದ ಮಹೇಂದ್ರ ಕುಮಾರ್ ಆನಂತರದ ಬೆಳವಣಿಗೆಯಲ್ಲಿ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದರು. ರಾಜಕೀಯ ಪ್ರೇರಿತ ಹಿಂದುತ್ವವನ್ನು ವಿರೋಧಿಸಿದ್ದ ಮಹೇಂದ್ರ ರನ್ನು ಹೆಣೆಯಲು ಬಿಜೆಪಿ ಏಕಕಾಲಕ್ಕೆ ರಾಜ್ಯದ ವಿವಿಧೆಡೆ ಕೇಸು ದಾಖಲಿಸುವ ಮೂಲಕ ಮಹೇಂದ್ರ ಮೇಲೆ ಸೇಡು ತೀರಿ ಸಿಕೊಂಡಿತ್ತು.
ತಾತ್ವಿಕವಾಗಿ ಆಗಲೇ ಸಂಘಪರಿ ವಾರದಿಂದ ದೂರ ಬಂದಿದ್ದ ಮಹೇಂದ್ರ ಕುಮಾರ್ ಆನಂತರ ಕುಮಾರಸ್ವಾಮಿ ಸಂಪರ್ಕಕ್ಕೆ ಬರುವ ಮೂಲಕ ಜನತಾ ಪರಿವಾರವನ್ನು ಸೇರುವ ಇಂಗಿತ ವ್ಯಕ್ತ ಪಡಿಸಿದ್ದರು. ಕಳೆದ ಕೆಲ ತಿಂಗಳುಗಳಿಂದ ಮಹೇಂದ್ರ ಜೆಡಿಎಸ್ ಸೇರ್ಪಡೆಗೆ ವೇದಿಕೆ ಸಿದ್ದವಾಗಿತ್ತು. ಆದರೂ ಕೆಲ ಮುಖಂಡರು ಮಹೇಂದ್ರ ಜೆಡಿಎಸ್ ಸೇರ್ಪಡೆಗೆ ವಿರೋಧ ವ್ಯಕ್ತ ಪಡಿಸಿದ್ದರು. ಏಕಾಏಕಿ ಮಹೇಂದ್ರ ಪಕ್ಷವನ್ನು ಸೇರುವುದು ಬೇಡ ಎಂದು ಕುಮಾರ ಸ್ವಾಮಿ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಮಹೇಂದ್ರ ಜನತಾ ಪರಿವಾರ ಸೇರಲು ಕೊನೆಗೂ ಕಾಲ ಕೂಡಿ ಬಂತು.
‘ತಾನಿನ್ನೂ ಹಿಂದುತ್ವದ ಅಮಲಿನಲ್ಲಿ ಬಿದ್ದು ದಾರಿ ತಪ್ಪಿರುವ ಯುವಕರನ್ನು ಅಲ್ಲಿಂದ ಹೊರತಂದು ಹೊಸ ಬದುಕು ನೀಡಲಿದ್ದೇನೆ ಎಂದು ಮಹೇಂದ್ರ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಬಜರಂಗದಳಲ್ಲಿ ಹಿಂದುತ್ವದ ಅಮಲೇ ರಿಸಿಕೊಂಡಿದ್ದ ಮಹೇಂದ್ರ ಈಗ ಜಾತ್ಯತೀತತೆ ಕನಸು ಕಾಣುತ್ತಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ