ಬೆಂಗಳೂರು: ಭೂಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿ ಪಕ್ಷದ ಗೌರವ ಉಳಿಸಿ ಎಂದು ರಾಷ್ಟ್ರೀಯ ನಾಯಕ ಎಲ್.ಕೆ.ಆಡ್ವಾಣಿ ಪಕ್ಷದ ಮುಖಂಡರಿಗೆ ಸಲಹೆ ಮಾಡಿದ್ದಾರೆ.
ನಿನ್ನೆ ದೆಹಲಿಯಲ್ಲಿ ಸೇರಿದ್ದ ಉನ್ನತಮಟ್ಟದ ಸಭೆಯಲ್ಲಿ ರಾಷ್ಟ್ರೀಯ ನಾಯಕ ಎಲ್.ಕೆ.ಆಡ್ವಾಣಿಯವರೇ ವಿಷಯವನ್ನು ಪ್ರಸ್ತಾಪಿಸಿ ಪರ್ಯಾಯ ನಾಯಕತ್ವಕ್ಕೆ ಮುಂದಾಗಿ ಎಂದಿದ್ದಾರೆ. ಭ್ರಷ್ಟಾಚಾರ ಆರೋಪದಿಂದ ಯಡಿಯೂರಪ್ಪ ಮುಕ್ತರಾಗುವವರೆಗೂ ಅವರು ಯಾವುದೇ ಅಧಿಕಾರದಲ್ಲಿ ಮುಂದುವರಿಯಬಾರದು. ಅವರನ್ನು ಮುಖ್ಯಮಂತ್ರಿಯನ್ನಾಗಿ ಮುಂದುವರಿಸಿದಷ್ಟು೧ ಪಕ್ಷ ಕಳಂಕ ಹೊತ್ತುಕೊಳ್ಳಬೇಕಾಗುತ್ತದೆ ಎಂದವರು ತಿಳಿಸಿದರು.
ಕರ್ನಾಟಕದಲ್ಲಿ ವಿಧಾನಸಭೆಯನ್ನು ವಿಸರ್ಜಿಸದೆ ಮತ್ತೊಬ್ಬ ನಾಯಕನ ಮುಖಂಡತ್ವದಲ್ಲಿ ಸರಕಾರ ರಚನೆಯಾಗಲಿ. ಯಾವುದೇ ಕಾರಣಕ್ಕೂ ಮುಖ್ಯ ಮಂತ್ರಿಯನ್ನಾಗಿ ಯಡಿಯೂರಪ್ಪರವರನ್ನು ಮುಂದುವರಿಸಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಸಂದೇಶವನ್ನು ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಗೂ ರವಾನೆ ಮಾಡಿದ್ದಾರೆ. ಆದರೆ ಯಡಿಯೂರಪ್ಪ ಪ್ರಕರಣದ ಬಗ್ಗೆ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿ. ಆ ನಂತರ ನಿರ್ಧಾರ ಕೈಗೊಳ್ಳೊಣ ಎಂದು ಬಿಗಿ ಪಟ್ಟು ಹಿಡಿದಿದ್ದಾರೆ. ಆದರೆ ಇದಕ್ಕೆ ಆಡ್ವಾಣಿ ಮಾತ್ರ ಸಮ್ಮತಿಸಿಲ್ಲ. ವರಿಷ್ಟರೇ ರಾಜ್ಯರಾಜಕೀಯಕ್ಕೆ ಮದ್ಯಪ್ರವೇಶಿಸಿ ಭ್ರಷ್ಟಾಚಾರದ ಹಗರಣಗಳಿಗೆ ತೆರೆ ಎಳೆಯಲು ಮುಂದಾಗಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ