ಶನಿವಾರ, ಜನವರಿ 29, 2011

ಇಬ್ಬಗೆಯ ನೀತಿ...........ವಿಪರ್ಯಾಸ ಅಂದರೆ ಇದೇ ನೋಡಿ,

ಕರ್ನಾಟಕದಲ್ಲಿ ಮಾಧ್ಯಮಗಳು, ಪೊಲೀಸ್ ಇಲಾಖೆ ಹಾಗೂ ಕಾನೂನು ಇವೆಲ್ಲಾ ಕೆಲವೇ ಕೆಲವು ಮತಾಂಧರ ಮತ್ತು ರಾಜಕೀಯ ಪಕ್ಷಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ. ನೀವು ಮಾಧ್ಯಮಗಳಲ್ಲಿ ನೋಡಿರಬಹುದು. ಹೊನ್ನಾವರದಲ್ಲಿ ಶಿಕ್ಷಕನೊಬ್ಬನ ಶಿಕ್ಷೆ ಯಿಂದಾಗಿ ೧೧ ವರ್ಷದ ಮುಸ್ಲಿಂ ಹುಡುಗನೊಬ್ಬ ದಾರುಣ ವಾಗಿ ಮೃತಪಟ್ಟ. ಸಹಜವಾಗಿ ಆಕ್ರೋಶಗೊಂಡ ಹೆತ್ತವರು ಶಿಕ್ಷಕ ಸಿಗದೇ ಇದ್ದಾಗ ಶಿಕ್ಷಕರ ಕಚೇರಿಯ ಪೀಠೋಪಕರಣ ಗಳನ್ನು ಧ್ವಂಸ ಮಾಡಿದರು. ಅವರು ಹಾಗೇ ಮಾಡಿದ್ದು ಸರಿ ಎಂದು ನಾನು ಹೇಳುವುದಿಲ್ಲ. ಆದರೆ ಒಂದು ಮಾತು, ಇದೇ ಶಿಕ್ಷಕ ಮುಸ್ಲಿಮನಾಗಿದ್ದು ವಿದ್ಯಾರ್ಥಿ ಹಿಂದೂವಾಗಿದ್ದರೆ ಪರಿ ಸ್ಥಿತಿ ಏನಾಗುತ್ತಿತ್ತು? ಮೊನ್ನೆ ತಾನೇ ನಡೆದ ಘಟನೆ ಯೊಂದನ್ನು eಪಿಸುತ್ತೇನೆ. ಶಾಲೆಯೊಂದರಲ್ಲಿ ಕ್ರೈಸ್ತ ಮತೀಯ ಶಿಕ್ಷಕರು ಹಿಂದೂ ವಿದ್ಯಾರ್ಥಿಯೊಬ್ಬ ಕ್ಲಾಸಿಗೆ ಗೈರು ಹಾಜರಾದ ಮತ್ತು ತಡವಾಗಿ ಬರುತ್ತಿದ್ದ ಎಂಬ ಕಾರಣಕ್ಕೆ ಹೊಡೆದರು ಎಂಬ ನೆಪವೊಡ್ಡಿ ಹಿಂದೂ ಸಂಘಟನೆಯ ಕಾರ್ಯಕರ್ತರು ಶಿಕ್ಷಕನನ್ನು ಕ್ಷಮೆ ಕೇಳಿಸಿದರೂ ಅವರನ್ನು ಅಮಾ ನತುಪಡಿಸುವಲ್ಲಿ ಯಶಸ್ವಿಯಾದರು. ವಿಷಯ ಅದಲ್ಲ, ಮುಸ್ಲಿಂ ಬಾಲಕನ ಕೊಲೆಗೈದ ಶಿಕ್ಷಕರಿರುವ ಶಾಲೆಯ ಊರಾದ ಹೊನ್ನಾವರದಲ್ಲಿ ಹಿಂದೂ ಸಂಘಟನೆಯ ಕಾರ್ಯ ಕರ್ತರು ದಾಂಧಲೆ ನಡೆಸಿ ಹೊನ್ನಾವರ ಬಂದ್ ನಡೆಸಿದರು. ತಪ್ಪು ತಿಳಿಯಬೇಡಿ. ಇಲ್ಲಿ ಅವರು ಬಂದ್ ನಡೆಸಿದ್ದು, ಪೋಷ ಕರಿಗೆ ನ್ಯಾಯ ಸಿಗಲಿ ಎಂದಲ್ಲ. ಬದಲಾಗಿ ಗಮನಿಸಬೇಕಾದ ಅಂಶವೆಂದರೆ ಇಲ್ಲಿ ವ್ಯಕ್ತಿಯ ಜಾತಿಯನ್ನು ಆಧಾರಿಸಿ ಅಪರಾ ಧವನ್ನು ಪರಿಗಣಿಸಲಾಗುತ್ತದೆ. ಹಿಂದೂಗಳು ಎಲ್ಲಾದರೂ ಬಾಂಬ್ ಸ್ಫೋಟಿಸಿದ್ದು, ಆಧಾರ ಸಮೇತ ಆರೋಪಿ ಸಿಕ್ಕಿ ಬಿದ್ದರೂ ಕೂಡಾ ಆರ್‌ಎಸ್‌ಎಸ್‌ನವರಿಗೆ ಇದನ್ನು ಕೇಸರಿ ಭಯೋತ್ಪಾದನೆ, ಹಿಂದೂ ಭಯೋತ್ಪಾದನೆ ಎನ್ನಬಾರದಂತೆ. ಕೇಸರಿ ಭಯೋತ್ಪಾದಕರು ನಡೆಸಿದ ಸ್ಫೋಟ ಪ್ರಕರಣದಲ್ಲಿ ಬಲಿಪಶುಗಳಾಗಿ ಅಮಾಯಕ ಮುಸ್ಲಿಮರು ಈಗಲೂ ಬಂಧನ ದಲ್ಲಿದ್ದಾರೆ. ಆದರೆ ಕೇವಲ ಬೆರಳೆಣಿಕೆಯಷ್ಟು ಮುಸ್ಲಿಮರು ನಡೆಸಿದ ಬಾಂಬ್ ಸ್ಫೋಟಕ್ಕೆ ಎಲ್ಲಾ ಮುಸ್ಲಿಮರನ್ನು ಮುಸ್ಲಿಂ ಭಯೋತ್ಪಾದಕರೆಂದು ಕರೆಯಬಹುದಂತೆ, ನೆನಪಿರಲಿ. ಎಲ್ಲಾ ಮುಸ್ಲಿಮರೂ, ಹಿಂದೂಗಳೂ ಭಯೋತ್ಪಾದಕರಲ್ಲ. ಇನ್ನು ಮುಂದಾದರೂ ಅಪರಾಧಿಗಳ ಜಾತಿಯನ್ನು ಪರಿಗಣಿಸಿ ಶಿಕ್ಷೆಯ ತೀವ್ರತೆ ರೂಪಿಸುವ ಕಾನೂನು ಬರಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ