ಗುರುವಾರ, ಫೆಬ್ರವರಿ 03, 2011

ಮಲೆಕುಡಿಯರಿಗೆ ಎಸ್‌ಡಿಪಿಐ ನೆರವು

ಬೆಳ್ತಂಗಡಿ: ಸುಲ್ಕೇರಿ ಗ್ರಾಮದ ನಾಯ್ದಗುರಿಯಲ್ಲಿ ಮಲೆಕುಡಿಯರ ಆರು ಬಡ ಮನೆಗಳನ್ನು ಬೀದಿಪಾಲು ಮಾಡಿದ ಸರಕಾರ ಹಾಗೂ ಆಡಳಿತ ವರ್ಗದ ನೀತಿಯನ್ನು ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ತೀವ್ರವಾಗಿ ಖಂಡಿಸುತ್ತದೆ. ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದು ಇದೊಂದು ನೀಚ ಕೃತ್ಯವಾ ಗಿದೆ ಎಂದು ಅದು ಹೇಳಿದೆ.
ಸ್ಥಳಕ್ಕೆ ಭೇಟಿ ನೀಡಿದ ಎಸ್‌ಡಿಪಿಐ ಬೆಳ್ತಂಗಡಿ ತಾಲೂಕು ಸಮಿತಿ ನೊಂದ ಆರು ಕುಟುಂಬಗಳಿಗೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ನೀಡಿತು. ತಾಲೂಕು ಪ್ರಧಾನ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿ ಹಮೀದ್ ವೇಣೂರು, ಕುವೆಟ್ಟು ಗ್ರಾ.ಪಂ. ಸದಸ್ಯರಾದ ಮೊಹಮ್ಮದಾಲಿ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ