ಗುರುವಾರ, ಜನವರಿ 06, 2011

ತೊಗಾಡಿಯಾ ಹೇಳಿಕೆಗೆ ಮುಸ್ಲಿಂ ವರ್ತಕರ ಸಂಘ ಖಂಡನೆ

ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ನಡೆದಂತಹ ಹಿಂದೂ ಸಮಾಜೋತ್ಸವದಲ್ಲಿ ಭಾರತೀಯ ಮುಸ್ಲಿಮರನ್ನು ಹಿಂದುಗಳ ಶತ್ರುಗಳಂತೆ ಬಿಂಬಿಸಿ ಪ್ರಚೋದನಕಾರಿಯಾಗಿ ನಿಂದಿಸಿರುವ, ವಿಹಿಂಪ ಅಂತಾರಾ ಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾರವರ ರಾಷ್ಟ್ರದ್ರೋಹಿಯಂಥ ಹೇಳಿಕೆಗಳನ್ನು ಮುಸ್ಲಿಂ ವರ್ತಕರ ಸಂಘ ಖಂಡಿಸಿದೆ.
ಹಿಂದುತ್ವದ ಹೆಸರಿನಲ್ಲಿ ಹಿಂದೂ ಸಮಾಜೋತ್ಸವಗಳ ನೆಪದಲ್ಲಿ ಒಂದು ನಿರ್ದಿಷ್ಟ ಸಮುದಾಯದವರನ್ನು ಗುರಿಯಾಗಿಸಿಕೊಂಡು ಅವಹೇಳನ ಕಾರಿಯಾಗಿ ನಿಂದಿಸುವಂತಹ ಕಾರ್ಯ ಕ್ರಮಗಳು ಈ ದೇಶದ ಐಕ್ಯತೆಗೂ ಹಾಗೂ ಸಂವಿಧಾನಕ್ಕೂ ಎಸಗುವ ದ್ರೋಹವಾಗಿದೆ ಎಂದು ಮುಸ್ಲಿಂ ವರ್ತಕರ ಸಂಘದ ಮುಖಂಡರಾದ ಆಲಿಹಸನ್ ಹಾಗೂ ಯಾಸಿನ್ ಕುದ್ರೋಳಿಯವರು ತಿಳಿಸಿದ್ದು ಇಂತಹ ವ್ಯಕ್ತಿಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳದಿರುವುದು ಈ ಜಿಲ್ಲೆಯ ಸೂಕ್ಷ್ಮತೆಗೆ ಕೊಟ್ಟ ಕೊಡಲಿಯೇಟಾಗಿದೆ ಎಂದು ಹೇಳಿದ್ದಾರೆ. ಸಾಧ್ಯವಿದ್ದರೆ ಮಕ್ಕದಲ್ಲಿ ಮಂದಿರ ನಿರ್ಮಿಸಲು ಎಂಬ ಹೇಳಿಕೆಯು ತೊಗಾಡಿಯಾರವರ ಅನಾಗರಿಕತೆ ಯನ್ನು ತೋರಿಸುತ್ತದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ