ಸೋಮವಾರ, ಫೆಬ್ರವರಿ 07, 2011

ಪ್ರವಾದಿ ಜನ್ಮ ದಿನಾಚರಣೆ: ಪರಿಸರ ಸ್ವಚ್ಛತಾ ಆಂದೋಲನಕ್ಕೆ ಚಾಲನೆ


ಟ್ಯಾಲೆಂಟ್‌ ರಿಸರ್ಚ್‌ ಫೌಂಡೇಶನ್‌ ಮಂಗಳೂರು ಹಾಗೂ ಅಲ್‌ ಅಹ್ಸನ್‌ ಬಳಗಗಳ ಜಂಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್‌(ಸ.ಅ)ರ ಜನ್ಮ ದಿನಾಚರಣೆಯ ಪ್ರಯುಕ್ತ ಪರಿಸರ ಸ್ವಚ್ಛತಾ ಆಂದೋಲನಕ್ಕೆ ಹಂಪನ ಕಟ್ಟೆಯ ಹಳೆ ಬಸ್‌ ನಿಲ್ದಾಣದ ಪರಿಸರ ಶುಚೀಕರಣದ ಮೂಲಕ  ಚಾಲನೆ ನೀಡಲಾಯಿತು.
 ಹಳೆ ಬಸ್‌ ನಿಲ್ದಾಣದ ಸುತ್ತಮುತ್ತಲ ಪರಿಸರದಲ್ಲಿರುವ ಕಸಕಡ್ಡಿಗಳನ್ನು ಹೆಕ್ಕಿ, ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡ ಲಾಯಿತು. ಮೂತ್ರ ಶಂಕೆ ಮಾಡುತ್ತಿದ್ದ ಜಾಗವನ್ನು ನೀರು ಸಿಂಪಡಿಸಿ ಫಿನಾಯಿಲ್‌ ಹಾಕಿ ತೊಳೆದು ನಂತರ ಬ್ಲೀಚಿಂಗ್‌ ಪೌಡರ್‌ ಹಾಕಲಾಯಿತು. ಪರಿಸರದ ಸುತ್ತ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಹಾಕಲಾಯಿತು. ಶುಚಿತ್ವ ಸತ್ಯವಿಶಾ್ವಸದ ಅರ್ಧ ಭಾಗವೆಂದು ಸಾರಿದ ಪ್ರವಾದಿ ವರ್ಯರ ಜನ್ಮ ದಿನಾಚರಣೆಯ ಪ್ರಯುಕ್ತ ಈ ಆಂದೋಲನವನ್ನು ಜಿಲ್ಲೆಯಾದ್ಯಂತ ಎಲ್ಲಾ ಮೊಹಲ್ಲಾಗಳಲ್ಲಿ ಹಮ್ಮಿಕೊಳ್ಳುವಂತೆ ಸಂಘಟಕರು ಸಮುದಾಯ ಬಾಂಧವರಲ್ಲಿ ವಿನಂತಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅಲ್‌ ಅಹ್ಸನ್‌ ಬಳಗದ ಎಸ್‌.ಬಿ. ದಾರಿಮಿ, ಅಬ್ದುಲ್‌ ಅಝೀಝ್‌ ದಾರಿಮಿ, ಉಮರ್‌ ದಾರಿಮಿ, ಹುಸೈನ್‌ ದಾರಿಮಿ, ಕೆ.ಎಂ.ಎ ಕೊಡುಂಗೈ, ಸಿರಾಜುದ್ದೀನ್‌ ಪೈಝಿ, ಸಿ.ಕೆ. ದಾರಿಮಿ, ಹನೀಫ್‌ ದಾರಿಮಿ, ಟಾ್ಯಲೆಂಟ್‌ ಕಾರ್ಯಕರ್ತರಾದ ರಿಯಾಝ್‌ ಕಣ್ಣೂರು, ಸೈದುದ್ದೀನ್‌ ಬಜಪೆ, ಅಬ್ದುಲ್‌ ಹಮೀದ್‌ ಕಣ್ಣೂರು, ಮಜೀದ್‌ ತುಂಬೆ, ಉಮರ್‌ ಪುತ್ತಿಗೆ, ಸಯ್ಯದ್‌ ಹಸನ್‌, ಪರ್ವೇಝ್‌ ಪಾಂಡೇಶ್ವರ, ಅಕ್ರಂ ಹಸನ್‌ ಉಳ್ಳಾಲ, ಮುಹಮ್ಮದ್‌ ಯು.ಬಿ., ಪೈರೋಝ್‌ ಉಳಾ್ಳಲ, ಅಸ್ಗರ್‌ ಹುಸೈನ್‌ ಬೆಂಗರೆ, ಮುಹಮ್ಮದ್‌ ಅಲಿ ಮುಂಡಕ್ೂರು, ರಫೀಕ್‌ ಮಾಸ್ಟರ್‌ ಭಾಗವಹಿಸಿದ್ದರು. ಇಮ್ತಿಯಾಝ್‌, ಬಿ.ಎಸ್‌.ಎ.ಕೆ ಅಬ್ದುಲ್‌ ಖಾದರ್‌ ಕಣ್ಣೂರು, ಅಬ್ದುಲ್‌ ರಝಾಕ್‌, ಅನ್ವರ್‌ ಗುಲಾಂ ಬೋಳಾರ, ಎಂ ಡಿ ಅಶ್ರಫ್‌ ಬಂದರ್‌, ಫೈಝಲ್‌, ಮುನೀರ್‌ ಬಂದರ್‌, ಇರ್ಷಾದ್‌ ರೋಶನಿ ನಿಲಯ, ಝಿಯಾದ್‌ ಅಮೃತ ಕಾಲೇಜು, ರಿಝ್ವಾನ್‌ ಅಮೃತ ಕಾಲೇಜು, ಹಮೀದ್‌ ಇಂಡಿಯನ್‌ ಪ್ಲೆವುಡ್‌ ರವರು ಸ್ವಯಂ ಪ್ರೇರಿತರಾಗಿ ಭಾಗ ವಹಿಸಿ ವಿಶೇಷ ಸಹಕಾರ ನೀಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ