ಭಾನುವಾರ, ಜನವರಿ 16, 2011

ಹರಿಣಗಳಿಗೆ ಮುಳ್ಳಾದ ಮುನಾಫ್ ಭಾರತಕ್ಕೆ ಒಂದು ರನ್ ರೋಚಕ ಗೆಲುವು

ಜೋಹನ್ಸ್‌ಬರ್ಗ್: ಸಣ್ಣ ಮೊತ್ತವನ್ನು ಬೆನ್ನಟ್ಟುತ್ತಿದ್ದ ದಕ್ಷಿಣ ಆಫ್ರಿಕಾ ವೇಗಿ ಮುನಾಫ್ ಪಟೇಲ್ ಮಾರಕ ದಾಳಿಗೆ ತತ್ತರಿಸಿ ಹೋಗಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಒಂದು ರನ್ ರೋಚಕ ಗೆಲುವು ದಾಖಲಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಧೋನಿ ಪಡೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿ ಕೇವಲ ೧೯೦ ರನ್ ಮಾತ್ರ ಪೇರಿಸಿತು. ಇದಕ್ಕೆ ಉತ್ತರಿಸಿದ ಹರಿಣಗಳ ಪಡೆ ಒಂದು ಹಂತದಲ್ಲಿ ಗೆಲುವು ದಾಖಲಿಸುವುದು ಸುಲಭವೆ ನ್ನುವಂತಹ ಸ್ಥಿತಿಯಿತ್ತು. ಆದರೆ ಒತ್ತಡದ ಪರಿಸ್ಥಿತಿಯಲ್ಲೂ ಎದುರಾಳಿ ಪಾಳಯದ ಮೇಲೆ ಸವಾರಿ ಮಾಡಿದ ಮುನಾಫ್ ಮಹತ್ವದ ವಿಕೆಟ್ ಕಬಳಿಸಿ ತಂಡ ಸರಣಿಯಲ್ಲಿ ೧-೧ರ ಸಮಬಲ ಸಾಧಿಸಲು ನೆರವಾದರು.
ಎರಡನೇ ಸ್ಪೆಲ್‌ನಲ್ಲಿ ಮುನಾಫ್ ಎದುರಾಳಿ ಕಪ್ತಾನ ಸ್ಮಿತ್(೭೭) ವಿಕೆಟ್ ಕಬಳಿಸಿ ಭಾರತಕ್ಕೆ ಮಹತ್ವದ ವಿಕೆಟ್ ದೊರಕಿಸಿದರು. ಈ ಹಂತದಲ್ಲಿ ಸ್ಮಿತ್ ಪಡೆಗೆ ಕೇವಲ ೩೯ ರನ್‌ಗಳ ಅಗತ್ಯವಿತ್ತು. ಐದು ವಿಕೆಟ್ ಕೂಡ ಕೈಯಲ್ಲಿತ್ತು. ಬೋಥಾ ವಿಕೆಟ್ ಕಬಳಿಸಿದ ಜಹೀರ್ ಖಾನ್ ಆತಿಥೇಯರಿಗೆ ಮತ್ತೊಂದು ಆಘಾತವಿಕ್ಕಿದರು. ಯುವರಾಜ್ ಸಿಂಗ್ ತನ್ನ ಆಕರ್ಷಕ ಫೀಲ್ಡಿಂಗ್‌ನಿಂದ ಡೇಲ್ ಸ್ಟೇನ್ ವಿಕೆಟ್ ಕಬಳಿಸಿದಾಗ ದ. ಆಫ್ರಿಕಾಗೆ ಕೇವಲ ೧೪ ರನ್ ಮಾತ್ರ ಬೇಕಿತ್ತು. ಆರು ರನ್ ಮಾಡಿದ ಮೊರ್ಕೆಲ್ ವಿಕೆಟ್ ಕಬಳಿಸಿದ ಮುನಾಫ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ದ. ಆಫ್ರಿಕಾದ ಆರಂಭ ಕೂಡ ಅಷ್ಟು ಉತ್ತಮವಾಗಿ ರಲಿಲ್ಲ. ಕೇವಲ ನಾಲ್ಕು ರನ್ ಮಾಡಿದ ಅಮ್ಲಾ, ಮುನಾಫ್‌ಗೆ ಮೊದಲ ಬಲಿಯಾದರು. ಆದರೆ ಸ್ಮಿತ್ ಮತ್ತು ಇಂಗ್ರಾಮ್ ತಂಡಕ್ಕೆ ಆಧಾರವಾಗಲು ಪ್ರಯತ್ನಿಸಿದರು. ಇವರಿಬ್ಬರು ರನ್‌ಗತಿಯನ್ನೂ ಹೆಚ್ಚಿಸಿದರು. ಇವರಿಬ್ಬರು ೫೯ ರನ್‌ಗಳ ಜೊತೆಯಾಟ ನಡೆಸಿ ಭಾರತದ ಪಾಳಯದಲ್ಲಿ ಭೀತಿ ಮೂಡಿಸಿದರು. ಆದರೆ ೨೫ ರನ್ ಮಾಡಿ ಇಂಗ್ರಾಮ್ ವಿಕೆಟ್ ಕಬಳಿಸಿದ ಹರ್ಭಜನ್ ಜೊತೆಯಾಟ ಮುರಿದರು. ಡಿವಿಲಿಯರ್ಸ್ ಎಂಟು ರನ್ ಮಾಡಿ ನೆಹ್ರಾಗೆ ವಿಕೆಟ್ ಒಪ್ಪಿಸಿದರು.
ಆದರೆ ಇನ್ನೊಂದು ಬದಿಯಲ್ಲಿ ಸ್ಮಿತ್ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದರು. ಡ್ಯುಮಿನಿ(೧೩) ಮತ್ತು ಮಿಲ್ಲರ್(೨೭) ಕಪ್ತಾನನಿಗೆ ಜೊತೆ ನೀಡಲು ಪ್ರಯತ್ನಿಸಿದರು. ಡ್ಯುಮಿನಿ ಅಪರೂಪದ ಸ್ಪಿನ್ನರ್ ರೋಹಿತ್ ಶರ್ಮಾಗೆ ವಿಕೆಟ್ ನೀಡಿದರೆ, ೭೭ ರನ್ ಮಾಡಿದ ಸ್ಮಿತ್ ಬೌಲ್ಡ್ ಮಾಡಿದ ಮುನಾಫ್ ಪಂದ್ಯಕ್ಕೆ ಮಹತ್ವದ ತಿರುವು ಕೊಟ್ಟರು. ಸ್ಮಿತ್ ೯೮ ಎಸೆತಗಳಲ್ಲಿ ಎಂಟು ಬೌಂಡರಿ ಸಹಿತ ೭೭ ರನ್ ಬಾರಿಸಿದರು. ಮಿಲ್ಲರ್‌ನ್ನು ಜಹೀರ್ ಪೆವಿಲಿಯನ್‌ಗೆ ಅಟ್ಟಿದರು. ಇದರ ಬಳಿಕ ಕೆಳಸರದಿಯಲ್ಲಿ ಮುನಾಫ್ ಉರಿದಾಳಿಗೆ ಆಫ್ರಿಕಾ ಬ್ಯಾಟ್ಸ್‌ಮೆನ್‌ಗಳು ಕಂಗೆಟ್ಟು ಹೋದರು.
ಇದಕ್ಕೆ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಆರಂಭ ಅಷ್ಟು ಉತ್ತಮವಾ ಗಿರಲಿಲ್ಲ. ಟೆಸ್ಟ್‌ನಂತೆ ಆಡಿದ ಮುರಳಿ ವಿಜಯ್ ೩೨ ಎಸೆತಗಳಲ್ಲಿ ೧೬ ರನ್ ಮಾಡಿ ತ್ಸೊಸೊಬೆಗೆ ವಿಕೆಟ್ ಒಪ್ಪಿಸಿದರು. ಭಾರತ ಮೊದಲ ೨೦ ಓವರ್‌ಗಳಲ್ಲಿ ಮೂರು ವಿಕೆಟ್ ಕಳಕೊಂಡು ೭೦ ರನ್‌ಗಳ ಗಡಿಯನ್ನಷ್ಟೇ ದಾಟಿತ್ತು. ಅಗ್ರ ಸರದಿಯಲ್ಲಿ ಸಚಿನ್(೨೪), ಕೊಹ್ಲಿ(೨೨) ಉತ್ತಮ ಜೊತೆಯಾಟಕ್ಕೆ ಪ್ರಯತ್ನಿಸುತ್ತಿದ್ದಾಗ ಕೊಹ್ಲಿ ರನೌಟ್‌ಗೆ ಬಲಿಯಾದರು. ಸಚಿನ್ ಸ್ಪಿನ್ನರ್ ಬೋಥಾ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ದಾರಿ ಹಿಡಿದರು. ಯುವರಾಜ್ ಸಿಂಗ್ ಮತ್ತು ಧೋನಿ ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಅರ್ಧಶತಕ ಬಾರಿಸಿದ ಯುವ ರಾಜ್ ತ್ಸೊಸೊಬೆ ಎಸೆತದಲ್ಲಿ ಸ್ಟೇನ್‌ಗೆ ಕ್ಯಾಚ್ ನೀಡಿದರು. ಯುವಿ ಕೇವಲ ೬೮ ಎಸೆತಗಳಲ್ಲಿ ನಾಲ್ಕು ಬೌಂಡರಿ ಯೊಂದಿಗೆ ೫೩ ರನ್ ಬಾರಿಸಿದರು. ೩೮ ರನ್ ಮಾಡಿದ ಧೋನಿ ಸಹಿತ ಭಾರತ ಅಂತಿಮ ಐದು ವಿಕೆಟ್‌ಗಳನ್ನು ಕೇವಲ ೨೧ ರನ್‌ಗಳಿಗೆ ಕಳಕೊಂಡು ೧೯೦ ರನ್‌ಗಳಿಗೆ ಸರ್ವಪತವಾಯಿತು. ತ್ಸೊಸೊಬೆ ನಾಲ್ಕು ವಿಕೆಟ್ ಪಡೆದು ಭಾರತದ ಇನ್ನಿಂಗ್ಸ್‌ಗೆ ಆಘಾತ ನೀಡಿದರು. ಸ್ಟೇನ್ ಮತ್ತು ಮೊರ್ಕೆಲ್ ತಲಾ ಎರಡೆರಡು ವಿಕೆಟ್ ಉರುಳಿಸಿದರು.

ಪಾಕಿಸ್ತಾನ-ನ್ಯೂಜಿಲೆಂಡ್ ದ್ವಿತೀಯ ಟೆಸ್ಟ್
ತಂಡಕ್ಕೆ ಆಧಾರವಾದ ಟೇಲರ್
ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ಮಧ್ಯೆ ವೆಲ್ಲಿಂಗ್ಟನ್ನಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ಬೌಲರ್ಗಳ ಮಾರಕ ದಾಳಿಯ ನಡುವೆಯೂ ಟೇಲರ್ (೭೮) ಬಾರಿ ಸಿದ ಆಕರ್ಷಕ ಅರ್ಧಶತಕದ ಫಲವಾಗಿ ಕೀವಿಸ್ ದಿನದಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು ೨೪೬ ರನ್ ಪೇರಿಸಿ ಚೇತರಿಕೆ ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡು ಕಿವೀಸ್ ಮೇಲೆ ಪಾಕ್ ಬೌಲರ್ಗಳು ಆರಂಭದಲ್ಲೇ ಮುಗಿಬೀಳಲು ಆರಂಭಿಸಿದರು. ಎರಡು ರನ್ ಗಳಿಸಿ ಆಡುತ್ತಿದ್ದ ಮೆಕ್ಕಲಮ್ ವೇಗಿ ಗುಲ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದು ನಿರ್ಗಮಿಸಿದರು. ನಂತರ ಬಂದ ವಿಲಿಯಮ್ಸನ್ ಆರಂಭಿಕ ಗಪ್ಟಿಲ್ ರೊಂದಿಗೆ ಸೇರಿಕೊಂಡು ಅಮೂಲ್ಯ ೪೩ ರನ್ಗಳ ಜೊತೆಯಾಟವನ್ನು ನಡೆಸಿ ತಂಡಕ್ಕೆ ಆಸರೆಯಾದರು. ವೇಳೆ ವಿಲಿಯಮ್ಸನ್ (೨೧) ಕೂಡ ಗುಲ್ ಎಸೆತಕ್ಕೆ ಬಲಿಯಾದರು. ಆದರೆ ಗಪ್ಟಿಲ್, ನಂತರ ಬಂದ ಟೇಲರ್ರೊದಿಗೆ ಸೇರಿಕೊಂಡು ಕೆಲಹೊತ್ತು ಕ್ರೀಸ್ನಲ್ಲಿದ್ದರು. ಆದರೆ ವೇಳೆ ಉತ್ತಮವಾಗಿ ಆಡುತ್ತಿದ್ದ ಗಪ್ಟಿಲ್ (೨೯) ವೇಗಿ ಅಹ್ಮದ್ ಎಸೆತ ದಲ್ಲಿ ಕ್ರೀಸ್ ತ್ಯಜಿಸಿದರೆ ನಂತರ ಬಂದ ರೈಡರ್ ಶೂನ್ಯಕ್ಕೆ ನಿರ್ಗಮಿಸಿ ತಂಡ ವನ್ನು ಆಘಾತಕ್ಕೆ ಸಿಲುಕಿಸಿದರು. ಮಧ್ಯೆ ಟೇಲರ್ ಮಾತ್ರ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತು ತಂಡಕ್ಕೆ ಆಸರೆ ಯಾದರು. ಸವ್ಯಸಾಚಿ ಫ್ರಾಂಕ್ಲಿನ್ (೩೩) ಇವರಿಗೆ ಉತ್ತಮ ಸಾಥ್ ನೀಡಿದರು. ವೇಳೆಗೆ ಟೇಲರ್(೭೮) ತನ್ನ ಅರ್ಧಶತಕವನ್ನು ಸಿಡಿಸಿ ಸಂಭ್ರಮ ಪಟ್ಟು ನಂತರ ರಿಯಾಝ್ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಕಿವೀಸ್ ದಿನದಂತ್ಯಕ್ಕೆ ಆರು ವಿಕೆಟ್ ಕಳೆದು ಕೊಂಡು ೨೪೬ ರನ್ ಪೇರಿಸಿದೆ. ವೆಟರಿ (೩೮) ಹಾಗೂ ಯಂಗ್ (೨೮) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅದ್ಬುತ ದಾಳಿ ಸಂಘಟಿಸಿದ ಗುಲ್ ಹಾಗೂ ಅಹ್ಮದ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
 
ಆಸ್ಟ್ರೇಲಿಯಾ-ಇಂಗ್ಲೆಂಡ್ ಸರಣಿ
ಇಂದು ಪ್ರಥಮ ಏಕದಿನ
ಮೆಲ್ಬರ್ನ್: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪ್ರಥಮ ಏಕದಿನ ಇಲ್ಲಿಯ ಎಮ್ಸಿಜಿ ಮೈದಾನದಲ್ಲಿ ಇಂದು ನಡೆಯಲಿದ್ದು ಈಗಾಗಲೇ ಟೆಸ್ಟ್ ಸರಣಿಯನ್ನು ಕಳೆದುಕೊಂಡಿರುವ ಆಸೀಸ್ ಸೇಡು ತೀರಿಸುವ ತವಕದಲ್ಲಿದೆ.
ಆಷಸ್ ಸರಣಿಯನ್ನು ಕಳೆದುಕೊಂಡರೂ ಟ್ವೆಂಟಿ ಟ್ವೆಂಟಿ ಸರಣಿಯನ್ನು ಸಮಬಲಗೊಳಿಸುವಲ್ಲಿ ಸಫಲರಾದ ಆಸೀಸ್ಗೆ ಇಂದು ಮೆಲ್ಬರ್ನ್ನಲ್ಲಿ ನಡೆಯಲಿರುವ ಪ್ರಥಮ ಏಕದಿನ ಪಂದ್ಯವು ಸವಾಲಾಗಿ ಪರಿಣಮಿಸಲಿದೆ. ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್ ಟೂರ್ನಿಯ ಹಿನ್ನೆಲೆ ಯಲ್ಲಿ ವೇಗಿಗಳಾದ ಜಾನ್ಸನ್ ಹಾಗೂ ಸಿಡ್ಲ್ಗೆ ವಿಶ್ರಾಂತಿ ನೀಡಲಾಗಿದೆ. ವಾಟ್ಸ್ನ್ರನ್ನು ಬಿಟ್ಟು ಉಳಿದ ಆಟಗಾರರು ನೈಜ ಪ್ರದರ್ಶನ ನೀಡದಿರುವುದು ನಾಯಕನಿಗೆ ಚಿಂತೆಯಾಗಿ ಪರಿಣಮಿಸಿದೆಯಾದರೂ ಲೀ, ಟೇಟ್, ಹಸ್ಸಿ ಮುಂತಾದ ಘಟಾನುಘಟಿಗಳು ತಂಡದಲ್ಲಿ ರುವುದು ಮುನ್ನಡೆ ಒದಗಿಸಿದೆ. ಇನ್ನು ಪ್ರವಾಸಿ ಇಂಗ್ಲೆಂಡ್ ಏಕದಿನ ಸರಣಿಯನ್ನು ಸವಾಲಾಗಿ ಸ್ವೀಕರಿಸಿರುವುದು ರೋಚಕತೆಗೆ ಸಾಕ್ಷಿಯಾಗಲಿದೆ. ಆದರೆ ಕಾಲಿಂಗ್ವುಡ್ ನೈಜ ಫಾರ್ಮ್ ಪ್ರದರ್ಶಿಸದಿರುವುದು ತಂಡಕ್ಕೆ ಚಿಂತೆಯಾಗಿದೆ. ಪೀಟರ‍್ಸನ್, ಟ್ರ್ರಾಟ್, ಬೆಲ್ ಭರ್ಜರಿ ಫಾರ್ಮ್ನಲ್ಲಿರುವುದು ಆಂಗ್ಲ ಪಡೆಗೆ ಶ್ರೀರಕ್ಷೆಯಾಗಿದೆ. ಒಟ್ಟಿನಲ್ಲಿ ಇಂದಿನ ಪಂದ್ಯದಲ್ಲಿ ಎರಡೂ ತಂಡದಿಂದ ಸಮಬಲದ ಹೋರಾಟ ನಿರೀಕ್ಷಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ