ಶುಕ್ರವಾರ, ಜನವರಿ 14, 2011

ಸ್ವಾಮಿ ಅಸೀಮಾನಂದ ಭಾರತ ಹಾಗು ಪಾಕಿಸ್ತಾನದ ರಾಷ್ಟ್ರಪತಿಗಳಿಗೆ ಬರೆದ ಪತ್ರದ ಪ್ರತಿ.

Font size: Decrease font Enlarge font
image ಸ್ವಾಮಿ ಅಸೀಮಾನಂದ ಭಾರತ ಹಾಗು ಪಾಕಿಸ್ತಾನದ ರಾಷ್ಟ್ರಪತಿಗಳಿಗೆ ಬರೆದ ಪತ್ರದ ಪ್ರತಿ

ಸ್ವಾಮಿ ಅಸೀಮಾನಂದ ಭಾರತ ಹಾಗು ಪಾಕಿಸ್ತಾನದ ರಾಷ್ಟ್ರಪತಿಗಳಿಗೆ ಬರೆದ ಪತ್ರದ ಪ್ರತಿ.

(ಕೃಪೆ: ತೆಹಲ್ಕಾ)

ರಿಗೆ,
ರಾಷ್ಟ್ರಾಧ್ಯಕ್ಷೆ
ರಾಷ್ಟ್ರಪತಿ ಭವನ
ಹೊಸದಿಲ್ಲಿ -110001
ಡಿಸೆಂಬರ್ 20,2010

ಶ್ರೀಮತಿ ರಾಷ್ಟ್ರಾಧ್ಯಕ್ಷೆಯವರಿಗೆ,

1. ನಾನು ಸ್ವಾಮಿ ಆಸೀಮಾನಂದ. ಸಂಜೋತಾ ಎಕ್ಸ್‌ಪ್ರೆಸ್ ಹಾಗೂ ಇತರ ಸ್ಥಳಗಳನ್ನು ಸ್ಫೋಟಿಸಲು ವ್ಯಕ್ತಿಗಳನ್ನು ಸಂಘಟಿಸಿದ ಹಾಗೂ ಅವರಿಗೆ ಪ್ರೇರಣೆ ನೀಡಿದವರಲ್ಲೊಬ್ಬನಾಗಿದ್ದೇನೆ. ಏಕೆಂದರೆ ಹಿಂದೂ ದೇವಾಲಯಗಳ ಮೇಲೆ ಜಿಹಾದಿ ದಾಳಿಗಳು ನಡೆದಿರುವ ಬಗ್ಗೆ ನಾನು ಆಕ್ರೋಶಗೊಂಡಿದ್ದೆ.
2.ನನ್ನ ಬಂಧನದ ಬಳಿಕ, ನಾನು ಹೈದರಾಬಾದ್ ಜೈಲಿನಲ್ಲಿದ್ದಾಗ ಕರೀಂ ಎಂಬ ಓರ್ವ ಮುಸ್ಲಿಂ ಯುವಕ ನನ್ನ ಬಗ್ಗೆ ತುಂಬಾ ದಯಾಳುವಾಗಿದ್ದ. ಕೆಲವು ಸಮಯದ ಬಳಿಕ, ನಾನು ಆತ ಯಾಕೆ ಜೈಲಿನಲ್ಲಿರುವುದಾಗಿ ಕೇಳಿದೆ. ಆಗ ಅವನು, ಮಕ್ಕಾ ಮಸೀದಿ ಸ್ಫೋಟಕ್ಕೆ ಸಂಬಂಧಿಸಿ ತನ್ನನ್ನು ಹೈದರಾಬಾದ್ ಪೊಲೀಸರು ಸುಳ್ಳು ಆರೋಪ ಹೊರಿಸಿ ಬಂಧಿಸಿದ್ದಾರೆ ಹಾಗೂ ತನ್ನ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಹೇಳಿದ. ಇದು ನನ್ನ ಆತ್ಮಸಾಕ್ಷಿಯನ್ನು ಚುಚ್ಚಿತು. ಅದು ನನ್ನಲ್ಲಿ ಪರಿವರ್ತನೆಯನ್ನು ತಂದಿತು. ನನ್ನನ್ನು ದ್ವೇಷಿಸಬೇಕಾದರೆ ಆ ಯುವಕನಿಗೆ ಬೇಕಾದಷ್ಟು ಕಾರಣವಿದ್ದರೂ, ಆತ ನನ್ನನ್ನು ಪ್ರೀತಿಸಿದ. ನಾನು ಮಾಡಿದ ಅನ್ಯಾಯದ ಕಾರ್ಯಕ್ಕಾಗಿ ಆತ ಯಾತನೆ ಅನುಭವಿಸುತ್ತಿದ್ದಾನೆ. ಎರಡು ಸಮುದಾಯಗಳ ಮಧ್ಯೆ ಇರುವ ದ್ವೇಷಕ್ಕಿಂತ, ಇಬ್ಬರು ಮಾನವ ಜೀವಿಗಳ ಪ್ರೀತಿಯು ಹೆಚ್ಚು ಶಕ್ತಿಶಾಲಿಯೆಂಬುದು ನನಗರಿವಾಯಿತು. ಇದಕ್ಕಾಗಿ ನಾನು ಪ್ರಾಯಶ್ಚಿತ್ತ ಮಾಡಲು ನಿರ್ಧರಿಸಿದೆ ಹಾಗೂ ಸಿಬಿಐ ನನ್ನನ್ನು ವಶಕ್ಕೆ ತೆಗೆದುಕೊಂಡಾಗ ಅವರಿಗೆ ಈ ವಿಷಯವನ್ನು ತಿಳಿಸಿದೆ.ನನ್ನ ಪ್ರಾಯಶ್ಚಿತ್ತದ ವಿಚಾರವಾಗಿ ತಮಗೇನೂ ಮಾಡಲು ಸಾಧ್ಯವಿಲ್ಲವೆಂದು ಅವರು ಹೇಳಿದರು. ಹಾಗಾಗಿ ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವಂತೆ ನಾನವರಲ್ಲಿ ವಿನಂತಿಸಿದೆ. ಆ ನಂತರ ನಾನು ನ್ಯಾಯಾಧೀಶರಲ್ಲಿ ಸತ್ಯವನ್ನು ಹೇಳಿದೆ.
3. ಪಾಕ್ ಅಧ್ಯಕ್ಷರಿಗೂ ನನ್ನ ಬಗ್ಗೆ ಪತ್ರವೊಂದನ್ನು ಬರೆದಿದ್ದು, ಪಾಕಿಸ್ತಾನದಲ್ಲಿರುವ ಜಿಹಾದಿ ಭಯೋತ್ಪಾದಕ ನಾಯಕರನ್ನು ಹಾಗೂ ಇತರ ಜಿಹಾದಿ ಯೋಧರ ಸುಧಾರಣೆಗೆ ಅಥವಾ ಪರಿವರ್ತನೆಗೆ ಅವಕಾಶವನ್ನು ನನಗೆ ನೀಡುವಂತೆ ಅವರಲ್ಲಿ ವಿನಂತಿಸಿದ್ದೇನೆ (ಪ್ರತಿಯನ್ನು ಲಗತ್ತಿಸಲಾಗಿದೆ).
4. ನಾನು ಅಲ್ಲಿಗೆ ತೆರಳಲು ಹಾಗೂ ಜಿಹಾದಿ ನಾಯಕರನ್ನು ಭೇಟಿಯಾಗಲು ನೀವು ನಿಮ್ಮ ಅಧಿಕಾರವನ್ನು ಬಳಸಿಕೊಂಡು ನನಗೆ ನೆರವಾಗಬೇಕೆಂದು ಅಥವಾ ಅವರನ್ನು ನಾನಿರುವ ಜೈಲಿಗೆ ಕಳುಹಿಸಿಕೊಡುವಂತೆ ನೀವು ಪಾಕ್ ಅಧ್ಯಕ್ಷರನ್ನು ಕೋರಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ.

ಕೃತಜ್ಞತೆಗಳು,
ನಿಮ್ಮ ವಿಶ್ವಾಸಿ,
ಸ್ವಾಮಿ ಆಸೀಮಾನಂದ
ಚಂಚಲಗುಡ ಕೇಂದ್ರೀಯ ಕಾರಾಗೃಹ
ಹೈದರಾಬಾದ್

ರಾಷ್ಟ್ರಾಧ್ಯಕ್ಷರು
ಇಸ್ಲಾಮಾಬಾದ್
ಪಾಕಿಸ್ತಾನ
ಡಿಸೆಂಬರ್ 20, 2010
ವಿಷಯ: ಹಾಫೀಝ್ ಸಯೀದ್ ಹಾಗೂ ಪಾಕಿಸ್ತಾನದಲ್ಲಿರವ ಇತರ ಭಯೋತ್ಪಾದಕರನ್ನು ಸುಧಾರಣೆಗೊಳಿಸಲು ನನಗೆ ಅವಕಾಶ ನೀಡುವಂತೆ ಕೋರಿಕೆ.

ಶ್ರೀಯುತರೇ,

1. ನಾನು ಸ್ವಾಮಿ ಆಸೀಮಾನಂದ. ಸಂಜೋತಾ ಎಕ್ಸ್‌ಪ್ರೆಸ್ ಹಾಗೂ ಇತರ ಸ್ಥಳಗಳನ್ನು ಸ್ಫೋಟಿಸಲು ವ್ಯಕ್ತಿಗಳನ್ನು ಸಂಘಟಿಸಿದ ಹಾಗೂ ಅವರಿಗೆ ಪ್ರೇರಣೆ ನೀಡಿದವರಲ್ಲೊಬ್ಬನಾಗಿದ್ದೇನೆ. ಏಕೆಂದರೆ ಹಿಂದೂ ದೇವಾಲಯಗಳ ಮೇಲೆ ಜಿಹಾದಿ ದಾಳಿಗಳು ನಡೆದಿರುವ ಬಗ್ಗೆ ನಾನು ಆಕ್ರೋಶಗೊಂಡಿದ್ದೆ.
     
2.ನನ್ನ ಬಂಧನದ ಬಳಿಕ, ನಾನು ಹೈದರಾಬಾದ್ ಜೈಲಿನಲ್ಲಿದ್ದಾಗ ಕರೀಂ ಎಂಬ ಓರ್ವ ಮುಸ್ಲಿಂ ಯುವಕ ನನ್ನ ಬಗ್ಗೆ ತುಂಬಾ ದಯಾಳುವಾಗಿದ್ದ. ಕೆಲವು ಸಮಯದ ಬಳಿಕ, ನಾನು ಆತ ಯಾಕೆ ಜೈಲಿನಲ್ಲಿರುವುದಾಗಿ ಕೇಳಿದೆ. ಆಗ ಅವನು, ಮಕ್ಕಾ ಮಸೀದಿ ಸ್ಫೋಟಕ್ಕೆ ಸಂಬಂಧಿಸಿ ತನ್ನನ್ನು ಹೈದರಾಬಾದ್ ಪೊಲೀಸರು ಸುಳ್ಳು ಆರೋಪ ಹೊರಿಸಿ ಬಂಧಿಸಿದ್ದಾರೆ ಹಾಗೂ ತನ್ನ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಹೇಳಿದ. ಇದು ನನ್ನ ಆತ್ಮಸಾಕ್ಷಿಯನ್ನು ಚುಚ್ಚಿತು. ಅದು ನನ್ನಲ್ಲಿ ಪರಿವರ್ತನೆಯನ್ನು ತಂದಿತು. ನನ್ನನ್ನು ದ್ವೇಷಿಸಬೇಕಾದರೆ ಆ ಯುವಕನಿಗೆ ಬೇಕಾದಷ್ಟು ಕಾರಣವಿದ್ದರೂ, ಆತ ನನ್ನನ್ನು ಪ್ರೀತಿಸಿದ. ನಾನು ಮಾಡಿದ ಅನ್ಯಾಯದ ಕಾರ್ಯಕ್ಕಾಗಿ ಆತ ಯಾತನೆ ಅನುಭವಿಸುತ್ತಿದ್ದಾನೆ. ಎರಡು ಸಮುದಾಯಗಳ ಮಧ್ಯೆ ಇರುವ ದ್ವೇಷಕ್ಕಿಂತ, ಇಬ್ಬರು ಮಾನವ ಜೀವಿಗಳ ಪ್ರೀತಿಯು ಹೆಚ್ಚು ಶಕ್ತಿಶಾಲಿಯೆಂಬುದು ನನಗರಿವಾಯಿತು. ಇದಕ್ಕಾಗಿ ನಾನು ಪ್ರಾಯಶ್ಚಿತ್ತ ಮಾಡಲು ನಿರ್ಧರಿಸಿದೆ ಹಾಗೂ ಸಿಬಿಐ ನನ್ನನ್ನು ವಶಕ್ಕೆ ತೆಗೆದುಕೊಂಡಾಗ ಅವರಿಗೆ ಈ ವಿಷಯವನ್ನು ತಿಳಿಸಿದೆ.ನನ್ನ ಪ್ರಾಯಶ್ಚಿತ್ತದ ವಿಚಾರವಾಗಿ ತಮಗೇನೂ ಮಾಡಲು ಸಾಧ್ಯವಿಲ್ಲವೆಂದು ಅವರು ಹೇಳಿದರು. ಹಾಗಾಗಿ ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವಂತೆ ನಾನವರಲ್ಲಿ ವಿನಂತಿಸಿದೆ. ಆ ನಂತರ ನಾನು ನ್ಯಾಯಾಧೀಶರಲ್ಲಿ ಸತ್ಯವನ್ನು ಹೇಳಿದೆ.
3. ಕ್ರಿಮಿನಲ್ ಕಾನೂನು ವ್ಯವಸ್ಥೆಯು ನನಗೆ ನೇಣು ಹಾಕುವ ಮೊದಲು, ಹಾಫೀಝ್ ಸಯೀದ್, ಮುಲ್ಲಾ ಉಮರ್ ಮತ್ತಿತರ ಪಾಕಿಸ್ತಾನದಲ್ಲಿರುವ ಜಿಹಾದಿ ಭಯೋತ್ಪಾದಕ ನಾಯಕರನ್ನು ಪರಿವರ್ತಿಸುವ ಅವಕಾಶವನ್ನು ನಾನು ಬಯಸುತ್ತಿದ್ದೇನೆ. ನೀವು ಅವರನ್ನು ನನ್ನ ಬಳಿಗೆ ಕಳುಹಿಸುವಂತೆ ಅಥವಾ ನನ್ನನ್ನು ನಿಮ್ಮಲ್ಲಿಗೆ ಕಳುಹಿಸಿಕೊಡುವಂತೆ ಭಾರತ ಸರಕಾರವನ್ನು ನೀವು ಕೇಳಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ.

ನಿಮ್ಮ ವಿಶ್ವಾಸಿ
ಸ್ವಾಮಿ ಆಸೀಮಾನಂದ
ಚಂಚಲಗುಡ ಹೈದರಾಬಾದ್
ಹೈದರಾಬಾದ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ