ಬಿ.ಜೆ.ಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು :
ಇತ್ತ ಕಾಂಗ್ರೆಸ್ ಸೋಲಿಗೆ ಎಸ್.ಡಿ.ಪಿ.ಐ ಕಾರಣ ಎಂದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಅತ್ತ ಎಸ್.ಡಿ.ಪಿ.ಐ ಕಾರ್ಯಕರ್ತರು ತಮ್ಮ ಮೊದಲ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪಕ್ಷದ ಮತಗಳಿಕೆಯನ್ನು ನೋಡಿ ಉಭಯ ಜಿಲ್ಲೆಗಳಲ್ಲಿ ಪಕ್ಷ ಜನರ ನಡುವೆ ಜನಪ್ರಿಯವಾಗಿ ಬೆಳೆಯುತ್ತಿರುವುದನ್ನು ಮನಗಂಡಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಗೆದ್ದರೂ ಒಂದೇ . ಅವೆರಡರಲ್ಲೂ ಯಾವುದೇ ವ್ಯತಾಸವಿಲ್ಲ , ಕಾಂಗ್ರೆಸ್ ಕೇವಲ ಇದುವರೆಗೆ ಅಲ್ಪಸಂಖ್ಯಾತರ ಮತಗಳಿಕೆಗಾಗಿ ಅವರನ್ನು ಬಳಸಿಕೊಂಡಿದೆಯೇ ಹೊರತು ಅವರ ಅಭಿವೃದ್ಧಿ ಮತ್ತು ರಕ್ಷಣೆಗೆ ಶ್ರಮಿಸಿಲ್ಲ. ಇದರಿಂದ ಸಹಜವಾಗಿ ಅಲ್ಪಸಂಖ್ಯಾತರು ಬಿಜೆಪಿಯ ಜೊತೆಗೆ ಕಾಂಗ್ರೆಸ್ ಬಗ್ಗೆಯೂ ಭ್ರಮನಿರಸನಗೊಂಡಿದ್ದಾರೆ. ಈ ಕಾರಣದಿಂದ ಕಾಂಗ್ರೆಸ್ ಸೋಲಿನ ಬಗ್ಗೆ ಅಲ್ಪಸಂಖ್ಯಾತರು ಯಾವುದೇ ರೀತಿಯಲ್ಲಿ ಚಿಂತಿತರಾಗಿಲ್ಲ ಎಂಬುವುದು ಎಸ್.ಡಿ.ಪಿ.ಐ ಕಾರ್ಯಕರ್ತರ ಅಭಿಪ್ರಾಯ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ