| ಶಿಕ್ಷಿಸುವ ಅಧಿಕಾರ ಬೇಡ ಲೋಕಾಯುಕ್ತಕ್ಕೆ ಹೆಚ್ಚು ಅಧಿಕಾರ ನೀಡಲು ಅಧಿಕಾರರೂಢರು ಯಾಕೆ ಮುಂದಾಗುತ್ತಿಲ್ಲ ಎಂದು ಕೇಳಿದಾಗ ‘ಯಾರು ಕೋಲು ಕೊಟ್ಟು ಪೆಟ್ಟು ತಿನ್ನಲು ಬಯಸುತ್ತಾರೆ’ ಎಂದರು. ಭ್ರಷ್ಟರನ್ನು ಶಿಕ್ಷಿಸುವ ಅಧಿಕಾರ ಲೋಕಾಯುಕ್ತಕ್ಕೆ ಬೇಕೆಂದು ನಾನು ಕೇಳುವುದಿಲ್ಲ. ವಿಚಾರಣೆ ನಡೆಸುವ ಸಂಸ್ಥೆ ಹಾಗೂ ಶಿಕ್ಷೆ ಕೊಡುವ ಸಂಸ್ಥೆ ಬೇರೆ ಇರಬೇಕೆಂದು ನಾನು ಬಯಸು ತ್ತೇನೆ ಎಂದು ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ನುಡಿದರು. |
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರಾಜ್ಯ ಮಟ್ಟದ ಅಂತರ ಕಾಲೇಜು ವಾಣಿಜ್ಯ, ಆಡಳಿತ ಹಾಗೂ ಸಾಂಸ್ಕೃತಿಕ ಉತ್ಸವ ‘ಎಂ.ಬ್ಯಾಟಲ್ಡ್’ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭ್ರಷ್ಟಾಚಾರದಲ್ಲಿ ತೊಡಗಿದ ವ್ಯಕ್ತಿ ಯನ್ನು ಕೇವಲ ಅಮಾನತು ಶಿಕ್ಷೆಗೆ ಗುರಿ ಪಡಿಸದೇ, ಆರು ತಿಂಗಳ ಬಳಿಕ ಜೈಲಿಗೆ ಅಟ್ಟಿದರೆ ಉಳಿದವರಿಗೆ ಎಚ್ಚರಿಕೆಯಾಗಬಹುದು ಎಂದವರು.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯಾಗಬೇಕಾಗಿದೆ. ಭ್ರಷ್ಟಾ ಚಾರ ಮಾಡಿ ಸಿಕ್ಕಿಬಿದ್ದ ವ್ಯಕ್ತಿಯನ್ನು ತ್ವರಿತ ವಿಚಾರಣೆ ನಡೆಸಿ ಆರು ತಿಂಗಳೊಳಗೆ ಶಿಕ್ಷೆಗೆ ಗುರಿಪಡಿಸಿದರೆ ಶೇ.50ರಷ್ಟು ಭ್ರಷ್ಟಾಚಾರ ಕಡಿಮೆಯಾಗಲಿದೆ ಎಂದು ನ್ಯಾ.ಹೆಗ್ಡೆ ಅಭಿಪ್ರಾಯಪಟ್ಟರು.
ಜನಪ್ರತಿನಿಧಿಗಳಿಗೆ ಜನರ ಕುರಿತಂತೆ ಯಾವುದೇ ಕಾಳಜಿ ಇರುವುದಿಲ್ಲ ಎಂಬುದು ಸಂಸತ್‌ನಲ್ಲಿ ಹಾಗೂ ವಿಧಾನ ಮಂಡಲದಲ್ಲಿ ಇತ್ತೀಚೆಗೆ ನಡೆದ ಕಾರ್ಯ ಕಲಾಪಗಳಿಂದ ಸ್ಪಷ್ಟವಾಗುತ್ತದೆ. ಸಂಸತ್‌ನಲ್ಲಿ ಜೆಪಿಸಿ ಹಾಗೂ ಪಿಎಸಿ ತನಿಖೆಯ ಕುರಿತಂತೆಯೇ ಎಲ್ಲಾ ಕಲಾಪ ಗಳು ವ್ಯರ್ಥಗೊಂಡವು. ಆದರೆ ನಮ್ಮ ಜನರಿಗೆ ಯಾವುದೇ ತನಿಖೆಯ ಬಗ್ಗೆ ಆಸಕ್ತಿ ಇಲ್ಲ. ಅವರಿಗೆ ಬೇಕಾಗಿರುವುದು ಕೋಟ್ಯಂತರ ರೂ. ಹಣ ಎಲ್ಲಿಗೆ ಹೋಗಿದೆ ಎಂಬುದು ಹಾಗೂ ಫಲಾನು ಭವಿಗಳು ಯಾರು ಎಂಬುದು. ಭ್ರಷ್ಟಾ ಚಾರದ ವಿಷಯದಲ್ಲಿ ಎಲ್ಲ ಪಕ್ಷಗಳು ಒಂದಾಗಿರುತ್ತಾರೆ ಎಂದರು.
ನಾವು, ನೀವು ಆಯ್ಕೆ ಮಾಡುವ ಜನಪ್ರತಿನಿಧಿಗಳು ನಮ್ಮ ಸೇವೆಗೆ ಬದ್ಧರಾಗಿಬೇಕು. ಅವರು ನಮ್ಮ ಸೇವಕರು, ಜನರು ಅವರ ಮಾಲಕರು. ಆದರೆ ಇಂದು ಅದು ಅದಲು-ಬದಲಾಗಿದೆ. ಇದಕ್ಕೆ ವ್ಯವಸ್ಥೆ ಯನ್ನೇ ಬದಲಿಸಬೇಕಿದೆ ಎಂದರು.
ಲೋಕಾಯುಕ್ತದ ಕಾರ್ಯಾಚರಣೆಯಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ ಎಂದು ಭಾವಿಸು ತ್ತೀರಾ ಎಂದು ವಿದ್ಯಾರ್ಥಿ ಯೊಬ್ಬರು ಅವರನ್ನು ಪ್ರಶ್ನಿಸಿದಾಗ, ಹೆಚ್ಚೆಂದರೆ ಶೇ.5ರಷ್ಟು ಭ್ರಷ್ಟತೆಯನ್ನು ನಾವು ಪತ್ತೆ ಹಚ್ಚಿರಬಹುದು ಎಂದರು.
2009ರಲ್ಲಿ 186 ಮಂದಿ ಯನ್ನು ನಾವು ಲೋಕಾಯುಕ್ತದ ಬಲೆಗೆ ಕೆಡವಿದರೆ, ಕಳೆದ ವರ್ಷ 342 ಮಂದಿ ನಮ್ಮ ಬಲೆಗೆ ಬಿದ್ದಿದ್ದರು. ಈ ವರ್ಷ ಒಂದೂವರೆ ತಿಂಗಳಲ್ಲಿ 46 ಮಂದಿ ಸಿಕ್ಕಿ ಬಿದ್ದಿದ್ದಾರೆ. ದುರಾದೃಷ್ಟವೆಂದರೆ ಇವರಲ್ಲಿ ಯಾರಿಗೂ ಶಿಕ್ಷೆಯೇ ಆಗಿಲ್ಲ. ಕೆಲವರಿ ಗಂತು ಭಡ್ತಿಯೂ ಸಿಕ್ಕಿದೆ ಎಂದವರು ವಿಷಾದದಿಂದ ನುಡಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ