ಸಂಶೋಧಕ ರಾಗಿರುವ ಡಾ.ಚಿದಾನಂದ ಮೂರ್ತಿ ಯವರಿಗೆ ಗೌರವ ಡಾಕ್ಟರೇಟ್ ಪದವಿ ನೀಡದಿರುವುದರ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಅವರೊಬ್ಬ ಅಪ್ಪಟ ಕೋಮುವಾದಿ ಎಂದು ಆರೋಪಿಸಿದ್ದಾರೆ.
ರಾಜ್ಯದ ವಿವಿಧ ಕಡೆ ದುಷ್ಕರ್ಮಿಗಳು ನಡೆಸಿದ ಚರ್ಚ್‌ಗಳ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿರುವ ಚಿದಾನಂದ ಮೂರ್ತಿಯೋರ್ವ ಕೋಮುವಾದಿ. ಇದೇ ಹಿನ್ನೆಲೆಯಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡುವುದನ್ನು ತಡೆಯಲು ಕಾರಣ ಎಂದು ಅವರು ಹೇಳಿದ್ದಾರೆ.
ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಎನ್‌ಸಿಸಿ ಕೆಡೆಟ್ ಗಳನ್ನು ರವಿವಾರ ರಾಜಭವನದಲ್ಲಿ ಸನ್ಮಾನಿಸಿ ಭಾರದ್ವಾಜ್ ಮಾತನಾಡುತ್ತಿದ್ದರು.
ಚರ್ಚ್ ದಾಳಿಯನ್ನು ಸಮರ್ಥಿಸಿ ಕೊಂಡಿರುವ ಚಿದಾನಂದಮೂರ್ತಿ ಯವರಿಂದ ಸಂಘರ್ಷ ಸೃಷ್ಟಿಯಾಗಬಾರದೆಂಬ ಹಿನ್ನೆಲೆಯಲ್ಲಿ ಅವರಿಗೆ ಡಾಕ್ಟರೇಟನ್ನು ತಡೆ ಹಿಡಿಯಲಾಗಿದೆ ಎಂದು ಅವರು ಪ್ರತಿಪಾದಿಸಿದರು.
ಚಿಮೂಗೆ ಗೌರವ ಡಾಕ್ಟರೇಟ್ ನೀಡುವುದನ್ನು ತಡೆ ಹಿಡಿದಿರುವ ರಾಜ್ಯಪಾಲರ ಕ್ರಮದ ಕುರಿತು ಹಲವು ಟೀಕೆ, ಖಂಡನೆ ವ್ಯಕ್ತವಾದರೂ ಅದಕ್ಕೆ ಯಾವುದೇ ರೀತಿಯಲ್ಲಿ ಮಣಿಯದ ಹಂಸರಾಜ್ ಭಾರದ್ವಾಜ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ದಿಂದ ಸಾಹಿತಿಗಳಾದ ಕೆ.ಎಸ್. ನಿಸಾರ್ ಅಹ್ಮದ್, ಡಾ.ಚಿದಾನಂದ ಮೂರ್ತಿ ಹಾಗೂ ಕಲಾವಿದ ಬಿ.ಕೆ.ಎಸ್.ವರ್ಮಾರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಈ ಹೆಸರುಗಳನ್ನು ಅಂತಿಮಗೊಳಿಸಲು ವಿವಿಯ ಕುಲಪತಿಯಾಗಿರುವ ರಾಜ್ಯಪಾಲರಿಗೆ ಪಟ್ಟಿಯನ್ನು ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಚಿಮೂ ಹೆಸರನ್ನು ಬಿಟ್ಟು ಉಳಿದಿಬ್ಬರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಒಪ್ಪಿಗೆ ಸೂಚಿಸಿದ್ದರು.
ರಾಜ್ಯಪಾಲರ ಕ್ರಮದ ವಿರುದ್ಧ ಹಲವು ಸಾಹಿತಿಗಳು ಖಂಡನೆ ವ್ಯಕ್ತಪಡಿಸಿದ್ದರು. ಆದರೂ ರಾಜ್ಯಪಾಲರೂ ತನ್ನ ಕ್ರಮವನ್ನು ಸಮರ್ಥಿಸಿ ಕೊಂಡಿದ್ದಾರೆ.
ಚರ್ಚ್ ಮೇಲಿನ ದಾಳಿಯನ್ನು ಬಹಿರಂಗವಾಗಿ ಸಮರ್ಥಿಸಿರುವುದ ರಿಂದ ಚಿಮೂಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಒಪ್ಪಿಗೆ ಸೂಚಿಸಿಲ್ಲ ಎಂದಿರುವ ರಾಜ್ಯ ಪಾಲರು, ಚಿಮೂ ಸಂಶೋಧಕ ರಾಗಿರಬಹುದು, ಅವರ ಹಿನ್ನೆಲೆಯನ್ನು ಅರಿತು ಪದವಿ ತಡೆ ಹಿಡಿಯುವ ಅಧಿಕಾರ ತನಗಿದೆ ಎಂದಿದ್ದಾರೆ.
ಚರ್ಚ್‌ಗಳ ಮೇಲಿನ ದಾಳಿಯ ಕುರಿತು ನ್ಯಾಯಮೂರ್ತಿ ಸೋಮಶೇಖರ್ ಆಯೋಗ ವರದಿ ನೀಡಿದ್ದು, ಆ ವರದಿ ತನಗೆ ತಲುಪಿಲ್ಲ. ಮಾಧ್ಯಮಗಳಲ್ಲಿ ಬಂದ ವರದಿಯನ್ನಷ್ಟೇ ಗಮನಿಸಿದ್ದೇನೆ. ಆದರೆ ಈ ವರದಿಯ ಕುರಿತು ಕ್ರಿಶ್ಚಿಯನ್ನರು ಅಸಮಾಧಾನ ವ್ಯಕ್ತಪಡಿಸಿ, ಪ್ರತಿಭಟಿಸಿದ್ದಾರೆ.
ಇಂತಹ ವರದಿಯನ್ನು ಸಂಶೋ ಧಕ ರೆನಿಸಿಕೊಂಡ ಡಾ. ಚಿದಾನಂದ ಮೂರ್ತಿ ಸಮರ್ಥಿಸಿರುವುದು ಸರಿಯಲ್ಲ. ಅವರೊಬ್ಬ ಕೋಮು ವಾದಿಯಾಗಿರುವ ಕಾರಣಕ್ಕೆ ಅವರಿಗೆ ಪದವಿ ನೀಡಲು ನಿರಾಕರಿಸಿದ್ದೇನೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ