ಶನಿವಾರ, ಮಾರ್ಚ್ 26, 2011

ಮುಸ್ಲಿಮರ ಪಾಲಿಗೆ ಪಶ್ಚಿಮ ಬಂಗಾಳ ಗುಜರಾತ್‌ಗಿಂತಲೂ ಶೋಚನೀಯ?

ಸುಮಾರು 34 ವರ್ಷಗಳಿಂದ ಪಶ್ಚಿಮ ಬಂಗಾಳವನ್ನು ಆಳಿರುವ ಎಡರಂಗದ ಆಡಳಿತಾವಧಿಯಲ್ಲಿ ರಾಜ್ಯದ ಅಲ್ಪಸಂಖ್ಯಾತರಿಗೆ ಹೆಚ್ಚಿನ ಲಾಭವೇನೂ ಆಗಿಲ್ಲ ಎಂದು ಮುಸ್ಲಿಂ ಸಮುದಾಯದ ಪ್ರಗತಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಆಧರಿಸಿ ಅನ್ವಯಿಕ ಆರ್ಥಿಕ ಸಂಶೋಧನೆಯ ರಾಷ್ಟ್ರೀಯ ಮಂಡಳಿಯ ಮುಖ್ಯ ಅರ್ಥಶಾಸ್ತ್ರಜ್ಞ ಅಬು ಸಾಲಿಹ್ ಶರೀಫ್ ಹೇಳಿದ್ದಾರೆ. ಮಾನವ ಅಭಿವೃದ್ಧಿ ಸೂಚ್ಯಂಕದ ಅನುಸಾರ, ಪಶ್ಚಿಮ ಬಂಗಾಳದ ಎಡರಂಗ ಸರಕಾರದಲ್ಲಿ ಮುಸ್ಲಿಮರಿಗೆ ಕಡಿಮೆ ಪ್ರಾತಿನಿಧ್ಯ ನೀಡಲಾಗಿದೆ.
ರಾಜ್ಯದಲ್ಲಿರುವ ಶೇ. 25.2 ಮುಸ್ಲಿಮ್ ಜನಸಂಖ್ಯೆಯಲ್ಲಿ ಶೇ. 2.1 ಮಂದಿಗೆ ಮಾತ್ರ ಸರಕಾರಿ ಉದ್ಯೋಗವಿದೆ. ಶೇ. 50ರಷ್ಟು ಮಕ್ಕಳು ಪ್ರಾಥಮಿಕ ಶಾಲಾ ಹಂತದಲ್ಲೇ ಶಾಲೆ ತೊರೆದಿದ್ದಾರೆ. ಕೇವಲ ಶೇ. 12 ಮಂದಿ ಮಾತ್ರ ಮೆಟ್ರಿಕ್ಯುಲೇಶನ್ ಹಂತದವರೆಗೆ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಜಾತ್ಯತೀತತೆ ಹಾಗೂ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಕ ಎಂದು ಪ್ರತಿಪಾದಿಸುವ ಎಡರಂಗದ ಆಡಳಿತಾವಧಿಯಲ್ಲಿನ ಈ ಅಂಕಿ ಅಂಶಗಳನ್ನು ಗಮನಿಸಿದಾಗ ಅಚ್ಚರಿ ಮೂಡುತ್ತದೆ. ಕಳೆದ ವರ್ಷದ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡರಂಗದ ಕಳಪೆ ಪ್ರದರ್ಶನವು ಎಡರಂಗಕ್ಕೆ ಎಚ್ಚರಿಕೆಯ ಕರೆಗಂಟೆ ಬಾರಿಸಲಾಗಿದೆ. ಈ ಕಳಪೆ ಪ್ರದರ್ಶನಕ್ಕೆ ಮುಸ್ಲಿಮರನ್ನು ಆಕರ್ಷಿಸುವಲ್ಲಿ ವಿಫಲವಾಗಿರುವ ಪರಿಣಾಮವಾಗಿರುವ ಸಾಧ್ಯತೆಯ ವಿಷಯ ಈ ಚುನಾವಣೆಯಲ್ಲೂ ಅತ್ಯಂತ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಬದಲಾವಣೆಗಳಿಗೆ ಕೈಹಾಕಿರುವ ಎಡರಂಗ ಈ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳ ಪ್ರಾತಿನಿಧ್ಯ ಹೆಚ್ಚಿಸಲಾಗಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಎಡರಂಗವು ಶೇ. 33 ಮುಸ್ಲಿಂ ಅಭ್ಯರ್ಥಿಗಳಿಗೆ ಪ್ರಾತಿನಿಧ್ಯ ನೀಡಿದೆ. 292 ವಿಧಾನಸಭಾ ಕ್ಷೇತ್ರಗಳಲ್ಲಿ 2006ರಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ 42 ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದರೆ, ಈ ಬಾರಿ 56 ಸ್ಥಾನಗಳಲ್ಲಿ ಅವಕಾಶ ನೀಡಿದೆ.
ಗುಜರಾತ್ ಮತ್ತು ಪಶ್ಚಿಮ ಬಂಗಾಳದ ಮುಸ್ಲಿಮರ ಸ್ಥಿತಿಗತಿಯ ಕುರಿತು ಎರಡೂ ಸರಕಾರಗಳನ್ನೂ ಸಾಚಾರ್ ಸಮಿತಿಯ ಸದಸ್ಯರೂ ಆಗಿರುವ ಶರೀಫ್ ತನ್ನ ಉಪನ್ಯಾಸವೊಂದರಲ್ಲಿ ಒಂದೇ ರೀತಿ ಚಿತ್ರಿಸಿದರು. ಆದಾಗ್ಯೂ, ಮುಸ್ಲಿಮರ ಹಿತರಕ್ಷಕನಲ್ಲವೆಂದು ಬಹುತೇಕರು ಪರಿಗಣಿಸಲ್ಪಟ್ಟಿರುವ ಮುಖ್ಯಮಂತ್ರಿ ನರೇಂದ್ರ ಮೋದಿಯ ಆಡಳಿತವಿರುವ ಗುಜರಾತ್‌ಗಿಂತಲೂ ಎಡರಂಗದ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಸ್ಥಿತಿಗತಿ ಶೋಚನೀಯವಾಗಿದೆ ಎಂಬಂತೆ ಅಂಕಿ ಅಂಶಗಳ ವಿವರಣೆ ನೀಡುತ್ತಾ ಶರೀಫ್ ಅಲ್ಲಿನ ಚಿತ್ರಣ ನೀಡಿದರು. ಆದರೆ ಕಣ್ಣೀರು ಸುರಿಸುತ್ತಾ ಕೈ ಮುಗಿದ ಛಾಯಾಚಿತ್ರ ವೊಂದರ ಮೂಲಕ ಗುಜರಾತ್ ನರಮೇಧದ ಭೀಕರತೆಯನ್ನು ಪ್ರತಿನಿಧಿಸಲ್ಪಟ್ಟವನಂತೆ ಕಂಡುಬರುವ ಖುತುಬುದ್ದೀನ್ ಅನ್ಸಾರಿಗೆ ಆಶ್ರಯ ನೀಡುವುದಕ್ಕೆ ಪಶ್ಚಿಮ ಬಂಗಾಳ ಸರಕಾರ ಮುಂದಾಗಿದ್ದರ ಕುರಿತು ಶರೀಫ್ ವ್ಯಂಗ್ಯವಾಗಿ ತಿಳಿಸುವ ಮೂಲಕ ಅವರ ಗುಜರಾತ್ ಮತ್ತು ಪಶ್ಚಿಮ ಬಂಗಾಳದ ಹೋಲಿಕೆಯನ್ನು ಇನ್ನಷ್ಟು ಸ್ಪಷ್ಟಗೊಳಿಸಿತ್ತು. ‘‘ಭೂ ಸುಧಾರಣೆಯ ಲಾಭವನ್ನು ಪಡೆಯಲಾಗಿದೆ ಎಂಬಂತೆ ಚಿತ್ರಿಸಲಾದ ಹಿನ್ನೆಲೆಯಲ್ಲಿ ರಾಜ್ಯದದಲ್ಲಿ ಶೇ. 25ರಷ್ಟು ಬೃಹತ್ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಮರು ಎಡರಂಗದ ಮೈತ್ರಿಕೂಟಕ್ಕೆ ಸಾಂಪ್ರದಾಯಿಕವಾಗಿ ಮತ ನೀಡುತ್ತಾ ಬಂದಿದ್ದಾರೆ. ಆದರೆ ಈ ಕುರಿತ ಅಂಕಿ ಅಂಶಗಳನ್ನು ಗಮನಿಸಿದರೂ, ಸಮುದಾಯದ ಜೀವನ ಮಟ್ಟ ಸುಧಾರಿಸುವಲ್ಲಿ ಯಾವುದೇ ಪ್ರಮುಖ ವ್ಯತ್ಯಾಸವನ್ನೇನೂ ಗಮನಿಸಲು ಸಾಧ್ಯವಾಗುವುದಿಲ್ಲ. ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ, ನಿಜವನ್ನು ಸಾರ್ವಜನಿಕರ ಗಮನಕ್ಕೆ ತರಬೇಕಾಗಿದೆ’’ ಎಂದು ಶರೀಫ್ ಹೇಳಿದ್ದಾರೆ. ಭಾರತೀಯ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರದಲ್ಲಿ ವಾಸ್ತವ ಅಧ್ಯಯನ ಸಂಸ್ಥೆಯು ಆಯೋಜಿಸಿದ್ದ ‘ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದ ಅಭಿವೃದ್ಧಿ ಮತ್ತು ಸಾಮಾಜಿಕ- ಧಾರ್ಮಿಕ ವ್ಯತ್ಯಾಸಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಅವರು ಈ ಅಂಕಿ ಅಂಶಗಳನ್ನು ಬಹಿರಂಗ ಪಡಿಸಿದರು.
ಜನಗಣತಿಯ ಹಾಗೂ ಯೋಜನಾ ಆಯೋಗದ ಅಂಕಿ ಅಂಶಗಳ ಆಧಾರದಲ್ಲಿ ಅವರು ಶಿಕ್ಷಣಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ನೀಡಿದರು. ಈ ಅಂಕಿ ಅಂಶಗಳ ಪ್ರಕಾರ, ಶೇ. 50ರಷ್ಟು ಮುಸ್ಲಿಂ ಮಕ್ಕಳು ಮಾತ್ರ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಶೇ. 26ರಷ್ಟು ಮುಸ್ಲಿಂ ಮಕ್ಕಳು ಮಾಧ್ಯಮಿಕ ಶಿಕ್ಷಣ ಪಡೆದಿದ್ದಾರೆ. ಶೇ. 12ರಷ್ಟು ಮುಸ್ಲಿಂ ಮಕ್ಕಳು ಮಾತ್ರ ಪೂರ್ಣ ಪೌಷ್ಟಿಕಾಂಶವನ್ನು ಪಡೆಯುತ್ತಾರೆ ಎಂಬ ವಿವರಗಳನ್ನು ಶರೀಫ್ ನೀಡಿದರು. ಇದೇ ವೇಳೆಗೆ ಪರಿಶಿಷ್ಟಜಾತಿಗಳಲ್ಲಿನ ಶೇ. 54ರಷ್ಟು ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದರೆ, ಶೇ. 30ರಷ್ಟು ಮಕ್ಕಳು ಮಾಧ್ಯಮಿಕ ಹಂತದ ಶಿಕ್ಷಣ ಪಡೆಯುತ್ತಿದ್ದಾರೆ ಮತ್ತು ಶೇ. ಶೇ. 13ರಷ್ಟು ಮಕ್ಕಳು ಪೂರ್ಣ ಪೌಷ್ಟಿಕಾಂಶತೆಯನ್ನು ಪಡೆಯುತ್ತಿದ್ದಾರೆ ಎಂಬ ವಿರವಣೆಯನ್ನೂ ಅವರು ನೀಡಿದರು. ಇದೇ ವೇಳೆಗೆ ಇತರ ಜಾತಿಗಳ ಮಕ್ಕಳಲ್ಲಿ ಶೇ. 80ರಷ್ಟು ಪ್ರಾಥಮಿಕ ಶಿಕ್ಷಣ, ಶೇ. 58ರಷ್ಟು ಮಾಧ್ಯಮಿಕ ಶಿಕ್ಷಣ ಮತ್ತು ಶೇ. 38ರಷ್ಟು ಪೂರ್ಣ ಪೌಷ್ಟಿಕಾಂಶತೆಯ ಸರಾಸರಿ ಇದೆ ಎಂದು ಶರೀಫ್ ವಿವರಿಸಿದ್ದಾರೆ. ದೇಶದಲ್ಲಿ ಗುರುತಿಸಲಾಗಿರುವ ಅಲ್ಪಸಂಖ್ಯಾತರು ಅತ್ಯಧಿಕ ಸಂಖ್ಯೆಯಲ್ಲಿರುವ 90 ಜಿಲ್ಲೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ 12 ಜಿಲ್ಲೆಗಳಿವೆ. ‘‘ಸರಕಾರಿ ಉದ್ಯೋಗದಲ್ಲಿನ ಮುಸ್ಲಿಮರ ಪಾಲಿನ ಬಗ್ಗೆ ಹೋಲಿಸಿದರೆ, ಪಶ್ಚಿಮ ಬಂಗಾಳದ ಮುಸ್ಲಿಮರ ಸ್ಥಿತಿ ಶೋಚನೀಯವಾಗಿದೆ. ಶೇ. 9.1 ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಗುಜರಾತ್‌ನಲ್ಲೂ ಸರಕಾರಿ ಉದ್ಯೋಗಗಳಲ್ಲಿ ಶೇ. 5.4 ಮುಸ್ಲಿಮರ ಪಾಲಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಇದು ಅಲ್ಲಿಗಿಂತ ತೀರಾ ಕಡಿಮೆಯಿದೆ ಮತ್ತು ಇದು ದೇಶದಲ್ಲೇ ಅತ್ಯಂತ ಶೋಚನೀಯವಾಗಿದೆ. ಅಂಕಿ ಅಂಶಗಳನ್ನು ಪಡೆಯಲು ನಾವು ತುಂಬಾ ಕಷ್ಟಪಟ್ಟಿದ್ದೇವೆ. ಯಾಕೆಂದರೆ, ಅವರು ಈ ಬಗ್ಗೆ ತುಂಬಾ ಗೌಪ್ಯತೆಯನ್ನು ಕಾಪಾಡುತ್ತಿದ್ದಾರೆ’’ ಎಂದು ಶರೀಫ್ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಒಬಿಸಿ ಅಂಕಿ ಅಂಶದ ಪ್ರಕಾರ, ಕೇವಲ ಶೇ. 2.4ರಷ್ಟು ಮುಸ್ಲಿಮರು ಮಾತ್ರ ಈ ಶ್ರೇಣಿಯಲ್ಲಿ ಬರುತ್ತಾರೆ. ಆದರೆ ಇದು ವಾಸ್ತವವಲ್ಲ, ಈ ಕುರಿತ ಗಣತಿಯ ಬಗ್ಗೆ ಪಶ್ಚಿಮ ಬಂಗಾಳದ ಹಿಂಜರಿಕೆಯನ್ನು ಎತ್ತಿತೋರಿಸುತ್ತದೆ ಎಂದು ಶರೀಫ್ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ