ಭಾನುವಾರ, ಜನವರಿ 16, 2011

ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ: ತನಿಖೆ ಮುಗಿದ ಬಳಿಕ ಪಾಕಿಸಾ್ತನಕ್ಕೆ ಮಾಹಿತಿ: ಪಿಳ್ಳೆ

ಹೊಸದಿಲ್ಲಿ, ಜ.16: ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ಪಾಕಿಸ್ತಾನದೊಂದಿಗೆ ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗುವುದೆಂದು ಕೇಂದ್ರ ಸರಕಾರವಿಂದು ಹೇಳಿದೆ. ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಹಲವು ಪಾಕಿಸ್ತಾನಿ ನಾಗರಿಕರು ಸಾವನ್ನಪ್ಪಿದ್ದು, ಇಸ್ಸಾಮಾಬಾದ್‌ನ ಕಳವಳದ ಕುರಿತು ಹೊಸದಿಲ್ಲಿಗೆ ಅರಿವಿದೆ. ಆದರೆ, ತನಿಖೆ ಇನ್ನೂ ಪೂರ್ಣಗೊಂಡಿಲ್ಲವೆಂದು ಕೇಂದ್ರ ಗೃಹ ಕಾರ್ಯದರ್ಶಿ ಗೋಪಾಲ ಕೆ. ಪಿಳ್ಳೆ ತಿಳಿಸಿದ್ದಾರೆ.
ಈಗ ತನಿಖೆ ಪ್ರಗತಿಯಲ್ಲಿದೆ. ಅದಿನ್ನೂ ಮುಕ್ತಾಯಗೊಂಡಿಲ್ಲ. ತನಿಖೆ ಮುಗಿದೊಡನೆಯೇ ಆರೋಪ ಪಟ್ಟಿ ದಾಖಲಿಸಲಾಗುವುದು. ತಾವು ಈ ಬಗ್ಗೆ ಪಾಕಿಸ್ತಾನದೊಂದಿಗೆ ಖಂಡಿತವಾಗಿಯೂ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆಂದು ಅವರು ಹೇಳಿದ್ದಾರೆ.
2007ರ ಫೆ.17ರ ರಾತ್ರಿ ಭಾರತ-ಪಾಕಿಸ್ತಾನಗಳ ನಡುವೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ ಹರ್ಯಾಣದ ಪಾಣಿಪತ್ ಸಮೀಪ ಸಂಭವಿಸಿದ ಸ್ಫೋಟದಲ್ಲಿ 68 ಮಂದಿ ಸಾವಿಗೀಡಾಗಿದ್ದು, ಅವರಲ್ಲಿ ಪಾಕಿಸ್ತಾನೀಯರೇ ಹೆಚ್ಚಿದ್ದರು. ಸ್ವಾಮಿ ಅಸೀಮಾನಂದ ಎನ್‌ಐಎಗೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಈ ಸ್ಫೋಟದಲ್ಲಿ ಕೇಸರಿ ಉಗ್ರರ ಕೈವಾಡವಿದ್ದುದನ್ನು ಬಹಿರಂಗಪಡಿಸಿದ್ದಾನೆನ್ನಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ