ಗುರುವಾರ, ಡಿಸೆಂಬರ್ 02, 2010

ಸುಳ್ಳನ್ನು ಉದಯ ಮಾಡಿ ಪ್ರಕಟಿಸಿದ ಉದಯವಾಣಿಗೆ ಎಚ್ಚರಿಕೆ

ನವದೆಹಲಿ : ವರದಿಯ ಸತ್ಯಾಸತ್ಯವನ್ನು ಸ್ವಲ್ಪವೂ ಪರಿಶೀಲಿಸದೆ, ದೃಢೀಕರಿಸದೆ ಸುಳ್ಳು ಸುದ್ದಿ ಪ್ರಕಟಿಸಿ ಸಾರ್ವಜನಿಕರಲ್ಲಿ ಭೀತಿ ಹಾಗೂ ಗೊಂದಲ ಉಂಟು ಮಾಡಿದುದ್ದಕ್ಕಾಗಿ ಮಣಿಪಾಲದ ‘ಉದಯವಾಣಿ’ ದಿನಪತ್ರಿಕೆಯ ಸಂಪಾದಕರಿಗೆ ಹೊಸದಿಲ್ಲಿಯ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ. ಶಬರಿಮಲೆಯಲ್ಲಿ ಉಗ್ರರು ವಿಧ್ವಂಸಕ ಕೃತ್ಯ ನಡೆಸಲು ಬಂದಿದ್ದು ಅವರನ್ನು ಬಂಧಿಸಲಾಗಿದೆ ಎಂದು ಉದಯವಾಣಿ ಸುಳ್ಳು ಸುದ್ಧಿಯನ್ನು ಪ್ರಕಟಿಸಿತ್ತು. ಆನಂತರ ಈ ಸುದ್ಧಿಗೆ ವ್ಯಾಪಕ ಪ್ರಚಾರ ಸಿಕ್ಕು ಕೇರಳದ ಉನ್ನತ ಪೋಲಿಸ್ ಅಧಿಕಾರಿಗಳು ಇದೊಂದು ಸುಳ್ಳು ಸುದ್ಧಿಯಾಗಿದ್ದು ಅಂತಹ ಯಾವುದೇ ಬಂಧನ ಶಬರಿಮಲೆಯಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
 
ಯಾವುದೇ ಆಧಾರವಿಲ್ಲದೇ ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿದ ಉದಯವಾಣಿ ಪತ್ರಿಕೆಯ ಸಂಪಾದಕ ಮಂಡಳಿಯ ವಿರುದ್ಧ ಉಡುಪಿ ಜನಪರ ವೇದಿಕೆಯ ಶ್ರೀರಾಮ ದಿವಾನ ದೆಹಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ದೂರು ನೀಡಿದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ