ಸೋಮವಾರ, ಜನವರಿ 10, 2011

ಬ್ಯಾಂಕ್‌ ಆಫ್‌ ಇಂಡಿಯಾ NRI ಗಳಿಗೆ ರಿಯಾಯಿತಿ

ಮುಂಬಯಿ: ಪ್ರವಾಸಿ ಭಾರತೀಯ ದಿವಸ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾ ಅನಿವಾಸಿ ಭಾರತೀಯ(ಎನ್‌ಆರ್‌ಐ)ರಿಗೆ ಗೃಹಸಾಲ ಮತ್ತು ವಾಹನ ಸಾಲಗಳಲ್ಲಿ 0.5ಶೇ ರಿಯಾಯಿತಿ ಘೋಷಿಸಿದೆ.

ಭಾರತದ ಸಾಗರೋತ್ತರ ವ್ಯವಹಾರ ಸಚಿವ ವಯಲಾರ್‌ ರವಿ ಅವರು ಬ್ಯಾಂಕ್‌ ಆಫ್‌ ಇಂಡಿಯಾದ ಸ್ಟಾಲ್‌ಗೆ ಭೇಟಿ ಬ್ಯಾಂಕ್‌ ಎನ್‌ಆರ್‌ಐಗಳಿಗೆ ಸಲ್ಲಿಸುವ ಸೇವೆಯನ್ನು ಶ್ಲಾಘಿಸಿದರು. ಸಚಿವರನ್ನು ಸ್ವಾಗತಿಸಿದ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶೇಷಾದ್ರಿ ಅವರು ಸಾರ್ವಜನಿಕ ರಂಗದ ವಿತ್ತೀಯ ಸಂಸ್ಥೆ ಬ್ಯಾಂಕ್‌ ಆಫ್‌ ಇಂಡಿಯಾ ಕೇಂದ್ರ ಸರ್ಕಾರದ ಎನ್‌ಆರ್‌ಐಗಳಿಗಾಗಿ ಜಾರಿಗೊಳಿಸಿದ ವಿವಿಧ ಕ್ಷೇಮಾವೃದ್ದಿ ಯೋಜನೆಗಳಿಗೆ ನೆರವಾಗಲು ಬದ್ಧವಾಗಿದೆ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ