ದುರುದ್ದೇಶದ ಸಸ್ಪೆಂಡ್: ಖಾದರ್ ಆರೋಪ
ಮಂಗಳೂರು: ನಾನು ವಿಧಾನಸಭೆಯಲ್ಲಿ ಅಸಭ್ಯವಾಗಿ ವರ್ತಿಸಿ ರುವುದಾಗಲೀ ಅಥವಾ ಕಲಾಪಕ್ಕೆ ಅಡ್ಡಿಪಡಿಸುವಂತಹ ಕೆಲಸವನ್ನು ಮಾಡಿಲ್ಲ. ಅಲ್ಲದೆ ನನ್ನ ಮೇಲೆ ಯಾವುದೇ ರೀತಿಯ ಆರೋಪವೂ ಸಾಬೀತಾಗಿಲ್ಲ. ಆದರೂ ನನ್ನನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದ್ದು, ಇದು ದುರುದ್ದೇಶದಿಂದ ಕೂಡಿದೆ ಎಂಬ ಆರೋಪ ಶಾಸಕ ಯು.ಟಿ. ಖಾದರ್‌ರದ್ದಾಗಿದೆ.
ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖಾದರ್ ಪೊಲೀಸ್ ಕಾನ್‌ಸ್ಟೇಬಲ್ ಲಿಂಗಣ್ಣ ಎಂಬವರು ನೀಡಿದ ಲಿಖಿತವಲ್ಲದ ಹೇಳಿಕೆಯನ್ನು ಪಡೆದ ಸಭಾಧ್ಯಕ್ಷರು ಅದನ್ನೇ ಪುರಾವೆಯಾಗಿ ಬಳಸಿದ್ದರು. ಆದರೆ ವೀಡಿಯೋ ದೃಶ್ಯಾವಳಿಯಲ್ಲಿ ತಾನು ಪತ್ರಕರ್ತರು ಮತ್ತು ವಿದ್ಯುನ್ಮಾನ ಮಾಧ್ಯಮದವರಿಗೆ ಸದನದ ಒಳಗೆ ಬರಲು ಸಹಕರಿಸಿದ್ದನ್ನು ಸಮಿತಿ ಗಮನಿಸಿದ್ದಾಗಿ ತಿಳಿಸಿದ್ದರೂ ಸಭಾಧ್ಯಕ್ಷರು ಮಾತ್ರ ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ತನ್ನ ಉಚ್ಛಾಟಿಸುವ ಮೂಲಕ ಇದುವರೆಗೂ ವಿಧಾನಸಭೆಯ ಇತಿಹಾಸದಲ್ಲೇ ನಡೆಯದಂತಹ ಘಟನೆಗೆ ನಾಂದಿ ಹಾಡಿದ್ದಾರೆ. ಆದರೆ ನನ್ನನ್ನು ಎಷ್ಟು ಬಾರಿ ಉಚ್ಛಾಟಿಸಿದರೂ ಜನರು ಮತ್ತೆ ಚುನಾಯಿಸುತ್ತಾರೆ ಎಂಬ ವಿಶ್ವಾಸವನ್ನೂ ಖಾದರ್ ವ್ಯಕ್ತಪಡಿಸಿದ್ದಾರೆ.
ಶಾಸಕರ ಭವನಕ್ಕೆ ಬಾಂಬ್ ಇಟ್ಟ ಗಿರೀಶ್ ಮಟ್ಟಣ್ಣನವರ್‌ಗೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ ಕೀರ್ತಿ ನೀಡಿ ಬಿಜೆಪಿಯಲ್ಲಿ ಸ್ಥಾನಮಾನ ನೀಡಲಾಗಿದೆ. ಆದರೆ ಯಡಿಯೂರಪ್ಪ ನೇತೃತ್ವದ ಸರಕಾರ ಮಾಡಿದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುವ ನಮಗೆ ಅಮಾನತು ಗೊಳಿಸಲಾಗಿದ್ದು ಇದು ಯಾವ ನ್ಯಾಯವೆಂದು ಖಾದರ್ ಪ್ರಶ್ನಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ