ಶುಕ್ರವಾರ, ಜನವರಿ 14, 2011

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಘಟಕದರಾಜ್ಯಾಧ್ಯಕ್ಷರಾಗಿ ಇಲ್ಯಾಸ್ ತುಂಬೆ ಮರು ಆಯ್ಕೆ

Homeಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸುವುದಕ್ಕಾಗಿ ಮತ್ತು ರಾಜ್ಯ ಪದಾಕಾರಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್  ಆಫ್
ಸಭೆಯಲ್ಲಿ
ಈ ಕೆಳಗಿನ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು: ಇಂಡಿಯಾ, ಕರ್ನಾಟಕ ರಾಜ್ಯ ಘಟಕದ ರಾಜ್ಯ ಮಹಾ ಸಭೆಯು ಜನವರಿ 7,8,9ರಂದು ಮೈಸೂರಿನಲ್ಲಿ ನಡೆಯಿತು. ಇಲ್ಯಾಸ್ ಮುಹಮ್ಮದ್ ತುಂಬೆ ಎರಡನೆ ಅವಧಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಆಯ್ಕೆಯಾದ ಇತರ ಪದಾಕಾರಿಗಳೆಂದರೆ  ರಿಯಾಝ್ ಪಾಶ (ರಾಜ್ಯ ಪ್ರಧಾನ ಕಾರ್ಯದರ್ಶಿ), ಅಬ್ದುಲ್ ವಾಹಿದ್ (ರಾಜ್ಯ ಉಪಾಧ್ಯಕ್ಷ), ಮುಹಮ್ಮದ್ ಶಮೀರ್ (ಕೋಶಾಕಾರಿ), ಮುಹಮ್ಮದ್ ಶರ್ೀ (ಕಾರ್ಯದರ್ಶಿ), ನಾಸಿರ್ ಪಾಶ (ಕಾರ್ಯದರ್ಶಿ).
1. ವ್ಯಾಪಕ ಭ್ರಷ್ಟಾಚಾರ ಮತ್ತು ರಾಜಕೀಯ ವಲಯದಲ್ಲಿ ಅದರ ಅಂಗೀಕಾರ:    
ಭ್ರಷ್ಟಾಚಾರವು ವ್ಯಾಪಕವಾಗಿದೆ ಮತ್ತು ರಾಜಕೀಯ ರಂಗದಲ್ಲಿ ಅದನ್ನು ಅಂಗೀಕರಿಸಲಾಗಿದೆ.
ಕರ್ನಾಟಕದ ಮುಖ್ಯ ಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ ಕೊಳ್ಳೆ ಹೊಡೆದ ಆಸ್ತಿಗಳನ್ನು ಅಕೃತವಾಗಿ ಹಿಂದಿರುಗಿಸಿದ ನಂತರ ಬಿಜೆಪಿಯ ಕೇಂದ್ರ ನಾಯಕತ್ವವು ಅವರನ್ನು ಅಕಾರದಲ್ಲಿ ಮುಂದುವರಿಯಲು ಬಿಟ್ಟಿರುವುದು, ಬಿಜೆಪಿ ಒಂದು ಭಿನ್ನ ಪಕ್ಷವೆಂಬುದನ್ನು ಸಾಬೀತುಪಡಿಸಿದೆ!
ಒಂದು ಕಡೆ ಸಂಸತ್ತಿನ ವ್ಯವಹಾರಗಳನ್ನು ಬಿಜೆಪಿ ತಡೆಯುತ್ತಿದ್ದು, ಇನ್ನೊಂದೆಡೆ ತನ್ನ ಭ್ರಷ್ಟ ಮುಖ್ಯಮಂತ್ರಿಗೆ ಅಕಾರದಲ್ಲಿ ಮುಂದುವರಿಯಲು ಹಸಿರು ನಿಶಾನೆ ತೋರಿರುವುದು ಬಿಜೆಪಿಯ ಕೇಂದ್ರ ನಾಯಕತ್ವದ ಕಪಟಾಚರಣೆಯನ್ನು ಬಯಲುಗೊಳಿಸಿದೆ.
ಇಂತಹ ವ್ಯಕ್ತಿಗಳನ್ನು ಅಕಾರದಿಂದ ವಜಾಗೊಳಿಸಬೇಕು ಮತ್ತು ತಮಗೆ ಮತ ನೀಡಿರುವ ಜನರ ಭಾವನೆಯೊಂದಿಗೆ ಆಡಿರುವುದಕ್ಕಾಗಿ ಅವರನ್ನು ಜೈಲಿಗೆ ತಳ್ಳಬೇಕು ಎಂದು ಪಾಪ್ಯುಲರ್ ್ರಂಟ್ ಆಗ್ರಹಿಸುತ್ತದೆ.

2. ಶ್ರೀಮಂತರಾಗುತ್ತಿರುವ ರಾಜಕಾರಣಿಗಳು ಹಾಗೂ ಬಡವಾಗುತ್ತಿರುವ ಸರಕಾರ
2ಜಿ ಸ್ಪೆಕ್ಟ್ರಂನಂತಹ ದೇಶದ ನವೀಕರಿಸಲಾಗದ ಸಂಪನ್ಮೂಲಗಳನ್ನು ಕಾರ್ಪೊರೇಟ್‌ಗಳಿಗೆ ಜುಜುಬಿ ಬೆಲೆಗೆ ಮಾರಲಾಗುತ್ತದೆ. ಈ ಸಂಪನ್ಮೂಲಗಳ ಮಾರಾಟವೇ ದೇಶದ ಅಭಿವೃದ್ಧಿಗೆ ಉತ್ತಮ ಆದಾಯದ ಮೂಲವಾಗುತ್ತಿತ್ತು. ಬಡ ಜನರು ತಮ್ಮ ಜೀವನ ನಿರ್ವಹಣೆಗಾಗಿ ಪರದಾಡುತ್ತಿದ್ದರೆ, ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರಗಳು ಸುದ್ದಿಯಾಗುತ್ತಿದ್ದು, ಬಡವರಿಗೆ ಇದರ ಗಾತ್ರದ ಬಗ್ಗೆ ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಒಂದುಲಕ್ಷ ಎಪ್ಪತ್ತು ಸಾವಿರ ಕೋಟಿ ರೂಪಾಯಿಗಳ ಭ್ರಷ್ಟಾಚಾರವು ಇಲ್ಲಿ ಉಲ್ಲೇಖನೀಯವಾಗಿದೆ.
ಭ್ರಷ್ಟಾಚಾರ, ಹಗರಣಗಳ ಹಿಂದಿನ ಅಪರಾಗಳನ್ನು ಗುರುತಿಸುವುದಕ್ಕಾಗಿ ತನಿಖೆ ನಡೆಸಬೇಕು ಮತ್ತು ಅವರ ಮೋಸದ ಸಂಪಾದನೆಗಳನ್ನು ರಾಷ್ಟ್ರೀಯ ಖಜಾನೆಗೆ ಮರಳಿ ಸೇರಿಸಬೇಕೆಂದು ಪಾಪ್ಯುಲರ್ ್ರಂಟ್ ಆ್ ಇಂಡಿಯಾ ಆಗ್ರಹಿಸಿತ್ತದೆ.

3. ರಾಷ್ಟ್ರಕ್ಕೆ ಬದ್ಧತೆ ಕಳೆದುಕೊಳ್ಳುತ್ತಿರುವ ಮಾಧ್ಯಮಗಳು:
ಭಾರತೀಯ ಮಾಧ್ಯಮದ ಕೆಲವು ಪ್ರಮುಖ ಮುಖಗಳು ನೀರಾ ರಾಡಿಯಾರೊಂದಿಗೆ  ಸಂಭಾಷಣೆ ನಡೆಸಿರುವುದು ಇತ್ತೀಚೆಗೆ ಬಹಿರಂಗವಾಗಿದ್ದು, ಇದು ತುಂಬಾ ನಿರಾಶದಾಯಕವಾಗಿದೆ. ಮಾಧ್ಯಮವು ಪ್ರಜಾಪ್ರಭುತ್ವದ ಆಧಾರಸ್ಥಂಭವಾಗಿದ್ದು, ರಾಷ್ಟ್ರದ ಕಾವಲು ನಾಯಿಯಾಗಿದೆ. ಆದರೆ  ಕೆಲವು ಮಾಧ್ಯಮಗಳು ರಾಷ್ಟ್ರಕ್ಕೆ ತಾವು ಸಲ್ಲಿಸಬೇಕಾದ ಬದ್ಧತೆಯಿಂದ ತಪ್ಪಿವೆ.
ಅವುಗಳು ತಮ್ಮ ಜವಾಬ್ದಾರಿಯನ್ನು ನೆನಪಿಸಿಕೊಳ್ಳಬೇಕು ಮತ್ತು ದೀರ್ಘ ಅವಯಿಂದ ಜನರ ನಂಬಿಕೆಯನ್ನು ಗೆದ್ದುಕೊಂಡಿದ್ದ ಮಾಧ್ಯಮ ಜಗತ್ತಿನ ಪ್ರಮುಖ ಮುಖಗಳುಎ ಅವರಿಗೆ ನಿರಾಸೆಯನ್ನುಂಟುಮಾಡಬಾರದು.

4. ಸ್ವಾಮಿ ಅಸೀಮಾನಂದನ ತಪ್ಪೊಪ್ಪಿಗೆಯಿಂದ ಬಯಲಾದ ದೇಶವನ್ನು ಅಸ್ಥಿರಗೊಳಿಸುವ ಆರೆಸೆಸ್ಸಿನ ಸಂಚು:
ಸಾಮಾನ್ಯ ಜನರನ್ನು ಒಡೆಯುವುದಕ್ಕಾಗಿ ಮತ್ತು ದೇಶದ ಜಾತ್ಯತೀತ ಚೌಕಟ್ಟನ್ನು ಮುರಿಯುವುದಕ್ಕಾಗಿ ಆರೆಸ್ಸೆಸ್ ನಡೆಸುತ್ತಿರುವ ಸಂಚು ಸ್ವಾಮಿ ಅಸೀಮಾನಂದರ್ ತಪ್ಪೊಪ್ಪಿಗೆಯಿಂದ ಬಹಿರಂಗವಾಗಿದೆ. ಇದು ಅಕಾರಿಗಳಿಗೆ ಎಚ್ಚೆತ್ತುಕೊಳ್ಳಲು ಮತ್ತು ಆರೆಸ್ಸೆಸ್‌ನ ಚಟುವಟಿಕೆಗಳನ್ನು ದಮನಿಸಲು ಆರಂಭವಾಗಬೇಕು. ಅವರನ್ನು ತಿರಸ್ಕರಿಸಿದರೆ ಅಥವಾ ಅವರ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಮುಕ್ತ ಅವಕಾಶವನ್ನು ನೀಡಿದರೆ ಅವರು ಭಾರತೀಯ ಭಾತೃತ್ವವನ್ನು ಸಂಪೂರ್ಣವಾಗಿ ಅಳಿಸಿಹಾಕಲಿದ್ದಾರೆ.
ಯಾವುದೇ ಸಂಘಟನೆಯಲ್ಲಿ ಸ್ಥಾನಮಾನಗಳನ್ನು ಪರಿಗಣಿಸದೆ ಎಲ್ಲಾ ವ್ಯಕ್ತಿಗಳನ್ನೂ ಬಂಸಬೇಕು ಮತ್ತು ಪ್ರಕರಣಗಳಲ್ಲಿ ಅವರ ಭಾಗಿಯ ಕುರಿತು ವಿಚಾರಣೆ ನಡೆಸಬೇಕು. ಅವರ ದೋಷವು ಸಾಬೀತಾದರೆ ಕಠಿಣ ಕಾನೂನು ಕ್ರಮಕ್ಕೊಳಪಡಿಸಬೇಕು.

5. ಪಾಪ್ಯುಲರ್ ಫ್ರಂಟ್ ಆಫ್  ಇಂಡಿಯಾವನ್ನು ಸಿಲುಕಿಸುವ ಕೇರಳ ರಾಜ್ಯ ಸರಕಾರದ ದುರುದ್ದೇಶವನ್ನು ಸುಪ್ರೀಂ ಕೋರ್ಟ್ ತಲೆಕೆಳಗಾಗಿಸಿದೆ:
ಇತ್ತೀಚೆಗೆ ಡಾರನ್ೀರ ಪ್ರಕರಣದಲ್ಲಿ ಆತನಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸುವ ದುರುದ್ದೇಶದೊಂದಿಗೆ ಕೇರಳ ಸರಕಾರವು ಸುಪ್ರೀಂ ಕೋರ್ಟನ್ನು ಸಂಪರ್ಕಿಸಿತ್ತು.
ರಾಜ್ಯ ಸರಕಾರದ ಈ ಕ್ರಮವು ಸೇಡು ಹಾಗೂ ದ್ವಿಮುಖವಾಗಿದೆ ಎಂದ ಸುಪ್ರೀಂ ಕೋರ್ಟ್, ಅದನ್ನು ಎಚ್ಚರಿಸಿತ್ತು.
ರಾಜ್ಯ ಆಡಳಿತ ಪಕ್ಷವು (ಸಿಪಿಐ-ಎಂ) ತನ್ನ ದುರುದ್ದೇಶವನ್ನು ಸಾಕಾರಗೊಳಿಸುವುದಕ್ಕಾಗಿ ರಾಜ್ಯ ಖಜಾನೆಯನ್ನು ಬಳಸಿತ್ತು.
ಗೌರವಾನ್ವಿತ ಸುಪ್ರೀಂ ಕೋರ್ಟ್ ಸತ್ಯ ಹಾಗೂ ನ್ಯಾಯವನ್ನು ಎತ್ತಿಹಿಡಿದಿರುವುದನ್ನು ಪಾಪ್ಯುಲರ್ ್ರಂಟ್ ಶ್ಲಾಸುತ್ತದೆ ಮತ್ತು ರಾಜ್ಯ ಖಜಾನೆಗಾದ ನಷ್ಟವನ್ನು ಸಿಪಿಐ-ಎಂ ಪಕ್ಷದಿಂದ ಪಡೆದುಕೊಳ್ಳಬೇಕೆಂದು ಆಗ್ರಹಿಸುತ್ತದೆ.
ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆ:
ಅಗತ್ಯ ಸಾಮಗ್ರಿಗಳ ಬೆಲೆಯು ಮುಗಿಲೆತ್ತರಕ್ಕೇರಿದ್ದು, ಜನ ಸಾಮಾನ್ಯನ ದೈನಂದಿನ ಜೀವನ ತತ್ತರಗೊಂಡಿದೆ. ಇದಕ್ಕೆ ಪ್ರಮುಖ ಕಾರಣ ಬೆಲೆಯೇರಿಕೆಯನ್ನು ನಿಯಂತ್ರಿಸುವ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿಷ್ಕ್ರಿಯತೆ. ಬೆಲೆಯನ್ನು ಇಳಿಸುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ್ರಂಟ್ ಆಗ್ರಹಿಸುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ