ಪುತ್ತೂರು: ನ್ಯಾಯದ ನಿರೀಕ್ಷೆಯಲ್ಲಿ ಬಾಬರಿ ಮಸ್ಜಿದ್ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕುಂಬ್ರ ವಲಯ ವತಿಯಿಂದ ಇತ್ತೀಚೆಗೆ ಕುಂಬ್ರದಲ್ಲಿ ಸೆಮಿನಾರ್ ಕಾರ್ಯಕ್ರಮವೊಂದು ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಂ.ಎ.ರಫೀಕ್, ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವುದಕ್ಕಾಗಿ ಬ್ರಿಟಿಷರು ರಜಪೂತರ ಕಾಲದಲ್ಲಿ ನಿರ್ಮಾಣವಾದ ಬಾಬರಿ ಮಸೀದಿಯನ್ನು ರಾಮಜನ್ಮಭೂಮೆಯೆಂದೂ, ಅಲ್ಲಿ ಸೀತೆಯ ಅಡುಗೆ ಕೋಣೆಯಿತ್ತೆಂದೂ ಸುಳ್ಳು ಕತೆಯನ್ನು ಬುದ್ಧ ಜ್ಯೋತಿಷಿಯೊಬ್ಬನ ಮೂಲಕ ಹೆಣೆದರು. ನ್ಯಾಯ ಒದಗಿಸಬೇಕಾಗಿದ್ದ ಲಕ್ನೊ ನ್ಯಾಯಪೀಠವು ನಂಬಿಕೆ ಹಾಗೂ ಪುರಾಣ ಕತೆಗಳ ಆಧಾರದಲ್ಲಿ ತೀರ್ಪನ್ನು ನೀಡಿ ಭಾರತೀಯರು ನ್ಯಾಯಾಲಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದರು ಎಂದರು.
ಕುಂಬ್ರ ವಲಯಾಧ್ಯಕ್ಷ ಅಬೂಬಕ್ಕರ್ ರಿಝ್ವನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಝೀಝ್ ಸಂಪ್ಯ, ಸಂಶುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನ್ಯಾಸರ್ ಸ್ವಾಗತಿಸಿ, ವಂದಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ