ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಶುಕ್ರವಾರ, ಫೆಬ್ರವರಿ 25, 2011
ಜುಮಾ ನಮಾಜಿಗೆ ತೆರಳಿದ ಅಕ್ಬರ್ ಕಬೀರ್ ಬರ್ಬರಹತ್ಯೆ .....
ಶುಕ್ರವಾರದ ಜುಮಾ ನಮಾಝ್‌ಗಾಗಿ ಸ್ನೇಹಿತ ನಝೀರ್‌ನ ಬೈಕ್‌ನಲ್ಲಿ ಇನ್ನೊಬ್ಬ ಸ್ನೇಹಿತ ಸಫ್ರಾಝ್ ನೊಂದಿಗೆ ಹೋಗುತ್ತಿದ್ದಾಗ ಮಸೀದಿಯ ಸ್ವಲ್ವವೇ ದೂರದಲ್ಲಿ ಬೈಕ್‌ಗೆ ಸ್ಕಾರ್ಪಿಯೋ ಢಿಕ್ಕಿ ಹೊಡೆದು ದುಷ್ಕರ್ಮಿಗಳು ಕಬೀರ್‌ನ ಮೇಲೆ ಮಾರಕ ಆಯುಧಗಳಿಂದ ಇರಿದು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಈ ಸಂದರ್ಭ ಬೈಕ್ ಸವಾರ ನಝೀರ್ ಮತ್ತು ಸಫ್ರಾಝ್‌ರಿಗೂ ಗಾಯವಾಗಿದ್ದು, ಆ ಪೈಕಿ ಒಬ್ಬನ ಸ್ಥಿತಿ ಗಂಭೀರ ಇದೆ ಎನ್ನಲಾಗಿದೆ. ಗಾಯಾಳುಗಳನ್ನು ನಗರದ ತೇಜಸ್ವಿನಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಕಾರ್ಪಿಯೋದಲ್ಲಿ ಮೂರ್ನಾಲ್ಕು ದುಷ್ಕರ್ಮಿಗಳಿದ್ದರು ಎಂದು ತಿಳಿದು ಬಂದಿದೆ. ಕೆಲವು ವರ್ಷಗಳ ಹಿಂದೆ ಮಂಗಳೂರು ತಾ.ಪಂ. ಅಧ್ಯಕ್ಷ ಜಬ್ಬಾರ್ ಮಲ್ಲೂರ್ ರನ್ನು ಕೂಡ ಶುಕ್ರವಾರದ ಜುಮಾ ನಮಾಝ್‌ನ ವೇಳೆ ಕಚೇರಿಯಲ್ಲೇ ಕೊಲೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ