ಗುರುವಾರ, ಜನವರಿ 06, 2011

ರಾಜ್ಯಪಾಲರ ಭಾಷಣಕ್ಕೆ ವಿಪಕ್ಷಗಳಿಂದ ಅಡ್ಡಿ: ಅರ್ಧದಲ್ಲೇ ನಿರ್ಗಮಿಸಿದ ಭಾರದ್ವಾಜ್

ಬೆಂಗಳೂರು, ಜ.6: ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲು ಆರಂಭಿಸುತ್ತಿದ್ದಂತೆಯೇ ವಿಪಕ್ಷಗಳು ಗದ್ದಲವೆಬ್ಬಿಸಿ ಕೋಲಾಹಲ ಸೃಷ್ಟಿಸಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರು.
ಸರಕಾರದ ಸಾಧನೆಗಳನ್ನು ಹೇಳಲು ಆರಂಭಿಸಿದಾಗ ಗದ್ದಲವೆಬ್ಬಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸರಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿಯವರ ವಿರುದ್ಧ ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದರು.
ಇದರಿಂದ ಗೊಂದಲಕ್ಕೊಳಗಾದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅರ್ಧದಲ್ಲೇ ಭಾಷಣವನ್ನು ಮೊಟಕುಗೊಳಿಸಿ ಸದನದಿಂದ ನಿರ್ಗಮಿಸಿದರು.
ಸುಳ್ಳಿನ ಕಂತೆ ಹೇಳಿಸಲು ಸರಕಾರ ಯತ್ನ: ಸಿದ್ದರಾಮಯ್ಯ
ರಾಜ್ಯಪಾಲರಿಂದ ಸರಕಾರ ಸುಳ್ಳು ಹೇಳಿಸಲು ಯತ್ನಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇಂದು ಆರಂಭಗೊಂಡ ವಿಧಾನಮಂಡಲ ಅಧಿವೇಶನದ ಮೊದಲು ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಅಧಿವೇಶನದಲ್ಲಿ ಹೋರಾಟ ನಡೆಸಲಿದೆ. ಸರಕಾರದ ಬರೆದು ಕೊಟ್ಟಿರುವ ಸುಳ್ಳಿನ ಕಂತೆಯನ್ನು ಓದದಂತೆ ರಾಜ್ಯಪಾಲರಿಗೆ ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ