ಮುಲ್ಕಿ: ಹಳೆಯಂಗಡಿ ಗ್ರಾ. ಪಂ. ವ್ಯಾಪ್ತಿಯ ಇಂದಿರಾನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಈ ಹಿನ್ನೆಲೆಯಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಹಳೆಯಂಗಡಿ ವಲಯದ ವತಿಯಿಂದ ಮನೆ ಮನೆಗೆ ನೀರು ವಿತರಿಸಿ ಜನಪ್ರತಿ ನಿಧಿಗಳ ವಿರುದ್ಧ ಮಂಗಳವಾರ ವಿನೂ ತನ ರೀತಿಯಲ್ಲಿ ಪ್ರತಿಭಟನೆ ನಡೆಸಿತು.
ಇನ್ನು ಎರಡು ಮೂರು ದಿನಗಳಲ್ಲಿ ನೀರು ಬರದಿದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ನಡೆಸಲಾ ಗುವುದೆಂದು ಎಸ್‌ಡಿಪಿಐ ಇಂದಿರಾ ನಗರ ಘಟಕಾ ಧ್ಯಕ್ಷ ಮಮ್ತಾಝ್ ಅಲಿ ಎಚ್ಚರಿಸಿದ್ದಾರೆ. ಈ ಸಂದರ್ಭ ಎಸ್‌ಡಿಪಿಐ ಕಾರ್ಯ ಕರ್ತರಾದ ಬೊಳ್ಳೂರು ಘಟಕಾಧ್ಯಕ್ಷ ಸಿದ್ದೀಕ್ ಬೊಳ್ಳೂರು, ಎಸ್‌ಡಿಪಿಐ ಕಾರ್ಯಕರ್ತರಾದ ಹಾರಿಸ್ ಇಂದಿರಾನಗರ, ಇಕ್ಬಾಲ್, ಎ.ಕೆ. ಜೀಲಾನಿ, ನಾಗರಿಕರಾದ ಅಕ್ಬರ್ ಅಲಿ, ಯಾಕೂಬ್ ಅಲಿ ಹಾಜರಿದ್ದರು.
ಕಳೆದು ಎರಡು ವಾರಗಳಿಂದ ಇಂದಿರಾನಗರ ಪ್ರದೇಶದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಇಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಪ್ರತಿ ಭಟನೆ ಅನಿವಾರ್ಯ ಎಂದು ಎಸ್‌ಡಿಪಿಐ ಮುಖಂಡರು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ