ಶುಕ್ರವಾರ, ಫೆಬ್ರವರಿ 11, 2011

ಚರ್ಚ್ ದಾಳಿ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಪ್ರತಿಭಟನೆ

Bantwal
ಬಂಟ್ವಾಳ: ನ್ಯಾ.ಸೋಮಶೇಖರ್ ಆಯೋಗದ ವರದಿಯನ್ನು ಖಂಡಿಸಿ ಚರ್ಚ್ ದಾಳಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ವತಿಯಿಂದ ದಿ.8-2-2011ರಂದು ಬಿ.ಸಿ.ರೋಡಿನ ತಾಲೂಕು ಕಚೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್‌ನ ಮುಖಂಡರಾದ ಮುಖಂಡ ಅಬ್ದುರ್ರಝಾಕ್ ಸೀಮಾ, ರಿಯಾಝ್ ಮೊದಲಾದವರು ಭಾಗವಹಿಸಿದ್ದರು. ಬಿ.ಸಿ.ರೋಡ್ ವಲಯ ಕಾರ್ಯದರ್ಶಿ ನಝೀರ್ ಸ್ವಾಗತಿಸಿ, ಇಸ್ಲಾಯೀಲ್ ಬಾವ ವಂದಿಸಿದರು. ಅಬ್ದುಲ್ ಖಾದರ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ