*ವಿದ್ಯಾರ್ಥಿಗಳಗೆ ಭಯಮುಕ್ತವಾತವರಣ ಕಲ್ಪಿಸುವುದೇ ನಮ್ಮ ಗುರಿ. ಪ್ರಾಚಾರ್ಯ ಶಫಿ ಶೇಖ್
ಭಟ್ಕಳ: ಇಲ್ಲಿನ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಇಂದು ನಗರ ಪೋಲಿಸ್ ಠಾಣೆಗೆ ಭೇಟಿ ಪೋಲಿಸರ ಕಾರ್ಯವೈಖರಿಯನ್ನು ಕಣ್ಣಾರೆ ಕಂಡರು. ಪೋಲಿಸ್ ಠಾಣೆ ಎಂದರೆ ಭಯ ಹುಟ್ಟುತ್ತಿತ್ತು ಆದರೆ ಪೋಲಿಸ್ ಠಾಣೆಯನ್ನು ಸಂದರ್ಶಿಸಿದ ನಂತರ ಇಲ್ಲಿನ ಅಧಿಕಾರಿಗಳನ್ನು ಕಂಡು ನಮಲ್ಲಿನ ಭಯ ಮಾಯವಾಗಿದೆ ಎಂಬ ಅಭಿಪ್ರಾಯವನ್ನು ವಿದ್ಯಾರ್ಥಿನಿಯರು ವ್ಯಕ್ತಪಡಿಸಿದರು.
ಸೋಮವಾರದಂದು ಶಮ್ಸ್ ಶಾಲೆಯ ವಿದ್ಯಾರ್ಥಿಗಳು ಏಕಾಏಕಿ ಪೋಲಿಸ್ ಠಾಣೆಯನ್ನು ಪ್ರವೇಶಿಸಿದನ್ನು ಕಂಡ ಜನರು ವಿದ್ಯಾರ್ಥಿಗಳು ಶಾಲೆಗೆ ಮುತ್ತಿಗೆ ಹಾಕಲು ಹೋಗಿದ್ದಾರೆಂದೆ ಭಾವಿಸಿದ್ದರು. ಆದರೆ ಶಾಲಾ ವಿದ್ಯಾರ್ಥಿಗಳು ತಮ್ಮ ಅರಿವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪೋಲಿಸ್ ಕಾರ್ಯವೈಖರಿಯನ್ನು ಕಣ್ಣಾರೆ ಕಂಡು ತಮ್ಮಲ್ಲಿಯೂ ಪೋಲಿಸ್ ಇಲಾಖೆಯಲ್ಲಿ ಸೇವೆಸಲ್ಲಿಸಬೇಕೆಂಬ ಹಂಬಲವನ್ನು ಮೂಡಿಸಿಕೊಂಡಿದ್ದು ಮಾತ್ರ ವಿಶೇಷತೆಯಾಗಿತ್ತು.
ವಿದ್ಯಾರ್ಥಿಗಳು ಪೋಲಿಸ್ ಠಾಣೆಗೆ ಹೋದರೆ ಸಾಕು ಅವರು ಪೋಲಿಸರ ವಿರುದ್ಧ ಧಿಕ್ಕಾರ ಕೂಗಲು ಇಲ್ಲವೆ ಪೋಲಿಸ್ ಠಾಣೆಯನ್ನು ಮುತ್ತಿಗೆ ಹಾಕಲೋ ಅಥವಾ ತಮ್ಮ ಬೇಡಿಕೆಗಳನ್ನು ಈಡೇರುವ ತನಕ ಸತ್ಯಗ್ರಹ ಮಾಡಲೋ ಪೋಲಿಸ್ ಠಾಣೆಗೆ ಹೋಗುವುದು ವಾಡಿಕೆ. ಆದರೆ ಇದೊಂದು ವಿನೂತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡ ಶಮ್ಸ್ ಶಾಲೆಯ ಪ್ರಾಚಾರ್ಯ ಮುಹಮ್ಮದ ಶಫಿ ಶೇಖ್ ಅವರನ್ನು ಪತ್ರಿಕೆ ಮಾತನಾಡಿಸಿದಾಗ ಅವರು ಹೇಳಿದ್ದು ಇಷ್ಟು. ವಿದ್ಯಾರ್ಥಿಗಳಿಗೆ ಭಯಮುಕ್ತ ವಾತವರಣವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದ್ದು ಇದಕ್ಕಾಗಿ ಪೋಲಿಸ್ ಠಾಣೆಯನ್ನು ಕಣ್ಣಾರೆ ಕಂಡು ಅವರಲ್ಲಿ ಪೋಲಿಸರ ಕುರಿತಂತೆ ಇರುವ ಭಯ ಮತ್ತು ತಪ್ಪು ಕಲ್ಪನೆಯನ್ನು ದೂರಮಾಡುವುದೇ ನಮ್ಮ ಉದ್ದೇಶವಾಗಿತ್ತು ಎಂದರು.ಇದೇ ರೀತಿ ಮುಂದಿನ ದಿನಗಳಲ್ಲಿ ವಿವಿಧ ಸರಕಾರಿ ಇಲಾಖೆಗಳನ್ನು ಸಂದರ್ಶಿಸುವ ಉದ್ದೇಶವನ್ನು ಹೊಂದಿದ್ದು ನ್ಯಾಯಾಲಯದಲ್ಲಿ ನಡೆಯುವ ವಾದ ವಿವಾದಗಳನ್ನು ಆಲಿಸುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡವ ಉದ್ದೇಶ ತಮ್ಮದಾಗಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ ಡಿ.ಎಸ್.ಪಿ. ಎಂ. ನಾರಾಯಣ: ಠಾಣೆಗೆ ಭೇಟಿ ನೀಡಿದ ವಿದ್ಯಾರ್ಥಿಗಳನ್ನು ಅತ್ಯಂತ ಆದರದಿಂದ ಬರಮಾಡಿಕೊಂಡಿ ಭಟ್ಕಳ ಉಪವಿಭಾಗದ ಡಿ.ಎಸ್.ಪಿ. ಎಂ. ನಾರಾಯಣ ಹಾಗು ನಗರ ಠಾಣೆಯ ಪಿ.ಎಸ್.ಐ ಸುರೇಶ್ ನಾಯ್ಕ್ ವಿದ್ಯಾರ್ಥಿಗಳೊಂದಿಗೆ ಮನಬಿಚ್ಚಿ ಮಾತನಾಡಿದರು. ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಅವರು ಕಾಲೇಜು ಉಪನ್ಯಾಸಕರೂ ನಾಚುವಂತೆ ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ನೀಡಿ ಸೈ ಎನಿಸಿಕೊಂಡರು.
ಎಫ್.ಐ.ಆರ್. ಚಾರ್ಜ್‌ಶೀಟ್, ವೈಪನ್ಸ್, ಕುರಿತಂತೆ ಸಮಗ್ರವಾದ ಮಾಹಿತಿಯನ್ನು ನೀಡಿದ ಸುರೇಶ್ ನಾಯ್ಕ ವಿದ್ಯಾರ್ಥಿಗಳಿಗೆ ಶಸ್ತ್ರಾಸ್ತ್ರಗಳನ್ನು ತೋರಿಸಿ ಅವುಗಳು ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಮಾಹಿತಿಯನ್ನು ನೀಡಿದರು.
ಡಿ.ಎಸ್.ಪಿ. ನಾರಾಯಣ ಅವರು ವಿದ್ಯಾರ್ಥಿಗಳಿಗೆ ಐಪಿಎಸ್, ಐಎಎಸ್. ಐಎಫ್‌ಎಸ್, ಕುರಿತಂತೆ ಮಾಹಿತಿ ನೀಡಿ ನೀವು ಸಹ ಇಂತಹ ಉನ್ನತ ಪರೀಕ್ಷೆಗಳನ್ನು ಎದುರಿಸಲು ಈಗಿಂದಲೆ ಮಾನಸಿಕವಾಗಿ ಸಿದ್ದರಾಗಿ ಎಂದು ಸಲಹೆನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ವ್ಯವಸ್ಥಾಪಕ ಅಝೀಝರುರ್ರಹ್ಮಾನ್, ಶಿಕ್ಷಕರಾದ ಎಮ್. ಆರ್. ಮಾನ್ವಿ, ಮಿಸ್ ಮೋಈನಾ ಬಾತಿನ್, ಮಿಸ್ ರಫಾತ್ ಮುಂತಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ