ಶುಕ್ರವಾರ, ಫೆಬ್ರವರಿ 25, 2011

’ಸೀರತುನ್ನಬಿ’ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ವಿಟ್ಲ

image
\
ಬಂಟ್ವಾಳ, ಫೆಬ್ರವರಿ ೨೫: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ವಿಟ್ಲ ವಲಯದ ವತಿಯಿಂದ ಪ್ರವಾದಿ(ಸ.ಅ)ರ ಜನ್ಮ ಮಾಸದ ಅಂಗವಾಗಿ ಫೆಬ್ರವರಿ ೨೪ರಂದು ಸಂಜೆ ’ಸೀರತುನ್ನಬಿ’ ಕಾರ್ಯಕ್ರಮವು ಕಲ್ಲಡ್ಕ ಜಂಕ್ಷನ್‌ನಲ್ಲಿ ಜರುಗಿತು.


ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದನಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಇಮಾಮ್ಸ್ ಕೌನ್ಸಿಲ್‌ನ ರಾಷ್ಟ್ರವ್ಯಾಪಿ ಕಾರ್ಯಚಟುವಟಿಕೆಯ ಬಗ್ಗೆ ಚುಟುಕಾಗಿ ವಿವರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಶರೀಫ್ ಇವರು ಮುಖ್ಯ ಪ್ರಭಾಷಣಗೈಯುತ್ತಾ ಪ್ರವಾದಿ ಪ್ರೇಮವೆಂಬುದು ಅನುಸರಣೆಯಾಗಿದೆ ಮತ್ತು ಮನುಷ್ಯ ಜೀವನಕ್ಕೆ ಮಾರ್ಗದರ್ಶನವೆಂಬುದು ಮೂಲಭೂತ ಅಗತ್ಯತೆಯಾಗಿದೆ ಅಂತಹ ಮಾರ್ಗದರ್ಶನವನ್ನು ಪ್ರವಾದಿಯವರು ಈ ಭೂಲೋಕಕ್ಕೆ ನೀಡಿದ್ದಾರೆ ಎಂದರು. ಹಾಗೂ ಒಂದು ಉತ್ತಮವಾದ ರಾಷ್ಟ್ರವನ್ನು ನಿರ್ಮಿಸಲು ಬೇಕಾದ ತ್ಯಾಗ ಬಲಿದಾನಗಳ ಅಗತ್ಯತೆಯನ್ನು ವಿವರಿಸಿದರು.

ವೇದಿಕೆಯಲ್ಲಿ ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಇಲ್ಯಾಸ್ ತುಂಬೆ, ಫ್ರೀಡಂ ಚಾರಿಟೇಬಲ್ ಟ್ರಸ್ಟ್ (ರಿ.) ಮಿತ್ತೂರು ಇದರ ಅಧ್ಯಕ್ಷರಾದ ಶರೀಫ್ ಕೊಡಾಜೆ, ಪಾಪ್ಯುಲರ್ ಫ್ರಂಟ್ ವಿಟ್ಲ ವಲಯಾಧ್ಯಕ್ಷರಾದ ಝಕರಿಯಾ ಗೋಳ್ತಮಜಲು ಇವರು ಉಪಸ್ಥಿತರಿದ್ದರು.


ಇಮಾಮ್ಸ್ ಕೌನ್ಸಿಲ್‌ನ ವಲಯಾಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಖ್ ಇವರು ಸಭೆಯನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ ಮುನೀರ್ ಕಲ್ಲಡ್ಕ ವಂದಿಸಿದರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ