ಶುಕ್ರವಾರ, ಜನವರಿ 28, 2011

ಹಜ್ಜ್ ಯಾತ್ರಿಕರ ಗಮನಕ್ಕೆ

ಮಂಗಳೂರು, ಜ.28: ಪ್ರಸಕ್ತ ಸಾಲಿನಲ್ಲಿ ಹಜ್ಜ್ ಯಾತ್ರೆ ಕೈಗೊಳ್ಳಲು ಬಯಸುವವರು ಅರ್ಜಿ ಸಲ್ಲಿಸುವ ವೇಳೆ ಕಡ್ಡಾಯವಾಗಿ ಅಂತಾರಾಷ್ಟ್ರೀಯ ಪಾಸ್‌ಪೋರ್ಟ್ ಹೊಂದಿರತಕ್ಕದ್ದು. ಆದ್ದರಿಂದ ಪಾಸ್‌ಪೋರ್ಟ್ ಪಡೆಯಲಿಚ್ಚಿಸುವವರಿಗೆ ಅನುಕೂಲವಾಗುವಂತೆ ಫೆ.2ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಾವುಟಗುಡ್ಡೆಯ ಈದ್ಗಾ ಮಸೀದಿಯ ಪಕ್ಕದಲ್ಲಿರುವ ಕಾರ್ನಾಡು ಸದಾಶಿವ ರಾವ್ ಕಟ್ಟಡದ ಯೆನೆಪೋಯ ಟ್ರಸ್ಟ್‌ನ ಕಚೇರಿಯಲ್ಲಿ ಪಾಸ್‌ಪೋರ್ಟ್ ಮೇಳ ಆಯೋಜಿಸಲಾಗಿದೆ.
ಮೇಳದಲ್ಲಿ ದ.ಕ., ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆ ಗಳ ಹಜ್ಜ್ ಯಾತ್ರೆಯ ಆಕಾಂಕ್ಷಿ
ಗಳು ಪಾಲ್ಗೊಳ್ಳಬಹುದು. ಮೇಳಕ್ಕೆ ಬರುವಾಗ ಪಾಸ್ ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಪತ್ರಗಳನ್ನು ತರ ತಕ್ಕದ್ದು ಎಂದು ಕರ್ನಾಟಕ ರಾಜ್ಯ ಹಜ್ಜ್ ಸಮಿತಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಗೌಸ್ ಬಾಷಾ ಅಶ್ರಫ್ ಸ್ಪಷ್ಟಪಡಿಸಿದ್ದಾರೆ ಎಂದು ಜಿಲ್ಲಾ ಹಜ್ಜ್ ಸಮಿತಿಯ ಕಾರ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷ ಯೆನೆಪೋಯ ಮುಹಮ್ಮದ್ ಕುಂಞಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ