ಶುಕ್ರವಾರ, ಡಿಸೆಂಬರ್ 03, 2010

ಲೋಕಾಯುಕ್ತ ಪೊಲೀಸರ ತನಿಖೆಗೆ ಸ್ಪಂದಿಸದಿದ್ದರೆ ಕಟ್ಟಾ ಅವರನ್ನು ಬಂಧಿಸಲಾಗುವುದು : ಸಂತೋಷ ಹೆಗ್ಡೆ

http://vknews.files.wordpress.com/2010/06/santhoshhegde1.jpgಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಎಫ್ಐಆರ್ ಆದ ತಕ್ಷಣ ಅವರನ್ನು ಬಂಧಿಸಬೇಕು ಅಂತ ಅಲ್ಲ. ಲೋಕಾಯುಕ್ತ ಪೊಲೀಸರು ನಡೆಸುವ ತನಿಖೆಗೆ ಸ್ಪಂದಿಸದಿದ್ದರೆ ಅವರನ್ನು ಬಂಧಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತರ ನಡೆಸುವ ತನಿಖೆಗೆ ಸಹಕರಿಸದಿದ್ದರೆ, ಸಾಕ್ಷಿಗಳನ್ನು ನಾಶ ಮಾಡಲು ಯತ್ನಿಸಿದರೆ ಹಾಗೂ ತಲೆ ಮರೆಸಿಕೊಳ್ಳಲು ಯತ್ನಿಸಿದರೆ ಮಾತ್ರ ಅವರನ್ನು ಬಂಧಿಸುವ ಚಿಂತನೆ ನಡೆಸುವುದಾಗಿ ಸ್ಪಷ್ಟಪಡಿಸಿದರು. ಸಾಕ್ಷಿ ನಾಶಪಡಿಸಲು ಹೋಗಿ ಲೋಕಾಯುಕ್ತರ ಕೈಗೆ ಸಿಕ್ಕು ಪರಪ್ಪನ ಅಗ್ರಹಾರ ಸೇರಿದ್ದ ಕಟ್ಟಾ ಪುತ್ರ ಜಗದೀಶ್ ಕಟ್ಟಾ ಕೂಡ ಬಿಬಿಎಂಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ