ದ್ಸಿಕ್ರ್ ಹಲ್ಕಾದಿಂದ ಪಾಪಮುಕ್ತ ಬದುಕು ಸಾಧ್ಯ: ಮಂಗಳೂರು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್
ಪುತ್ತೂರು, ಫೆ.4: ದ್ಸಿಕ್ರ್ ಹಲ್ಕಾವನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಅದನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು. ಈ ಮೂಲಕ ಸಕಲ ಪಾಪಗಳಿಂದ ಮುಕ್ತರಾಗಬಹುದು ಎಂದು ಮಂಗಳೂರು ಖಾಝಿ ತ್ವಾಕ ಅಹ್ಮದ್ ವೌಲವಿ ಅಲ್‌ಖಾಸಿಮಿ ಅಲ್‌ಅಝ್ಝರಿ ಅಭಿಪ್ರಾಯಪಟ್ಟಿದ್ದಾರೆ.
ಆತೂರು ಜುಮಾ ಮಸೀದಿಯಲ್ಲಿ ಇಬ್ರಾಹೀಂ ಹಾದಿ ತಂಙಳ್‌ರಿಂದ ಸ್ಥಾಪನೆಗೊಂಡು ಪ್ರತಿ ಗುರುವಾರ ಮಗ್ರಿಬ್ ನಮಾಝ್‌ನ ಬಳಿಕ ಆಚರಿಸಿಕೊಂಡು ಬರುತ್ತಿರುವ ದ್ಸಿಕ್ರ್ ಹಲ್ಕಾದ ಹತ್ತನೆ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಪಿ.ಎಂ. ಇಬಾಹೀಂ ಮುಸ್ಲಿಯಾರ್ ಬೇಕಲ ಮಾತನಾಡಿ, ಜೀವನದ ಎಲ್ಲಾ ಕೆಲಸ ಕಾರ್ಯಗಳನ್ನು ದ್ಸಿಕ್ರ್ ಆಗಿ ಪರಿವರ್ತಿಸಿಕೊಳ್ಳುವ ಮೂಲಕ ಇಹಪರ ವಿಜಯ ಸಾಧಿಸಬಹುದು. ದ್ಸಿಕ್ರ್ ಹೇಳುವ ಪದ್ಧತಿಯು ಪರಂಪರಾಂಗತ ವಾಗಿ ಬೆಳೆದು ಬಂದಿದೆ. ಇದರಿಂದ ಮನುಷ್ಯನಿಗೆ ಮನಶಾಂತಿ ಲಭಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆತೂರು ಬದ್ರಿಯಾ ಜುಮಾ ಮಸೀದಿಯ ಗೌರವ ಅಧ್ಯಕ್ಷ ಕೆ.ಎಸ್. ಆಟಕೋಯ ತಂಙಳ್ ಆಶೀರ್ವಚನ ನೀಡಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ದ್ಸಿಕ್ರ್ ಹಲ್ಕಾದ ಸಂಸ್ಥಾಪಕ ಅಲ್‌ಹಾದಿ ಇಬ್ರಾಹೀಂ ತಂಙಳ್ ಆತೂರಿನಲ್ಲಿ ದ್ಸಿಕ್ರ್ ಬೆಳೆದು ಬಂದಿರುವ ಬಗ್ಗೆ ತಿಳಿಸಿದರು.
ಅತ್ರಾಡಿ ಮೂಡಬಿದ್ರೆ ಖಾಝಿ ವಿ.ಕೆ. ಅಬೂಬಕರ್ ಮುಸ್ಲಿಯಾರ್, ತಾಯಲಂಗಾಡಿ ಮುದರ್ರಿಸ್ ಎಂ. ಎ.ಖಾಸಿಂ ಮುಸ್ಲಿಯಾರ್, ಅರಂತೋಡು ಮುದರ್ರಿಸ್ ಡಾ. ಶಾಹ್ ಮುಸ್ಲಿಯಾರ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಎಸ್.ಬಿ. ಮುಹಮ್ಮದ್ ದಾರಿಮಿ, ಬಿ.ಎಂ ಹನೀಫ್ ಫೈಝಿ, ಉಮರ್ ದಾರಿಮಿ, ಕೆ.ಎಚ್. ಅಶ್ರಫ್ ಹನೀಫಿ, ಪಿ.ಎಂ. ಇಬ್ರಾಹೀಂ ದಾರಿಮಿ, ಹಾಜಿ ಅಬ್ದುಲ್ ಸತ್ತಾರ್ ಸಖಾಫಿ, ಕೆ.ಮುಹಮ್ಮದ್ ಮುಸ್ಲಿಯಾರ್, ಬಿ.ಎ. ಬಶೀರ್ ಸಅದಿ ಕೆಮ್ಮಾರ, ಕೆ. ಹಸನ್ ಮದನಿ, ಯೂಸುಫ್ ಮದನಿ, ಅಬ್ದುರ್ರಹ್ಮಾನ್ ಫೈಝಿ, ಎಂ.ಎ. ಆದಂ ಮದನಿ ಕೆಮ್ಮಾರ, ಪಿ.ಎಂ. ಇಸ್ಮಾಯೀಲ್ ದಾರಿಮಿ, ಎಂ.ಕೆ. ಅಬ್ದುರ್ರಹ್ಮಾನ್ ಸಖಾಫಿ, ಅನ್ಸಾರ್ ಫೈಝಿ, ಸುಲೈಮಾನ್ ದಾರಿಮಿ, ಬಿ.ಕೆ. ಅಬ್ದುರ್ರಹ್ಮಾನ್ ಬಿ.ಎ. ಅಬ್ದುಲ್ ಹಮೀದ್ ಎಂ.ಎಸ್ ಮುಹಮ್ಮದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸನ್ಮಾನ: ಈ ಸಂದರ್ಭದಲ್ಲಿ ಖಾಝಿ ಗಳಾದ ತ್ವಾಕ ಅಹ್ಮದ್ ವೌಲವಿ, ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ, ವಿ.ಕೆ. ಅಬೂಬಕರ್ ಮುಸ್ಲಿಯಾರ್ ಹಾಗೂ ಮುಖ್ಯ ಅತಿಥಿಗಳಾದ ಎಂ. ಎ.ಖಾಸಿಂ ಮುಸ್ಲಿಯಾರ್ ತಾಯಲಂಗಾಡಿ, ಡಾ. ಶಾಹ್ ಮುಸ್ಲಿಯಾರ್ ಇವರನ್ನು ಅಲ್ ಹಾದಿ ಇಬ್ರಾಹೀಂ ತಂಙಳ್ ನೇತೃತ್ವ ದಲ್ಲ್ಲಿ ಜಮಾಅತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶೌಕತ್ ಅಲಿ ವೌಲವಿ ವೆಲ್ಲಮುಂಡ ಮುಖ್ಯ ಪ್ರಭಾಷಣ ಮಾಡಿದರು. ಜಮಾಅತ್ ಕಾರ್ಯ ದರ್ಶಿ ಕೆ.ಎ. ಯಹ್ಯಾ ಸ್ವಾಗತಿಸಿದರು. ಸಿರಾಜ್ ಬಡ್ಡಮೆ ವಂದಿಸಿದರು. ಕೆ. ಮುಹಮ್ಮದ್ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ದ್ಸಿಕ್ರ್ ಹಲ್ಕಾದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು. ಬಳಿಕ ಅನ್ನದಾನ ಕಾರ್ಯಕ್ರಮ ನಡೆಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ