ಬೆಂಗಳೂರು: ಈಜಿಪ್ಟ್‌ನಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಎದ್ದಿರುವ ಬಂಡಾಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಇ.ಎಂ.ಅಬ್ದುಲ್ ರಹಿಮಾನ್ ಶ್ಲಾಘಿಸಿದ್ದಾರೆ.
ನವ ವಸಾಹತುಶಾಹಿ ಹಾಗೂ ಝಿಯೋನಿಸ್ಟ್ ಶಕ್ತಿಗಳು ಈ ಬಂಡಾಯವನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತುನೀಸಿಯಾದ ಜನತೆಯ ಯಶಸ್ವಿಯ ನಂತರ ಸರ್ವಾಧಿಕಾರಿ ಹುಸ್ನಿ ಮುಬಾರಕ್‌ನ ಸರ್ವಾಧಿಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಯಮನ್ ಹಾಗೂ ಜೋರ್ಡಾನ್‌ನಲ್ಲೂ ಸರಕಾರ ವಿರೋಧಿ ಪ್ರತಿಭಟನೆಗಳು ವೇಗವನ್ನು ಪಡೆಯುತ್ತಿವೆ. ಪ್ರಜಾಪ್ರಭುತ್ವ, ಸ್ವಾತಂತ್ರ ಮತ್ತು ನ್ಯಾಯವನ್ನು ಪಡೆಯುವ ಜನರ ಬಯಕೆಯನ್ನು ಕಳೆದ ಹಲವು ದಶಕಗಳಿಂದ ನವ-ವಸಾಹತುಶಾಹಿಗಳ ಕೈಗೊಂಬೆ ಸರಕಾರಗಳು ದಮನಿಸುತ್ತಿವೆ. ಈ ರಾಷ್ಟ್ರಗಳಲ್ಲಿ ಜನರ ಪ್ರಾಥಮಿಕ ಅಗತ್ಯ ಹಾಗೂ ಮಾನವ ಹಕ್ಕಗಳನ್ನು ನಿರಾಕರಿಸಲಾಗಿತ್ತು ಮತ್ತು ಪ್ರಜಾಸತ್ತಾತ್ಮಕ ಕಾನೂನನ್ನು ಮರಳಿ ತರುವ ಪ್ರಯತ್ನವನ್ನು ಅಮೆರಿಕ ಮತ್ತು ಇಸ್ರೇಲ್‌ನ ಪೂರ್ಣ ಬೆಂಬಲದೊಂದಿಗೆ ದಮನಿಸಲಾಗುತ್ತಿತ್ತು. ಜನರ ಇಸ್ಲಾಮಿಕ್ ಬಯಕೆಯನ್ನು ಆಧರಿಸಿದ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳನ್ನು ಈಜಿಪ್ಟ್ ಹಾಗೂ ನೆರಯ ರಾಷ್ಟ್ರಗಳಲ್ಲಿ ಗುರಿಪಡಿಸಲಾಗುತ್ತಿತ್ತು. ಸ್ವತಂತ್ರ ಹಾಗೂ ನ್ಯಾಯಯುತ ಚುನಾವಣೆಯಲ್ಲಿ ಪಾಲ್ಗೊಳ್ಳಲು ಈ ಚಳುವಳಿಗಳಿಗೆ ಅನುಮತಿ ನಿರಾಕರಿಸಲಾಗುತ್ತಿತ್ತು ಅಥವಾ ಚುನಾವಣಾ ಗೆಲವು ಅವು ಇನ್ನಷ್ಟು ದಮನಕ್ಕೊಳಗಾಗಲು ಕಾರಣವಾಗುತ್ತಿದ್ದವು ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈಜಿಪ್ಟ್‌ನಲ್ಲಿ ಎದ್ದಿರುವ ಈ ಬಂಡಾಯವು ಮುಸ್ಲಿಮ್ ಸಮಾಜದಲ್ಲಿ ಆಳವಾಗಿ ಬೇರೂರಿರುವ ಮೌಲ್ಯಯುತ ಇಸ್ಲಾಮಿಕ್ ವ್ಯವಸ್ಥೆಯ ಕ್ರಿಯಾತ್ಮಕತೆಯನ್ನು ಬೆಳಗಿಸಿದೆ. ಈಜಿಪ್ಟ್‌ನಲ್ಲಿ ಉಂಟಾಗಿರುವ ಬೆಳವಣಿಗೆಯಿಂದ ಅರಬ್ ಮುಸ್ಲಿಮ್ ಜಗತ್ತಿನ ಸರ್ವಾಧಿಕಾರಿ ಆಡಳಿತವು ಪಾಠವನ್ನು ಕಲಿಯಬೇಕು ಮತ್ತು ತಮ್ಮ ರಾಷ್ಟ್ರಗಳಲ್ಲಿ ನಾಗರಿಕ ಹಾಗೂ ಮಾನವ ಹಕ್ಕುಗಳನ್ನು ಮರು ಸ್ಥಾಪಿಸಲು ಹಾದಿಯುಂಟುಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಮುಂದಕ್ಕೆ ಹುಸ್ನಿ ಮುಬಾರಕ್‌ನನ್ನು ರಕ್ಷಿಸುವುದು ಅಸಾಧ್ಯವೆಂದು ಮನಗಂಡ ಅಮೆರಿಕ ಈಜಿಪ್ಟ್‌ನಲ್ಲಿ ತಳಮಟ್ಟದ ಸರಕಾರವು ಉದಯವಾಗಬಹುದೆಂಬ ಚಿಂತೆಯಲ್ಲಿದೆ. ಹುಸ್ನಿ ಮುಬಾರಕ್ ತನ್ನವನಲ್ಲವೆಂದು ಹೇಳಿಕೊಳ್ಳುತ್ತಿರುವ ಅಮೆರಿಕ ಮತ್ತು ಇಸ್ರೇಲ್ ಈಗ ಮುಸ್ಲಿಮ್ ಬ್ರದರ್‌ಹುಡ್ ಮತ್ತು ಇತರ ಪ್ರಜಾಪ್ರಭುತ್ವ ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವುದಕ್ಕಾಗಿ ಉಮರ್ ಸುಲೈಮಾನ್‌ನಂತಹ ತನ್ನ ನಂಬಿಕೆಯ ಏಜೆಂಟರನ್ನು ಸಿದ್ಧಪಡಿಸುತ್ತಿದೆ. ಈಜಿಪ್ಟ್‌ನಲ್ಲಿ ಪ್ರಜಾಪ್ರಭುತ್ವವು ಮರಳಲು ಭಾರತೀಯ ಸರಕಾರ ಪ್ರಮುಖ ಪಾತ್ರವಹಿಸಬೇಕೆಂದು ಇ.ಎಂ.ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ