ಶುಕ್ರವಾರ, ಡಿಸೆಂಬರ್ 03, 2010

ದೇಶದಲ್ಲಿ ಭ್ರಷ್ಟರಲ್ಲದ ರಾಜಕಾರಣಿಗಳು ಇದ್ದರೆ ಅವರಿಗೆ ಬಹುಮಾನ ಕೊಡುವೆ : ಕೇಮಾರು ಮಠದ ಈಶ ವಿಠಲ ದಾಸ ಸ್ವಾಮೀಜಿ

ದೇಶದಲ್ಲಿ ಭ್ರಷ್ಟರಲ್ಲದ ರಾಜಕಾರಣಿಗಳು ಇಲ್ಲ ಎನ್ನುವುದು ಮೂರ್ಖತನವಾಗಬಹುದು. ಒಂದು ವೇಳೆ ಅಂತಹವರಿದ್ದರೆ ಅವರನ್ನು ನನ್ನೆದುರು ತಂದು ನಿಲ್ಲಿಸಿದರೆ ಅವರಿಗೆ ಬಹುಮಾನ ಕೊಡುವೆ ಹೀಗೆಂದು ಜನತೆಗೆ ಕರೆ ನೀಡುವ ಮೂಲಕ ವಿಶಿಷ್ಟವಾದ ಆಫರ್ ಘೋಷಿಸಿ ದವರು ಕೇಮಾರು ಮಠದ ಈಶ ವಿಠಲ ದಾಸ ಸ್ವಾಮೀಜಿ.

ಅವರು ನಿನ್ನೆ ಜಮಾಅತೆ ಇಸ್ಲಾಮೀ ಯೂತ್‌ವಿಂಗ್ ಇದರ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಭ್ರಷ್ಟಾಚಾರ ಅಳಿಸಿ, ದೇಶ ಉಳಿಸಿ ಜನಜಾಗೃತಿ ಸಭೆ ಯಲ್ಲಿ ಮಾತನಾಡಿದರು. ಐದು ವರ್ಷಗಳ ಹಿಂದೆ ಭ್ರಷ್ಟಾಚಾರದಲ್ಲಿ ದೇಶ ಆರನೇ ಸ್ಥಾನದಲ್ಲಿತ್ತು. ಆದರೆ ಈಗ ಸಮೀಕ್ಷೆ ನಡೆಸಿ ದರೆ ಒಂದನೇ ಸ್ಥಾನದಲ್ಲಿರುವುದನ್ನು ಅಲ್ಲಗಳೆ ಯುವಂತಿಲ್ಲ ಎಂದ ಸ್ವಾಮೀಜಿ ಭ್ರಷ್ಟಾಚಾರ ವನ್ನು ಕಂಡುಹಿಡಿಯಬಹುದಾದ ಉಪಕರ ಣವನ್ನು ತಂದು ಸರಕಾರಿ ಕಚೇರಿಗಳಲ್ಲಿಟ್ಟರೆ ಅದನ್ನು ಕೂಡಾ ಕದಿಯುವಂತಹ ಕಳ್ಳರು ದೇಶದಲ್ಲಿದ್ದಾರೆಂದು ಲೇವಡಿ ಮಾಡಿದರು.

ಅನ್ಯಮತೀಯ ಹುಡುಗ-ಹುಡುಗಿ ಮಾತನಾಡಿದರೆ ಲವ್ ಜಿಹಾದ್ ಹೆಸರಲ್ಲಿ ಹಾಗೂ ಅರ್ಧ ಕೆ.ಜಿ ದನದ ಮಾಂಸವನ್ನು ಮನೆಗೆ ಕೊಂಡೊಯ್ಯುವಾಗ ಅದನ್ನು ತಡೆದು ಸಮರ ಸಾರುವವರು ಅಭಿವೃದ್ಧಿ ಹೆಸರಲ್ಲಿ ದೇಶವನ್ನು ವಿದೇಶಕ್ಕೆ ಮಾರಲು ಹೊರಟವರ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬಾರದೇ ಎಂದು ಯೂತ್‌ವಿಂಗ್‌ನ ಅಧ್ಯಕ್ಷ ಮಹಮ್ಮದ್ ಕುಂಞಿ ಪ್ರಶ್ನಿಸಿದರು. ದೇಶದಲ್ಲಿ ಆಡಳಿತ ಮಾಡಿದ ಕಾಂಗ್ರೆಸ್ ಸಹಿತ ಎಲ್ಲಾ ಪಕ್ಷಗಳು ಭ್ರಷ್ಟಾಚಾರದಲ್ಲಿ ಶಾಮೀಲಾಗಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಬಿ.ಜೆ.ಪಿ. ಕೇವಲ ಎರಡೇ ವರ್ಷಗಳಲ್ಲಿ ಇತರ ಪಕ್ಷವನ್ನು ಹಿಂದಿಕ್ಕಿದೆ. ದೇವಭಯವಿಲ್ಲದ ಆಡಳಿತಗಾರರಿಂದಾಗಿ ಅನಾಹುತಗಳು ಸೃಷ್ಟಿಯಾಗುತ್ತಿದ್ದು ಇದರ ಬಗ್ಗೆ ದೇಶಾದ್ಯಂತ ಚರ್ಚೆಗಳಾಗಬೇಕೆಂದು ಆಗ್ರಹಿಸಿದ ಕುಂಞಿ ಇದರ ವಿರುದ್ಧ ಹೋರಾಡಬೇಕಾಗಿದ್ದ ಯುವಕರ ತಲೆಗೆ ಜಾತೀಯತೆ ಮತ್ತು ಕೋಮುವಾದವನ್ನು ತುಂಬಿರುವುದೇ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸಮಾಜ ಸೇವಕಿ ಕೆ.ರೋಹಿಣಿ, ಅಬ್ದುಲ್ ಖಾದರ್ ಕುಕ್ಕಿಲ, ವಿ.ಎನ್. ಪ್ರಕಾಶ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ