ಮಂಗಳವಾರ, ಜನವರಿ 18, 2011

ಮುಸ್ಲಿಮರೇ ಎಸ್ಪಿ ಮಾತು ಕೇಳಿದಿರಾ?

ಜಿಲ್ಲೆಯ ದಕ್ಷ ಎಸ್ಪಿ ಸುಬ್ರಹ್ಮಣ್ಯೇಶ್ವರ ರಾವ್ ಅವರು ಇತ್ತೀಚೆಗೆ ಕಾರ‍್ಯಕ್ರಮವೊಂದರಲ್ಲಿ ಮುಸ್ಲಿಮರು ಪೊಲೀಸ್ ಇಲಾಖೆಗೆ ಸೇರಬೇಕೆಂದು ಕರೆ ನೀಡಿದ್ದರು. ನಮ್ಮ ಸಮುದಾಯ ಚಿಂತಕರ ಕರೆಯೂ ಇದೇ ಆಗಿದೆ. ಮುಸ್ಲಿಮರು ಸರಕಾರಿ ಕೆಲಸಕ್ಕೆ ಸೇರುವುದು ಕಡಿಮೆ. ಮುಖ್ಯವಾಹಿನಿಯಿಂದ ದೂರವೇ ಇರುವ ಮುಸ್ಲಿಮ್ ಯುವಕರನ್ನು ಕೆಲವು ಸಂಘಟನೆಗಳು ಇಸ್ಲಾಂ ಧರ್ಮದ ಹೆಸರಿನಲ್ಲಿ ಸೆಳೆದು ಭಯೋತ್ಪಾದನೆಗೆ ಉಪಯೋಗಿಸುತ್ತಿರುವುದು ಕೂಡಾ ಕಂಡುಬಂದ ಸತ್ಯ. ರಿಯಾಜ್ ಭಟ್ಕಳ್ ಇದಕ್ಕೆ ಉತ್ತಮ ಉದಾಹರಣೆ. ಈತ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದವ. ಇಂಥವರು ಮುಸ್ಲಿಮ್ ಸಮಾಜಕ್ಕೆ ಶಾಪವಾಗುತ್ತಿದ್ದಾರೆ. ಇದು ಎಲ್ಲಯವರೆಗೆ ಮುಂದುವರಿದಿದೆ ಎಂದರೆ ಹಿಂದೂಗಳು ಭಯೋತ್ಪಾದನೆ ಮಾಡಿದರೂ ಭತೋತ್ಪಾದನೆ ಎಂದ ತಕ್ಷಣ ಗಮನ ಹರಿ ಯುವುದು ಮುಸ್ಲಿಮರತ್ತ ಎನ್ನುವ ವಿಷಯ ಚಿಂತೆ ಮೂಡಿ ಸುತ್ತದೆ. ಹೆಚ್ಚಿನವರು ವಿದ್ಯಾಭ್ಯಾಸವನ್ನೂ ಮುಂದು ವರಿಸಿರು ವುದಿಲ್ಲ. ಪ್ರಾಥಮಿಕ ಶಾಲೆ ಕಲಿತು ಗುಜರಿ ಅಂಗಡಿಗೋ, ಚಪ್ಪಲಿ ಅಂಗಡಿಯಲ್ಲೋ ಕೆಲಸಕ್ಕೆ ಸೇರುತ್ತಾರೆ. ನಾನಿಲ್ಲಿ ಉದ್ಯೋಗದ ಬಗ್ಗೆ ಟೀಕೆ ಮಾಡುತ್ತಿಲ್ಲ. ಆದರೆ ಹೆಚ್ಚಿನ ಯುವಕರು ಇದೇ ವೃತ್ತಿಗಿಳಿದಾಗ ಸಮಾಜದಲ್ಲಿ ನಮ್ಮ ಸ್ಥಾನಮಾನದ ಬಗ್ಗೆ ಚಿಂತಿಸಬೇಕಾಗುತ್ತದೆ. ಆರ್ಥಿಕ ಸಮಸ್ಯೆಯಿಂದ ಹೆಚ್ಚಿನವರು ಉದ್ಯೋಗಕ್ಕೆ ತಿಲಾಂಜಲಿ ಇಡುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ ಈಗ ಮುಸ್ಲಿಮರು ಕುಟುಂಬ ನಿಯಂತ್ರಣದ ಬಗ್ಗೆ ಒಲವು ತೋರುತ್ತಿದ್ದಾರೆ. ಹಿಂದಿನಿಂದ ಹೆಚ್ಚಿನ ಮಕ್ಕಳನ್ನು ಹುಟ್ಟಿಸುವುದಿಲ್ಲ.ಈ ಬಗ್ಗೆ ಇತರರ ಟೀಕೆಯನ್ನು ಕೇಳಬೇಕಾದ ಅವಶ್ಯಕತೆಯೂ ನಮಗಿಲ್ಲ. ಇಂದು ಹಿಂದೂ ಮತ್ತು ಕ್ರೈಸ್ತರತ್ತ ಗಮನ ಹರಿಸಬೇಕಾದ ಅನಿವಾರ‍್ಯತೆಯಿದೆ. ಈ ಸಮುದಾಯದ ಹೆಚ್ಚಿನವರು, ಬಡವರು ಸೇರಿದಂತೆ ಒಂದು ಇಲ್ಲವೇ ಇಬ್ಬರು ಮಕ್ಕಳಿಗೆ ಸೀಮಿತ ಗೊಳಿಸುತ್ತಿದ್ದಾರೆ. ಈ ಮೂಲಕ ಅವರಿಗೆ ಉತ್ತಮ ವಿದ್ಯಾಭ್ಯಾಸ ದೊರಕುವಂತೆ ಮಾಡುತ್ತಿದ್ದಾರೆ. ಆದರೆ ನಮ್ಮವರು ಮಾತ್ರ ಮಕ್ಕಳನ್ನು ಹುಟ್ಟಿಸುವುದರಲ್ಲೇ ಸಾರ್ಥಕ ಕಾಣುತ್ತಿರುವುದು ವಿಪರ‍್ಯಾಸ.
ಇನ್ನಾದರೂ ನಮ್ಮ ಯುವಕರು ಸರಕಾರದ ಗುದ್ದೆಯತ್ತ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯೇಶ್ವರ ರಾವ್ ಅವರ ಕಳಕಳಿ ಮೆಚ್ಚತಕ್ಕದ್ದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ