ಶುಕ್ರವಾರ, ಫೆಬ್ರವರಿ 11, 2011

ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ವರ್ಗಾವಣೆಯನ್ನು ವಿರೋಧಿಸಿ ಪಿಎಫ್‌ಐ ಹಾಗೂ ದಸಂಸದ ವತಿ ಯಿಂದ ಗುರುವಾರ ಪುತ್ತೂರಿನ ಬಸ್ ನಿಲ್ದಾಣದ ಬಳಿ ಪ್ರತಿಭಟನೆ

ಪುತ್ತೂರು, ಬಂಟ್ವಾಳದಲ್ಲೂ ಪ್ರತಿಭಟನೆ
ಪುತ್ತೂರು: ಪುತ್ತೂರು ಉಪವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ವರ್ಗಾವಣೆಯನ್ನು ವಿರೋಧಿಸಿ ಪಿಎಫ್‌ಐ ಹಾಗೂ ದಸಂಸದ ವತಿ ಯಿಂದ ಗುರುವಾರ ಪುತ್ತೂರಿನ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.

ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಲತೀಫ್ ಪುತ್ತೂರು ಪ್ರತಿಭಟನ ಕಾರರನ್ನು ಉದ್ದೇಶಿಸಿ ಮಾತನಾಡಿ ಪುತ್ತೂರು ಎಎಸ್ಪಿ ವರ್ಗಾವಣೆಯಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಕೈವಾಡ ಗಳಿದ್ದು ಇಂತಹ ಷಡ್ಯಂತ್ರ ದಿಂದ ಇಲಾಖೆ ಯಲ್ಲಿರುವ ನಿಷ್ಟಾವಂತ ಅಧಿಕಾ ರಿಗಳಿಗೆ ತೊಂದರೆಯಾಗಲಿದೆ. ಪೊಲೀ ಸರ ನೈತಿಕ ಬಲ ಕುಸಿಯುವ ಭೀತಿ ಉಂಟಾಗಿದೆ. ಇದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯ ಎಂದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ಎಂ.ಕೂಸಪ್ಪ ಮಾತನಾಡಿ ಜನಪರ ಕಾಳಜಿಯಲ್ಲಿ ಕೆಲಸ ನಿರ್ವಹಿ ಸುವ ಎಎಸ್ಪಿಯಂತಹ ಅಧಿಕಾರಿಗಳನ್ನು ವರ್ಗಾಯಿಸುವ ಮೂಲಕ ಪೊಲೀಸ್ ಇಲಾಖೆಯನ್ನು ಕೈಗೊಂಬೆಯಂತೆ ಕುಣಿಸುತ್ತಿದೆ. ಸಾರ್ವಜನಿಕರ ಹಿತದೃಷ್ಟಿ ಯಿಂದ ಹಾಗೂ ಇಂತಹ ಜನ ವಿರೋಧಿ ನಿಲುವುಗಳನ್ನು ತಡೆಯಲು ರಾಜ್ಯ ಪಾಲರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಯನ್ನು ಅವಲೋಕಿಸಬೇಕು ಎಂದು ಆಗ್ರಹಿಸಿದರು.
  ಪ್ರತಿಭಟನೆಯಲ್ಲಿ ಪಿಎಫ್‌ಐ ನೇತಾ ರರಾದ ಅಬ್ದುಲ್ ಹಮೀದ್ ಸಾಲ್ಮರ, ಕೆ.ಎಚ್.ಖಾಸಿಂ, ಹಮೀದ್, ಬದ್ರು ದ್ದೀನ್ ಪುಣಚ, ಸಿದ್ದೀಕ್ ಪುತ್ತೂರು, ಅಶ್ರಫ್ ಬಾವು, ಮುಸ್ತಫಾ ಉಪ್ಪಿನಂ ಗಡಿ, ಉಮರ್ ಕೂರ್ನಡ್ಕ, ಮೂಸಾ ಕುಂಞಿ, ದಸಸಂದ ಸೇಸಪ್ಪ ನೆಕ್ಕಿಲು ಮತ್ತಿತರರು ಉಪಸ್ಥಿತರಿದ್ದರು.

ಬಂಟ್ವಾಳ:  ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಕೋಮುವಾದಿ ಗೂಂಡಾಗಳ ವರ್ತನೆಯನ್ನು ಸಮರ್ಥಿ ಸುತ್ತಿರುವ ಸರಕಾರ ಪೊಲೀಸ್ ಅಧಿಕಾರಿಗಳನ್ನು ಮನಬಂದಂತೆ ಕುಣಿಸುತ್ತಿದೆ. ಈ ಹಿಂದೆ ದಕ್ಷ ಜಿಲ್ಲಾಧಿ ಕಾರಿಯಾಗಿರುವ ಪೊನ್ನುರಾಜ್‌ರನ್ನು ರಾಜಕೀಯ ಮಸಲತ್ತು ಮಾಡಿಯೇ ಜಿಲ್ಲೆಯಿಂದ ವರ್ಗಾಯಿಸಲಾಗಿತ್ತು. ಈ ಸಂದಭರ್ದಲ್ಲಿ ಯಾವ ರಾಜಕಾರ ಣಿಗಳೂ ಮಾತಾಡದಂಥ ದುಸ್ಥಿತಿ ಜಿಲ್ಲೆಗೆ ಇದಕ್ಕಿಂತ ಮುಂಚೆ ಎಂದೂ ಬಂದಿರಲಿಲ್ಲ ಎಂದು ಪಿಎಫ್‌ಐ ವಲಯಾಧ್ಯಕ್ಷ ಸಾಹುಲ್ ಹಮೀದ್ ಎಸ್.ಎಚ್ ಟೀಕಿಸಿದ್ದಾರೆ.
ಪದಾಧಿಕಾ ರಿಗಳಾದ ಅಕ್ಬರ್ ಅಲಿ, ಹಮೀದ್ ಸಾಲ್ಮರ, ಸಾಹುಲ್ ಎಸ್.ಪಿ ಅತಿಥಿ ಗಳಾಗಿದ್ದರು. ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ