ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರ ಚಿಂತನೆ
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಬಂದಿರುವ ಭ್ರಷ್ಟಾಚಾರದ ಆರೋಪ ಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಲು ಅನುಮತಿ ನೀಡುವ ಬಗ್ಗೆ ರಾಜ್ಯಪಾಲ ಹಂಸ ರಾಜ್ ಭಾರದ್ವಾಜ್ ಗಂಭೀರ ಚಿಂತನೆ ನಡೆಸಿದ್ದಾರೆ.
ಜಸ್ಟೀಸ್ ಫಾರ್ ಲಾಯರ್ ಫೋರಂ ಅವರು ಮುಖ್ಯಮಂತ್ರಿ ಮತ್ತು ಸರ್ಕಾರದ ವಿರುದ್ಧ ಅಕ್ರಮ ಗಣಿಗಾರಿಕೆ, ಸ್ವಜನಪಕ್ಷಪಾತ, ಭೂ ಹಗರಣ, ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದಾಖಲೆಗಳ ಸಮೇತ ೧೯೩೬ ಪುಟಗಳ ದೂರನ್ನು ರಾಜ್ಯಪಾಲರಿಗೆ ಸಲ್ಲಿಸಿದರು. ಈ ದೂರಿನ ಅನ್ವಯ ರಾಜ್ಯಪಾಲರು ಆರೋಪಗಳ ಬಗ್ಗೆ ಪರಿಶೀಲನಾ ಕಾರ್ಯ ಪೂರ್ಣ ಹಂತ ತಲುಪಿದ್ದು, ಆರೋಪದಲ್ಲಿ ಕೆಲವು ಸತ್ಯಾಂಶಗಳು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಭಿಪ್ರಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗಣರಾ ಜ್ಯೋತ್ಸವ ಕಳೆದ ನಂತರ ಮುಖ್ಯ ಮಂತ್ರಿಯವರ ವಿರುದ್ಧ ದೂರು ದಾಖಲಿಸಲು ಜಸ್ಟೀಸ್ ಫಾರ್ ಲಾಯರ್ ಫೋರಂಗೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಆರೋಪಗಳಿಗೆ ಸಂಬಂ ಧಿಸಿದಂತೆ ರಾಜ್ಯಪಾಲರು ಕಂದಾಯ, ನಗರಾಭಿವೃದ್ಧಿ, ಕೈಗಾರಿಕೆ, ಗಣಿ, ಇಲಾಖೆಗಳಿಂದ ಕೆಲವು ಮಹತ್ವದ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿ ದ್ದಾರೆ. ಅಲ್ಲದೆ ಮುಖ್ಯಮಂತ್ರಿಯವರ ಆಪ್ತರು ಮತ್ತು ಅವರ ಕುಟುಂಬ ವರ್ಗದವರಿಗೆ ಬಿಡಿಎ ನಿವೇಶನಗಳನ್ನು ಹಂಚಿ ಸ್ವಜನಪಕ್ಷಪಾತ ಮಾಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ದಿಂದ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಕಂದಾಯ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ಕೆಲವು ಮಾಹಿತಿ ಬರಲು ತಡವಾಗಿರುವುದರಿಂದ ಆಕ್ರೋಶಗೊಂಡ ರಾಜ್ಯಪಾಲರು ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಹಾಗೂ ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗಳನ್ನು ಕರೆಸಿಕೊಂಡು ಸಮಾಲೋಚನೆ ಮಾಡಿದ್ದಾರೆ. ಅಲ್ಲದೆ ಜನವರಿ ೨೦ರೊಳಗಾಗಿ ತಾವು ಕೇಳಿ ರುವ ದಾಖಲೆಗಳನ್ನು ರಾಜಭವನಕ್ಕೆ ನೀಡುವಂತೆ ಮುಖ್ಯಕಾರ್ಯದರ್ಶಿ ಯವರಿಗೆ ಸ್ಪಷ್ಟ ಆದೇಶ ಮಾಡಿದ್ದಾರೆ ಎಂದು ಇದೇ ಮೂಲಗಳು ತಿಳಿಸಿವೆ.
ಸರ್ಕಾರದ ವಿರುದ್ಧ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮೊಕದ್ದಮೆ ಹೂಡಲು ಅನುಮತಿ ನೀಡುವುದರ ಜೊತೆಗೆ ಕೆಲವು ಪ್ರಕರಣ ಗಳ ತನಿಖೆ ನಡೆಸುವಂತೆ ರಾಜ್ಯಪಾಲರೆ ಲೋಕಾಯುಕ್ತರಿಗೆ ವಹಿ ಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಯವರಲ್ಲದೆ ಅವರ ಸಹೋದ್ಯೋಗಿಗಳಾದ ಕರುಣಾಕರ ರೆಡ್ಡಿ, ಜನಾರ್ಧನ ರೆಡ್ಡಿ, ಶ್ರೀರಾಮುಲು ಸೇರಿದಂತೆ ಐವರು ಸಚಿವರ ಮೇಲೆ ಅಕ್ರಮ ಗಣಿಗಾರಿಕೆ ಹಾಗೂ ಭೂ ಹಗರಣಗಳ ಆರೋಪಗಳಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ